ಮೋದಿ, ರಾಹುಲ್ ಮಂಗಳೂರಿಗೆ ಬಂದು ಹೋದ್ರಾ?!
Team Udayavani, May 6, 2018, 6:25 AM IST
ಮಂಗಳೂರು: “ಮೋದಿ, ರಾಹುಲ್ ಗಾಂಧಿ ಪ್ರಚಾರಕ್ಕೆ ಮಂಗಳೂರಿಗೆ ಬಂದಿದ್ರಾ? ನಮಗಂತೂ ಏನೂ ಗೊತ್ತಾಗಲ್ಲ. ಮನೆಗೆ ವಿದ್ಯುತ್ ಸಂಪರ್ಕವಿಲ್ಲ. ಇನ್ನು ಟಿವಿ ಹೇಗೆ ನೋಡಲಿ? ನಮ್ಮದು ಟಾರ್ಪಾಲ್ ಹಾಕಿದ ಜೋಪಡಿ. ಮಳೆ ಬಂದರೆ ನೀರು ಮನೆಯೊಳಗೆ ನುಗ್ಗುತ್ತದೆ. ಇದನ್ನೆಲ್ಲ ಯಾರಲ್ಲಿ ಹೇಳಲಿ? ಚುನಾವಣೆ ಬಂದಾಗ ಮಾತ್ರ ಮತ ಕೇಳಿಕೊಂಡು ಬರುತ್ತಾರೆ’…
ಪಚ್ಚನಾಡಿ ಪ್ರದೇಶದಲ್ಲಿ ವಾಸಿಸುವ ಮಹಿಳೆ ಶೋಭಾ ಹೀಗೆ ಉದ್ಗರಿಸಿದರು. ಮಂಗಳೂರು ಉತ್ತರ ಕ್ಷೇತ್ರದ ಪಚ್ಚನಾಡಿ, ವಾಮಂಜೂರು, ಕುಡುಪು, ನೀರುಮಾರ್ಗ, ಉಳಾಯಿಬೆಟ್ಟು, ಗುರುಪುರ, ಅಡೂxರು ಪ್ರದೇಶಗಳಲ್ಲಿ ಚುನಾವಣೆ ವಾತಾವರಣ ತಿಳಿಯಲು ಉದಯವಾಣಿ ತಂಡ ಸುತ್ತಾಡಿದಾಗ ಎದುರಾದವರು ಶೋಭಾ.
ಪಚ್ಚನಾಡಿ ನಗರದ ತ್ಯಾಜ್ಯ ಸುರಿಯುವ ಜಾಗ. ಇಲ್ಲಿ ಕಸ ವಿಲೇವಾರಿ ಸಮಸ್ಯೆಯೇ ಚುನಾವಣೆಯಲ್ಲಿ ಪರ-ವಿರೋಧಕ್ಕೆ ಅಸ್ತ್ರ ಕೂಡ ಆಗಿದೆ. ತ್ಯಾಜ್ಯ ವಿಲೇವಾರಿ ಘಟಕದಿಂದ ಗಬ್ಬುನಾತ ಬಾರದಂತೆ ಕ್ರಮ ಕೈಗೊಳ್ಳುವುದಾಗಿ ಮತ ಕೇಳಲು ಬರುವ ಪ್ರತೀ ಪಕ್ಷದವರು ಈ ಭಾಗದ ಜನರಿಗೆ ಭರವಸೆ ಕೊಟ್ಟು ಹೋಗುತ್ತಿದ್ದಾರೆ. ಡಂಪಿಂಗ್ ಯಾರ್ಡ್ ಸ್ಥಳಾಂತರ ಮಾಡುವುದಾಗಿ ಕಳೆದ ಬಾರಿ ಭರವಸೆ ನೀಡಲಾಗಿತ್ತು, ಆಗಿಲ್ಲ ಎನ್ನುತ್ತಾರೆ ಸ್ಥಳೀಯರು. ಕೆಲವು ಪಕ್ಷಗಳ ಕಾರ್ಯಕರ್ತರಷ್ಟೇ ಒಂದಷ್ಟು ಮನೆಗಳಿಗೆ ಬಂದು ಹೋಗಿದ್ದಾರಂತೆ.
