ಕಲಾ ಪ್ರದರ್ಶನದಲ್ಲಿ ಕಲಾಕೃತಿ ರಂಗು

Team Udayavani, Nov 4, 2018, 11:53 AM IST

4-november-9.gif

ಕೊಡಿಯಾಲಬೈಲ್‌ : ಕರಾವಳಿಯ ಪಾರಂಪರಿಕ ಮೀನುಗಾರಿಕೆ ಕಸುಬನ್ನು ಕಟ್ಟಿಕೊಡುವ ದೋಣಿಯ ಚಿತ್ರಣ, ಭತ್ತದ ತುಪ್ಪೆಯ ಅನಾವರಣ ಒಂದೆಡೆ. ಅರ್ಧ ತಾಸಿನಲ್ಲೇ ಮಣ್ಣಿನ ಕಲಾಕೃತಿ ರಚಿಸಿ ನಿಬ್ಬೆರಗಾಗಿಸುವ ಕಲಾವಿದರ ತಂಡ ಇನ್ನೊಂದೆಡೆ. ಪುಸ್ತಕ ಪ್ರದರ್ಶನ, ಕ್ಲೇ ಮಾಡೆಲಿಂಗ್‌..

ಇದು ಮಂಗಳೂರು ಲಿಟ್‌ ಫೆಸ್ಟ್‌ ನಡೆಯುತ್ತಿರುವ ಟಿಎಂಎ ಪೈ ಸಭಾಂಗಣದ ಮುಂಭಾಗದಲ್ಲಿ ಶನಿವಾರ ಕಂಡು ಬಂದ ದೃಶ್ಯ. ಮಂಗಳೂರಿನಲ್ಲಿ ನಡೆಯುತ್ತಿರುವ ಅಂತಾರಾಷ್ಟ್ರ ಮಟ್ಟದ ಮೊದಲ ಸಾಹಿತ್ಯ ಜಾತ್ರೆಯಾದ್ದರಿಂದ ಸಭಾಂಗಣದ ಮುಂಭಾಗದಲ್ಲಿ ತುಳುನಾಡಿನ ಆಹಾರ ಪದ್ಧತಿ, ಪಾರಂಪರಿಕ ಕಲೆಯನ್ನು ಬಿಂಬಿಸುವ ಚಿತ್ರಣಗಳನ್ನು ಪ್ರದರ್ಶಿಸಲಾಗಿತ್ತು. ಇಡೀ ಸಾಹಿತ್ಯ ಜಾತ್ರೆಗೆ ಸೌಂದರ್ಯ ನೀಡುವಲ್ಲಿ ಈ ಪ್ರದರ್ಶನಗಳು ಸಾಕ್ಷಿಯಾಗಿದ್ದವು. ಸಭಾಂಗಣದ ಆವರಣದ ಒಳ ಹೋಗುತ್ತಿದ್ದಂತೆ ಮಹಾಲಸ ಸಂಸ್ಥೆಯ ವಿದ್ಯಾರ್ಥಿಗಳು ರಚಿಸಿದ ಪೈಂಟಿಂಗ್‌ ಗಳು ಗಮನ ಸೆಳೆಯುತ್ತಿದ್ದವು. ಮಧುಬನಿ, ಖನ್ನಾಳ, ಕಲಂಕಾರಿ ವಿವಿಧ ವಿಶುವಲ್‌ ಕಲಾಕೃತಿಗಳನ್ನು ವಿದ್ಯಾರ್ಥಿಗಳೇ ರಚಿಸಿ ಪ್ರದರ್ಶನ ಮತ್ತು ಮಾರಾಟಕ್ಕಿಟ್ಟಿದ್ದರು.

