ಮಂಗಳೂರು-ಕಾರ್ಕಳ: ಸರಕಾರಿ ಬಸ್ ಸದ್ಯಕ್ಕಿಲ್ಲ
Team Udayavani, Apr 4, 2018, 7:58 AM IST
ಮಂಗಳೂರು: ಬಹು ಬೇಡಿಕೆಯ ಮಂಗಳೂರು- ಮೂಡಬಿದಿರೆ- ಕಾರ್ಕಳ ಮಾರ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಸಂಚಾರ ಪ್ರಾರಂಭ ಗೊಳ್ಳುವುದು ಮತ್ತಷ್ಟು ವಿಳಂಬ ವಾಗುವ ಸಾಧ್ಯತೆಯಿದೆ. ಈ ಮಾರ್ಗದಲ್ಲಿ ಈಗಾಗಲೇ ಎಂಟು ಕೆಎಸ್‌ಆರ್‌ಟಿಸಿ ಬಸ್ಸುಗಳ ಓಡಾಟಕ್ಕೆ ದಕ್ಷಿಣ ಕನ್ನಡ ಪ್ರಾದೇಶಿಕ ಸಾರಿಗೆ ಪ್ರಾಧಿಕಾರ (ಆರ್‌ಟಿಎ)ವು ಆರು ತಿಂಗಳ ಹಿಂದೆ ನೀಡಿದ್ದ ಪರವಾನಿಗೆ ಬಗ್ಗೆ ಮರುಪರಿಶೀಲನೆ ನಡೆಸುವಂತೆ ರಾಜ್ಯ ಸಾರಿಗೆ ಪ್ರಾಧಿಕಾರ (ಎಸ್‌ಟಿಎ) ಸೂಚನೆ ನೀಡಿದೆ.
ಇದಕ್ಕೆ ಮುಖ್ಯ ಕಾರಣ ಗುರುಪುರ ಸೇತುವೆ. ಮಂಗಳೂರು-ಮೂಡಬಿದಿರೆ ಮಾರ್ಗ ದಲ್ಲಿರುವ ಗುರುಪುರ ಸೇತುವೆಯಲ್ಲಿ ಬೆಳಗ್ಗೆ ಹಾಗೂ ಸಂಜೆ ಟ್ರಾಫಿಕ್ ಜಾಮ್ ಉಂಟಾಗು ತ್ತಿದೆ. ವಾಹನಗಳ ದಟ್ಟಣೆ ಜಾಸ್ತಿಯಿರುವ ಸಮಯ ವನ್ನು ಹೊರತುಪಡಿಸಿ ಉಳಿದ ವೇಳೆ ಯಲ್ಲಿ ಈ ಮಾರ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್ ಗಳನ್ನು ಓಡಿಸುವ ಬಗ್ಗೆ ಅಗತ್ಯ ಕ್ರಮ ಕೈಗೊಳ್ಳು ವಂತೆ ಪ್ರಾದೇಶಿಕ ಸಾರಿಗೆ ಪ್ರಾಧಿಕಾರಕ್ಕೆ ಈಗ ಸೂಚನೆ ಕೊಟ್ಟಿದೆ. ಹೀಗಾಗಿ ಮಂಗಳೂರು- ಮೂಡ ಬಿದಿರೆ- ಕಾರ್ಕಳ ಮಾರ್ಗದಲ್ಲಿ ಈಗಾಗಲೇ ಪರವಾನಿಗೆ ಪಡೆದುಕೊಂಡಿರುವ ಎಂಟು ಕೆಎಸ್‌ಆರ್‌ಟಿಸಿ ಬಸ್‌ಗಳ ಸಂಚಾರ ಪ್ರಾರಂಭ ಗೊಳ್ಳುವುದು ಮತ್ತಷ್ಟು ವಿಳಂಬವಾಗುವ ಸಾಧ್ಯತೆಯಿದೆ.