ನಮ್ಮ ಸಮಸ್ಯೆ ನಮಗೆ
ವಾಮಂಜೂರಿನ ಕಡೆ ಮುಖ ಮಾಡಿದಾಗ ಬಸ್ ನಿಲ್ದಾಣದಲ್ಲಿ ಕುಳಿತಿದ್ದ ಲಿಗೋರಿ ಅವರನ್ನು ಮಾತನಾಡಿಸಿದೆವು. ಅವರು 81ರ ಹಿರಿಯರು. “ಮೋದಿ, ರಾಹುಲ್ ಗಾಂಧಿ ಪ್ರಚಾರ ಈ ಬಾರಿ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಬಹುದಾ?’ ಎಂದು ಕೇಳಿದರೆ, “ಅಯ್ಯೋ ಅದೇನು ಕೇಳ್ತೀರಿ. ನಮಗೆ ಸೀಮೆ ಎಣ್ಣೆ, ರೇಷನ್ ಸರಿಯಾಗಿ ಸಿಗುತ್ತಿಲ್ಲ. ಕೇಳಿದ್ರೆ ಯಾರ್ಯಾರ ಮೇಲೆ ದೂರು ಹಾಕ್ತಾರೆ’ ಎಂದರು.
ಬೇಸತ್ತಿರುವ ಜನತೆ
ಉಳಾಯಿಬೆಟ್ಟು ಪರಿಸರದಲ್ಲಿ ವಿವಿಧ ಪಕ್ಷಗಳ ನಾಯಕರು ಪ್ರಚಾರದಲ್ಲಿ ತೊಡಗಿರುವುದು ಕಾಣಿಸಿತು. ಆದರೆ ಇಲ್ಲಿನ ಜನರು ರಾಜಕೀಯ ಆರೋಪ- ಪ್ರತ್ಯಾರೋಪಗಳಿಂದ ಬೇಸತ್ತಿದ್ದಾರೆ. ಚಾಲಕರೊಬ್ಬರು ಹೇಳಿದರು, “ಓಟಿಗೋಸ್ಕರ ನಮ್ಮ ಕಾಲು ಹಿಡಿಯಲೂ ನಾಯಕರು ಸಿದ್ಧªರಿದ್ದಾರೆ. ಗೆದ್ದ ಬಳಿಕ ಅದೇ ಕಾಲಿನಲ್ಲಿ ನಮ್ಮನ್ನು ತುಳಿಯುತ್ತಾರೆ. ಪಕ್ಷ ಬದಲಾದರೂ ಕಾರ್ಯಕರ್ತರು ಬದಲಾಗುವುದಿಲ್ಲ.’
ವೋಟು ಬಂದಾಗ ಸೇತುವೆಯ ನೆನಪು
ನಮ್ಮ ಮುಂದಿನ ಪಯಣ ಗುರುಪುರಕ್ಕೆ. ಇಲ್ಲಿ ಮಂಗಳೂರು- ಮೂಡಬಿದಿರೆ ರಸ್ತೆ ಸಂಪರ್ಕಿಸುವ ಸೇತುವೆಯದ್ದೇ ದೊಡ್ಡ ಸಮಸ್ಯೆ. ಓಟು ಬಂದಾಗ ಅಭ್ಯರ್ಥಿಗಳಿಗೆ ಸೇತುವೆ ನೆನಪಾಗುತ್ತದೆ. ರಸ್ತೆ ಕಿರಿದಾಗಿದೆ, ಅಗಲ ಮಾಡಿ ಎಂದು ಎಷ್ಟೇ ಮನವಿ ನೀಡಿದರೂ ಆಗಲಿಲ್ಲ ಎಂದರು ಸ್ಥಳೀಯರು. ಕುಡುಪು, ನೀರುಮಾರ್ಗ, ಅಡೂxರು ಪರಿಸರದಲ್ಲಿ ರಾಜಕೀಯ ಪಕ್ಷದ ಕಾರ್ಯಕರ್ತರು ಮನೆ ಮನೆ ಪ್ರಚಾರ ಮಾಡುತ್ತಿದ್ದ ದೃಶ್ಯ ಕಂಡುಬಂತು. ಈ ವೇಳೆ ಕಾರ್ಯಕರ್ತರ ಬಳಿ ಸ್ಥಳೀಯರು ಆ ಭಾಗದ ನೀರು, ಕಸದ ಸಮಸ್ಯೆಯನ್ನು ಹೇಳಿಕೊಳ್ಳುತ್ತಿದ್ದರು.
