ದ.ಕ ಜಿಲ್ಲೆಯಲ್ಲಿ ಲಾಕ್ ಡೌನ್ ಸಡಿಲಿಕೆ ಕುರಿತು ಜಿಲ್ಲಾಧಿಕಾರಿ ಆದೇಶ ಪ್ರಕಟ
Team Udayavani, May 3, 2020, 4:13 PM IST
ಮಂಗಳೂರು: ಮೇ.4 ರಿಂದ ದ.ಕ ಜಿಲ್ಲೆಯಲ್ಲಿ ಬೆ.7 ರಿಂದ ರಾತ್ರಿ 7ರ ವರೆಗೆ ಲಾಕ್ ಡೌನ್ ಸಡಿಲಿಕೆಯ ಕುರಿತು ದ.ಕ ಜಿಲ್ಲಾಧಿಕಾರಿ ಸಿಂಧೂ.ಬಿ.ರೂಪೇಶ್ ಭಾನುವಾರದಂದು ಆದೇಶ ಹೊರಡಿಸಿದ್ದು, ಈ ಆದೇಶದಂತೆ ನಾಳೆ ಜಿಲ್ಲೆಯಲ್ಲಿ ಏನಿರುತ್ತೆ? ಏನಿರಲ್ಲ? ಎಂಬುವುದರ ಕುರಿತು ವಿವರಗಳು ಈ ಕೆಳಗಿನಂತಿವೆ.
ಜಿಲ್ಲೆಯಾದ್ಯಂತ ಆಟೋ ರಿಕ್ಷಾ, ಕ್ಯಾಬ್ ಸಂಚಾರಕ್ಕೆ ಅನುಮತಿ ನೀಡಲಾಗಿದ್ದು, ಆಟೋ ಮತ್ತು ಕ್ಯಾಬ್ ಗಳಲ್ಲಿ ಚಾಲಕ ಮತ್ತು ಇಬ್ಬರು ಪ್ರಯಾಣಿಕರಿಗೆ ಅವಕಾಶವಿರುತ್ತದೆ. ಖಾಸಗಿ ವಾಹನಗಳಾದ ಬೈಕ್ ಮತ್ತು ಕಾರುಗಳ ಸಂಚಾರಕ್ಕೆ ಅನುಮತಿ ನೀಡಲಾಗಿದ್ದು, ಕಾರುಗಳಲ್ಲಿ ಚಾಲಕ ಸೇರಿ ಇಬ್ಬರು ಪ್ರಯಾಣಿಕರು ಮತ್ತು ಬೈಕ್ ಗಳಲ್ಲಿ ಒಬ್ಬರಷ್ಟೇ ಪ್ರಯಾಣಿಸಲು ಅನುಮತಿ ಇರುತ್ತದೆ.
ಸ್ಥಳೀಯ ಅಂಗಡಿಗಳು, ವಸತಿ ಸಂಕೀರ್ಣಗಳ ಶಾಪ್, ಸಣ್ಣಪುಟ್ಟ ಶಾಪ್ ಗಳನ್ನು ತೆರೆಯಲು ಹಾಗೂ ಖಾಸಗಿ ಸಂಸ್ಥೆ ಮತ್ತು ಕಚೇರಿಗಳಲ್ಲಿ 33% ಸಿಬ್ಬಂದಿ ಬಳಸಿ ಕೆಲಸಕ್ಕೆ, ಅಗತ್ಯ ಸೇವೆಗಳಿಗೆ ಇ ಕಾಮರ್ಸ್ ಸಂಸ್ಥೆಗಳಿಗೆ ಅವಕಾಶ ನೀಡಲಾಗಿದೆ.
ಅಗತ್ಯ ಕಟ್ಟಡ ಕಾಮಗಾರಿ ನಡೆಸಲು ಅವಕಾಶ, ಸ್ಥಳದಲ್ಲಿದ್ದ ಕಾರ್ಮಿಕರ ಬಳಕೆಗೆ ಸೂಚನೆ, ಹೊರಗಿನಿಂದ ಕಾರ್ಮಿಕರು ಬರುವಂತಿಲ್ಲ. ಮಾರುಕಟ್ಟೆ ಮತ್ತು ಮಾರುಕಟ್ಟೆ ಸಂಕೀರ್ಣಗಳಲ್ಲಿ ಅಗತ್ಯ ವಸ್ತುಗಳ ಶಾಪ್ ತೆರೆಯಲಷ್ಟೇ ಅನುಮತಿ ಇರುತ್ತದೆ.
ಏನಿರೋದಿಲ್ಲ?
