ಅವಲೋಕನಕ್ಕಾಗಿ ಮೆಗಾ ಸರ್ವೇ !
ಸಿಟಿ ಬಸ್ ಕಾರ್ಯಕ್ಷಮತೆ
Team Udayavani, Dec 7, 2020, 1:04 PM IST
ಮಹಾನಗರ, ಡಿ. 6: ನಗರದಲ್ಲಿ ಸಂಚರಿಸುವ ಸಿಟಿ ಬಸ್‌ಗಳು ಭವಿಷ್ಯದಲ್ಲಿ ಯಾವ ರೀತಿಯ ಕಾರ್ಯವಿಧಾನಗಳನ್ನು ಅನುಸರಿಸಬೇಕು ಎಂಬುದಕ್ಕೆ ಸಾರ್ವಜನಿ ಕರಿಂದ ಸರ್ವೇ ಆರಂಭಿಸಲಾಗಿದೆ.
ಕೆನರಾ ವಾಣಿಜ್ಯ ಮತ್ತು ಕೈಗಾರಿಕೆ ಸಂಸ್ಥೆ (ಕೆಸಿಸಿಐ), ಸಿಟಿ ಬಸ್ ಮಾಲಕರ ಸಂಘ, ಬೆಸೆಂಟ್ ಕಾಲೇಜು ಮತ್ತು ಸೈಂಟ್ ಜೋಸೆಫ್ ಕಾಲೇಜಿನ ವಿದ್ಯಾರ್ಥಿ ಗಳು ಸರ್ವೇ ಆರಂಭಿಸಿದ್ದಾರೆ. ಭವಿಷ್ಯದ ಸಿಟಿ ಬಸ್‌ಗೆ ಯಾವ ರೀತಿ ಬ್ರ್ಯಾಂಡ್ ಕಂಡುಕೊಳ್ಳಬೇಕು, ವ್ಯಾವಹಾರಿಕ ಸ್ಪರ್ಧೆ, ಸಿಟಿ ಬಸ್ ಕುರಿತು ವೆಬ್‌ಸೈಟ್ ರಚನೆ, ಆ್ಯಪ್ ಅಭಿವೃದ್ಧಿ, ಪ್ರಯಾಣಿಕರು- ಚಾಲಕ-ನಿರ್ವಾಹಕರ ಸಮನ್ವಯ ಮತ್ತಿತರ ವಿಚಾರಗಳ ಅವಲೋಕನಕ್ಕಾಗಿ ಸರ್ವೇ ಆಯೋಜಿಸಲಾಗಿದೆ.
ಮೊದಲನೇ ಹಂತದ ಆನ್‌ಲೈನ್ ಸರ್ವೇ ಆರಂಭವಾಗಿದ್ದು, ಇನ್ನೂ ಒಂದು ತಿಂಗಳ ಕಾಲ ಮುಂದುವರಿಯಲಿದೆ. ಸದ್ಯ ಸಿಟಿ ಬಸ್ ಪ್ರಯಾಣಿಕರನ್ನು ದೃಷ್ಟಿಯಲ್ಲಿಟ್ಟುಕೊಂಡು ಸಮೀಕ್ಷೆ ನಡೆಸಲಾಗುತ್ತಿದೆ. ಬಸ್ ಪ್ರಯಾಣಿಕರು ಹೊರತಾಗಿ ಖಾಸಗಿ ವಾಹನಗಳನ್ನು ನೆಚ್ಚಿಕೊಂಡಿರುವವರ ಸರ್ವೇ ಕೂಡ ಮುಂದಿನ ದಿನಗಳಲ್ಲಿ ನಡೆಯಲಿದೆ. ಈ ಸಮೀಕ್ಷೆಗಳಲ್ಲಿ ಬರುವ ಅಂಶಗಳನ್ನು ಪರಿಗಣಿಸಿ ವಿಸ್ತೃತ ಯೋಜನ ವರದಿ (ಡಿಪಿಆರ್) ತಯಾರಿಸಲು, ಆ ವರದಿ ಯನ್ನು ಜಿಲ್ಲಾಧಿಕಾರಿಗಳಿಗೆ ನೀಡಲು ತೀರ್ಮಾನಿಸಲಾಗಿದೆ. ಸಿಟಿ ಬಸ್‌ಗಳಲ್ಲಿ ಪ್ರಯಾಣಿಕರಿಗೆ ಮತ್ತಷ್ಟು ಉತ್ತಮ ಸೇವೆ ನೀಡಲು ಈ ಸರ್ವೇ ಸಹಕಾರಿ ಯಾಗಲಿದೆ.
