ಜೆಟ್ ಸ್ಥಗಿತ: ಪರ್ಯಾಯ ವಿಮಾನ ಸೇವೆ ಕೊರತೆ
ಸಂಕಷ್ಟದಲ್ಲಿ ಕರಾವಳಿ ಪ್ರಯಾಣಿಕರು: ಹೊಸದಿಲ್ಲಿಗೆ ಸುತ್ತಿಯೇ ಹೋಗಬೇಕು
Team Udayavani, Apr 21, 2019, 6:07 AM IST
ಮಂಗಳೂರು: “ದ ಜಾಯ್ ಆಫ್ ಫ್ಲೆಯಿಂಗ್’ ಎಂಬ ಘೋಷವಾಕ್ಯ ದೊಂದಿಗೆ ಮಂಗಳೂರಿನಿಂದ ದೇಶ- ವಿದೇಶಗಳಿಗೆ ಸಂಪರ್ಕ ಕಲ್ಪಿಸುತ್ತಿದ್ದ ಜೆಟ್ ಏರ್ವೇಸ್ ಬುಧವಾರದಿಂದ ತನ್ನ ಕಾರ್ಯಾಚರಣೆಯನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿರುವುದರಿಂದ ಕರಾವಳಿಭಾಗದ ಪ್ರಯಾಣಿಕರು ಸಂಕಷ್ಟಕ್ಕೀಡಾಗಿ ದ್ದಾರೆ. ಪರ್ಯಾಯ ಸೇವೆ ಅಥವಾಹೆಚ್ಚುವರಿ ಸೇವೆ ಕುರಿತು ಚರ್ಚೆ ಪ್ರಗತಿ ಯಲ್ಲಿದ್ದರೂ ಇನ್ನೂ ತೀರ್ಮಾನವಾಗಿಲ್ಲ.
ಮುಂಬಯಿಯಲ್ಲದೆ, ದುಬಾೖ, ಮಸ್ಕತ್ಗಳಿಗೆ ಪ್ರಯಾಣಿಸುವವರಿಗೂ ತೀವ್ರ ತೊಂದರೆಯಾಗಿದೆ. ಕಳೆದ ವರ್ಷ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಜೆಟ್ ಏರ್ವೆàಸ್ ನ 13 ವಿಮಾನಗಳು ಅಬುಧಾಬಿ, ಮಸ್ಕತ್, ದುಬಾೖ, ಮುಂಬಯಿ, ಬೆಂಗಳೂರು, ಚೆನ್ನೈ ಮತ್ತು ಹೊಸದಿಲ್ಲಿ ಮುಂತಾದೆಡೆಗೆ ಹಾರಾಡುತ್ತಿದ್ದವು. ಆರ್ಥಿಕ ಸಂಕಷ್ಟದ ಹಿನ್ನೆಲೆಯಲ್ಲಿಜಗತ್ತಿನಾದ್ಯಂತ ತನ್ನ ಕಾರ್ಯಾಚರಣೆ ಯನ್ನು ಸ್ಥಗಿತಗೊಳಿಸಿದೆ. ಬುಧವಾರ ಮಂಗಳೂರಿನಿಂದ ಮುಂಬಯಿಗೆ ತೆರಳುವ ಕೊನೆಯ ವಿಮಾನವನ್ನೂ ರದ್ದುಗೊಳಿಸಿತು.ದುಬಾೖ, ಅಬುಧಾಬಿಗೆ ಸಂಚರಿಸು ತ್ತಿದ್ದ ಜೆಟ್ ಏರ್ಲೈನ್ಸ್ನ 2 ವಿಮಾನ ಗಳ ಹಾರಾಟ ಡಿ. 4ರಂದೇ ರದ್ದಾಗಿತ್ತು. ಈ ಸೇವೆ ಮತ್ತೆ ಆರಂಭವಾಗಬಹುದು ಎಂಬ ನಿರೀಕ್ಷೆ ಇದ್ದಾಗಲೇ ಎಲ್ಲವೂ ಸ್ಥಗಿತಗೊಂಡಿರುವುದು ಪ್ರಯಾಣಿಕರಲ್ಲಿ ನಿರಾಶೆ ಉಂಟು ಮಾಡಿದೆ.
