ಮಂಗಳೂರು ರೈಲ್ವೇ ಉಪವಿಭಾಗಕ್ಕೆ ಯತ್ನ: ಸಂಸದ ನಳಿನ್
Team Udayavani, Jun 30, 2019, 10:19 AM IST
ಮಂಗಳೂರು: ದಕ್ಷಿಣ ರೈಲ್ವೇ ವಲಯದ ವ್ಯಾಪ್ತಿಯಲ್ಲಿರುವ ಮಂಗಳೂರನ್ನು ಉಪ ವಿಭಾಗ (ಸಬ್ ಡಿವಿಜನ್) ಆಗಿಸಲು ಅವಕಾಶವಿದ್ದು, ಆ ನಿಟ್ಟಿನಲ್ಲಿ ಪ್ರಯತ್ನಿಸಲಾಗುವುದು. ಸಂಸತ್ತಿನ ಬಜೆಟ್ ಅಧಿವೇಶನ ಮುಗಿದ ಬಳಿಕ ರೈಲ್ವೇ ಸಚಿವರನ್ನು ಭೇಟಿಯಾಗಿ ಈ ಕುರಿತು ಚರ್ಚಿಸುವೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಮಂಗಳೂರಿನಲ್ಲಿ ತಲಪಾಡಿಯಿಂದ ತೋಕೂರು ವರೆಗಿನ ಕೇವಲ 13 ಕಿ.ಮೀ. ರೈಲು ಮಾರ್ಗ ಪಾಲಕ್ಕಾಡ್ ರೈಲ್ವೇ ವಿಭಾಗ ವ್ಯಾಪ್ತಿಗೆ ಬರುತ್ತದೆ. ಉಳಿದಂತೆ ಕೊಂಕಣ ರೈಲ್ವೇ ನಿಗಮ ಮತ್ತು ಎಚ್‌ಎಂಆರ್‌ಡಿಸಿ (ಹಾಸನ ಮಂಗಳೂರು ರೈಲ್ವೇ ಅಭಿವೃದ್ಧಿ ನಿಗಮ) ಅಧೀನದಲ್ಲಿದೆ. ಎರಡು ನಿಗಮಗಳ ವ್ಯಾಪ್ತಿಯ ರೈಲು ಮಾರ್ಗವನ್ನು ಪ್ರತ್ಯೇಕಿಸುವುದು ತಾಂತ್ರಿಕವಾಗಿ ಸುಲಭ ಸಾಧ್ಯವಲ್ಲ. ಮಾತ್ರವಲ್ಲ ಪಾಲಕ್ಕಾಡ್ ವಿಭಾಗದಲ್ಲಿರುವ ಕೇವಲ 13 ಕಿ.ಮೀ. ರೈಲು ಮಾರ್ಗವನ್ನು ಪ್ರತ್ಯೇಕಿಸಿ ಅದಕ್ಕಾಗಿಯೇ ಒಂದು ವಿಭಾಗ ರಚನೆ ಮಾಡುವುದು ಸಾಧುವಲ್ಲ. ಆದರೆ ಚೆನ್ನೈ ವಲಯದಡಿ ಸಬ್ ಡಿವಿಜನ್ ರಚಿಸಲು ಸಾಧ್ಯವಿದೆ. ಅದರಿಂದ ಕೆಲವು ಪ್ರಯೋಜನಗಳು ಮಂಗಳೂರಿಗೆ ಲಭಿಸಲಿವೆ. ಹಾಗಾಗಿ ಸಬ್ ಡಿವಿಜನ್‌ಗೆ ಪ್ರಯತ್ನಿಸಬಹುದು ಎಂದು ವಿವರಿಸಿದರು.
ಮಂಗಳೂರು ಸಬ್ ಡಿವಿಜನ್ ಸ್ಥಾಪನೆಯಾದರೆ ಈ ಭಾಗದ ರೈಲ್ವೇಗೆ ಸಂಬಂಧಿಸಿದ ಕೆಲವು ಮಂಜೂರಾತಿಗಳನ್ನು ಇಲ್ಲಿಯೇ ಮಾಡಿಸಿ ಕೊಳ್ಳಬಹುದು ಎಂದರು.
ಅಡಿಕೆ ಆಮದು ಸ್ಥಗಿತಕ್ಕೆ ಮನವಿ
ಅಡಿಕೆ ಆಮದು ಸುಂಕ ಹೆಚ್ಚಳ ಮಾಡುವ ಮೂಲಕ ಭಾರತಕ್ಕೆ ವಿದೇಶಗಳಿಂದ ಅಡಿಕೆ ಆಮದು ಸಂಪೂರ್ಣವಾಗಿ ನಿಲ್ಲಿಸುವಂತೆ ತಾನು, ಉಡುಪಿ ಸಂಸದೆ ಶೋಭಾ ಕರಂದ್ಲಾಜೆ, ಕೊಡಗು-ಮೈಸೂರು ಸಂಸದ ಪ್ರತಾಪಸಿಂಹ ಅವರನ್ನು ಒಳಗೊಂಡ ನಿಯೋಗ ಇತ್ತೀಚೆಗೆ ಕೇಂದ್ರ ವಿತ್ತ ಖಾತೆ ಸಚಿವೆ ನಿರ್ಮಲಾ ಸೀತಾರಾಮನ್ ಅವರನ್ನು ಭೇಟಿ ಮಾಡಿ ಮನವಿ ಸಲ್ಲಿಸಿದ್ದೇವೆ ಎಂದು ನಳಿನ್ ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mulki: ತಲೆಮರೆಸಿಕೊಂಡಿದ್ದ ಆರೋಪಿ ಸೆರೆ
Mangaluru: ಎಸ್‌ಟಿಪಿಗಳಲ್ಲಿ ಸಂಸ್ಕರಣೆ ಆಗದೆ ಕೊಳಚೆ ನೀರು ನೇರ ನದಿ, ಕೆರೆಗೆ!
Bajpe ಪ.ಪಂ.ನಿಂದ ಕುಡಿಯುವ ನೀರು ಪೂರೈಕೆಗೆ ಹೊಸ ಚಿಂತನೆ; ಹೊಸ ಬೋರ್‌ವೆಲ್‌ಗೆ ಸೌರ ಪಂಪ್
Mannagudda: ಗಡ್ಡೆ ಗೆಣಸು ಸೊಪ್ಪುಗಳಿಗೆ ರಾಜ ಮರ್ಯಾದೆ!
ಉಮ್ರಾ ಯಾತ್ರೆಗೆ ತೆರಳಿ ವಂಚನೆ : ಸಂತ್ರಸ್ತರನ್ನು ಊರಿಗೆ ಕರೆಸಿಕೊಂಡ ಮೊಯ್ದಿನ್ ಬಾವ
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.