ಮೀಸಲಾತಿ ಪರಿಷ್ಕರಣೆಯ ಜತೆಗೆ ವಾರ್ಡ್ ವ್ಯಾಪ್ತಿ ಮರು ವಿಂಗಡಣೆ
ಮಹಾನಗರ ಪಾಲಿಕೆ ಚುನಾವಣೆ
Team Udayavani, Nov 5, 2019, 4:24 AM IST
ಮಹಾನಗರ: ಮಂಗಳೂರು ಮಹಾನಗರ ಪಾಲಿಕೆಯ ಈ ಬಾರಿಯ ಚುನಾವಣೆಗೆ ಸಂಬಂಧಿಸಿದಂತೆ ವಾರ್ಡ್ ಗಳ ಮೀಸಲಾತಿಯ ಪರಿಷ್ಕರಣೆಯ ಜತೆಗೆ ವಾರ್ಡ್‌ಗಳ ವ್ಯಾಪ್ತಿಯ ಮರು ವಿಂಗಡಣೆಯನ್ನೂ ಚುನಾವಣ ಆಯೋಗ ಮಾಡಿದೆ. ವಾರ್ಡ್ ವ್ಯಾಪ್ತಿ ಮರು ವಿಂಗಡಣೆ ವಿಂಗಡಣೆ ಪರಿಣಾಮ ಕೆಲವು ವಾಡ್ ì ಗಳ ಕೆಲವು ಭಾಗಗಳು ಪಕ್ಕದ ವಾರ್ಡ್ ಗಳಿಗೆ ಸೇರ್ಪಡೆಯಾಗಿವೆ. ಇದರಿಂದಾಗಿ ಮತದಾರರ ಸಂಖ್ಯೆ ಕೆಲವು ವಾರ್ಡ್‌ಗಳಲ್ಲಿ ಕಳೆದ ಬಾರಿಯ ಚುನಾವಣೆಗಿಂತ ಕಡಿಮೆಯಾಗಿದೆ ಹಾಗೂ ಇನ್ನೂ ಕೆಲವು ವಾರ್ಡ್‌ಗಳಲ್ಲಿ ಮತದಾರರ ಸಂಖ್ಯೆ ಜಾಸ್ತಿಯಾಗಿದೆ.
ವಾರ್ಡ್ ವ್ಯಾಪ್ತಿ ವಿಸ್ತರಣೆ ಅಥವಾ ಕಡಿತ ಆಗಿರುವುದರಿಂದ ಭೌಗೋಳಿಕವಾಗಿ ವಾರ್ಡ್‌ಗಳ ವಿಸ್ತೀರ್ಣದಲ್ಲಿ ಬದಲಾವಣೆ ಕಂಡು ಬಂದಿದೆ. ಕೆಲವು ಕಡೆ ಅಲ್ಪ ಸ್ವಲ್ಪ ವ್ಯತ್ಯಾಸ ಆಗಿದ್ದರೆ ಇನ್ನೂ ಕೆಲವು ಕಡೆ ದೊಡ್ಡ ಮಟ್ಟದ ಬದಲಾವಣೆ ಆಗಿರುವುದು ವಾರ್ಡ್ ವ್ಯಾಪ್ತಿ ಪರಿಷ್ಕರಣೆಯ ವಿಶಿಷ್ಟತೆ.
ಕೆಲವು ಬದಲಾವಣೆಗಳು ಹೀಗಿವೆ
ವಾರ್ಡ್- 2 (ಸುರತ್ಕಲ್ ಪೂರ್ವ)ಕ್ಕೆ ಪಕ್ಕದ ವಾರ್ಡ್‌ನ ಒಂದು ಬೂತ್ ಸೇರ್ಪಡೆಗೊಂಡಿದೆ. ಈ ಬೂತ್‌ನಲ್ಲಿ ಸುಮಾರು 1300 ಮತದಾರರಿದ್ದಾರೆ. ವಾರ್ಡ್- 5 (ಕಾಟಿಪಳ್ಳ ಉತ್ತರ)ಕ್ಕೆ 20 ಮನೆಗಳು ಸೇರ್ಪಡೆಯಾಗಿದ್ದರೆ ಇನ್ನೊಂದು ಕಡೆ ಕೆಲವು ಮನೆಗಳು ಈ ವಾರ್ಡ್‌ನಿಂದ 6ನೇ ವಾರ್ಡ್(ಇಡ್ಯಾ ಪೂರ್ವ)ಗೆ ಸೇರ್ಪಡೆಯಾಗಿವೆ. ವಾರ್ಡ್- 8 (ಹೊಸಬೆಟ್ಟು)ಕ್ಕೆ ಪಕ್ಕದ ವಾರ್ಡ್‌ಸುಮಾರು 400 ಮತದಾರರು ಸೇರ್ಪಡೆ ಗೊಂಡಿದ್ದಾರೆ.
