ಮಂಗಳೂರು: ಮಾ. 27ರಿಂದ 3 ದಿನ ನೀರು; 2 ದಿನ ಕಡಿತ
Team Udayavani, Mar 25, 2017, 11:58 AM IST
ಮಂಗಳೂರು: ಕುಡಿಯುವ ನೀರಿನ ಸಮರ್ಪಕ ಸರಬರಾಜು ಹಿನ್ನೆಲೆಯಲ್ಲಿ ಮಂಗಳೂರು ವ್ಯಾಪ್ತಿಯಲ್ಲಿ ಪ್ರಸ್ತುತ ನಿಗದಿಯಾಗಿರುವ ರೇಷನಿಂಗ್‌ನಲ್ಲಿ ಕೆಲವು ಬದಲಾವಣೆ ಮಾಡಲಾಗಿದ್ದು, ಮಾ. 27ರಿಂದ 3 ದಿನ ನೀರು ಸರಬರಾಜು ಹಾಗೂ ಎರಡು ನೀರು ಕಡಿತ ಮಾಡಲು ಶುಕ್ರವಾರ ಮನಪಾ ನಿರ್ಧರಿಸಿದೆ.
ಇದರಂತೆ ಮುಂದಿನ ಸೋಮವಾರದಿಂದ ಬುಧವಾರದ ವರೆಗೆ ನೀರು ಲಭ್ಯವಾಗಲಿದ್ದು, ಗುರುವಾರ ಹಾಗೂ ಶುಕ್ರವಾರ ನೀರು ಕಡಿತ ಮಾಡಲಾಗುತ್ತದೆ. ಬಳಿಕ 3 ದಿನ ಸರಬರಾಜು ಮಾಡಲಾಗುತ್ತದೆ. ಪ್ರಸ್ತುತ ರೇಷನಿಂಗ್ ಕ್ರಮದಂತೆ 48 ಗಂಟೆ ನೀರು ಪೂರೈಕೆ ಹಾಗೂ 36 ಗಂಟೆ ಸ್ಥಗಿತವಾಗುತ್ತಿದೆ. ಮುಂದಿನ ಸೋಮವಾರದಿಂದ 72 ಗಂಟೆ ನೀರು ಪೂರೈಕೆ ಹಾಗೂ 48 ಗಂಟೆ ನೀರು ಸ್ಥಗಿತವಾಗಲಿದೆ.
ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ ಬಹಳಷ್ಟು ಎತ್ತರ ಪ್ರದೇಶಗಳಿಗೆ ಪ್ರಸಕ್ತ ನೀರು ಸರಬರಾಜು ಆಗುತ್ತಿಲ್ಲ ಎಂಬ ದೂರಿನ ಹಿನ್ನೆಲೆಯಲ್ಲಿ ಶುಕ್ರವಾರ ಸರ್ವ ಸದಸ್ಯರ ಉಪಸ್ಥಿತಿಯಲ್ಲಿ ಮೇಯರ್ ಕವಿತಾ ಸನಿಲ್ ಅವರ ಅಧ್ಯಕ್ಷತೆಯಲ್ಲಿ ಪಾಲಿಕೆ ಸಭಾಂಗಣದಲ್ಲಿ ತುರ್ತು ಸಭೆ ಆಯೋಜಿಸಲಾಗಿದ್ದು, ಸಭೆಯಲ್ಲಿ ಈ ನಿರ್ಣಯ ಕೈಗೊಳ್ಳಲಾಯಿತು.
ಉಪಮೇಯರ್ ರಜನೀಶ್, ಮುಖ್ಯ ಸಚೇತಕ ಶಶಿಧರ ಹೆಗ್ಡೆ, ಆಯುಕ್ತ ಮೊಹಮ್ಮದ್ ನಝೀರ್ ಮೊದಲಾದವರು ಸಭೆಯಲ್ಲಿ ಉಪಸ್ಥಿತರಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Vijayapura: ಕರ್ನಾಟಕ ಸಾವಿನ ಮನೆಯಾಗಿದೆ: ಸರ್ಕಾರದ ವಿರುದ್ಧ ಸಿ.ಟಿ.ರವಿ ವಾಗ್ದಾಳಿ
Viral: ಇದು ಇರುವೆಗಳ ಎಂಜಿನಿಯರಿಂಗ್ ಕೌಶಲ್ಯ! ನೀರು ದಾಟಲು ಇರುವೆಗಳ ಸೇತುವೆ ನಿರ್ಮಾಣ
Indian Cricket: ಕ್ರಿಕೆಟ್ ಜೀವನಕ್ಕೆ ಗುಡ್ ಬೈ ಹೇಳಿದ ಆರ್‌ಸಿಬಿ ಮಾಜಿ ಆಟಗಾರ
Nature: ಶ್ರೀಮಂತನಾದರೂ, ಬಡವನಾದರೂ ಪ್ರಕೃತಿಗೆ ಅವಲಂಬಿಯೇ ಅಲ್ಲವೇ?
Sandalwood: ‘ಕೋರ’ ಚಿತ್ರದ ಟ್ರೇಲರ್ ಬಂತು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.