ಹೊಟೇಲ್ ಬಾರ್, ರೆಸ್ಟೋರೆಂಟ್, ಮಾಲ್, ಸಿನಿಮಾ ಮಂದಿರ, ಜಿಮ್, ಕ್ರೀಡಾ ಸಂಕೀರ್ಣ, ಕ್ಲಬ್, ಸ್ವಿಮ್ಮಿಂಗ್ ಫೂಲ್, ಪಾರ್ಕ್, ಸೆಲೂನ್, ಸ್ಪಾ, ಬ್ಯೂಟಿ ಪಾರ್ಲರ್, ಟೆಕ್ಸ್ ಟೈಲ್ಸ್ ಮತ್ತು ಬಟ್ಟೆ ಅಂಗಡಿಗಳು ಬಂದ್. ಸಾಮಾಜಿಕ, ಧಾರ್ಮಿಕ, ಸಾಂಸ್ಕೃತಿಕ ಸೇರಿ ಜನ ಸೇರುವ ಎಲ್ಲಾ ಕಾರ್ಯಕ್ರಮಗಳು ನಿಷೇಧವಿರುತ್ತದೆ. ರಾತ್ರಿ 7 ರಿಂದ ಬೆ.7ರ ವರೆಗೆ ಎಲ್ಲಾ ರೀತಿಯ ಸಂಚಾರ,ಸೇವೆ ಬಂದ್ ಆಗಿರುತ್ತದೆ.
ಮದ್ಯ ಮಾರಾಟಕ್ಕೆ ದ.ಕ. ಜಿಲ್ಲಾಡಳಿತ ಷರತ್ತಿನ ಅನುಮತಿ ನೀಡಿದ್ದು, ದ.ಕ. ಜಿಲ್ಲೆಯಲ್ಲಿ ಬೆಳಗ್ಗೆ 9 ರಿಂದ ಸಂಜೆ 7ರ ವರೆಗೆ ತೆರೆಯಲು ಅವಕಾಶ ನೀಡಲಾಗಿದೆ. ವೈನ್ ಶಾಪ್ ಗಳಲ್ಲಿ ಮೂವರು ಮಾತ್ರ ಸಿಬಂದಿ ಇರಬೇಕು. ಮದ್ಯ ಮಳಿಗೆಯ ಒಳಗೆ ಐವರು, ಹೊರಗೆ ಐವರು ಗ್ರಾಹಕರಿಗೆ ಅವಕಾಶ. ಅಂಗಡಿ ಮುಂಭಾಗದಲ್ಲಿ ಬ್ಯಾರಿಕೇಡ್ ಅಳವಡಿಸಿ, ಕಾವಲು ಹಾಕಬೇಕು. ಇಬ್ಬರು ಭದ್ರತಾ ಸಿಬಂದಿ ಅಳವಡಿಸಲು ಸೂಚನೆ ನೀಡಲಾಗಿದ್ದು, ಗ್ರಾಹಕರು, ಸಿಬಂದಿ ಕಡ್ಡಾಯವಾಗಿ ಮಾಸ್ಕ್ ಹಾಕಿರಬೇಕು. ಮದ್ಯದ ಅಂಗಡಿಯಲ್ಲಿ ಸಿಸಿ ಕ್ಯಾಮರಾ ಅಳವಡಿಸಿರಬೇಕು ಎಂದು ಮದ್ಯದಂಗಡಿ ಮಾಲಕರಿಗೆ ದ.ಕ. ಜಿಲ್ಲಾಧಿಕಾರಿ ಷರತ್ತು ವಿಧಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Bidar; ಖರ್ಗೆ ಆಪ್ತನಿಂದ ವಂಚನೆ, ಕೊಲೆ ಬೆದರಿಕೆ; ಪತ್ರ ಬರೆದಿಟ್ಟು ಗುತ್ತಿಗೆದಾರ ಆತ್ಮಹತ್ಯೆ
Ullala: ಗ್ಯಾಸ್ ಸಿಲಿಂಡರ್ ಸ್ಫೋ*ಟ ಪ್ರಕರಣ: ಸಾವಿನ ಸಂಖ್ಯೆ 2ಕ್ಕೆ ಏರಿಕೆ
Actress: ರೊಮ್ಯಾನ್ಸ್ ಮಾಡಿಕೊಂಡು ಇರುತ್ತೇನೆ ಮದುವೆ ಆಗೋದೆ ಇಲ್ಲ ಎಂದ ನಟಿ ಶ್ರುತಿ ಹಾಸನ್
Nyamathi: ಕಾಡುಪ್ರಾಣಿಗಳಿಗೆ ಇರಿಸಿದ್ದ 32 ನಾಡ ಬಾಂಬ್ ಗಳು ಪತ್ತೆ
INDvAUS: ಬ್ಯಾನ್ ತಪ್ಪಿಸಿಕೊಂಡ ವಿರಾಟ್ ಕೊಹ್ಲಿ; ಆದರೂ ಶಿಕ್ಷೆ ತಪ್ಪಲಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.