ಮಂಗಳೂರು: ನಂತೂರು ಜಂಕ್ಷನ್‌ನಲ್ಲಿ ಅಪಘಾತ
Team Udayavani, Dec 8, 2017, 10:59 AM IST
ಮಂಗಳೂರು : ನಂತೂರು ಜಂಕ್ಷನ್‌ನಲ್ಲಿ ಗುರುವಾರ ಬೆಳಗ್ಗೆ ಸಂಭವಿಸಿದ ಖಾಸಗಿ ಸರ್ವಿಸ್ ಬಸ್, ಕಂಟೈನರ್ ಲಾರಿ ಮತ್ತು ಕಾರು ಢಿಕ್ಕಿಯಲ್ಲಿ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ಓರ್ವ ಮಹಿಳೆ ಸಾವನ್ನಪ್ಪಿದ್ದಾರೆ. 14 ಮಂದಿ ಮಹಿಳೆಯರು ಮತ್ತು 12 ಮಂದಿ ಪುರುಷರು ಸೇರಿದಂತೆ 26 ಮಂದಿ ಬಸ್ ಪ್ರಯಾಣಿಕರು ಮತ್ತು ಕಾರು ಚಾಲಕ ಗಾಯಗೊಂಡಿದ್ದಾರೆ.
ಗುರುಪುರ ಕೈಕಂಬದ ಕವಿತಾ (45) ಸಾವನ್ನಪ್ಪಿದವರು. ಮೋಹಿನಿ (40), ರೇವತಿ ದೇವಾಡಿಗ (48), ಕಮಲಾಕ್ಷಿ (37), ಅಹಲ್ಯಾ (19), ಅಶ್ವಿನಿ ಮಸ್ಕರೇನ್ಹಸ್ (38), ಸುಂದರಿ (68), ಸುಹಾಸಿನಿ (39), ಧನವಂತಿ (45), ಲೀನಾ ಡಿ’ಸೋಜಾ (46), ವಿಮಲಾ (44), ರೇಖಾ (38), ಸೌಮ್ಯಾ (33), ಅಮಿತಾ (25) ಲಾವಣ್ಯ (30), ಕಸ್ತೂರಿ (30) ಗಾಯಗೊಂಡ ಮಹಿಳೆಯರು.
ದಯಾ (49), ಪ್ರಸಾದ (23), ಲಿಂಗಪ್ಪ (50), ಇಬ್ರಾಹಿಂ (44), ರಾಮಯ್ಯ ಪೂಜಾರಿ (63), ಕರುಣಾಕರ (47), ರಾಮಯ್ಯ ಸಫಲ್ಯ (60), ಪ್ರಕಾಶ್ (39), ಸುರೇಶ್ (40), ಮೋಂತು ಡಿ’ಸೋಜಾ (58), ನಾಗೇಶ್ (41) ಗಾಯಗೊಂಡ ಪುರುಷ ಪ್ರಯಾಣಿಕರು. ಕ್ರೈಸ್ತ ಧರ್ಮಗುರು ಫಾ| ಫೆಲಿಕ್ಸ್ ಮೊರಾಸ್ ಗಾಯಗೊಂಡ ಕಾರು ಚಾಲಕ.
ಗಾಯಾಳುಗಳ ಪೈಕಿ ನಾಲ್ವರು ಜ್ಯೋತಿ ಜಂಕ್ಷನ್‌ನಲ್ಲಿರುವ ಕೆಎಂಸಿ ಆಸ್ಪತ್ರೆ ಯಲ್ಲಿ, 14 ಮಂದಿ ಎ.ಜೆ. ಆಸ್ಪತ್ರೆ ಯಲ್ಲಿ, ಇಬ್ಬರು ಅತ್ತಾವರ ಕೆಎಂಸಿ ಆಸ್ಪತ್ರೆ ಯಲ್ಲಿ, ಐವರು ವೆನ್ಲಾಕ್ ಆಸ್ಪತ್ರೆ ಯಲ್ಲಿ ಹಾಗೂ ಇಬ್ಬರು ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆ ಯುತ್ತಿದ್ದಾರೆ.
