ಮಂಗಳೂರು ವಿಮಾನ ನಿಲ್ದಾಣ: ಬಂದಿದೆ ಕ್ಷಿಪ್ರ ಕಾರ್ಯಾಚರಣೆ ವಾಹನ
Team Udayavani, Sep 27, 2019, 5:57 AM IST
ಮಂಗಳೂರು ಏರ್‌ಪೋರ್ಟ್‌ಗೆ ತರಿಸಲಾದ "ಕ್ಷಿಪ್ರ ಕಾರ್ಯಾಚರಣೆ ವಾಹನ'
ಮಂಗಳೂರು: ಅಗ್ನಿ ಅವಘಡ ಸಂಭವಿಸಿದಾಗ ಈಗಿರುವ ತಂತ್ರಜ್ಞಾನಕ್ಕಿಂತ ಕ್ಷಿಪ್ರವಾಗಿ ಸ್ಪಂದಿಸಿ, ನಿಯಂತ್ರಿಸಬಲ್ಲ ಅತ್ಯಾಧುನಿಕ ಕ್ಷಿಪ್ರ ಕಾರ್ಯಾಚರಣೆ ವಾಹನ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲೀಗ ಸೇವೆಗೆ ಸಿದ್ಧವಾಗಿದೆ. ದುಬಾೖ ಯಿಂದ ಈ ಯಂತ್ರವಾಹನವನ್ನು ತರಿಸಲಾಗಿದೆ. ಪ್ರಯಾಣಿಕರ ಸುರಕ್ಷೆಯ ಮಹತ್ವದ ಹೆಜ್ಜೆ ಇದು.
ನಿಲ್ದಾಣದಲ್ಲಿ ಈಗಾಗಲೇ 5 ಅಗ್ನಿಶಾಮಕ ವಾಹನಗಳಿವೆ. ಸುಮಾರು 10 ಸಾವಿರ ಲೀ. ನೀರು ಸಾಗಿಸಬಲ್ಲ ವಾಹನಗಳಿವೆ. ಅಗ್ನಿ ಶಮನಕ್ಕೆ ಸಂಬಂಧಿಸಿ ದೇಶ-ವಿದೇಶಗಳಲ್ಲಿ ತರಬೇತಿ ಪಡೆದಿರುವ 39 ಪರಿಣತರ ತಂಡವಿದೆ. ಇದಕ್ಕೆ ಪೂರಕವಾಗಿ ಆಸ್ಟ್ರಿಯಾದಿಂದ ಹೊಸ ಯಂತ್ರ ವಾಹನವನ್ನು ಈಚೆಗೆ ತರಿಸಲಾಗಿತ್ತು. 40 ಸೆಕೆಂಡ್‌ನ ಒಳಗೆ ಗಂಟೆಗೆ 80 ಕಿ.ಮೀ. ವೇಗ ಪಡೆಯಬಲ್ಲ ಇದು ತುರ್ತು ಸಂದರ್ಭಗಳಲ್ಲಿ ಕಾರ್ಯಾಚರಣೆಗೆ ಸಹಕಾರಿ.
ಈಗ ಈ ಸಾಲಿಗೆ ದುಬಾೖ ಮೂಲದ ಹೊಸ ವಾಹನ ಸೇರ್ಪಡೆಯಾಗಿದೆ. ಇದು ವಿವಿಧ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಗಳಲ್ಲಿ ಈಗಾಗಲೇ ಬಳಕೆಯಲ್ಲಿರುವಂಥದ್ದು. ಇಲ್ಲಿನ ಅಗ್ನಿಶಾಮಕ ದಳದ ತಜ್ಞರು ಇದರ ಬಗ್ಗೆ ಪೂರ್ಣ ಮಾಹಿತಿ, ತರಬೇತಿ ಪಡೆದಿದ್ದಾರೆ.
ಏನಿದು “ಕ್ಷಿಪ್ರ ಕಾರ್ಯಾಚರಣೆ ವಾಹನ’?
ಘಟನಾ ಸ್ಥಳಕ್ಕೆ ಅತ್ಯಂತ ವೇಗವಾಗಿ ತೆರಳಬಲ್ಲ ಅತ್ಯಾಧುನಿಕ ವಾಹನವಿದು. 25 ಸೆಕೆಂಡ್ ಒಳಗೆ ತಾಸಿಗೆ 80 ಕಿ.ಮೀ. ವೇಗ ಪಡೆಯಬಲ್ಲುದು. ಏರ್‌ಪೋರ್ಟ್‌ನಲ್ಲಿ ಅಗ್ನಿಅವಘಡಗಳಾದರೆ ಅರೆಕ್ಷಣದಲ್ಲಿಯೇ ತಲುಪಲು ಸಾಧ್ಯ. ಸುಮಾರು 6 ಸಾವಿರ ಲೀ. ನೀರು ಮತ್ತು 800 ಲೀ.ನಷ್ಟು ಅಗ್ನಿ ಶಮನಕಾರಿ ನೊರೆಯನ್ನು ಇದು ಹೊಂದಿರುತ್ತದೆ. ಅಗತ್ಯ ಸಂದರ್ಭಗಳಲ್ಲಿ ಮರದ ಕೊಂಬೆಯಂಥ ಅಡೆತಡೆಗಳನ್ನು ಕತ್ತರಿಸಿ ನಿವಾರಿಸಲು ಬೇಕಾದಂಥ ಆಧುನಿಕ ತಾಂತ್ರಿಕ ಸಲಕರಣೆಗಳು ಇದರಲ್ಲಿವೆ. ಕೆಮರಾ, ಹೈಮಾಸ್ಕ್ ಲ್ಯಾಂಪ್ ಇದರಲ್ಲಿದ್ದು, ಎಲ್ಲವೂ ಕಂಪ್ಯೂಟರೀಕೃತವಾಗಿ ಕೆಲಸ ಮಾಡುತ್ತವೆ. 5 ಮಂದಿ ಕುಳಿತುಕೊಳ್ಳಲು ಅವಕಾಶವಿದೆ.
ಪ್ರಯಾಣಿಕರ ಸುರಕ್ಷತೆ ಆದ್ಯತೆ
ಪ್ರಯಾಣಿಕರ ಸುರಕ್ಷತೆಗೆ ವಿಶೇಷ ಆದ್ಯತೆ ದೃಷ್ಟಿಯಿಂದ ಅತ್ಯಾಧುನಿಕ ತಂತ್ರಜ್ಞಾನಗಳ “ಕ್ಷಿಪ್ರ ಕಾರ್ಯಾಚರಣೆ ವಾಹನ’ವನ್ನು ತರಿಸಲಾಗಿದೆ. ಏರ್‌ಪೋರ್ಟ್‌ನ ಅಗ್ನಿಶಾಮಕದಳ ಇದರಿಂದ ಮತ್ತಷ್ಟು ಬಲಯುತವಾಗಿ, ಪ್ರಯಾಣಿಕರ ಸುರಕ್ಷತೆಗೆ ವಿಶೇಷ ಆದ್ಯತೆ ನೀಡಲಿದೆ.
– ವಿ.ವಿ. ರಾವ್ ನಿರ್ದೇಶಕರು, ಮಂಗಳೂರು ಅಂ. ವಿಮಾನ ನಿಲ್ದಾಣ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.