ಮಹಾನಗರ:ಸಾಮಾಜಿಕ ಸ್ವಾಸ್ಥ್ಯ ಕಾಪಾಡುವುದು ಅಗತ್ಯ- ಪ್ರವೀಣ್
Team Udayavani, Feb 13, 2024, 2:06 PM IST
ಮಹಾನಗರ: ಸಾವಯವ ಕೃಷಿಕ ಗ್ರಾಹಕ ಬಳಗ ಮಂಗಳೂರು ಶ್ರೀ ಭಾರತೀ ಸಮೂಹ ಸಂಸ್ಥೆಗಳು ನಂತೂರು ಅವರ ನೇತೃತ್ವದಲ್ಲಿ, ಬ್ಯಾಂಕ್ ಆಫ್ ಬರೋಡ ಸಂಯೋಜಿತ ವಿಜಯ ಗ್ರಾಮೀಣ ಅಭಿವೃದ್ಧಿ ಪ್ರತಿಷ್ಠಾನ ಮಂಗಳೂರು ಸಹಯೋಗದೊಂದಿಗೆ ನಡೆದ, “ಸಾವಯವ ಕೈತೋಟ ತರಬೇತಿ ಸರ್ಟಿಫಿಕೆಟ್ ಕೋರ್ಸ್’ (2ನೇ ಬ್ಯಾಚ್) ಇದರ ಸಮಾರೋಪ ನಂತೂರು ಶ್ರೀ ಭಾರತೀ ಸಮೂಹ ಸಂಸ್ಥೆಯಲ್ಲಿ ನಡೆಯಿತು.
ತೋಟಗಾರಿಕೆ ಇಲಾಖೆ ಮಂಗಳೂರು, ಇದರ ಸಹಾಯಕ ನಿರ್ದೇಶಕ ಪ್ರವೀಣ್ ಕೆ. ಮುಖ್ಯ ಅತಿಥಿಯಾಗಿ ಮಾತನಾಡಿ, ವಿಷಮುಕ್ತ ಆಹಾರದ ಬಟ್ಟಲಿಗೆ ಅಗತ್ಯವಾದ ಜ್ಞಾನವನ್ನು ಸಮಾಜಕ್ಕೆ ನೀಡಿ, ಆ ಮೂಲಕ ಸಾಮಾಜಿಕ ಸ್ವಾಸ್ಥ್ಯವನ್ನು ಕಾಪಾಡುವ ಸಾವಯವ ಕೃಷಿಕ ಗ್ರಾಹಕ ಬಳಗದ ಸಾಮಾಜಿಕ ಕಳಕಳಿ ಮತ್ತು ಅವಿರತ ಶ್ರಮವನ್ನು ಕೊಂಡಾಡಿದರು. ಇಂದು ನಗರದ ಉದ್ದಗಲಗಳಲ್ಲಿ ತ್ಯಾಜ್ಯ ಪದಾರ್ಥಗಳ ದಟ್ಟಣೆಯನ್ನು ಕಾಣುತ್ತೇವೆ. ಅವುಗಳ ಸೂಕ್ತ ನಿರ್ವಹಣೆಯು, ಸರಕಾರಕ್ಕೂ ಸವಾಲಾಗಿಯೇ ಪರಿಣಮಿಸಿದೆ ಎಂದರು.
ಇಂತಹ ಸಂದರ್ಭ ಮನೆ ಮನೆಯಿಂದ ಬೀದಿಪಾಲಾಗಬಹುದಾದ ಕಸವನ್ನು, ಸಾರವತ್ತಾದ ಸಾವಯವ ಗೊಬ್ಬರವಾಗಿ
ಪರಿವರ್ತಿಸುವ ಕಲೆಯನ್ನು ಕರಗತ ಮಾಡಿಕೊಂಡ ಈ ಶಿಬಿರಾರ್ಥಿಗಳು ಸಮಾಜಕ್ಕೆ ಆದರ್ಶಪ್ರಾಯರಾಗಿರುವರು, “ವರ್ತನೆಯ ಪರಿವರ್ತನೆಯೇ ನಿಜವಾದ ಶಿಕ್ಷಣ’, ಇದೇ ನಿಜವಾದ ಸಂಸ್ಕೃತಿ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.
ಶಿಬಿರಾರ್ಥಿಗಳು ನಿರಂತರವಾದ ತರಬೇತಿಯಿಂದ ಸಾವಯವ ಕೃಷಿ ಕ್ಷೇತ್ರದಲ್ಲಿ ಹೆಚ್ಚಿನ ನೈಪುಣ್ಯವನ್ನು ಗಳಿಸಿರುವರು. ಇದೀಗ
ಅವರ ಮೇಲೆ ಹೆಚ್ಚಿನ ಜವಾಬ್ದಾರಿಯಿದೆ. ಅದನ್ನು ಸುಸೂತ್ರವಾಗಿ ನಿಭಾಯಿಸುವ ಸಾಮರ್ಥ್ಯ ಹಾಗೂ ಕೌಶಲ ಅವರಲ್ಲಿ ಸದಾ
ಹಸುರಾಗಿರಲಿ; ಸಾವಯವ ಕೃಷಿ ನೈಪುಣ್ಯವು ಕ್ರಾಂತಿಕಾರಕ ಸಾಧನೆಗೆ ದಾರಿದೀಪವಾಗಲಿ ಎಂದು ಹಾರೈಸಿದರು.