ಹನ್ನೆರಡು ಸಾವಿರ ಪ್ರಯಾಣಿಕರು !
ಈ ಹಿಂದೆ ದಿನಕ್ಕೆ ಮಂಗಳೂರು ಕೇಂದ್ರಿತವಾಗಿ ದೇಶ-ವಿದೇಶಕ್ಕೆ ಕನಿಷ್ಠ 3 ಜೆಟ್ ವಿಮಾನಗಳ ಆಗಮನ-ನಿರ್ಗಮನವಾಗುತ್ತಿತ್ತು. ಅಂದರೆ ಒಂದು ದಿನಕ್ಕೆ ಸುಮಾರು 400 ಪ್ರಯಾಣಿಕರು ಮಂಗಳೂರು ಏರ್ಪೋರ್ಟ್ನಿಂದ ಪ್ರಯಾಣಿಸುತ್ತಿದ್ದರು. ತಿಂಗಳಿಗೆ ಸರಿಸುಮಾರು 12 ಸಾವಿರ ಮಂದಿ ಪ್ರಯಾಣಿಕರು ಈ ವಿಮಾನ ಸೇವೆಯನ್ನು ಅವಲಂಬಿಸಿದ್ದರು. ಅವರೆಲ್ಲ ಬೇರೆ ವಿಮಾನಗಳನ್ನು ಆಶ್ರಯಿಸಬೇಕಿದೆ.
13 ವಿಮಾನಗಳು ಕೆಲವೇ ತಿಂಗಳೊಳಗೆ ಸಂಚಾರ ಸ್ಥಗಿತಗೊಳಿಸುವ ಮೂಲಕ ವಿಮಾನಯಾನ ಸೇವೆಯಲ್ಲಿ ಬಹುದೊಡ್ಡ ವ್ಯತ್ಯಯ ಉಂಟಾಗಿದೆ. ಇದರಿಂದ ಪ್ರಯಾಣಿಕರು ಮಂಗಳೂರಿನ ಯಾನಿಗಳು ಬೇರೆ ನಗರಗಳನ್ನು ಆಶ್ರಯಿಸಬೇಕಾದ ಅಥವಾ ಇತರ ವಿಮಾನ ಯಾನ ಸಂಸ್ಥೆ ಗಳ ಮೊರೆ ಹೋಗಬೇಕಾದ ಒತ್ತಡ ಎದುರಿಸಬೇಕಿದೆ. ಸದ್ಯ ಕರಾವಳಿಗೆ ಈ ಏಟು ಸ್ವಲ್ಪ ಹೆಚ್ಚೇ ಪರಿಣಾಮ ಬೀರಿದೆ.
ಹೊಸದಿಲ್ಲಿಗೆ ನೇರ
ವಿಮಾನವೇ ಇಲ್ಲ!
ಸದ್ಯ ಸ್ಪೈಸ್ ಜೆಟ್, ಇಂಡಿಗೋ, ಏರ್ ಇಂಡಿಯಾ, ಏರ್ ಇಂಡಿಯಾ ಎಕ್ಸ್ಪ್ರೆಸ್ ವಿಮಾನಯಾನ ಸೇವೆ ಮಂಗಳೂರಿನಿಂದ ಮುಂಬಯಿ, ಬೆಂಗಳೂರು, ಚೆನ್ನೈ, ಹೈದರಾಬಾದ್, ದುಬಾೖ, ದೋಹಾ, ಕತಾರ್, ಶಾರ್ಜಾ, ಬಹ್ರೈನ್, ಕುವೈಟ್, ಮಸ್ಕತ್ಗೆ ಇದೆ.
