ಮಂಗಳೂರು:ಭಾಸ್ಕರ್‌ ಮೇಯರ್‌, ಮಹಮ್ಮದ್‌ ಉಪಮೇಯರ್‌


Team Udayavani, Mar 9, 2018, 10:04 AM IST

0803mlr25-mayor-d.jpg

ಮಂಗಳೂರು: ಮಂಗಳೂರು ಮಹಾ ನಗರ ಪಾಲಿಕೆಯ 31ನೇ ಮೇಯರ್‌ ಆಗಿ ಕಾಂಗ್ರೆಸ್‌ನ ಭಾಸ್ಕರ್‌ ಕೆ. ಹಾಗೂ ಉಪ ಮೇಯರ್‌ ಆಗಿ ಮಹಮ್ಮದ್‌ ಕುಂಜತ್ತಬೈಲು ಆಯ್ಕೆ ಯಾಗಿ ದ್ದಾರೆ. ನೂತನ ಮೇಯರ್‌, ಉಪ ಮೇಯರ್‌ ಅಧಿಕಾರಾವಧಿ 2019 ಮಾ. 8ರ ವರೆಗೆ ಇರಲಿದ್ದು, ಕಾಂಗ್ರೆಸ್‌ ಆಡಳಿತದಲ್ಲಿನ ಕೊನೆಯ ಅವಧಿಯ ಮೇಯರ್‌, ಉಪ ಮೇಯರ್‌ ಹುದ್ದೆ ಇದಾಗಿದೆ.

ಪಾಲಿಕೆ ಪರಿಷತ್‌ 20ನೇ ಅವಧಿಯ ಮೇಯರ್‌ ಹಾಗೂ ಉಪ ಮೇಯರ್‌ ಸ್ಥಾನಕ್ಕೆ ಗುರು ವಾರ ಚುನಾವಣೆ ನಡೆಯಿತು. ಮೇಯರ್‌ ಸ್ಥಾನಕ್ಕೆ ಕಾಂಗ್ರೆಸ್‌ನಿಂದ ಭಾಸ್ಕರ್‌ ಕೆ. ಹಾಗೂ ಬಿಜೆಪಿಯಿಂದ ಸುರೇಂದ್ರ ಅವರು ಸ್ಪರ್ಧಿಸಿದ್ದರು. ಭಾಸ್ಕರ್‌ ಅವರು ಸುರೇಂದ್ರ ವಿರುದ್ಧ 18 ಮತ ಗಳ (ಕೈ ಎತ್ತುವ ಮೂಲಕ) ಅಂತರ ದಿಂದ ಜಯ ಸಾಧಿಸಿ ಮೇಯರ್‌ ಆಗಿ ಚುನಾಯಿತರಾದರು.
60 ಸದಸ್ಯ ಬಲದ ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಓರ್ವ ಸಂಸದ, ಇಬ್ಬರು ಶಾಸಕರು ಹಾಗೂ ಇಬ್ಬರು ವಿಧಾನ ಪರಿಷತ್‌ ಸದಸ್ಯರು ಸಹಿತ ಒಟ್ಟು 65 ಮಂದಿಗೆ ಮತದಾನ ಮಾಡಲು ಅವಕಾಶವಿದೆ. ಇದರಲ್ಲಿ ಸಂಸದ ನಳಿನ್‌ ಕುಮಾರ್‌ ಕಟೀಲು, ಶಾಸಕ ಮೊದಿನ್‌ ಬಾವಾ, ವಿಧಾನ ಪರಿಷತ್‌ ಸದಸ್ಯರಾದ ಕ್ಯಾ| ಗಣೇಶ್‌ ಕಾರ್ಣಿಕ್‌, ಬಿಜೆಪಿ ಸದಸ್ಯ ಹರೀಶ್‌ ಶೆಟ್ಟಿ ಗೈರು ಹಾಜರಾಗಿದ್ದರು. ವಿಧಾನಪರಿಷತ್‌ ಮುಖ್ಯ ಸಚೇತಕ ಐವನ್‌ ಡಿ’ಸೋಜಾ ಹಾಗೂ ಶಾಸಕ ಜೆ.ಆರ್‌. ಲೋಬೋ ಮತದಾನ ಮಾಡಿದರು.

