ಮಂಗಳೂರು: ಹಜ್ ಯಾತ್ರೆ ಇಂದು ಆರಂಭ
Team Udayavani, Jul 17, 2019, 5:37 AM IST
ಮಂಗಳೂರು: ಮಂಗಳೂರು ಹಜ್ ನಿರ್ವಹಣ ಸಮಿತಿಯ ಮೂಲಕ ಈ ವರ್ಷದ ಹಜ್ ಯಾತ್ರಿಕರನ್ನು ಕಳುಹಿಸಿ ಕೊಡುವ ಕಾರ್ಯ ಜು. 17ರಿಂದ ಆರಂಭವಾಗಲಿದ್ದು, 19ರ ವರೆಗೆ ನಡೆಯಲಿದೆ.
ಹಜ್ ಯಾತ್ರೆಯ ಉದ್ಘಾಟನೆ ಸಮಾರಂಭ ಬುಧವಾರ ಬೆಳಗ್ಗೆ 10.30ಕ್ಕೆ ಬಜಪೆ ಅನ್ಸಾರ್ ಪಬ್ಲಿಕ್ ಸ್ಕೂಲ್ನಲ್ಲಿ ನೆರವೇರಲಿದೆ.
ಮೂರು ದಿನಗಳಲ್ಲಿ ಐದು ವಿಮಾನಗಳಲ್ಲಿ ದಕ್ಷಿಣ ಕನ್ನಡ, ಉಡುಪಿ, ಚಿಕ್ಕಮಗಳೂರು, ಹಾಸನ ಮತ್ತು ಕೊಡಗು ಜಿಲ್ಲೆಯ 750 ಹಜ್ ಯಾತ್ರಾರ್ಥಿ ಗಳು ಮಂಗಳೂರು ವಿಮಾನ ನಿಲ್ದಾಣದ ಮೂಲಕ ಮದೀನಾ ವಿಮಾನ ನಿಲ್ದಾಣಕ್ಕೆ ತೆರಳಲಿದ್ದಾರೆ.
ಮಂಗಳೂರಿನಿಂದ ಮೊದಲ ವಿಮಾನ ಜು. 17ರಂದು ಸಂಜೆ 6.50ಕ್ಕೆ ನಿರ್ಗಮಿಸಲಿದೆ. ಜು.18ರಂದು ಬೆಳಗ್ಗೆ 11.50ಕ್ಕೆ ಮತ್ತು ಮಧ್ಯಾಹ್ನ 12.50ಕ್ಕೆ ಎರಡು ವಿಮಾನಗಳು ಹೊರಡಲಿವೆ. ಜು.19ರಂದು ತಡರಾತ್ರಿ 12.30ಕ್ಕೆ ಮತ್ತು ಬೆಳಗ್ಗೆ 5.50ಕ್ಕೆ ಹಜ್ ಯಾತ್ರಿಕರ ವಿಮಾನಗಳು ನಿರ್ಗಮಿಸಲಿವೆ. ಪ್ರತಿ ವಿಮಾನದಲ್ಲಿ ತಲಾ 150 ಮಂದಿ ಪ್ರಯಾಣಿಸಲಿದ್ದಾರೆ.
ಮಕ್ಕಾ ಮತ್ತು ಮದೀನಾ ಯಾತ್ರೆ ಮುಗಿಸಿ ಹಾಜಿಗಳು ಆ. 31ರಿಂದ ಸೆ. 2ರ ತನಕ 5 ತಂಡಗಳಲ್ಲಿ ಜೆದ್ದಾ ವಿಮಾನ ನಿಲ್ದಾಣದ ಮೂಲಕ ಹಂತಹಂತವಾಗಿ ಮಂಗಳೂರಿಗೆ ಹಿಂದಿರುಗಲಿದ್ದಾರೆ.
ಹಜ್ ಶಿಬಿರಕ್ಕೆ ಅಲ್ಪಸಂಖ್ಯಾಕ ಆಯೋಗದ ಅಧ್ಯಕ್ಷರ ಭೇಟಿ
ರಾಜ್ಯ ಅಲ್ಪಸಂಖ್ಯಾಕ ಆಯೋಗದ ಅಧ್ಯಕ್ಷ ಜಿ.ಎ. ಬಾವಾ ಮಂಗಳವಾರ ಮಂಗಳೂರು ಹಳೆ ವಿಮಾನ ನಿಲ್ದಾಣದಲ್ಲಿ ಆಯೋಜಿಸಲಾಗಿರುವ ಹಜ್ ಶಿಬಿರಕ್ಕೆ ಭೇಟಿ ನೀಡಿ ಯಾತ್ರಿಕರಿಗೆ ಶುಭ ಹಾರೈಸಿದರು. ಇದೇ ವೇಳೆ ಹಜ್ ಭವನ ನಿರ್ಮಾಣಕ್ಕೆ ಸರಕಾರದಿಂದ ಆಗಬೇಕಾದ ಎಲ್ಲ ಕೆಲಸ ಕಾರ್ಯಗಳಿಗೆ ಶ್ರಮಿಸುವುದಾಗಿ ಭರವಸೆ ನೀಡಿದರು.
ಯಾತ್ರಿಕರ ಲಗೇಜ್ ಕೌಂಟರ್ ವಿಭಾಗದಲ್ಲಿ ಬುಧವಾರದ ಹಜ್ ಯಾತ್ರಿಕ ಮಂಗಳೂರು ಹರೇಕಳ ನ್ಯೂಪಡ್ಪು ನಿವಾಸಿ ಮಹಮ್ಮದ್ ಮುಸ್ಲಿಯಾರ್ ಅವರಿಗೆ ಗುರುತಿನ ಕೈಬಳೆ, ಬೋರ್ಡಿಂಗ್ ಪಾಸ್ ಮತ್ತು ಲಗ್ಗೇಜ್ ಟ್ಯಾಗನ್ನು ಜಿ.ಎ. ಬಾವಾ ಅವರು ವಿತರಿಸಿ ಪ್ರಕ್ರಿಯೆಗೆ ಚಾಲನೆ ನೀಡಿದರು. ರಶೀದ್ ವಿಟ್ಲ ಕಾರ್ಯಕ್ರಮ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Kazakhstan ವಿಮಾನ ಪತನಕ್ಕೆ ರಷ್ಯಾ ಕ್ಷಿಪಣಿ ದಾಳಿ ಕಾರಣ: ವರದಿ
RSS ಮುಖ್ಯಸ್ಥರಿಗೆ ಹಿಂದೂಗಳ ನೋವು ಗೊತ್ತಾಗುತ್ತಿಲ್ಲ: ಶ್ರೀ
Temperature: ಉತ್ತರ ಭಾರತದಲ್ಲಿ ನಿಲ್ಲದ ಶೀತ ಪ್ರಕೋಪ: ತಾಪಮಾನ ಭಾರೀ ಇಳಿಕೆ!
Mourning: ಮನಮೋಹನ್ ಸಿಂಗ್ ನಿಧನ; ದೇಶಾದ್ಯಂತ 7 ದಿನ ಶೋಕಾಚರಣೆ ಘೋಷಿಸಿದ ಕೇಂದ್ರ ಸರಕಾರ
Mangaluru: ಶಾರ್ಜಾದಲ್ಲಿ ತುಂಬೆ ಸೈಕಿಯಾಟ್ರಿಕ್ ಆಸ್ಪತ್ರೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.