ವಾರ್ಡ್ – 9 (ಕುಳಾಯಿ)ರಲ್ಲಿ 1200 ಮತದಾರರು ಕಡಿಮೆಯಾಗಿದ್ದಾರೆ. ವಾರ್ಡ್- 10 (ಬೈಕಂಪಾಡಿ)ಕ್ಕೆ ಕುಳಾಯಿ ವಾರ್ಡ್‌ನಿಂದ 1311 ಮತದಾರರು ಸೇರ್ಪಡೆಯಾಗಿದ್ದಾರೆ. ವಾರ್ಡ್-40 (ಕೋರ್ಟ್) ರಿಂದ ಕೆಲವು ಭಾಗಗಳು ಪಕ್ಕದ ಸೆಂಟ್ರಲ್ ಮಾರ್ಕೆಟ್ ವಾರ್ಡ್ ಗೆ ಸೇರ್ಪಡೆಯಾಗಿವೆ. ವಾರ್ಡ್ ವ್ಯಾಪ್ತಿ ಬದಲಾಗಿರುವ ಬಗ್ಗೆ ಹೆಚ್ಚಿನ ವಾರ್ಡ್‌ಗಳಲ್ಲಿ ಮತದಾರರಿಗೆ ಮಾಹಿತಿ ಇಲ್ಲ. ಈಗ ಚುನಾವಣ ಕಣದಲ್ಲಿರುವ ಅಭ್ಯರ್ಥಿಗಳು ಮತ ಯಾಚನೆಗೆ ತೆರಳುವ ಸಂದರ್ಭದಲ್ಲಿ ಮಾಹಿತಿ ನೀಡುತ್ತಿದ್ದಾರೆ. ಆದರೆ ಚುನಾವಣ ಕಣದಲ್ಲಿರುವ ಹೊಸ ಅಭ್ಯರ್ಥಿಗಳಿಗೆ ತಮ್ಮ ವಾರ್ಡ್‌ಗಳಲ್ಲಿ ಆಗಿರುವ ಬದಲಾವಣೆಗೆ ಸಂಬಂಧಿಸಿ ಮಾಹಿತಿ ಕಡಿಮೆ. ವಾರ್ಡ್ ವ್ಯಾಪ್ತಿ ಮರು ವಿಂಗಡಣೆ ಪರಿಣಾಮವಾಗಿ ಮಹಿಳಾ ಮತದಾರರು ಅಧಿಕ ಇರುವ ವಾರ್ಡ್‌ಗಳನ್ನು ಮಹಿಳಾ ಮೀಸಲು ವಾರ್ಡ್‌ಗಳಾಗಿ ವಿಂಗಡಿಸಲಾಗಿದೆ.