ಅಪಘಾತದಲ್ಲಿ ಗುರುಪುರದ ಇಬ್ರಾಹಿಂ ಮತ್ತು ಪ್ರಕಾಶ್ ಗಂಭೀರ ಗಾಯ ಗೊಂಡಿದ್ದಾರೆ. ಅವರ ಕೈಗಳ ಮೂಳೆ ಮುರಿತ ಸಂಭವಿಸಿದೆ ಎಂದು ಪೊಲೀಸರು ತಿಳಿಸಿದ್ದಾರೆ.
ಕೆಲಸಕ್ಕೆ ಹೊರಟಿದ್ದರು
ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದವರಲ್ಲಿ ಹೆಚ್ಚಿನವರು ವಿವಿಧ ಕಚೇರಿಗಳಿಗೆ ಮತ್ತು ಕೂಲಿ ಕೆಲಸಕ್ಕೆ ಹೋಗುವವ ರಾಗಿದ್ದರು. ಬೆಳಗ್ಗಿನ ಬಸ್ ಆಗಿದ್ದ ರಿಂದ ದಿನ ನಿತ್ಯ ಇದೇ ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದವರೇ ಅಧಿಕ.
ಕಾರು ಚಾಲಕ ಫಾ| ಫೆಲಿಕ್ಸ್ ಮೊರಾಸ್ ಅವರು ಕಾರ್ಮೆಲ್ ಸಂಸ್ಥೆಯ ಧರ್ಮ ಗುರು ಗಳಾಗಿದ್ದು, ಆಂಜೆಲೋರ್ ನಲ್ಲಿ ಪೂಜೆ ಮುಗಿಸಿ ಬಿಕರ್ನ ಕಟ್ಟೆ ಯಲ್ಲಿರುವ ಕಾರ್ಮೆಲ್ ಸಂಸ್ಥೆಗೆ ಹಿಂದಿರುಗು ತ್ತಿದ್ದರು. ಪಂಪ್‌ವೆಲ್ ಕಡೆಯಿಂದ ನಂತೂರಿಗೆ ಕಾರು ಚಲಾ ಯಿಸಿಕೊಂಡು ಹೋಗುತ್ತಿದ್ದ ಅವರು ನಂತೂರು ವೃತ್ತ ದಲ್ಲಿ ಬಲಗಡೆಗೆ ಹೋಗು ವುದ ಕ್ಕಾಗಿ ನಿಂತಿ ದ್ದಾಗ ಬಸ್‌ಗೆ ಢಿಕ್ಕಿ ಹೊಡೆದು ಮುಂದಕ್ಕೆ ಬಂದ ಕಂಟೈನರ್ ಲಾರಿ ಕಾರಿಗೆ ಢಿಕ್ಕಿ ಹೊಡೆದಿತ್ತು. ಸಣ್ಣ ಪುಟ್ಟ ಗಾಯ ಗೊಂಡಿ ರುವ ಅವರು ಕಂಕನಾಡಿ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಅಪಘಾತ ಹೇಗಾಯಿತು?
ಮಳಲಿಯಿಂದ ಮಂಗಳೂರಿಗೆ ಬರುತ್ತಿದ್ದ ಪಿ.ಟಿ.ಸಿ. ಖಾಸಗಿ ಸರ್ವಿಸ್ ಬಸ್ ಬೆಳಗ್ಗೆ 7.15ಕ್ಕೆ ನಂತೂರು ಜಂಕ್ಷನ್ ನಲ್ಲಿ ಕೆಪಿಟಿ ಕಡೆಯಿಂದ ಪಂಪ್‌ವೆಲ್ ಕಡೆಗೆ ಹೋಗುತ್ತಿದ್ದ ಕಂಟೈನರ್ ಲಾರಿಗೆ ಢಿಕ್ಕಿ ಹೊಡೆಯಿತು. ಈ ಸಂದರ್ಭದಲ್ಲಿ ಕಂಟೈನರ್ ಲಾರಿ ಬಲಕ್ಕೆ ತಿರುಗಿದಂತಾಗಿ ಪಂಪ್‌ವೆಲ್ ಕಡೆಯಿಂದ ಬರುತ್ತಿದ್ದ ಕಾರಿಗೆ ಢಿಕ್ಕಿ ಹೊಡೆಯಿತು. ಈ ಸಂದರ್ಭದಲ್ಲಿ ಬಸ್ಸಿನ ಮುಂಭಾಗ ತೀವ್ರ ಜಖಂ ಗೊಂಡಿದ್ದು, ಬಸ್ಸಿನಲ್ಲಿದ್ದ ಪ್ರಯಾಣಿಕರು ಗಾಯಗೊಂಡರು. ಬಸ್ ಚಾಲಕನ ಬಸ್ಸನ್ನು ವೃತ್ತದಲ್ಲಿ ನಿಲ್ಲಿಸದೆ ವೇಗವಾಗಿ ನುಗ್ಗಿಸಿದ್ದೇ ಅಪಘಾತಕ್ಕೆ ಕಾರಣ ಎಂದು ಪೊಲೀಸರು ತಿಳಿಸಿದ್ದಾರೆ.