ಸಾವಯವ ಕೃಷಿಕ ಗ್ರಾಹಕ ಬಳಗದ ಕಾರ್ಯದರ್ಶಿ ರತ್ನಾಕರ ಕುಳಾಯಿ, ಕೋಶಾಧಿಕಾರಿ ಶರತ್ ಮಂಗಳೂರು ಉಪಸ್ಥಿತರಿದ್ದರು. ಸಾವಯವ ಕೃಷಿಕ ಗ್ರಾಹಕ ಬಳಗದ ಬೆಳವಣಿಗೆ, ಸಾಧನೆ, ಮುಂದಿನ ಯೋಜನೆಗಳು – ಇವುಗಳ ಬಗ್ಗೆ ಬೆಳಕು ಚೆಲ್ಲಿದ ಗ್ರಾಹಕ ಬಳಗದ ಸದಸ್ಯ ನಾರಾಯಣ ರಾವ್ ಅವರು, ಎರಡು ತರಬೇತಿ ಶಿಬಿರಗಳ ಅಂಕಿ ಅಂಶಗಳ ಸಂಕ್ಷಿಪ್ತ ವರದಿಯನ್ನು
ಅತಿಥಿಗಳ ಮುಂದಿರಿಸಿದರು.
ಶಿಬಿರಾರ್ಥಿಗಳಾದ ಸುಷ್ಮಾ, ಕವಿತಾ ಸುರೇಶ್, ವೀಣಾ, ಪ್ರೀತಮ್, ಧರ್ಣಪ್ಪ ಮೂಲ್ಯ ಅವರು ಶಿಬಿರದ ಅನುಭವವನ್ನು
ಹಂಚಿಕೊಂಡರು. ಅತಿಥಿಗಳಾದ ಪ್ರವೀಣ್ ಕೆ. ಶಿಬಿರಾರ್ಥಿಗಳಿಗೆ ಪ್ರಮಾಣಪತ್ರವನ್ನು ವಿತರಿಸಿದರು. ಸಾವಯವ ಕೃಷಿಕ ಗ್ರಾಹಕ
ಬಳಗದ ಆಡಳಿತ ಮಂಡಳಿ ಸದಸ್ಯ ಹರಿಕೃಷ್ಣ ಕಾಮತ್ ಪುತ್ತೂರು ಅವರು, ಅತಿಥಿಗಳಿಗೆ ಸಾವಯವ ಅಕ್ಕಿ ಮತ್ತು ಬೆಲ್ಲವನ್ನು ನೀಡಿ ಗೌರವಿಸಿದರು.ಶಿಬಿರಾರ್ಥಿ ಜಯಂತಿ ಶಂಕರ್ ಪ್ರಾರ್ಥಿಸಿ, ಸಂಜನಾ ಸತೀಶ್ ವಂದಿಸಿದರು. ರೆನಿಟಾ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Ayyappa Temple: ಶಬರಿಮಲೆಗೆ ಭಕ್ತರ ಪ್ರವಾಹ: ಸ್ಪಾಟ್ ಬುಕ್ಕಿಂಗ್ ತಾತ್ಕಾಲಿಕ ರದ್ದು
Health Programme: ಗೃಹ ಆರೋಗ್ಯ ಯೋಜನೆ ಶೀಘ್ರವೇ ರಾಜ್ಯಕ್ಕೆ ವಿಸ್ತರಣೆ: ಸಚಿವ ದಿನೇಶ್
Kambala Kalarava: ರಾಜ ಮನೆತನದ ಐತಿಹ್ಯವಿರುವ ಮೂಲ್ಕಿ ಸೀಮೆಯ ʼಅರಸು ಕಂಬಳʼ
Puttur: ಎರಡು ಕಡೆ ಚಿನ್ನಾಭರಣ ಕಳವು; ಮೂವರ ಸೆರೆ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Malpe: ಮನೆ ಮನೆಗಳಲ್ಲಿ ಕ್ಯಾರೋಲ್ ಗಾಯನ
Turkey: ಟೇಕ್ ಆಫ್ ವೇಳೆ ಆಂಬ್ಯುಲೆನ್ಸ್ ಹೆಲಿಕಾಪ್ಟರ್ ಪತನ; ನಾಲ್ವರು ಮೃ*ತ್ಯು
87th Kannada Sahitya Sammelana: ದೃಶ್ಯರಂಗ ತಂಡದವರಿಂದ ಸಿನಿಮಾಗಾಗಿ “ನಿಧಿ ’ ಮಾರಾಟ!
Mangaluru: ಕ್ರಿಸ್ಮಸ್ ಸಂಭ್ರಮ; ‘ಮಿನುಗು ತಾರೆ’ಗಳ ಮೆರುಗು
Health: ಶೀಘ್ರ ಕ್ಯಾನ್ಸರ್ ಪತ್ತೆ, ಶಸ್ತ್ರಚಿಕಿತ್ಸೆ ತಿಳಿವಳಿಕೆ ಯಾಕೆ ಮುಖ್ಯ?
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.