ಮಧ್ಯಾಹ್ನದವರೆಗೆ ಹೊರ ವಲಯದಲ್ಲಿಯೂ ನೀರಸ ಮತದಾನ
ಬೆಳಗ್ಗಿನಿಂದ ಸಂಜೆವರೆಗಿನ ಮತದಾರರ ನಾಡಿಮಿಡಿತ; ಸುದಿನ ದಿನವಿಡಿ ಸುತ್ತಾಟ
Team Udayavani, Nov 13, 2019, 5:30 AM IST
ಮಂಗಳೂರು ಮಹಾನಗರ ಪಾಲಿಕೆ ಚುನಾವಣೆಗೆ 60 ವಾರ್ಡ್‌ಗಳಲ್ಲಿ ಬೆಳಗ್ಗೆ 7ರಿಂದ ಸಂಜೆ 5 ಗಂಟೆವರೆಗೆ ಮತದಾನ ನಡೆದಿದೆ. ಪಾಲಿಕೆ ಚುನಾವಣೆ ಬಗ್ಗೆ ಸಮಗ್ರ ವರದಿ ಪ್ರಕಟ ಮಾಡುತ್ತ ಬಂದಿರುವ “ಉದಯವಾಣಿ-ಸುದಿನ’ವು ಮತದಾನದ ದಿನವೂ ಬಹಳಷ್ಟು ವಾರ್ಡ್ ಗಳಲ್ಲಿ ಸುತ್ತಾಟ ನಡೆಸಿ ಇಡೀ ದಿನದ ಬೆಳವಣಿಗಳನ್ನು ಓದುಗರ ಮುಂದಿಡುವ ಪ್ರಯತ್ನವೇ “ಸುದಿನ ದಿನವಿಡಿ ಸುತ್ತಾಟ’. ಆ ಮೂಲಕ, ಬೆಳಗ್ಗೆ 7ರಿಂದ ಸಂಜೆ 5 ಗಂಟೆವರೆಗೆ ಹಲವೆಡೆ ಸುತ್ತಾಡಿ ಪಾಲಿಕೆಯಂತಹ ನಗರಾಡಳಿತ ಚುನಾವಣೆಯಲ್ಲಿ ಮತದಾರರು ಎಷ್ಟೊಂದು ಸಕ್ರಿಯ-ಉತ್ಸಾಹದಿಂದ ಪಾಲ್ಗೊಂಡಿದ್ದಾರೆ ಎನ್ನುವುದನ್ನು ತಿಳಿಯುವ ಜತೆಗೆ ಮತದಾರರ ಆ ಹೊತ್ತಿನ ನಾಡಿಮಿಡಿತ ಅರಿಯುವ ಪ್ರಯತ್ನವಿದು.
ಮತದಾನ: ಬೆಳಗ್ಗೆ 10.00 – 02.00
ಮಹಾನಗರ: “ನಾನು ಸರಕಾರಿ ಸಂಸ್ಥೆಯೊಂದರಲ್ಲಿ ಹೌಸ್ ಕೀಪಿಂಗ್ ಕೆಲಸ ನಿರ್ವಹಿ ಸುತ್ತಿದ್ದೇನೆ. ಕೆಲವು ದಿನಗಳ ಹಿಂದೆ ಜಾರಿ ಬಿದ್ದು ಕಾಲು ಫ್ಯಾಕ್ಚರ್ ಆಗಿತ್ತು. ನಿನ್ನೆಯಷ್ಟೇ ಪ್ಲಾಸ್ಟರ್ ತೆಗೆದಿದ್ದರು. ಈಗಲೂ ತುಂಬಾ ಕಾಲು ನೋವಿದ್ದು, ನಡೆಯಲು ಸಾಧ್ಯವಾಗುತ್ತಿಲ್ಲ. ಆದರೆ ಮತದಾನ ನಮ್ಮೆಲ್ಲರ ಹಕ್ಕು. ಅದನ್ನು ತಪ್ಪಿಸಬಾರದು ಎಂಬ ಕಾರಣಕ್ಕೆ ಬೆಳಗ್ಗೆ ಮಗಳ ಜತೆ ವ್ಹೀಲ್‌ಚೇರ್‌ನಲ್ಲಿ ಮತ ಚಲಾಯಿಸಲು ಬಂದೆ’ ಎಂದು ಕೋಡಿಕಲ್ ಮತದಾನ ಬೂತ್‌ನಲ್ಲಿ ಪ್ರತಿಕ್ರಿಯಿಸಿದ್ದು ಅಲ್ಲಿನ ಮತದಾರರಾದ ಕಮಲಾ.