ಮಣ್ಣಿನ ಕಲಾಕೃತಿ
ಗೋಕರ್ಣದ ಕಲಾವಿದ ರವಿ ಗುನಗ ಅವರ ಮುಂದಾಳತ್ವದಲ್ಲಿ ನಗರದ ವಿವಿಧ ಕಾಲೇಜು ವಿದ್ಯಾರ್ಥಿಗಳು ರಚಿಸಿದ ಕ್ಲೇ ಮಾಡೆಲಿಂಗ್‌, ಜೇಡಿ ಮಣ್ಣಿನ ಕಲಾಕೃತಿಗಳೂ ಆಕರ್ಷಣೆಯ ಕೇಂದ್ರ ಬಿಂದುವಾಗಿತ್ತು. ಪ್ರಾಣಿ ಮತ್ತು ಮನುಷ್ಯನ ಕಲಾಕೃತಿಗಳನ್ನು ಅರ್ಧ ಗಂಟೆಯಲ್ಲೇ ವಿದ್ಯಾರ್ಥಿಗಳು ಪೂರ್ಣಗೊಳಿಸುತ್ತಿದ್ದುದು ಕಲಾವಿದರ ಕೈಚಳಕವನ್ನು ಹೇಳುವಂತಿತ್ತು.

ಕರಾವಳಿ ಕಸುಬು
ಸಭಾಂಗಣದ ಮುಂಭಾಗದ ಆವರಣದಲ್ಲಿ ಕರಾವಳಿಯ ಸಾಂಪ್ರದಾಯಿಕ ಮೀನುಗಾರಿಕೆಯನ್ನು ಬಿಂಬಿಸುವ ದೋಣಿ ಹಾಗೂ ಮೀನುಗಾರ ಬಲೆ ಬೀಸಿ ಮೀನು ಹಿಡಿಯುವಂತೆ ಮಾಡಿದ ಚಿತ್ರ ಆಕರ್ಷಿತವಾಗಿತ್ತು. ಇಲ್ಲಿನ ಮುಖ್ಯ ಕಸುಬಾದ ಗದ್ದೆ ಬೇಸಾಯವನ್ನು ಅನಾವರಣಗೊಳಿಸುವ ಸಲುವಾಗಿ ಭತ್ತದ ತುಪ್ಪೆಯ ಮಾದರಿಯನ್ನು ಪ್ರದರ್ಶನಕ್ಕಿಡಲಾಗಿತ್ತು.

ಪುಸ್ತಕ ಪ್ರದರ್ಶನ
ಕನ್ನಡ, ಇಂಗ್ಲಿಷ್‌, ಹಿಂದಿ ಸಹಿತ ವಿವಿಧ ಭಾಷೆಗಳಲ್ಲಿ ಬರೆಯಲಾಗಿರುವ ಪುಸ್ತಕಗಳನ್ನು ಪ್ರದರ್ಶನಕ್ಕಿಡಲಾಗಿತ್ತು. 15ಕ್ಕೂ ಹೆಚ್ಚು ಪುಸ್ತಕ ಮಳಿಗೆಗಳು ಭಾಗವಹಿಸಿದ್ದವು.

ಅದ್ಭುತ ಕಾರ್ಯಕ್ರಮ
ಮಂಗಳೂರು ಲಿಟ್‌ ಫೆಸ್ಟ್‌ ಒಂದು ಅದ್ಭುತ ಕಾರ್ಯಕ್ರಮ. ಇಲ್ಲಿ ಕಲಾ ಪ್ರದರ್ಶನಕ್ಕೆ ಅವಕಾಶ ನೀಡಿದ ಕಾರ್ಯಕ್ರಮ ಆಯೋಜಕರಿಗೆ ಆಭಾರಿಯಾಗಿದ್ದೇನೆ. ನಮ್ಮ ಕಲಾ ಪ್ರದರ್ಶನದೊಂದಿಗೆ ಮಂಗಳೂರು ಭಾಗದ ವಿದ್ಯಾರ್ಥಿಗಳೂ ಕ್ಲೇ ಮಾಡೆಲಿಂಗ್‌ ಕಲಿಯುವ ಅವಕಾಶ ದೊರೆಯಿತು.
– ರವಿ ಗುನಗ, ಕಲಾವಿದ 