ಮೂವರು ಮಕ್ಕಳ ತಾಯಿ ಕವಿತಾ: ಅಪಘಾತದಲ್ಲಿ ಸಾವನ್ನಪ್ಪಿದ ಕವಿತಾ ಅವರು ಗುರುಪುರ ಕೈಕಂಬದ ಪಡ್ಡಾಯಿ
ಪದವು ನಿವಾಸಿಯಾಗಿದ್ದು, ಲೇಡಿಗೋಶನ್ ಆಸ್ಪತ್ರೆಯಲ್ಲಿ ಡಿ ದರ್ಜೆ ನೌಕರರಾಗಿದ್ದರು. ಅವರು ಸಾಮಾನ್ಯವಾಗಿ ಪ್ರತಿನಿತ್ಯ ಇದೇ ಪಿ.ಟಿ.ಸಿ. ಬಸ್‌ನಲ್ಲಿ ಪ್ರಯಾಣಿಸುತ್ತಿದ್ದರು. ಗುರುವಾರ ಈ ನತದೃಷ್ಟ ಬಸ್‌ನಲ್ಲಿ ಚಾಲಕನ ಬದಿಯ ಸೀಟಿನಲ್ಲಿ ಕುಳಿತಿದ್ದರು. ಅಪಘಾತದಲ್ಲಿ ತೀವ್ರ ಗಾಯಗೊಂಡ ಅವರು ಚಿಕಿತ್ಸೆ ಫಲಕಾರಿಯಾಗದೆ ಆಸ್ಪತ್ರೆಯಲ್ಲಿ ಸಾವನ್ನಪ್ಪಿದರು. ಅವರು ಇಬ್ಬರು ಪುತ್ರರು ಮತ್ತು ಓರ್ವ ಪುತ್ರಿಯನ್ನು ಅಗಲಿದ್ದಾರೆ. 10 ವರ್ಷಗಳ ಹಿಂದೆ ಪತಿಯನ್ನು ಕಳೆದುಕೊಂಡಿದ್ದ ಅವರು ಕಳೆದ ಎರಡು ವರ್ಷಗಳಿಂದ ಪಡ್ಡಾಯಿ ಪದವಿನಲ್ಲಿ ಮೂವರು ಮಕ್ಕಳ ಜತೆ ಬಾಡಿಗೆ ಮನೆಯಲ್ಲಿ ವಾಸಿಸುತ್ತಿದ್ದರು. ಲೇಡಿಗೋಶನ್ ಆಸ್ಪತ್ರೆಯ ಸ್ವತ್ಛತಾ ವಿಭಾಗದಲ್ಲಿ ಅವರು ಕೆಲಸ ಮಾಡುತ್ತಿದ್ದರು. ಓರ್ವ ಪುತ್ರ ಲೇಡಿಗೋಶನ್ ಆಸ್ಪತ್ರೆಯಲ್ಲಿ ಡಿ ಗ್ರೂಪ್ ನೌಕರರಾಗಿ ಕೆಲಸ ಮಾಡುತ್ತಿದ್ದು, ಇನ್ನೋರ್ವ ಪುತ್ರ ಮೇಸ್ತ್ರಿ ಕೆಲಸಕ್ಕೆ ಹೋಗುತ್ತಿದ್ದಾರೆ. ಪುತ್ರಿ ಡಿಪ್ಲೊಮಾ ಓದಿದ್ದು, ಮನೆಯಲ್ಲಿದ್ದಾರೆ.