ಭಾಸ್ಕರ್‌ ಪರವಾಗಿ ಒಟ್ಟು 37 ಮತಗಳು ಚಲಾವಣೆಯಾದರೆ, ಸುರೇಂದ್ರ ಪರವಾಗಿ 19 ಮತಗಳು ಚಲಾವಣೆಯಾದವು. ಒಟ್ಟು 60 ಸದಸ್ಯ ಬಲದ ಪಾಲಿಕೆಯಲ್ಲಿ ಕಾಂಗ್ರೆಸ್‌-35, ಬಿಜೆಪಿ-20, ಜೆಡಿಎಸ್‌-2, ಎಸ್‌ಡಿಪಿಐ-1, ಸಿಪಿಎಂ-1 ಹಾಗೂ ಓರ್ವ ಪಕ್ಷೇತರ ಸದಸ್ಯ ರಿದ್ದಾರೆ. ಜೆಡಿಎಸ್‌ ಸದಸ್ಯ ರಾದ ಅಬ್ದುಲ್‌ ಅಝೀಝ್ ಕುದ್ರೋಳಿ, ರಮೀಝಾ ಬಾನು, ಸಿಪಿಎಂನ ದಯಾನಂದ ಶೆಟ್ಟಿ, ಎಸ್‌ಡಿಪಿಐನ ಅಯಾಝ್ ಹಾಗೂ ಪಕ್ಷೇತರ ಅಭ್ಯರ್ಥಿ ರೇವತಿ ಅವರು ತಟಸ್ಥರಾಗಿದ್ದರು.

ಉಪ ಮೇಯರ್‌ ಸ್ಥಾನಕ್ಕೆ ಕಾಂಗ್ರೆಸ್‌ ನಿಂದ ಮಹಮ್ಮದ್‌ ಹಾಗೂ ಬಿಜೆಪಿಯಿಂದ ಮೀರಾ ಕರ್ಕೇರ ನಾಮಪತ್ರ ಸಲ್ಲಿಸಿದ್ದರು. ಮಹಮ್ಮದ್‌ ಅವರ ಪರವಾಗಿ 37 ಮತಗಳು ಹಾಗೂ ಮೀರಾ ಕರ್ಕೇರ ಪರವಾಗಿ 19 ಮತಗಳು ಚಲಾವಣೆಯಾದವು. ಮೇಯರ್‌ ಹಾಗೂ ಉಪಮೇಯರ್‌ ಚುನಾವಣೆಯ ಬಳಿಕ 4 ಸ್ಥಾಯೀ ಸಮಿತಿಗಳಿಗೆ ಸದಸ್ಯರ ಅವಿರೋಧ ಆಯ್ಕೆ ನಡೆಯಿತು. 

3ನೇ ಅವಧಿಯಲ್ಲಿ ಮೇಯರ್‌
ನೂತನ ಮೇಯರ್‌ ಭಾಸ್ಕರ್‌ ಅವರು ಪದವು ವಾರ್ಡ್‌ ಸದಸ್ಯ ರಾಗಿದ್ದು, ಪಾಲಿಕೆಗೆ 3ನೇ ಅವಧಿಗೆ ಆಯ್ಕೆಯಾದವರು. ಎಸ್‌ಎಸ್‌ಎಲ್‌ಸಿ ಹಾಗೂ ಐಟಿಐ ವಿದ್ಯಾರ್ಹತೆ ಹೊಂದಿರುವ ಅವರು ವೃತ್ತಿಯಲ್ಲಿ ಉದ್ಯಮಿ. ಈ ಹಿಂದೆ ನಗರ ಯೋಜನೆ ಸ್ಥಾಯೀ ಸಮಿತಿ ಅಧ್ಯಕ್ಷರಾಗಿ ಕಾರ್ಯ ನಿರ್ವಹಿಸಿದ ಅನುಭವ ಹೊಂದಿದ್ದಾರೆ. ಎನ್‌ಎಂಪಿಟಿ ಟ್ರಸ್ಟಿ, ರಾಜ್ಯ ಆಹಾರ ನಿಗಮದ ಸಲಹಾ ಸಮಿತಿ ಸದಸ್ಯರಾಗಿರುವ ಭಾಸ್ಕರ ಕೆ. ಅವರು 20 ವರ್ಷಗಳಿಂದ ಕುಡುಪು ಅನಂತ ಪದ್ಮನಾಭ ದೇವಸ್ಥಾನದಲ್ಲಿ ಸರಕಾರದಿಂದ ನಿಯೋಜಿತ ಏಕೈಕ ಸದಸ್ಯರಾಗಿದ್ದಾರೆ. ಕಾಂಗ್ರೆಸ್‌ನ ರಾಜ್ಯ ಹಾಗೂ ಜಿಲ್ಲಾ ಯುವ ಕಾಂಗ್ರೆಸ್‌ನಲ್ಲಿಯೂ ಅವರು ಸೇವೆ ಸಲ್ಲಿಸಿದ್ದಾರೆ. ತಮ್ಮ ಅವಧಿಯಲ್ಲಿ 60 ವಾರ್ಡ್‌ ಗಳಿಗೂ ಭೇಟಿ ನೀಡಿ ಅಲ್ಲಿನ ಜನರ ಸಮಸ್ಯೆಯನ್ನು ಅರಿತು ಪರಿಹರಿಸುವ ಪ್ರಯತ್ನ ಮಾಡುವುದಾಗಿ ಅವರು ಹೇಳಿದರು.