ಸಾಮಾನ್ಯ ಮಂದಿಗೆ 60 ವರ್ಷದ ಬಳಿಕ ದುಡಿಯಲು ಅವಕಾಶವಿಲ್ಲ. ಆದರೆ ರಾಜಕಾರಣಿಗಳು ಎಷ್ಟೇ ವಯಸ್ಸಾದರೂ ಸ್ಪರ್ಧಿಸಬಹುದು; ಇದು ಯಾವ ನ್ಯಾಯ ಸ್ವಾಮಿ?
– ರಿಕ್ಷಾ ಚಾಲಕ, ಉಳಾಯಿಬೆಟ್ಟು
ನಾಯಕರ ಭಾಷಣ ಕೇಳಿ ಯಾರೂ ಓಟು ಹಾಕುವುದಿಲ್ಲ. ಏನಿದ್ದರೂ ಮನಸ್ಸಿನಿಂದ ಪಕ್ಷ-ಜನ ನೋಡುತ್ತಾರೆ.
– ಲಿಗೊರಿ, ವಾಮಂಜೂರು
– ನವೀನ್ ಭಟ್ ಇಳಂತಿಲ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಡಿಜಿಟಲ್ ಅರೆಸ್ಟ್, ಷೇರು ಮಾರುಕಟ್ಟೆ ಹೂಡಿಕೆ ವಂಚನೆ ಪ್ರಕರಣ; ಮೂವರ ಬಂಧನ
ವಿಡಿಯೋ | Mangaluru; ಕದ್ರಿ ಪೊಲೀಸ್ ಠಾಣೆ ಬಳಿ ಇದ್ದಕ್ಕಿದ್ದಂತೆ ಹೊತ್ತಿ ಉರಿದ ಕಾರು
Hampanakatte: ಗುಟ್ಕಾ ಉಗುಳುವವರು, ಧೂಮಪಾನಿಗಳ ಹಾವಳಿ
Mangaluru: ತೆರೆದ ತೋಡಿನಲ್ಲಿ ಕೊಳಚೆ ನೀರು ಹರಿಯುವುದು ನಿಂತಿಲ್ಲ
Mangaluru: ಪಂಪ್‌ವೆಲ್-ಪಡೀಲ್ ನಡುವಿನ ಚತುಷ್ಪಥ ಕಾಮಗಾರಿ 3 ವರ್ಷ ಕಳೆದರೂ ಅಪೂರ್ಣ
MUST WATCH
ಹೊಸ ಸೇರ್ಪಡೆ
Bhairathi Ranagal Review: ರೋಣಾಪುರದ ರಣಬೇಟೆಗಾರ
Baby Boy: ಎರಡನೇ ಮಗುವಿಗೆ ತಂದೆಯಾದ ಖುಷಿಯಲ್ಲಿ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ
Waqf Notice: ಬಸನಗೌಡ ಪಾಟೀಲ್ ಯತ್ನಾಳ್ ತಂಡದಿಂದ 1 ತಿಂಗಳು ಜನ ಜಾಗೃತಿ
Waqf Issue: ಕಾಂಗ್ರೆಸ್ ಸರಕಾರದ ವಿರುದ್ಧ ಬಿಜೆಪಿಯಿಂದ “ನಮ್ಮ ಭೂಮಿ ನಮ್ಮ ಹಕ್ಕು” ಹೋರಾಟ
Employees: 70 ಗಂಟೆ ಕೆಲಸ ಹೇಳಿಕೆಗೆ ಸದಾ ಬದ್ಧ: ಇನ್ಫಿ ನಾರಾಯಣ ಮೂರ್ತಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.