ಪಾಲಿಕೆ ಮತದಾನದ ದಿನದ ಬೆಳವಣಿಗೆ ಅದರಲ್ಲಿಯೂ ನಗರದ ಹೊರ ಭಾಗದ ಕೆಲವು ವಾರ್ಡ್ ಗಳಲ್ಲಿನ ವಾಸ್ತವ ಚಿತ್ರಣವನ್ನು ಅರಿಯಲು ವಾರ್ತಾ ಇಲಾಖೆ ವ್ಯವಸ್ಥೆ ಮಾಡಿದ್ದ ವಾಹನದಲ್ಲಿ ತೆರಳಲಾಗಿತ್ತು. ಈ ಭಾಗದ ಬೂತ್‌ಗಲ್ಲಿ ಸುತ್ತಾಟ ನಡೆಸಿದಾಗ ಹೆಚ್ಚಿನ ಬೂತ್‌ಗಳಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ನೀರಸ ಮತದಾನ ಆಗಿರುವುದು ಕಂಡುಬಂತು. ಕೆಲವೊಂದು ಬೂತ್‌ಗಳಲ್ಲಿ ಮಾತ್ರ ಸರತಿ ಸಾಲಿದ್ದರೆ, ಹೆಚ್ಚಿನ ಬೂತ್‌ಗಳಲ್ಲಿ ಮತ ಚಲಾಯಿಸುವುದಕ್ಕೆ ಜನದಟ್ಟಣೆ ಕಾಣಿಸಲಿಲ್ಲ. ಬೆಳಗ್ಗೆ 11 ಗಂಟೆ ಸುಮಾರಿಗೆ ಬಂಗ್ರಕೂಳೂರು ವಾರ್ಡ್, ದೇರೆಬೈಲ್ ಉತ್ತರ ವಾರ್ಡ್ ಗೆ ಸಂಬಂಧಪಟ್ಟಂತೆ ಕೋಡಿಕಲ್ ಶಾಲೆಯಲ್ಲಿ ಒಟ್ಟು 11 ಬೂತ್ ವ್ಯವಸ್ಥೆಗೊಳಿಸಲಾಗಿತ್ತು. ಇಲ್ಲಿಗೆ ಭೇಟಿ ನೀಡಿದಾಗ ಮತದಾನ ಕೇಂದ್ರದ ಹೊರಗಡೆಯಿಂದಲೇ ಜನಸ್ತೋಮ ಕಾಣಿಸಿತ್ತು. ಹಿರಿಯ ನಾಗರಿಕರನ್ನು ಕುಟುಂಬದ ಸದಸ್ಯರು ಮತದಾನಕ್ಕೆಂದು ಮತಗಟ್ಟೆಗೆ ಕರೆದುಕೊಂಡು ಬರುತ್ತಿದ್ದ ದೃಶ್ಯ ಕೂಡ ಕಂಡುಬಂದಿತ್ತು. ಈ ಎರಡೂ ವಾರ್ಡ್‌ಗಳಲ್ಲಿ ಒಟ್ಟು 11,000 ಮತದಾರರಿದ್ದು, ಬೆಳಗ್ಗೆಯಿಂದಲೇ ಬಹಳ ಚುರುಕಾಗಿ ಮತದಾನವಾಗಿತ್ತು.