ಇಲ್ಲಿಯವರೆಗೆ ರಾಜಧಾನಿ ಹೊಸದಿಲ್ಲಿಗೆ ಮಂಗಳೂರಿನಿಂದ ಒಂದು ಜೆಟ್ ಏರ್ವೇಸ್ ವಿಮಾನ ಸಂಚರಿಸುತ್ತಿತ್ತು. ಹಲವು ದಿನಗಳಿಂದ ಆ ವಿಮಾನವೂ ಹಾರಾಟ ನಿಲ್ಲಿಸಿದೆ. ಈಗ ಮಂಗಳೂರಿನಿಂದ ಹೊಸದಿಲ್ಲಿಗೆ ನೇರ ವಿಮಾನ ಸೇವೆಯೇ ಇಲ್ಲ. ದಿಲ್ಲಿಗೆ ಹೋಗಬೇಕಾದರೆ ಬೆಂಗಳೂರು ಅಥವಾ ಮುಂಬಯಿಗೆ ಹೋಗಿ ತೆರಳಬೇಕಿದೆ.
ಆಯ್ಕೆಯ ಕೊರತೆ
ಮಂಗಳೂರಿನಿಂದ ಪ್ರಯಾಣಿಸುವವರಿಗೆ ಆಯ್ಕೆಯ ಕೊರತೆ ಎದುರಾಗಿದೆ. ಉಳಿದ ಕಂಪೆನಿಗಳ ಸೇವೆ ಲಭ್ಯವಿದ್ದರೂ ಒತ್ತಡ ಹೆಚ್ಚಲಿದೆ. ಸಾಮಾನ್ಯವಾಗಿ ವಿಮಾನ ಪ್ರಯಾಣಕ್ಕೆ ಕನಿಷ್ಠ 5-10 ದಿನಗಳ ಅಂತರದಲ್ಲಿಯೂ ಟಿಕೆಟ್ ಬುಕ್ ಮಾಡಿ ಪ್ರಯಾಣಿಸುವವರಿದ್ದರು. ಈಗ ಲಭ್ಯತೆ ಕೊರತೆ ಉಲ್ಬಣಿಸುವ ಸಾಧ್ಯತೆ ಹಿನ್ನೆಲೆಯಲ್ಲಿ ಇನ್ನಷ್ಟು ಮುಂಗಡವಾಗಿಯೇ ಯೋಜಿಸ ಬೇಕಾದ ಅನಿವಾರ್ಯತೆ ಸೃಷ್ಟಿಯಾಗಿದೆ. ತುರ್ತು ಕಾಲದಲ್ಲಿ ವಿಮಾನ ಪ್ರಯಾಣಕ್ಕೆ ಟಿಕೆಟ್ಪಡೆಯಲು ದುಬಾರಿ ಹಣ ತೆರಬೇಕಾಗಲೂಬಹುದು. ಒಂದು ವೇಳೆ ಬೇರೆ ಕಂಪೆನಿಗಳ ಹೆಚ್ಚುವರಿ ಸೇವೆ ಆರಂಭವಾದರೆ ಈ ಸಮಸ್ಯೆಯ ತೀವ್ರತೆ ಕಡಿಮೆ ಯಾಗುವ ಸಂಭವವಿದೆ. ಆದರೆ ಈ ಬಗ್ಗೆ ಇನ್ನೂ ಅಧಿಕೃತ ತೀರ್ಮಾನ ಆಗಿಲ್ಲ.