ಕಳೆದ ವರ್ಷ ಅ. 31ರಂದು ನಡೆದ ಆರ್‌ಟಿಎ ಸಭೆ ಯಲ್ಲಿ ಮಂಗಳೂರು- ಮೂಡಬಿದಿರೆ- ಕಾರ್ಕಳ ಮಾರ್ಗದಲ್ಲಿ ಕೆಎಸ್‌ಆರ್‌ಟಿಸಿ ಬಸ್ಸು ಗಳ ಓಡಾಟದ ವಿಚಾರ ಚರ್ಚೆ ನಡೆದು ಬಳಿಕ ಪರವಾನಿಗೆ ನೀಡಲು ಒಪ್ಪಿಗೆ ಲಭಿಸಿತ್ತು. ಕೆಎಸ್‌ಆರ್‌ಟಿಸಿಯ ಆಡಳಿತ ನಿರ್ದೇಶಕರು 2014ರಿಂದಲೇ ಮಂಗಳೂರು ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣ ಹಾಗೂ ಸ್ಟೇಟ್ ಬ್ಯಾಂಕ್‌ನಿಂದ ಬಸ್ಸುಗಳ ಓಡಾಟಕ್ಕೆ ಪರವಾನಿಗೆ ನೀಡುವಂತೆ ಪ್ರಾಧಿಕಾರಕ್ಕೆ ಅರ್ಜಿ ಸಲ್ಲಿಸುತ್ತಲೇ ಬಂದಿದ್ದರೂ ಪರವಾನಿಗೆ ಲಭಿಸಿರಲಿಲ್ಲ.
ಆದರೆ ಅ. 31ರ ಸಭೆಯಲ್ಲಿ ಪ್ರಾಧಿಕಾರವು ನಗರದ ಕೆಎಸ್‌ಆರ್‌ಟಿಸಿ ಬಸ್ಸು ನಿಲ್ದಾಣದಿಂದ ಹೊರಡುವ 8 ಬಸ್ಸುಗಳಿಗೆ ಅವಕಾಶ ನೀಡಿತ್ತು. ಬಸ್ಸುಗಳು ನಿಲ್ದಾಣದಿಂದ ಹೊರಟು ಲಾಲ್‌ಬಾಗ್- ಪಿವಿಎಸ್- ಬಂಟ್ಸ್ ಹಾಸ್ಟೆಲ್- ನಂತೂರು ಮೂಲಕ ಮೂಡ ಬಿದಿರೆ ಹೆದ್ದಾರಿ ಯಲ್ಲಿ ಸಾಗ ಬೇಕಿತ್ತು. ಆದರೆ ಪರವಾನಿಗೆ ಲಭಿ ಸಿದ್ದರೂ ವೇಳಾಪಟ್ಟಿ ನಿಗದಿ ಸಭೆ ನಡೆಯದೆ ಬಸ್ಸುಗಳ ಓಡಾಟ ಆರಂಭಗೊಂಡಿರಲಿಲ್ಲ.
ಬಳಿಕ ಈ ಪರವಾನಿಗೆಯನ್ನು ಪ್ರಶ್ನಿಸಿ ಖಾಸಗಿ ಬಸ್ಸಿನವರು ಎಸ್‌ಟಿಎ ಮೆಟ್ಟಿಲೇರಿದ ಹಿನ್ನೆಲೆಯಲ್ಲಿ ಬಸ್ಸುಗಳ ಓಡಾಟಕ್ಕೆ ಅಡ್ಡಿಯಾಗಿತ್ತು. ಬಸ್ಸು ಸಾಗುವ ಹೆದ್ದಾರಿಯಲ್ಲಿರುವ ಗುರುಪುರ ಸೇತುವೆಯು ಹಳೆಯದಾಗಿದ್ದು, ಪ್ರಸ್ತುತ ವಾಹನ ಓಡಾಟದಿಂದಲೇ ಅದರ ಮೇಲೆ ಹೆಚ್ಚು ಒತ್ತಡ ಬೀಳುತ್ತಿದೆ. ಹೀಗಾಗಿ ಮತ್ತೆ ಕೆಎಸ್‌ಆರ್‌ಟಿಸಿ ಬಸ್ಸುಗಳ ಓಡಾಟ ಆರಂಭಗೊಂಡರೆ ಅಪಾಯದ ಸಾಧ್ಯತೆ ಇದೆ ಎಂದು ಎಸ್‌ಟಿಎಗೆ ದೂರು ನೀಡಲಾಗಿತ್ತು.