ಸಮೀಕ್ಷೆಯಲ್ಲಿ ಏನಿದೆ? : ಸಮೀಕ್ಷೆಯಲ್ಲಿ 15 ಪ್ರಶ್ನೆಗಳನ್ನು ನೀಡ ಲಾಗಿದೆ. ಸಾರ್ವಜನಿಕರು ಬಸ್‌ಗಳನ್ನು ಎಷ್ಟು ಬಾರಿ ಉಪಯೋಗಿಸುತ್ತೀರಿ? ಯಾವ ದಿನ ಮತ್ತು ಯಾವ ಸಮಯ ದಲ್ಲಿ ಬಸ್ ಉಪಯೋಗಿಸುತ್ತೀರಿ? ನಿಮ್ಮ ಪ್ರದೇಶಕ್ಕೆ ಎಷ್ಟು ಬಾರಿ ಬಸ್ ಬಂದು ಹೋಗುತ್ತದೆ? ದಿನನಿತ್ಯದ ಪ್ರಯಾಣದ ಮಾರ್ಗ? ಬಸ್ ಸಂಖ್ಯೆ? ನಿಮ್ಮ ಪ್ರದೇಶದಲ್ಲಿ ಸಾಕಷ್ಟು ಬಸ್‌ಗಳು ಕಾರ್ಯಾಚರಿಸುತ್ತಿವೆಯೇ? ನಗರದ ಬಸ್‌ಗಳಿಂದ ಎದುರಾದ ತೊಂದರೆ? ಸ್ವತ್ಛತೆಯ ರೇಟಿಂಗ್ ಮತ್ತಿತರ ಪ್ರಶ್ನೆಗಳನ್ನು ಕೇಳಲಾಗಿದೆ.
ಬಸ್ ನಿಲ್ದಾಣದಲ್ಲೂ ಸಮೀಕ್ಷೆ : ಸರ್ವೇಗೆ ಸಾರ್ವಜನಿಕರಿಂದ ಈಗಾ ಗಲೇ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಆದರೆ ಈ ಸಮೀಕ್ಷೆಯಲ್ಲಿ ನಗರದ ಮತ್ತಷ್ಟು ಮಂದಿ ಪಾಲ್ಗೊಳ್ಳಬೇಕು ಎಂಬ ಉದ್ದೇಶದಿಂದ ಮುಂದಿನ ದಿನಗಳಲ್ಲಿ ನಗರದ ಪ್ರಮುಖ ಬಸ್ ನಿಲ್ದಾಣಗಳಲ್ಲಿ ಮತ್ತು ತಂಗುದಾಣಗಳಲ್ಲಿಯೂ ಸರ್ವೇ ಆಯೋಜಿಸಲು ಬಸ್ ಮಾಲಕರ ಸಂಘ ಮುಂದಾಗಿದೆ. ಆನ್‌ಲೈನ್ ಸರ್ವೇ ಇದಾ ಗಿದ್ದು, ಬಸ್ ಬಳಕೆದಾರರಿಗೆ ಪ್ರಶ್ನೆಗಳನ್ನು ನೀಡಿ, ಉತ್ತರ ಪಡೆಯಲಾಗುತ್ತದೆ.
ಸಮೀಕ್ಷೆಯಲ್ಲಿ ನೀವೂ ಪಾಲ್ಗೊಳ್ಳಿ : ಸಾರ್ವಜನಿಕರು ಕೂಡ ಈ ಆನ್‌ಲೈನ್ ಸಮೀಕ್ಷೆ ಯಲ್ಲಿ ಪಾಲ್ಗೊಂಡು ಭವಿಷ್ಯದಲ್ಲಿ ಸಿಟಿ ಬಸ್ ಯಾವ ರೀತಿ ಇರಬೇಕು, ಈಗಿರುವ ಸೇವೆಗಿಂತ ಉತ್ಕೃಷ್ಟ ಸೇವೆ ಹೇಗಿರಬೇಕು ಎಂಬ ಬಗ್ಗೆ ಪ್ರಶ್ನೆಗಳಿಗೆ ಉತ್ತರ ನೀಡಬಹುದಾಗಿದೆ. https://forms.gle/zDXsJqqeuQiAWjTH6 ಅಂತರ್ಜಾಲ ತಾಣಕ್ಕೆ ಭೇಟಿ ನೀಡಿ ಸರ್ವೇಯಲ್ಲಿ ಪಾಲ್ಗೊಳ್ಳಬಹುದು.