ಬೇರೆ ಕಂಪೆನಿಯ ಸೇವೆ ನಿರೀಕ್ಷೆ
ಮಂಗಳೂರಿನಿಂದ ಹಾರಾಟ ನಡೆಸುತ್ತಿದ್ದ ಜೆಟ್ ಏರ್ವೆàಸ್ ತನ್ನ ಎಲ್ಲ ಸೇವೆಗಳನ್ನು ತಾತ್ಕಾಲಿಕವಾಗಿ ಸ್ಥಗಿತಗೊಳಿಸಿದೆ. ಹೀಗಾಗಿ ಪ್ರಯಾಣಿಕರಿಗೆ ಸಮಸ್ಯೆಯಾಗುತ್ತಿದೆ. ಸದ್ಯ ಸ್ಥಗಿತಗೊಂಡಿರುವ ಯಾನದ ಸಮಯದಲ್ಲಿ ಇನ್ಯಾವುದೇ ವೈಮಾನಿಕ ಕಂಪೆನಿಗಳಿಂದ ಹೊಸ ಸೇವೆ ದೊರಕಿಸುವ ನೆಲೆಯಲ್ಲಿ ಪ್ರಯತ್ನ ನಡೆಸಲಾಗುತ್ತಿದೆ.
– ವಿ.ವಿ. ರಾವ್, ನಿರ್ದೇಶಕರು,
ಮಂಗಳೂರು ಏರ್ಪೋರ್ಟ್ ಪ್ರಾಧಿಕಾರ
– ದಿನೇಶ್ ಇರಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಎದೆ ನೋವು, ಮಧುಮೇಹ, ಥೈರಾಯ್ಡ್ ,ಸಮಸ್ಯೆಗಳಿಗೆ ಪರಿಹಾರ ತೆಂಗಿನಕಾಯಿ ಹೂವು
ಕನ್ನಡಿಗರಿಗೆ ಬೇರೆ ಭಾಷೆ ಸಿನಿಮಾ ನೋಡೋ ಹಾಗೆ ಮಾಡಿದ್ದೆ ನಾವುಗಳು
ವಿಕ್ರಂ ಗೌಡ ಎನ್ಕೌಂಟರ್ ಪ್ರಕರಣ: ಮನೆ ಯಜಮಾನ ಜಯಂತ್ ಗೌಡ ಹೇಳಿದ್ದೇನು?
ಮಣಿಪಾಲ | ವಾಗ್ಶಾದಲ್ಲಿ ಗಮನ ಸೆಳೆದ ವಾರ್ಷಿಕ ಫ್ರೂಟ್ಸ್ ಮಿಕ್ಸಿಂಗ್ |
ಕೊಲ್ಲೂರಿನಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಡಿಸಿಎಂ ಡಿ ಕೆ ಶಿವಕುಮಾರ್
ಹೊಸ ಸೇರ್ಪಡೆ
Kaup ಪುರಸಭೆ: ರಸ್ತೆ ಬದಿಯಲ್ಲಿ ಖಾಲಿ ಬಿಯರ್ ಬಾಟಲಿ ಸದ್ದು
JPC on Adani issue;ನಿಯಮ 267 ಅಡಿಯಲ್ಲಿ ಪ್ರಸ್ತಾಪಿಸಲು ಅವಕಾಶ ನೀಡದ್ದಕ್ಕೆ ಖರ್ಗೆ ಆಕ್ರೋಶ
IPL Auction: ಅಗ್ಗಕ್ಕೆ ಸೇಲಾದ ಪಾಂಡೆ, ಜ್ಯಾಕ್ಸ್ ಗೆ ಬಂಪರ್, ಬೆಂಗಳೂರಿಗೆ ಬಂದ ಡೇವಿಡ್
Mysuru; ಚಾಮುಂಡೇಶ್ವರಿ ದೇವಿಗೆ ಚಿನ್ನದ ರಥ: ಪ್ರಸ್ತಾವನೆ ಸಲ್ಲಿಸುವಂತೆ ಸಿದ್ದರಾಮಯ್ಯ ಸೂಚನೆ
Kuno National Park; ಮರಿಗಳಿಗೆ ಜನ್ಮ ನೀಡಿದ ಚೀತಾ ನೀರ್ವಾ: ಸಂಖ್ಯೆ ಹೆಚ್ಚಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.