ಮಂಗಳೂರಿಗೆ ಮತ್ತೆ 4 ದಿನ ನೀರು
Team Udayavani, May 9, 2019, 6:15 AM IST
ಮಂಗಳೂರು: ತುಂಬೆ ಅಣೆಕಟ್ಟಿನಲ್ಲಿ ದಿನದಿಂದ ದಿನಕ್ಕೆ ನೀರಿನ ಪ್ರಮಾಣ ಕಡಿಮೆಯಾಗುತ್ತಿರುವ ಹಿನ್ನೆಲೆಯಲ್ಲಿ ಜಾರಿಯಲ್ಲಿರುವ ರೇಷನಿಂಗ್ ವ್ಯವಸ್ಥೆಯಡಿ ಮೇ 9ರ ಬೆಳಗ್ಗೆಯಿಂದ ಮುಂದಿನ ನಾಲ್ಕು ದಿನಗಳವರೆಗೆ ನೀರು ಸರಬರಾಜು ಮರು ಆರಂಭವಾಗಲಿದೆ.
ಮಂಗಳವಾರ ಹಾಗೂ ಬುಧವಾರ ನಗರದಲ್ಲಿ ನೀರು ರೇಷನಿಂಗ್ ನಿಯಮದಂತೆ ತುಂಬೆ ಡ್ಯಾಂನಲ್ಲಿ ಪಂಪಿಂಗ್ ಸ್ಥಗಿತಗೊಳಿಸಲಾಗಿತ್ತು. ಇದರಂತೆ ಎರಡೂ ದಿನ ಮಂಗಳೂರಿನಲ್ಲಿ ನೀರು ಸರಬರಾಜು ವ್ಯತ್ಯಯವಾಗಿ ಜನರು ಸಮಸ್ಯೆ ಅನುಭವಿಸಿದರು. ನಗರದ ಎತ್ತರ ಪ್ರದೇಶ ಹಾಗೂ ಪೈಪ್ಲೈನ್ನಲ್ಲಿ ಏರ್ಲಾಕ್ ಆಗಿದ್ದ ವ್ಯಾಪ್ತಿಗಳಿಗೆ ಬುಧವಾರವೂ ಸಮಸ್ಯೆ ಎದುರಾಗಿತ್ತು. ಮೇ 9ರ ಬೆಳಗ್ಗೆ 6 ಗಂಟೆಯಿಂದ ಮೇ 13ರ ಬೆಳಗ್ಗೆ 6 ಗಂಟೆಯವರೆಗೆ 96 ತಾಸುಗಳ ಕಾಲ ನೀರು ಸರಬರಾಜು ಇರಲಿದೆ.
ಅಕ್ರಮ ಸಂಪರ್ಕ ಕಡಿತ
ತುಂಬೆಯಿಂದ ಮಂಗಳೂರಿಗೆ ಬರುವ ನೀರು ಪೂರೈಕೆಯ ಮುಖ್ಯ ಪೈಪ್ಲೈನ್ನಲ್ಲಿರುವ ಅಕ್ರಮ ಸಂಪರ್ಕ ತೆರವು ಕಾರ್ಯಾಚರಣೆ ಬುಧವಾರವೂ ನಡೆದಿದೆ. ಫರಂಗಿಪೇಟೆಯಲ್ಲಿ ಬುಧವಾರ ಕಾರ್ಯಾಚರಣೆಗೆ ಅಧಿಕಾರಿಗಳು ಆಗಮಿಸಿದಾಗ ಸ್ಥಳೀಯರು ಪ್ರತಿಭಟನೆ ನಡೆಸಿದ ಘಟನೆಯೂ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.