ಬಸ್ ನಲ್ಲಿ ಕಿರುಕುಳ ಪೋಸ್ಟ್: ಆರೋಪಿಯ ಬಂಧನ, ಪೊಲೀಸರೆದುರೇ ಕಪಾಳ ಮೋಕ್ಷ ಮಾಡಿದ ಯುವತಿ
Team Udayavani, Jan 21, 2021, 3:19 PM IST
ಮಂಗಳೂರು: ಬಸ್ ನಲ್ಲಿ ಕುಳಿತಿದ್ದಾಗ ವ್ಯಕ್ತಿಯೋರ್ವ ಕಿರುಕುಳ ನೀಡಿದ ಬಗ್ಗೆ ಯುವತಿಯೊಬ್ಬರು ಇನ್ಸ್ಟಾಗ್ರಾಮ್ ಪೋಸ್ಟ್ ಹಾಕಿದ್ದು ಮಂಗಳೂರಿನಲ್ಲಿ ಕೆಲ ದಿನಗಳ ಹಿಂದೆ ವೈರಲ್ ಆಗಿತ್ತು. ಈ ಘಟನೆಗೆ ಸಂಬಂಧಿಸಿದಂತೆ ಮಂಗಳೂರು ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ.
ಕಾಸರಗೋಡು ನಿವಾಸಿ ಹುಸೇನ್ (41) ಬಂಧಿತ ಕಾಮುಕ. ಜನವರಿ 14 ರಂದು ಯುವತಿ ದೇರಳಕಟ್ಟೆಯಲ್ಲಿ ಖಾಸಗಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದಾಗ, ಆಕೆಯ ಪಕ್ಕದ ಸೀಟ್ ನಲ್ಲಿ ಕುಳಿತಿದ್ದ ಹುಸೇನ್ ಆಕೆಗೆ ಕಿರುಕುಳ ನೀಡಿದ್ದ.
ಪಕ್ಕದಲ್ಲಿ ಕುಳಿತು ಆರೋಪಿ ಹುಸೇನ್ ಯುವತಿಗೆ ದೈಹಿಕ ಕಿರುಕುಳ ನೀಡಿದ್ದ. ಇದಕ್ಕೆ ಯುವತಿ ವಿರೋಧ ವ್ಯಕ್ತಪಡಿಸಿದ ಮೇಲೆ ಬಸ್ ನಿಂದ ಇಳಿದಿದ್ದ. ನಂತರ ಮತ್ತೊಂದು ಬಸ್ ನಲ್ಲಿ ಯುವತಿಯನ್ನು ಹಿಂಬಾಲಿಸಿಕೊಂಡು ಬಂದು ಮತ್ತೆ ಕಿರುಕುಳ ನೀಡಿದ್ದ. ಈ ವೇಳೆ ಫೋಟೋ ತೆಗೆದು ವೈರಲ್ ಮಾಡೋದಾಗಿ ಯುವತಿ ಎಚ್ಚರಿಸಿದ್ದರೂ ಆತ ಚಾಳಿ ಬಿಟ್ಟಿರಲಿಲ್ಲ.
ಇದನ್ನೂ ಓದಿ:ಸ್ನೇಹಿತರಿಂದಲೇ ಯುವತಿಗೆ ಬ್ಲ್ಯಾಕ್‌ಮೇಲ್: ಮಾಂಗಲ್ಯ ಸರ ನೀಡಿದರೂ ಬಿಡದ ದುರುಳರು
ಯುವತಿ ಆತನ ಪೋಟೋ ತೆಗೆದಾಗ ಹುಸೇನ್ ಫೋಟೋ ಗೆ ನಿರ್ಲಜ್ಜೆಯಿಂದ ಪೋಸ್ ಕೊಟ್ಟಿದ್ದ. ಇದಾದ ಬಳಿಕವೂ ತನ್ನ ಅನುಚಿತ ವರ್ತನೆ ಮುಂದುವರಿಸಿದ್ದ. ಇತರ ಪ್ರಯಾಣಿಕರ ಎದುರೇ ಆರೋಪಿಯು ಯುವತಿಗೆ ಕಿರುಕುಳ ನೀಡಿದರೂ ಯಾರೂ ಆಕ್ಷೇಪ ವ್ಯಕ್ತಪಡಿಸಿರಲಿಲ್ಲ. ಯುವತಿ ಕಾಪಾಡುವಂತೆ ಅಂಗಲಾಚಿದರೂ ಬಸ್ ಡ್ರೈವರ್, ನಿರ್ವಾಹಕ ಸುಮ್ಮನಿದ್ದರು. ಇದರಿಂದ ಬೇಸತ್ತ ಯುವತಿ ಆರೋಪಿ ಹುಸೇನನ ಫೋಟೊವನ್ನು ಇನ್ಸ್ಟಾಗ್ರಾಮ್ ನಲ್ಲಿ ಹಾಕಿ ಆತನ ಕೃತ್ಯದ ಬಗ್ಗೆ ವಿವರಿಸಿದ್ದರು.
ಕೆಲವೇ ಗಂಟೆಯಲ್ಲಿ ಯುವತಿಯ ಪೋಸ್ಟ್ ವೈರಲ್ ಆಗಿತ್ತು. ಫೋಸ್ಟ್ ಆಧಾರದಲ್ಲಿ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಯುವತಿಯ ದಿಟ್ಟ ಕ್ರಮಕ್ಕೆ ಮಂಗಳೂರು ಕಮೀಷನರ್ ಶಶಿಕುಮಾರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.
ಇದನ್ನೂ ಓದಿ: ಬೆಂಗಳೂರಿನಿಂದ ಚಿನ್ನಾಭರಣ ಕದ್ದು ಪರಾರಿಯಾಗಿದ್ದ ನೇಪಾಳದ ಮಾಜಿ ಪೊಲೀಸ್ ಸಿಬ್ಬಂದಿ ಬಂಧನ
ಬಸ್ ಡ್ರೈವರ್ ಮತ್ತು ನಿರ್ವಾಹಕನಿಗೆ ಸಮನ್ಸ್ ನೀಡಿರುವ ಪೊಲಿಸರು ವಿಚಾರಣೆಗೆ ಒಳಪಡಿಸಿದ್ದಾರೆ.
ಕಪಾಳ ಮೋಕ್ಷ
ಆರೋಪಿಯ ಬಗ್ಗೆ ಮಾಹಿತಿ ನೀಡಲು ಪೊಲೀಸ್ ಕಮಿಷನರ್ ಇಂದು ಪತ್ರಿಕಾಗೋಷ್ಟಿ ಕರೆದಿದ್ದರು. ಈ ವೇಳೆ ಆರೋಪಿಯನ್ನೂ ಮಾಧ್ಯಮದವರ ಮುಂದೆ ಕರೆತಂದರು. ಅಲ್ಲಿಯೇ ಇದ್ದ ಯುವತಿ ಆರೋಪಿಯನ್ನು ಕಂಡೊಡನೆ ಪೊಲೀಸರ ಎದುರೇ ಆತನಿಗೆ ಕಪಾಳ ಮೋಕ್ಷ ಮಾಡಿದ ಘಟನೆ ನಡೆಯಿತು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Dinesh Gundu Rao: ಅನರ್ಹರ ಕಾರ್ಡ್ ರದ್ದು ತಪ್ಪಲ್ಲ, ಅರ್ಹರಿಗೆ ಅನ್ಯಾಯ ಆಗುವುದಿಲ್ಲ
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.