ಬೈಕಂಪಾಡಿ ವಾರ್ಡ್‌ನ 69, 71, 72ನೇ ಬೂತ್‌ಗೆ
12 ಗಂಟೆ ಸುಮಾರಿಗೆ ಹೋದಾಗ ಮತಗಟ್ಟೆಯಲ್ಲಿ ಬೆರಳೆಣಿಕೆಯಷ್ಟು ಮತದಾರರು ಮಾತ್ರ ಇದ್ದರು. ಈ ಬೂತ್‌ನಲ್ಲಿ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ನೀರಸ ಮತದಾನವಾಗಿತ್ತು. ಬೈಕಂಪಾಡಿ ಶಾಲೆಯಲ್ಲಿದ್ದ ಮೂರು ಬೂತ್‌ನಲ್ಲಿ ಬೆಳಗ್ಗೆ 7 ಗಂಟೆಯಿಂದ ಮಧ್ಯಾಹ್ನ 11 ಗಂಟೆಯವರೆಗೆ ಬೂತ್ ಸಂಖ್ಯೆ 69ರಲ್ಲಿ 876 ಮತದಾರರಲ್ಲಿ 108 ಮಂದಿ, ಬೂತ್ 71ರಲ್ಲಿ 882 ಮತದಾರರಲ್ಲಿ 200 ಮಂದಿ ಮತ್ತು 72ನೇ ಬೂತ್‌ನಲ್ಲಿ 529 ಮತದಾರರ ಪೈಕಿ 154 ಮಂದಿ ಮಾತ್ರ ಮತ ಚಲಾಯಿಸಿದ್ದರು. ಇದೇ ವಾರ್ಡ್‌ನ 70ನೇ ಬೂತ್‌ನಲ್ಲಿಯೂ ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಮತದಾನ ನೀರಸವಾಗಿತ್ತು ಎನ್ನುವ ಅಭಿಪ್ರಾಯವನ್ನು ಅಲ್ಲಿನ ಮತಗಟ್ಟೆ ಅಧಿಕಾರಿ ವ್ಯಕ್ತಪಡಿ ಸಿದರು. ಮಧ್ಯಾÖ °ದವರೆಗೆ 70ನೇ ಬೂತ್‌ನಲ್ಲಿ ಒಟ್ಟು 1,311 ಮಂದಿ ಮತದಾರ ಪೈಕಿ 469 ಮಂದಿ ಮತದಾರರು ಮತ ಚಲಾಯಿಸಿದ್ದರು. ಬಹುತೇಕ ಎಲ್ಲ ಮತದಾನ ಕೇಂದ್ರಗಳಲ್ಲಿಯೂ ಕುಡಿ ಯುವ ನೀರಿನ ವ್ಯವಸ್ಥೆ ಸಮರ್ಪಕವಾಗಿತ್ತು.
ಮತದಾನ ಚುರುಕಾಗಿಲ್ಲ
ಇಡ್ಯಾ ಪಶ್ಚಿಮ ವಾರ್ಡ್‌ನ ಹೊಸಬೆಟ್ಟು ಶಾಲೆ ಬೂತ್‌ಗೆ ಭೇಟಿ ನೀಡಿದಾಗ ಮತಗಟ್ಟೆ ಅಧಿಕಾರಿ ಮೀನಾಕ್ಷಿ ಅವರು ಸುದಿನಕ್ಕೆ ಪ್ರತಿಕ್ರಿಯಿಸಿ “ಈ ಶಾಲೆಯಲ್ಲಿ ಒಟ್ಟು 3 ಬೂತ್‌ಗಳಿದ್ದು, ಬೆಳಗ್ಗೆಯಿಂದ ಮಧ್ಯಾಹ್ನದವರೆಗೆ ಮತದಾನ ಅಷ್ಟೇನು ಚುರುಕಿನಿಂದ ಕೂಡಿರಲಿಲ್ಲ. ಮಧ್ಯಾಹ್ನ 12 ಗಂಟೆ ವೇಳೆಗೆ 51ನೇ ಬೂತ್‌ನಲ್ಲಿ 1332 ಮಂದಿ ಮತದಾರರಲ್ಲಿ 543, 57ನೇ ಬೂತ್‌ನಲ್ಲಿ 1,279 ಮತದಾರರಲ್ಲಿ 411 ಮತ್ತು 52ನೇ ಬೂತ್‌ನಲ್ಲಿ 1,139 ಮಂದಿ ಮತದಾರರಲ್ಲಿ 379 ಮಂದಿ ಮತದಾರರು ಮತಚಲಾಯಿಸಿದ್ದರು’ ಎಂದಿದ್ದಾರೆ. ಸೂಕ್ಷ್ಮ ಮತಗಟ್ಟೆಯಲ್ಲಿ ಕಾಟಿಪಳ್ಳ ಉತ್ತರ ವಾರ್ಡ್ ನಲ್ಲಿ 12ರಿಂದ 16ರ ವರೆಗಿನ ಬೂತ್ ಇದ್ದು, ಹೊರಗಡೆ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿತ್ತು¤. ಜತೆಗೆ ಯಾವುದೇ ಅಹಿತಕರ ಘಟನೆ ನಡೆಯದಂತೆ ರ್ಯಾಪಿಡ್ ಆ್ಯಕ್ಷನ್ ಫೋರ್ಸ್ ತಂಡ ಕಾವಲು ಕಾಯುತ್ತಿತ್ತು. ಅನುಮಾನಾಸ್ಪದವಾಗಿ ಓಡಾಡುತ್ತಿದ್ದವರನ್ನು ತಪಾಸಣೆ ನಡೆಸುತ್ತಿದ್ದರು.