ಪರಿಶೀಲನ ಸಮಿತಿ ರಚನೆ
ಈ ಹಿನ್ನೆಲೆಯಲ್ಲಿ ಎಸ್‌ಟಿಎಯು ಆರ್‌ಟಿಒ, ಎನ್‌ಎಚ್ ಅಧಿಕಾರಿಗಳು ಸಹಿತ ಸೇತುವೆ ಪರಿಶೀಲನೆಗೆ ಸಮಿತಿಯೊಂದನ್ನು ರಚಿ ಸಿತ್ತು. ಸೇತುವೆಯನ್ನು ಪರಿಶೀಲನೆ ನಡೆಸಿದ ಸಮಿತಿಯು ಸೇತುವೆಯಲ್ಲಿ ಯಾವುದೇ ಸಮಸ್ಯೆ ಇಲ್ಲ, ಆದರೆ ಸೇತುವೆ ಕಿರಿದಾಗಿರುವ ಹಿನ್ನೆಲೆಯಲ್ಲಿ ಬೆಳಗ್ಗೆ ಹಾಗೂ ಸಂಜೆ ಹೊತ್ತಿನಲ್ಲಿ ಟ್ರಾಫಿಕ್ ಜಾಮ್ ಸಂಭವಿಸುತ್ತದೆ ಎಂದು ಎಸ್‌ಟಿಎ ವರದಿ ನೀಡಿತ್ತು.
ಇದೀಗ ಅದೇ ವರದಿಯನ್ನು ಆಧರಿಸಿ ಎಸ್‌ಟಿಎ ಹಿಂದೆ ನೀಡಿದ ಪರವಾನಿಗೆಯನ್ನು ಪರಿಶೀಲನೆ ನಡೆಸುವಂತೆ ಸೂಚನೆ ನೀಡಿದೆ. ಜತೆಗೆ ಕೆಎಸ್‌ಆರ್‌ಟಿಸಿ ಕೂಡ ತಮಗೆ ಪೀಕ್ ವೇಳೆಯನ್ನು ಬಿಟ್ಟು ಉಳಿದ ಸಮಯದಲ್ಲಿ ಅವಕಾಶ ನೀಡುವಂತೆ ಆರ್‌ಟಿಎಗೆ ಮನವಿ ಮಾಡಿದೆ. ಪ್ರಸ್ತುತ ಆರ್‌ಟಿಎ ಪರಿಶೀಲನೆ ನಡೆಸಿದ ಬಳಿಕವೇ ಮಂಗಳೂರು- ಕಾರ್ಕಳ ಮಧ್ಯೆ ಕೆಎಸ್‌ಆರ್‌ಟಿಸಿ ಬಸ್ಸುಗಳು ಓಡಾಟ ನಡೆಸಲಿವೆ.
ಖಾಸಗಿ ಬಸ್ಸಿಗಾಗಿ ಮನವಿ!
ಈ ನಡುವೆ ಮಂಗಳೂರು-ಕಾರ್ಕಳ ರಸ್ತೆ ಯಲ್ಲಿ ನಿತ್ಯ ಸಂಚರಿಸುವ ಪ್ರಯಾಣಿಕರು, ಸಂಜೆಯ ವೇಳೆ ಸಂಚರಿಸುವ ಖಾಸಗಿ ಬಸ್ಸು ಗಳ ಸಂಖ್ಯೆಯನ್ನು ಹೆಚ್ಚಿಸುವಂತೆ ಸಂಬಂಧ ಪಟ್ಟ ಜನಪ್ರತಿನಿಧಿಗಳಿಗೆ ಮನವಿ ನೀಡಿದ್ದಾರೆ. ಜನ ಪ್ರತಿನಿಧಿಗಳು ಈ ಕುರಿತು ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿ ಕಾರಿಗಳು, ಆರ್‌ಟಿಒ ಅಧಿಕಾರಿಗಳಿಗೆ ತಿಳಿಸಿದ್ದಾರೆ.
