ಮಂಗಳೂರು: ರೇಷನ್ ಕೃಪೆಯಲ್ಲಿ ಕುಡಿಯುವ ನೀರು
ನಾಲ್ಕು ದಿನ ನೀರು ಪೂರೈಕೆ; ಎರಡು ದಿನ ಸ್ಥಗಿತ, ಉಡುಪಿಯಲ್ಲೂ 3 ದಿನಕ್ಕೊಮ್ಮೆ ನೀರು
Team Udayavani, Apr 20, 2019, 6:00 AM IST
ಮಂಗಳೂರು: ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ನೀರಿನ ರೇಷನಿಂಗ್ ಎ. 18ರಂದು ಸಂಜೆ 6 ಗಂಟೆಯಿಂದ ಆರಂಭವಾಗಿದ್ದು, ಎ. 20ರ ಬೆಳಗ್ಗೆ 6 ಗಂಟೆಯ ವರೆಗೆ ನಗರದಲ್ಲಿ ನೀರು ಪೂರೈಕೆ ಇರುವುದಿಲ್ಲ. ಮುಂದಿನ ದಿನಗಳಲ್ಲಿ 4 ದಿನ ನೀರು ಪೂರೈಕೆ ಮತ್ತು 2 ದಿನ ಇರುವುದಿಲ್ಲ.
ತುಂಬೆ ವೆಂಟೆಡ್ ಡ್ಯಾಂನಲ್ಲಿ ನೀರಿನ ಮಟ್ಟ ಕ್ಷೀಣಿಸುತ್ತಿರುವ ಹಿನ್ನೆಲೆಯಲ್ಲಿ ಪಾಲಿಕೆಯು ನೀರಿನ ರೇಷನಿಂಗ್ ನಡೆಸುತ್ತಿದೆ. ಬಿಸಿಲಿನ ಕಾರಣ ನೀರು ಆವಿಯಾಗುತ್ತಿದೆ. ಡ್ಯಾಂನಲ್ಲಿ ಶುಕ್ರವಾರ 5.37 ಅಡಿ ನೀರಿತ್ತು. ಪ್ರತಿದಿನ ನೀರು ಪೂರೈಕೆ ಮಾಡಿದರೆ, ಮೇಯಲ್ಲಿ ನೀರಿನ ಅಭಾವ ಕಾಡಲಿದೆ. ಹೀಗಾಗಿ ಎ. 11ರಿಂದಲೇ ನೀರಿನ ರೇಷನಿಂಗ್ ನಡೆಸಲು ಪಾಲಿಕೆ ಯೋಜಿಸಿತ್ತು. ಬಳಿಕ ನಿರ್ಧಾರ ಬದಲಿಸಿ ಚುನಾವಣೆ ಬಳಿಕ ಆರಂಭಿಸಲು ನಿರ್ಧರಿಸಿತ್ತು. ಅದರಂತೆ ಎ. 18ರ ಸಂಜೆ 6 ಗಂಟೆಯಿಂದ ರೇಷನಿಂಗ್ ಆರಂಭವಾಗಿದೆ.
48 ಗಂಟೆ ನೀರು ಸ್ಥಗಿತ
18ರ ಸಂಜೆ 6 ಗಂಟೆಗೆ ನೀರು ಸ್ಥಗಿತಗೊಂಡಿದ್ದು, 20ರಂದು ಬೆಳಗ್ಗೆ 6 ಗಂಟೆಗೆ ಮತ್ತೆ ಪೂರೈಕೆಯಾಗಲಿದೆ. ಅಂದರೆ 36 ಗಂಟೆ ನೀರು ಪೂರೈಕೆ ಸ್ಥಗಿತಗೊಂಡಂತಾಗುತ್ತದೆ. ಮೊದಲ ರೇಷನಿಂಗ್‌ನಲ್ಲಿ 36 ಗಂಟೆಯಷ್ಟೇ ನೀರು ಸ್ಥಗಿತಗೊಳಿಸಲಾಗಿದೆ. ಮುಂದೆ 48 ಗಂಟೆಗೆ ವಿಸ್ತರಿಸಲಾಗುತ್ತದೆ ಎಂದು ಪಾಲಿಕೆಯ ಎಂಜಿನಿಯರ್ ಲಿಂಗೇಗೌಡ ತಿಳಿಸಿದ್ದಾರೆ.
ಮೇ 14ರ ವರೆಗೆ ಮುಂದುವರಿಕೆ
ವಾರದಲ್ಲಿ 96 ಗಂಟೆ ನೀರು ಪೂರೈಕೆ ಮಾಡಿ 48 ಗಂಟೆ ಸ್ಥಗಿತ ಪ್ರಕ್ರಿಯೆ ಮೇ 14ರ ವರೆಗೆ ಮುಂದುವರಿಯಲಿದೆ. ಮಳೆ ಬಂದು ನೀರಿನ ಪ್ರಮಾಣ ಹೆಚ್ಚಾದರೆ ಹೆಚ್ಚಾದಲ್ಲಿ ನೀರು ಪೂರೈಕೆ ನಿರಂತರವಾಗಿ ಇರಲಿದೆ. ಇಲ್ಲವಾದಲ್ಲಿ ಈಗಿನ ರೇಷನಿಂಗ್ ಪ್ರಕ್ರಿಯೆ ಮತ್ತೆ ಹೆಚ್ಚುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.