ರ್ಯಾಪಿಡ್ ಆ್ಯಕ್ಷನ್ ಫೋರ್ಸ್ ಕಾವಲು
ಕಾಟಿಪಳ್ಳ 2ನೇ ಬ್ಲಾಕ್ ಸಂಶುದ್ದೀನ್ ವೃತ್ತ ಬಳಿ ಸೋಮವಾರ ರಾತ್ರಿ ಎರಡು ಗುಂಪಿನ ನಡುವೆ ಮಾತಿನ ಚಕಮಕಿ ನಡೆದಿತ್ತು. ಇದೇ ವೇಳೆ ಗುಂಪು ಚದುರಿಸಲು ಪೊಲೀಸರು ಲಘು ಲಾಠಿ ಪ್ರಹಾರ ನಡೆಸಿದ್ದರು. ಕಾಟಿಪಳ್ಳ ಉತ್ತರ ವಾರ್ಡ್ ನಲ್ಲಿ ರ್ಯಾಪಿಡ್ ಆ್ಯಕ್ಷನ್ ಫೋàರ್ಸ್ ಸೇರಿದಂತೆ ಬಿಗಿ ಪೊಲೀಸ್ ಬಂದೋಬಸ್ತ್ ಆಯೋಜಿಸಲಾಗಿತ್ತು.
ಮತಗಟ್ಟೆಗಳಲ್ಲಿ ನೀರಿನ ವ್ಯವಸ್ಥೆ
ನಗರದಲ್ಲಿ ಮಂಗಳವಾರ ಬಿಸಿಲಿನ ತಾಪ ಹೆಚ್ಚಿತ್ತು. ಇದರಿಂದ ರಕ್ಷಣೆ ಪಡೆಯಲು ನೆರವಾಗುವಂತೆ ಮತದಾನ ಕೇಂದ್ರ ಹೊರಗಡೆ ಶಾಮಿಯಾನ ಅಳವಡಿಕೆ ಮಾಡಲಾಗಿತ್ತು. ಕುಡಿಯುವ ನೀರಿನ ವ್ಯವಸ್ಥೆ ಇತ್ತು. ಪಕ್ಷಗಳ ಬೂತ್‌ಗಳಲ್ಲಿಯೂ ನೀರು, ಚಹಾ ಇಟ್ಟಿದ್ದು ಕಂಡು ಬಂತು.
ಸೆಕೆಯ ಕಿರಿಕಿರಿ
ನಗರದಲ್ಲಿ ಮಂಗಳವಾರ ಗರಿಷ್ಠ ಉಷ್ಣಾಂಶ ಮಧ್ಯಾಹ್ನ ವೇಳೆ 34 ಡಿ.ಸೆ.ನಷ್ಟಿತ್ತು. ಇದರಿಂದಾಗಿ ಮತದಾರರು ಸೆಕೆಯ ಕಿರಿ ಕಿರಿ ಅನುಭವಿಸಿದರು. ಹೆಚ್ಚಿನ ಮತಗಟ್ಟೆಗಳಲ್ಲಿ ಕುಡಿಯುವ ನೀರಿನ ವ್ಯವಸ್ಥೆ ಮಾಡಲಾಗಿತ್ತು. ಇನ್ನು, ಕೆಲವರು ತಂಪು ಪಾನೀಯ, ಐಸ್ ಕ್ರೀಂ ಮೊರೆ ಹೋಗುತ್ತಿದ್ದರು.
- ನವೀನ್ ಭಟ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.