ಮಂಗಳೂರು ಪಾಲಿಕೆ ಚುನಾವಣೆ: ಶೇ. 59.67 ಮತದಾನ
Team Udayavani, Nov 13, 2019, 5:00 AM IST
ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆಯ ಒಟ್ಟು 60 ವಾರ್ಡ್‌ಗಳಿಗೆ ಮಂಗಳವಾರದ ಚುನಾವಣೆಯಲ್ಲಿ ಶೇ. 59.67 ಮತದಾನವಾಗಿದೆ. ಚುನಾವಣೆ ಶಾಂತಿಯುತವಾಗಿತ್ತು.
ಒಟ್ಟು 3,94,894 ಮತದಾರರಲ್ಲಿ 1,13,084 ಪುರುಷರು, ಮತ್ತು 1,22,527 ಮಹಿಳೆಯರು ಸೇರಿ ಒಟ್ಟು 2,35,628 ಮಂದಿ ಮತ ಚಲಾಯಿಸಿದ್ದಾರೆ.ಮಂಗಳವಾರ ಬೆಳಗ್ಗೆ 7 ಗಂಟೆಗೆ ಮತದಾನ ಆರಂಭವಾಗಿದ್ದು, ಬಹುತೇಕ ಕೇಂದ್ರಗಳಲ್ಲಿ ಮಂದಗತಿಯಲ್ಲಿತ್ತು. ಮಧ್ಯಾಹ್ನದ ವೇಳೆಗೆ ಶೇ. 39ರಷ್ಟು ಮತದಾನ ನಡೆದಿತ್ತು. ಕಳೆದ ಅವಧಿಗೆ ಹೋಲಿಸಿದರೆ ಈ ಬಾರಿ ಮತದಾನ ಪ್ರಮಾಣ ಕಡಿಮೆಯಿತ್ತು. 2013ರ ಮಾ. 7ರಂದು ಶೇ. 63.29ರಷ್ಟು ಮತದಾನವಾಗಿತ್ತು.
ಗುರುವಾರ ಮತ ಎಣಿಕೆ
ಮತಯಂತ್ರಗಳನ್ನು ನಗರದ ಸ್ಟೇಟ್ ಬ್ಯಾಂಕ್ ರೊಸಾರಿಯೋ ಹೈಸ್ಕೂಲ್‌ನಲ್ಲಿರುವ ಡಿಮಸ್ಟರಿಂಗ್ ಕೇಂದ್ರದ ಸ್ಟ್ರಾಂಗ್‌ರೂಂನಲ್ಲಿಡಲಾಗಿದೆ. ನ.14ರ ಬೆಳಗ್ಗೆ 8 ಗಂಟೆಗೆ ಮತ ಎಣಿಕೆ ಕಾರ್ಯ ಆರಂಭಗೊಳ್ಳಲಿದ್ದು, ಮಧ್ಯಾಹ್ನ 1 ಗಂಟೆಯ ವೇಳೆ ಪೂರ್ಣ ಫಲಿತಾಂಶ ಪ್ರಕಟಗೊಳ್ಳುವ ಸಾಧ್ಯತೆಗಳಿವೆ.
ಮತದಾನ ಪ್ರಮಾಣದಲ್ಲಿ ಕುಸಿತ
2018ರಲ್ಲಿ ಜರಗಿದ ವಿಧಾನಸಭೆ ಮತ್ತು 2019ರ ಎ. 18 ರಂದು ಜರಗಿದ ಲೋಕಸಭಾ ಚುನಾವಣೆಗಿಂತಲೂ ಕಡಿಮೆ ಪ್ರಮಾಣದ ಮತದಾನ ದಾಖಲಾಗಿದೆ. ಲೋಕಸಭಾ ಚುನಾವಣೆಯಲ್ಲಿ ಪಾಲಿಕೆ ವ್ಯಾಪ್ತಿಯನ್ನು ಪೂರ್ತಿಯಾಗಿ ಒಳಗೊಳ್ಳುವ ಮಂಗಳೂರು ವಿಧಾನಸಭಾ ಕ್ಷೇತ್ರದಲ್ಲಿ ಶೇ.70.71 ಮತದಾನ ಆಗಿತ್ತು. ಪಾಲಿಕೆಯ ಅರ್ಧಭಾಗವನ್ನು ಒಳಗೊಳ್ಳುವ ಮಂಗಳೂರು ಉತ್ತರ ಕ್ಷೇತ್ರದಲ್ಲಿ ಲೋಕಸಭಾ ಚುನಾವಣೆಯಲ್ಲಿ ಶೇ.75.31 ಮತದಾನವಾಗಿತ್ತು.
ಕಾಂಗ್ರೆಸ್‌ನಿಂದ 60, ಬಿಜೆಪಿಯಿಂದ 60, ಜೆಡಿಎಸ್ 12, ಸಿಪಿಎಂ 7, ಸಿಪಿಐ 1, ಎಸ್‌ಡಿಪಿಐ 6, ಜೆಡಿಯು 2, ಡಬ್ಲೂಪಿಐ 3, ಕರ್ನಾಟಕ ರಾಷ್ಟ್ರ ಸಮಿತಿ 2 ಹಾಗೂ ಪಕ್ಷೇತರರು 27 ಸೇರಿ ಒಟ್ಟು 180 ಅಭ್ಯರ್ಥಿಗಳು ಸ್ಪರ್ಧಾ ಕಣದಲ್ಲಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ
Commonwealth ಸಂಸದೀಯ ಸಭೆ; ಸ್ಪೀಕರ್ ಯು.ಟಿ. ಖಾದರ್ ಭಾಗಿ
Mangaluru: ಎಡನೀರು ಶ್ರೀಗಳ ಕಾರಿನ ಮೇಲೆ ದಾಳಿ ಖಂಡನೀಯ; ಪುಂಡರ ತಕ್ಷಣವೇ ಬಂಧಿಸಿ: ಕ್ಯಾ.ಚೌಟ
KSOU: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ; ಪ್ರವೇಶಾತಿ ಆರಂಭ
Ayushman Bharat; ಎಲ್ಲ ಖಾಸಗಿ ಆಸ್ಪತ್ರೆಗಳ ಸೇರ್ಪಡೆಗೆ ಸಂಸದರ ಸೂಚನೆ
MUST WATCH
ಹೊಸ ಸೇರ್ಪಡೆ
Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ
Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್ ಬರ್ಬರ ಹ*ತ್ಯೆ!
US Election 2024: ಟ್ರಂಪ್,ಕಮಲಾ ಮಧ್ಯೆ ತೀವ್ರ ಪೈಪೋಟಿ
Udupi: ಗೀತಾರ್ಥ ಚಿಂತನೆ-85: ಕಶ್ಮಲ-ಕಲ್ಮಶಗಳ ವ್ಯತ್ಯಾಸ
Mangaluru Airport: ಮಂಜು ಕವಿದ ವಾತಾವರಣ: ವಿಮಾನ ಯಾನದಲ್ಲಿ ವ್ಯತ್ಯಯ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.