ಟಾಪ್ ನ್ಯೂಸ್

Udupi: ಘನತೆಯ ಬದುಕಿನಂತೆ ಸಾವೂ ಒಂದು ಹಕ್ಕು: ಡಾ| ರವೀಂದ್ರನಾಥ ಶಾನುಭಾಗ್‌

Udupi: ಘನತೆಯ ಬದುಕಿನಂತೆ ಸಾವೂ ಒಂದು ಹಕ್ಕು: ಡಾ| ರವೀಂದ್ರನಾಥ ಶಾನುಭಾಗ್‌

Uppinangady: ಕೆಮರಾ ಕಣ್ಣಿಗೆ ಸಿಕ್ಕಿದ ಕಾಡಾನೆ

Uppinangady: ಕೆಮರಾ ಕಣ್ಣಿಗೆ ಸಿಕ್ಕಿದ ಕಾಡಾನೆ

Road Mishap: ಮೋಟಾರು ಸೈಕಲ್‌ ಢಿಕ್ಕಿ: ಮಹಿಳೆಗೆ ಗಾಯ

Road Mishap: ಮೋಟಾರು ಸೈಕಲ್‌ ಢಿಕ್ಕಿ: ಮಹಿಳೆಗೆ ಗಾಯ

Moodbidri ಪರಿಸರದಲ್ಲಿ ಸಕ್ರಿಯರಾಗಿರುವ ಬ್ಯಾಟರಿ ಕಳ್ಳರು

Moodbidri ಪರಿಸರದಲ್ಲಿ ಸಕ್ರಿಯರಾಗಿರುವ ಬ್ಯಾಟರಿ ಕಳ್ಳರು

Karnataka: ಹೊಸ ವರ್ಷದ ಆಚರಣೆ ಮದ್ಯ ಮಾರಾಟ ನೀರಸ

Karnataka: ಹೊಸ ವರ್ಷದ ಆಚರಣೆ ಮದ್ಯ ಮಾರಾಟ ನೀರಸ

Karnataka ಪ್ರತ್ಯೇಕ ಪ್ರಕರಣ: ಅಪಘಾತಗಳಲ್ಲಿ 11 ಮಂದಿ ಸಾವು

Karnataka ಪ್ರತ್ಯೇಕ ಪ್ರಕರಣ: ಅಪಘಾತಗಳಲ್ಲಿ 11 ಮಂದಿ ಸಾವು

ಕೆಎಸ್ಸಾರ್ಟಿಸಿ ಮುಡಿಗೆ 9 ರಾಷ್ಟ್ರಮಟ್ಟದ ಪ್ರಶಸ್ತಿ

Bengaluru: ಕೆಎಸ್ಸಾರ್ಟಿಸಿ ಮುಡಿಗೆ 9 ರಾಷ್ಟ್ರಮಟ್ಟದ ಪ್ರಶಸ್ತಿ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

Udupi: ಘನತೆಯ ಬದುಕಿನಂತೆ ಸಾವೂ ಒಂದು ಹಕ್ಕು: ಡಾ| ರವೀಂದ್ರನಾಥ ಶಾನುಭಾಗ್‌

Udupi: ಘನತೆಯ ಬದುಕಿನಂತೆ ಸಾವೂ ಒಂದು ಹಕ್ಕು: ಡಾ| ರವೀಂದ್ರನಾಥ ಶಾನುಭಾಗ್‌

Uppinangady: ಕೆಮರಾ ಕಣ್ಣಿಗೆ ಸಿಕ್ಕಿದ ಕಾಡಾನೆ

Uppinangady: ಕೆಮರಾ ಕಣ್ಣಿಗೆ ಸಿಕ್ಕಿದ ಕಾಡಾನೆ

Road Mishap: ಮೋಟಾರು ಸೈಕಲ್‌ ಢಿಕ್ಕಿ: ಮಹಿಳೆಗೆ ಗಾಯ

Road Mishap: ಮೋಟಾರು ಸೈಕಲ್‌ ಢಿಕ್ಕಿ: ಮಹಿಳೆಗೆ ಗಾಯ

Moodbidri ಪರಿಸರದಲ್ಲಿ ಸಕ್ರಿಯರಾಗಿರುವ ಬ್ಯಾಟರಿ ಕಳ್ಳರು

Moodbidri ಪರಿಸರದಲ್ಲಿ ಸಕ್ರಿಯರಾಗಿರುವ ಬ್ಯಾಟರಿ ಕಳ್ಳರು

13

Surathkal: ಅನಾರೋಗ್ಯದಿಂದ ಸಿ.ಎ. ವಿದ್ಯಾರ್ಥಿನಿ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.