ಕಂಟೈನರ್ ಚಾಲಕನ ಸಮಯಪ್ರಜ್ಞೆ ಕಂಟೈನರ್ ಚಾಲಕ ತನ್ನ ವಾಹನವನ್ನು ಅಪಘಾತದಿಂದ ತಪ್ಪಿಸಲು ಸಾಕಷ್ಟು ಪ್ರಯತ್ನ ಮಾಡಿದ್ದು, ನೇರವಾಗಿ ಬಸ್ಸಿಗೆ ಢಿಕ್ಕಿ ಹೊಡೆಯುವುದರಿಂದ ತಪ್ಪಿದೆ. ಹಾಗಾಗಿ ಗಂಭೀರ ಅಪಘಾತ ತಪ್ಪಿದಂತಾಗಿದೆ. ಚಾಲಕನಿಗೆ ಸಣ್ಣ ಪುಟ್ಟ ಗಾಯಗಳಾಗಿವೆ.
ಪಾದಚಾರಿ ಪವಾಡಸದೃಶ ಪಾರು
ಮೂರು ವಾಹನಗಳು ಅಪಘಾತದಲ್ಲಿ ಸಿಲುಕಿಕೊಂಡಾಗ ಅಲ್ಲಿದ್ದ ಪಾದಚಾರಿಯೊಬ್ಬರು ಪವಾಡ ಸದೃಶ ಅಪಾಯದಿಂದ ಪಾರಾಗಿದ್ದಾರೆ.
ವೀಡಿಯೋ ವೈರಲ್ ಅಪಘಾತದ ದೃಶ್ಯದ ವೀಡಿಯೋ ಸರ್ಕಲ್ ನಲ್ಲಿದ್ದ ಸಿಸಿ ಕೆಮರಾದಲ್ಲಿ ದಾಖಲಾಗಿದೆ. ಈ ವೀಡಿಯೊ ವೈರಲ್ ಆಗಿದ್ದು, ಸಾಮಾಜಿಕ ಜಾಲ ತಾಣಗಳಲ್ಲಿ ಹರಿದಾಡುತ್ತಿದೆ.
ಬಸ್ ಚಾಲಕನಿಗೂ ಗಾಯ ಅಪಘಾತಕ್ಕೆ ಕಾರಣವಾದ ಪಿ.ಟಿ.ಸಿ. ಬಸ್ ಚಾಲಕ ಸಯ್ಯದ್ ಇರ್ಫಾನ್‌ಗೆ ಸಣ್ಣ ಪುಟ್ಟ ಗಾಯಗಳಾಗಿದ್ದು, ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಕೊಂಕಣಿ ಭಾಷೆ, ಸಾಹಿತ್ಯದ ಬೆಳವಣಿಗೆಗೆ ಬೆಂಬಲ ಅಗತ್ಯ
Mangaluru: ಎಂಟು ಹೊಸ ರೂಟ್‌ಗಳಲ್ಲಿ ಪರವಾನಿಗೆಗೆ ಪ್ರಸ್ತಾವ
Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ
Commonwealth ಸಂಸದೀಯ ಸಭೆ; ಸ್ಪೀಕರ್ ಯು.ಟಿ. ಖಾದರ್ ಭಾಗಿ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
MUST WATCH
ಹೊಸ ಸೇರ್ಪಡೆ
Gautam Adani: ಯುಪಿಎ ಅವಧಿಯಲ್ಲಿ ರಾಹುಲ್ ಭೇಟಿಗೆ ಯತ್ನಿಸಿದ್ದರೇ ಅದಾನಿ?
Sharad Pawar: ಚುನಾವಣಾ ರಾಜಕೀಯ ನಿವೃತ್ತಿ ಸುಳಿವು ನೀಡಿದ ಎನ್‌ಸಿಪಿ ವರಿಷ್ಠ ಶರದ್
Somy Ali: ಸುಶಾಂತ್‌ರದ್ದು ಕೊಲೆ, ಶವಪರೀಕ್ಷೆ ವರದಿ ಬದಲು: ನಟಿ ಸೋಮಿ!
Maha Polls; ರಾಜ್ ಠಾಕ್ರೆ ಪುತ್ರ ಅಮಿತ್ ಠಾಕ್ರೆಗೆ ಬೆಂಬಲ ನೀಡಲ್ಲ: ಬಿಜೆಪಿ ಯೂಟರ್ನ್!
Mangaluru: ಕೊಂಕಣಿ ಭಾಷೆ, ಸಾಹಿತ್ಯದ ಬೆಳವಣಿಗೆಗೆ ಬೆಂಬಲ ಅಗತ್ಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.