ಕುದ್ರೋಳಿ ಕ್ಷೇತ್ರ: ಮಂಗಳೂರು ದಸರಾ ಉದ್ಘಾಟನೆ
Team Udayavani, Oct 7, 2019, 5:19 AM IST
ಮಂಗಳೂರು: ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ವತಿಯಿಂದ ನಡೆಯುತ್ತಿರುವ “ಮಂಗಳೂರು ದಸರಾ’ ರವಿವಾರ ಉದ್ಘಾಟನೆಗೊಂಡಿತು. ವೈಭವದ ದಸರಾ ಶೋಭಾಯಾತ್ರೆ ಅ. 8ರಂದು ಸಂಜೆ 4ರಿಂದ ಆರಂಭವಾಗಲಿದೆ.
ದಸರಾ ಮಹೋತ್ಸವವನ್ನು ಕ್ಷೇತ್ರದ ನವೀಕರಣದ ರೂವಾರಿ, ಕೇಂದ್ರದ ಮಾಜಿ ಸಚಿವ ಬಿ. ಜನಾರ್ದನ ಪೂಜಾರಿ ಉದ್ಘಾಟಿಸಿದರು. ಕುದ್ರೋಳಿ ಶ್ರೀ ಗೋಕರ್ಣನಾಥ ಕ್ಷೇತ್ರದ ದೇವರು ಸರ್ವರಿಗೂ ಒಳಿತನ್ನು ಮಾಡಲಿ. ಶ್ರೀದೇವರು ಎಲ್ಲರಿಗೂ ಸನ್ಮಂಗಲವನ್ನು ಉಂಟುಮಾಡಲಿ ಎಂದು ಅವರು ಪ್ರಾರ್ಥಿಸಿದರು.
ಮುಖ್ಯ ಅತಿಥಿಯಾಗಿದ್ದ ದ.ಕ. ಜಿಲ್ಲಾ ಉಸ್ತುವಾರಿ ಸಚಿವ ಕೋಟ ಶ್ರೀನಿವಾಸ ಪೂಜಾರಿ ಮಾತನಾಡಿ, ಅತ್ಯಂತ ಯೋಜನಾ ಬದ್ಧವಾದ, ಮುಂದಿನ ಜನಾಂಗಕ್ಕೆ ದಾರಿ ಹಾಗೂ ಬೆಳಕಾಗಬಲ್ಲ ಮತ್ತು ಭಾವುಕನೊಬ್ಬ ಪ್ರೀತಿ ಹೆಮ್ಮೆಯಿಂದ ಆರಾಧನೆ ಮಾಡಬಹುದಾದ ಶ್ರೇಷ್ಠ ದೇವಾಲಯವೇ ಕುದ್ರೋಳಿ ಶ್ರೀ ಗೋಕರ್ಣನಾಥ ದೇವಸ್ಥಾನ ಎಂದು ಶ್ಲಾಘಿಸಿದರು.
ಬಡವರ ಪೂಜಾರಿ ಎಂದೇ ಗೌರವ ಪಡೆದ ಜನಾರ್ದನ ಪೂಜಾರಿ ಅವರು ಸಮಾಜಕ್ಕೆ ನೀಡಿರುವ ಕೊಡುಗೆ ಅದ್ವಿತೀಯ. ಕ್ಷೇತ್ರದ ನವೀಕರಣದಲ್ಲಿ ಅವರ ಶ್ರಮ ಶ್ಲಾಘನೀಯ. ಅವರ ಆಶೀರ್ವಾದ ನಮ್ಮೆಲ್ಲರಿಗೆ ಶಾಂತಿ ಸೌಹಾರ್ದದ ಬೆಳಕಾಗಲಿ ಎಂದರು.
ಕ್ಷೇತ್ರಾಡಳಿತ ಮಂಡಳಿ ಅಧ್ಯಕ್ಷ ಎಚ್.ಎಸ್. ಸಾಯಿರಾಮ್, ಕಾರ್ಯದರ್ಶಿ ಮಾಧವ ಸುವರ್ಣ, ಖಜಾಂಚಿ ಪದ್ಮರಾಜ್ ಆರ್. ನ್ಯಾಯವಾದಿ, ಪ್ರಮುಖರಾದ ಮಾಲತಿ ಜನಾರ್ದನ ಪೂಜಾರಿ, ಊರ್ಮಿಳಾ ರಮೇಶ್ ಕುಮಾರ್, ಹರಿಕೃಷ್ಣ ಬಂಟ್ವಾಳ್, ಶೇಖರ ಪೂಜಾರಿ, ರಮಾನಾಥ ಕಾರಂದೂರು, ಡಾ| ಬಿ.ಜಿ. ಸುವರ್ಣ ಮೊದಲಾದವರು ಉಪಸ್ಥಿತರಿದ್ದರು.ದೇವೇಂದ್ರ ಪೂಜಾರಿ ಅವರು ವಂದಿಸಿದರು.