ರಾಜಕೀಯ ಚಿತ್ರಣ ಬದಲು
ವಾರ್ಡ್‌ಗಳ ಮರು ವಿಂಗಡನೆಯ ಪರಿಣಾಮವಾಗಿ ವಾರ್ಡ್ ಗಳ ಮತದಾರರಿಗೆ ಅಭ್ಯರ್ಥಿಗಳು ಬದಲಾಗುವ ಸಾಧ್ಯತೆಯಿದೆ. ಈ ಹಿನ್ನೆಲೆಯಲ್ಲಿ ಮತದಾರರು ಈ ವಾರ್ಡ್ ಮೊದಲು ತಮ್ಮ ವಾರ್ಡ್ ವ್ಯಾಪ್ತಿ ಯಾವುದು, ಅಭ್ಯರ್ಥಿಗಳು ಯಾರು ಎಂಬುದನ್ನು ತಿಳಿದುಕೊಳ್ಳುವುದು ಉತ್ತಮ. ಇಲ್ಲದೆ ಹೋದರೆ, ಮತದಾರರು ಅಂತಿಮ ಕ್ಷಣದಲ್ಲಿ ಗೊಂದಲಕ್ಕೆ ಒಳಗಾಗುವ ಸಾಧ್ಯತೆಯೂ ಎದುರಾಗಬಹುದು. ಇನ್ನೊಂದೆಡೆ, ಎಲ್ಲೆಲ್ಲಿ ವಾರ್ಡ್‌ಗಳ ಮರು ವಿಂಗಡಣೆ ಆಗಿದೆಯೋ ಅಂಥ ಕಡೆಗಳಲ್ಲಿ ಅದು ಈ ಬಾರಿಯ ಪಾಲಿಕೆ ಚುನಾವಣೆ ಫಲಿತಾಂಶದ ಮೇಲೂ ಪರಿಣಾಮ ಬೀರಬಹುದು. ಏಕೆಂದರೆ, ಈ ವಾರ್ಡ್ ಮರು ವಿಂಗಡಣೆಯಿಂದ ಅಂಥ ವಾರ್ಡ್‌ಗಳ ರಾಜಕೀಯ ಚಿತ್ರಣ ಬದಲಾದರೂ ಅಚ್ಚರಿಪಡಬೇಕಿಲ್ಲ ಎಂದು ರಾಜಕೀಯವಾಗಿ ವಿಶ್ಲೇಷಿಸಲಾಗುತ್ತದೆ.
– ಹಿಲರಿ ಕ್ರಾಸ್ತಾ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಎಸ್‌ಟಿಪಿಗಳಲ್ಲಿ ಸಂಸ್ಕರಣೆ ಆಗದೆ ಕೊಳಚೆ ನೀರು ನೇರ ನದಿ, ಕೆರೆಗೆ!
Bajpe ಪ.ಪಂ.ನಿಂದ ಕುಡಿಯುವ ನೀರು ಪೂರೈಕೆಗೆ ಹೊಸ ಚಿಂತನೆ; ಹೊಸ ಬೋರ್‌ವೆಲ್‌ಗೆ ಸೌರ ಪಂಪ್
Mannagudda: ಗಡ್ಡೆ ಗೆಣಸು ಸೊಪ್ಪುಗಳಿಗೆ ರಾಜ ಮರ್ಯಾದೆ!
ಉಮ್ರಾ ಯಾತ್ರೆಗೆ ತೆರಳಿ ವಂಚನೆ : ಸಂತ್ರಸ್ತರನ್ನು ಊರಿಗೆ ಕರೆಸಿಕೊಂಡ ಮೊಯ್ದಿನ್ ಬಾವ
ಜ.6- 9: ಜೋಕಟ್ಟೆ ಲೆವೆಲ್‌ಕ್ರಾಸ್ ಬಂದ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Theatre stampede case: ಪೊಲೀಸರ ಮುಂದೆ ಹಾಜರಾದ ಅಲ್ಲು ಅರ್ಜುನ್, ಆಸ್ಪತ್ರೆಗೆ ಭೇಟಿ ರದ್ದು
Gambhir; ಕೊಹ್ಲಿ, ರೋಹಿತ್ ಶರ್ಮ ಟೆಸ್ಟ್ ಭವಿಷ್ಯದ ಬಗ್ಗೆ ಗಂಭೀರ್ ಪ್ರತಿಕ್ರಿಯೆ
Kasaragod: ಬಟ್ಟಿಪದವು; ಪ್ಲೈವುಡ್ ಮಿಲ್ಲಿಗೆ ಬೆಂಕಿ
Bus Fare Hike: ಸಾರಿಗೆ ನಿಗಮಗಳಿಗೆ ಸರ್ಕಾರ ಎಷ್ಟೂ ಅಂತ ಸಹಾಯಧನ ಕೊಡಲು ಸಾಧ್ಯ?: ಸಚಿವ
Karkala: ಬಾವಿಗೆ ಬಿದ್ದ ದಂಪತಿಯ ರಕ್ಷಣೆ ಮಾಡಿದ ಅಗ್ನಿಶಾಮಕ ದಳ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.