ಮಂಗಳೂರು ಫಿಸಿಯೋಕಾನ್ 2018
Team Udayavani, Jan 15, 2018, 10:33 AM IST
ಮಹಾನಗರ: ಜಿಲ್ಲಾ ಫಿಸಿಯೋಥೆರಪಿ ಶಿಕ್ಷಕರ ಸಂಘದ ಸಹಯೋಗದೊಂದಿಗೆ ನಗರದ ವಿಕಾಸ್ ಕಾಲೇಜ್ ಆಫ್ ಫಿಸಿಯೋಥೆರಪಿ ಆಶ್ರಯದಲ್ಲಿ ಮಂಗಳೂರು ಫಿಸಿಯೋಕಾನ್ 2018 ಇದರ ಉದ್ಘಾಟನ ಕಾರ್ಯಕ್ರಮ ಇತ್ತೀ ಚೆ ಗೆ ವಿಕಾಸ್ ಕಾಲೇಜಿನಲ್ಲಿ ಜರಗಿತು.
ಮ್ಯಾನುವಲ್ ಥೆರಪಿ ಫೌಂಡೇಶನ್ ಆಫ್ ಇಂಡಿಯಾದ ಅಧ್ಯಕ್ಷ ಡಾ| ಉಮಾಶಂಕರ್ ಮೊಹಂತಿ ಮಾತನಾಡಿ, ಉದ್ಯೋಗವನ್ನು ಪ್ರೀತಿಸಿ, ವಿಕಾಸ್ ಅಂದ್ರೆ ಬೆಳವಣಿಗೆ. ರಕ್ತದಾನ ಶಿಬಿರ ಆಗುವ ಈ ಸಂದರ್ಭ ಬೆಳವಣಿಗೆಯ
ಸಂಕೇತ ಎಂದರು.
ಪುಣ್ಯದ ಕೆಲಸ
ವಿಕಾಸ್ ಸಮೂಹ ವಿದ್ಯಾಸಂಸ್ಥೆಯ ಮುಖ್ಯಸ್ಥ, ಮಾಜಿ ಸಚಿವ ಕೃಷ್ಣ ಜೆ. ಪಾಲೆಮಾರ್ ಅಧ್ಯಕ್ಷತೆ ವಹಿಸಿ ಮಾತನಾಡಿ, ರಕ್ತದಾನ ಪುಣ್ಯದ ಕೆಲಸ. ಮುಂದಿನ ದಿನಗಳಲ್ಲಿ ಇಂತಹ ಕೆಲಸ ಹೆಚ್ಚು ಹೆಚ್ಚು ಆಗಬೇಕು ಎಂದು ಶುಭಹಾರೈಸಿದರು.
ವೆನ್ಲಾಕ್ ಆಸ್ಪತ್ರೆಯ ಬ್ಲಿಡ್ ಬ್ಯಾಂಕ್ ಆಫೀಸರ್ ಡಾ| ಶರತ್ ಕುಮಾರ್ ರಕ್ತದ ಗುಂಪುಗಳ ಬಗ್ಗೆ ತಿಳಿಸಿದರು. ಕನಚ್ಚಾರ್ ಫಿಸಿಯೋಥೆರಪಿ ಕಾಲೇಜಿನ ಪ್ರಾಂಶುಪಾಲ ಡಾ| ಸುಹೈಲ್ ಕಾರ್ಯಕ್ರಮದ ಸಂಕ್ಷಿಪ್ತ ಮಾಹಿತಿ ಒದಗಿಸಿದರು.
ಆರ್ಗನೈಸಿಂಗ್ ಚೇರ್ಮ ನ್ ಡಾ| ಯು.ಟಿ. ಇಫ್ತಿಕರ್, ವೆನ್ಲಾಕ್ ಆಸ್ಪತ್ರೆಯ ಡಿಎಂಒ ಡಾ| ರಾಜೇಶ್ವರಿ, ವಿದ್ಯಾ ಸಂಸ್ಥೆಯ ಟ್ರಸ್ಟಿಗಳಾದ ಜೆ. ಕೊರಗಪ್ಪ, ಸೂರಜ್ ಕುಮಾರ್ ಕಲ್ಯ, ಸಂಚಾಲಕ ಡಾ| ಡಿ. ಶ್ರೀಪತಿ ರಾವ್, ಸಮನ್ವಯಾ
ಧಿಕಾರಿ ಪಾರ್ಥಸಾರಥಿ ಪಾಲೆಮಾರ್, ಪ್ರಾಂಶುಪಾಲ ಡಾ| ರಮೇಶ್ ಕೆ., ಪದವಿಪೂರ್ವ ಕಾಲೇಜಿನ ಪ್ರಾಂಶುಪಾಲ
ಪ್ರೊ| ಟಿ. ರಾಜಾರಾಮ್ ರಾವ್, ಡಾ| ದಿನೇಶ್ ನಾಯಕ್ ಉಪಸ್ಥಿತರಿದ್ದರು. ಉಪ ನ್ಯಾ ಸಕಿ ಐಶ್ವರ್ಯಾ ರಾವ್
ನಿರೂಪಿಸಿ, ಡಾ| ಶ್ರೀದೇವಿ ವಂದಿಸಿದರು. ರಕ್ತದಾನದ ಮಹತ್ವವನ್ನು ಬಿಂಬಿಸುವ ಮೂಕಾಭಿನಯ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.