ನಾಳೆ ಶೋಭಾಯಾತ್ರೆ:
75ಕ್ಕೂ ಅಧಿಕ ಸ್ತಬ್ಧಚಿತ್ರಗಳು
“ಮಂಗಳೂರು ದಸರಾ’ ಮೆರವಣಿಗೆ ಅ. 8ರಂದು ಸಂಜೆ 4ಕ್ಕೆ ಶ್ರೀ ಕ್ಷೇತ್ರ ಕುದ್ರೋಳಿಯಿಂದ ಆರಂಭವಾಗಲಿದೆ. ಈ ಬಾರಿಯ ವಿಶೇಷವೆಂಬಂತೆ ನವದುರ್ಗೆಯರ ಸಹಿತ ಶಾರದಾ ಮಾತೆಯ ಶೋಭಾಯಾತ್ರೆ ಮೊದಲು ಸಾಗಲಿದ್ದು, ವಿವಿಧ ಸ್ತಬ್ಧಚಿತ್ರಗಳು ಹಿಂಬಾಲಿಸಲಿವೆ.
75ಕ್ಕೂ ಅಧಿಕ ಅತ್ಯಾಕರ್ಷಕ ಸ್ತಬ್ಧಚಿತ್ರಗಳು, 100ಕ್ಕೂ ಅಧಿಕ ವೇಷಭೂಷಣಗಳು, ವಾದ್ಯಮೇಳ ತಂಡಗಳು ಭಾಗವಹಿಸಲಿವೆ. ಕುದ್ರೋಳಿಯಿಂದ ಹೊರಡುವ ಮೆರವಣಿಗೆ ಕಂಬಾÛ ರಸ್ತೆ, ಮಣ್ಣಗುಡ್ಡ ಮಾರ್ಗವಾಗಿ ಲೇಡಿಹಿಲ್ ಸರ್ಕಲ್, ಲಾಲ್‌ಬಾಗ್, ಬಲ್ಲಾಳ್‌ಬಾಗ್, ಪಿ.ವಿ.ಎಸ್. ವೃತ್ತ, ಕೆ.ಎಸ್. ರಾವ್ ರಸ್ತೆ, ಹಂಪನಕಟ್ಟ, ವಿ.ವಿ. ಕಾಲೇಜು ವೃತ್ತದಿಂದ ಬಲಕ್ಕೆ ತಿರುಗಿ ಗಣಪತಿ ಹೈಸ್ಕೂಲ್ ಮಾರ್ಗವಾಗಿ ಶ್ರೀ ವೆಂಕಟಮಣ ದೇವಸ್ಥಾನದ ಮುಂಭಾಗದಿಂದ ಕಾರ್‌ಸ್ಟ್ರೀಟ್ ಅಳಕೆ ಮೂಲಕ ಮರಳಿ ಬರಲಿದೆ. ನಗರವನ್ನು ವಿದ್ಯುದ್ದೀಪಗಳಿಂದ ಅಲಂಕರಿಸಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Bangladesh: ಶೇ.90ರಷ್ಟಿ ಮುಸ್ಲಿಮರು ಇರುವ ಬಾಂಗ್ಲಾದೇಶ ಶೀಘ್ರ ಇಸ್ಲಾಮಿಕ್ ರಾಷ್ಟ್ರ?
India-South Africa; ನಾಲ್ಕನೇ ಟಿ20 ಪಂದ್ಯ ಇಂದು: ಸರಣಿ ಗೆಲುವಿನ ನಿರೀಕ್ಷೆಯಲ್ಲಿ ಭಾರತ
Marriage: ಕ್ರಿಸ್ಮಸ್‌ಗೆ ಅಮೆಜಾನ್ ಸಿಇಒ ಅದ್ಧೂರಿ ವಿವಾಹ?
Washington: ಅಮೆರಿಕ ಗುಪ್ತಚರ ಸಂಸ್ಥೆಗೆ ತುಳಸಿ ಗಬಾರ್ಡ್ ಮುಖ್ಯಸ್ಥೆ
Daily Horoscope: ಉದ್ಯೋಗಾಸಕ್ತರಿಗೆ ಹೊಸ ಅವಕಾಶಗಳು ಗೋಚರ, ಸ್ವರ್ಣೋದ್ಯಮಕ್ಕೆ ಲಾಭ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.