ಬ್ರ್ಯಾಂಡ್ ಕಂಡುಕೊಳ್ಳಲು ಸಹಕಾರಿ : ಬಸ್ಗಳಿಗೆ ಬ್ರ್ಯಾಂಡ್ ಕಂಡುಕೊಳ್ಳುವ ನಿಟ್ಟಿನಲ್ಲಿ ಈ ಸರ್ವೇ ಸಹಕಾರಿಯಾಗಲಿದೆ. ಮೊದಲನೇ ಹಂತದಲ್ಲಿ ಸಮೀಕ್ಷೆಯನ್ನು ಆಯೋಜಿಸಿದ್ದೇವೆ. ಸಾರ್ವಜನಿಕರು ಈ ಸರ್ವೇಯಲ್ಲಿ ಭಾಗವಹಿಸಿ ತಮ್ಮ ಅಭಿಪ್ರಾಯಗಳನ್ನು ತಿಳಿಸಬೇಕು. ಮುಂದಿನ ದಿನಗಳಲ್ಲಿ ಈ ಕುರಿತ ವರದಿಯನ್ನು ಜಿಲ್ಲಾಡಳಿತಕ್ಕೂ ನೀಡುತ್ತೇವೆ. –ಐಸಾಕ್ ವಾಜ್, ಕೆಸಿಸಿಐ ಅಧ್ಯಕ್ಷ
ವ್ಯವಸ್ಥಿತ ಸೇವೆಗೆ ಸರ್ವೇ : ನಗರದಲ್ಲಿ ವ್ಯವಸ್ಥಿತವಾಗಿ ಸಿಟಿ ಬಸ್ ಸೇವೆ ನೀಡಲಾಗುತ್ತಿದೆ. ಸದ್ಯ 320ಕ್ಕೂ ಮಿಕ್ಕಿ ಸಿಟಿ ಬಸ್‌ಗಳು ನಗರದಲ್ಲಿ ಸಂಚರಿಸುತ್ತವೆ. ನಮ್ಮ ಸೇವೆಯನ್ನು ಮತ್ತಷ್ಟು ಉತ್ತಮಪಡಿಸಲು, ಪ್ರಯಾಣಿಕ ಸ್ನೇಹಿಯನ್ನಾಗಿಸಲು ಈ ಸರ್ವೇ ಆಯೋಜನೆ ಮಾಡಲಾಗಿದೆ. ಭವಿಷ್ಯದ ಸಿಟಿ ಬಸ್ ಸೇವೆ ಕುರಿತು ಸರ್ವೇಯಲ್ಲಿ ಸಾರ್ವಜನಿಕರು ಪಾಲ್ಗೊಳ್ಳಬೇಕು. –ದಿಲ್ರಾಜ್ ಆಳ್ವ, ಸಿಟಿ ಬಸ್ ಮಾಲಕರ ಸಂಘದ ಅಧ್ಯಕ್ಷ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
ODI; ವೆಸ್ಟ್ ಇಂಡೀಸ್ ವಿರುದ್ಧ ಭಾರತದ ವನಿತೆಯರಿಗೆ 211 ರನ್ ಜಯ:ಸ್ಮೃತಿ ನರ್ವಸ್ 90
Hunsur: ವನ್ಯಪ್ರಾಣಿ ದಾಳಿಗೆ ಸುಮಾರು 70 ಸಾವಿರ ಬೆಲೆಬಾಳುವ ಎತ್ತು ಬಲಿ
Gundlupete ಬಂಡೀಪುರ: ಗಂಡಾನೆ ಕಳೇಬರ ಪತ್ತೆ
Highest honour: ಪ್ರಧಾನಿ ನರೇಂದ್ರ ಮೋದಿಗೆ ಕುವೈಟ್‌ನ ಅತ್ಯುನ್ನತ ಗೌರವ ಪ್ರದಾನ
Delhi; ಅಕ್ರಮ ಬಾಂಗ್ಲಾ ವಲಸಿಗರ ವಿರುದ್ಧ ಕಾರ್ಯಾಚರಣೆ: 175 ಮಂದಿ ಪತ್ತೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.