ಆದರೆ ನಮ್ಮ ಬೇಡಿಕೆಗೆ ಯಾವುದೇ ಸ್ಪಂದನೆ ಸಿಕ್ಕಿಲ್ಲ. ಸಂಜೆ ವೇಳೆ ಸಾಗುವ ಎಲ್ಲ ಬಸ್ಸುಗಳಲ್ಲಿ ರಷ್ ಇರುವುದರಿಂದ ನಿಂತೇ ಸಾಗಬೇಕಿದೆ. ಜತೆಗೆ ಈ ಮಧ್ಯೆ ಸಾಗುವ ಒಂದು ಬಸ್ಸು ಮೂಡಬಿದಿರೆಯ ವರೆಗೆ ಮಾತ್ರ ಸಾಗುತ್ತದೆ. ಹೀಗಾಗಿ ಅದನ್ನು ಕಾರ್ಕಳದವರೆಗೆ ವಿಸ್ತರಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಿದ್ದಾರೆ.
ಪ್ರಸ್ತುತ ಇಲ್ಲಿ ಕೆಎಸ್‌ಆರ್‌ಟಿಸಿ ಬಸ್ಸಿನ ಓಡಾಟ ಆರಂಭಗೊಂಡರೆ ತಮ್ಮ ಸಮಸ್ಯೆ ನಿವಾರಣೆಯಾಗುತ್ತದೆ ಎಂಬ ಅಭಿಪ್ರಾಯಗಳು ಕೇಳಿಬರುತ್ತಿವೆ. ಈ ರಸ್ತೆಯಲ್ಲಿ ಸಿಟಿ, ಸರ್ವಿಸ್ ಹಾಗೂ ಎಕ್ಸ್‌ಪ್ರೆಸ್ ಬಸ್ಸುಗಳು ಸಹಿತ ನೂರಾರು ಖಾಸಗಿ ಬಸ್ಸುಗಳು ಮಾತ್ರ ಓಡಾಟ ನಡೆಸುತ್ತವೆ. ಕೆಎಸ್‌ಆರ್‌ಟಿಸಿ ಆರಂಭಗೊಂಡರೆ ನಿತ್ಯ ಓಡಾಟ ನಡೆಸುವ ವಿದ್ಯಾರ್ಥಿಗಳು, ಸಾರ್ವಜನಿಕರಿಗೆ ಅನುಕೂಲವಾಗಲಿದೆ.
ಪರವಾನಿಗೆ ಪರಿಶೀಲನೆ
ಕೆಎಸ್‌ಆರ್‌ಟಿಸಿಯ ಪರವಾನಿಗೆಯನ್ನು ಪ್ರಶ್ನಿಸಿ ಖಾಸಗಿ ಯವರು ಮೇಲ್ಮನವಿ ಸಲ್ಲಿಸಿದ ಹಿನ್ನೆಲೆ ಯಲ್ಲಿ ಇದೀಗ ಎಸ್‌ಟಿಎ ಪರವಾನಿಗೆ ಪರಿ ಶೀಲಿಸು ವಂತೆ ಆರ್‌ಟಿಎಗೆ ತಿಳಿಸಿದೆ. ನಾವು ಕೂಡ ಟ್ರಾಫಿಕ್ ಜಾಮ್ ಉಂಟಾಗುವ ವೇಳೆಯನ್ನು ಬಿಟ್ಟು ಪರವಾನಿಗೆ ನೀಡುವಂತೆ ಆರ್‌ಟಿಎಗೆ ಮನವಿ ಮಾಡಿದ್ದೇವೆ.
-ದೀಪಕ್‌ಕುಮಾರ್, ವಿಭಾಗೀಯ ನಿಯಂತ್ರಕರು, ಕೆಎಸ್‌ಆರ್‌ಟಿಸಿ ಮಂಗಳೂರು ವಿಭಾಗ
- ಕಿರಣ್ ಸರಪಾಡಿ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.