ಟಾಪ್ ನ್ಯೂಸ್

1—a-deee

Maharashtra polls; ಗುವಾಹಟಿಯ ಕಾಮಾಖ್ಯ ದೇವಿ ದರ್ಶನ ಪಡೆದ ಸಿಎಂ ಶಿಂಧೆ

1-a–a-yogi

C.P.Yogeshwar ಕಾಂಗ್ರೆಸ್ ಸೇರ್ಪಡೆ ಖಚಿತ: ಸಿದ್ದರಾಮಯ್ಯ ಭೇಟಿಯಾಗಿ ಮಹತ್ವದ ಮಾತುಕತೆ

Shindhe

Eknath Shinde; ಶಿವಸೇನೆ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಬಹುತೇಕರಿಗೆ ಮಣೆ

1-a-bengg

Bengaluru; 27 ವರ್ಷ ಬಳಿಕ ದಾಖಲೆ ವರ್ಷಧಾರೆ!!

1-a-rain-sss

Bengaluru Rains;ಇಂದು ಶಾಲೆಗಳಿಗೆ ರಜೆ ಘೋಷಿಸಿದ ಡಿಸಿ: ಖಾಸಗಿ ಶಾಲೆಗಳ ಒಕ್ಕೂಟ ವಿರೋಧ

1-a-bg

Bengaluru ;6 ಅಂತಸ್ತಿನ ಕಟ್ಟಡ ಕುಸಿತ ಪ್ರಕರಣ: ಸಾ*ವಿನ ಸಂಖ್ಯೆ 5 ಕ್ಕೇರಿಕೆ

Ashok-Rai

Bengaluru Kambala: ಕಂಬಳದ ಅನುಮತಿಗಾಗಿ ಕಾನೂನು ಹೋರಾಟ: ಶಾಸಕ ಅಶೋಕ್‌ ಕುಮಾರ್‌ ರೈ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

MDMA

Narcotics: ನಿಷೇಧಿತ ಎಂಡಿಎಂಎ ಈಗ ದೇಶದಲ್ಲೇ ಉತ್ಪಾದನೆ!

16

Mangaluru: ಹಳೆಯ ಹೆಲ್ಮೆಟ್‌ ಇಟ್ಟು ಹೊಸ ಹೆಲ್ಮೆಟ್‌ ಕಳವು!

Accident-Logo

Bantwala: ಬೋಳಂಗಡಿ: ಹೆದ್ದಾರಿ ಕಾಮಗಾರಿ ಯಂತ್ರ ಢಿಕ್ಕಿ; ಪಾದಚಾರಿಗೆ ಗಾಯ

Police

Police Compliant: ಸಂಜೀವ ಕಾಣಿಯೂರು ವಿರುದ್ಧ ಕುಣಿತ ಭಜನೆಯ ಹೆಣ್ಮಕ್ಕಳಿಂದ ದೂರು

LiQer

Dakshina Kannada: ಅಬಕಾರಿ ಕಾರ್ಯಾಚರಣೆ; ಮದ್ಯ, ಗಾಂಜಾ ವಶ

MUST WATCH

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಕಪ್ಪುಪಟ್ಟಿ ತೆಗೆಸಿದ ಚೀಫ್ ಜಸ್ಟೀಸ್ ಆಫ್ ಇಂಡಿಯಾ!

udayavani youtube

ಯಾಹ್ಯಾ ಸಿನ್ವಾರ್ ಹತ್ಯೆಯ ಡ್ರೋನ್ ವಿಡಿಯೋ ಬಿಡುಗಡೆ ಮಾಡಿದ ಇಸ್ರೇಲ್

udayavani youtube

ಡೂಪ್ಲಿಕೇಟ್ ಕೀ ಮಹತ್ವವೇನು ?

udayavani youtube

ಅಗಲಿದ ರತನ್ ಟಾಟಾಗೆ ಶ್ರದ್ಧಾಂಜಲಿ ಸಲ್ಲಿಸಿದ ಅಂಬಾನಿ ಕುಟುಂಬ

ಹೊಸ ಸೇರ್ಪಡೆ

1—a-deee

Maharashtra polls; ಗುವಾಹಟಿಯ ಕಾಮಾಖ್ಯ ದೇವಿ ದರ್ಶನ ಪಡೆದ ಸಿಎಂ ಶಿಂಧೆ

1-a–a-yogi

C.P.Yogeshwar ಕಾಂಗ್ರೆಸ್ ಸೇರ್ಪಡೆ ಖಚಿತ: ಸಿದ್ದರಾಮಯ್ಯ ಭೇಟಿಯಾಗಿ ಮಹತ್ವದ ಮಾತುಕತೆ

1

Sandalwood: ಸುಂದರ ರಾಕ್ಷಸಿ ಇವಳು!

Shindhe

Eknath Shinde; ಶಿವಸೇನೆ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ: ಬಹುತೇಕರಿಗೆ ಮಣೆ

1-a-bengg

Bengaluru; 27 ವರ್ಷ ಬಳಿಕ ದಾಖಲೆ ವರ್ಷಧಾರೆ!!

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.