ಮಂಗಳೂರು ಅಭಿವೃದ್ಧಿ ಮಹಾಸಂಕಲ್ಪ: ನಳಿನ್ ಕುಮಾರ್ ಕಟೀಲು
ಮಂಗಳೂರು: ಸ್ಮಾರ್ಟ್‌ಸಿಟಿಯ ವಿವಿಧ ಯೋಜನೆ ಲೋಕಾರ್ಪಣೆ
Team Udayavani, Feb 28, 2022, 6:15 AM IST
ಮಂಗಳೂರು: ದೇಶದ ನಗರಗಳನ್ನು ಸ್ಮಾರ್ಟ್‌ರೂಪದಲ್ಲಿ ಅಭಿವೃದ್ಧಿಪಡಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರ ಕನಸಿನ ಸ್ಮಾರ್ಟ್‌ಸಿಟಿ ಯೋಜನೆಯು ಮಂಗಳೂರಿನ ಅಭಿವೃದ್ಧಿಯ ಚಿತ್ರಣಕ್ಕೆ ಹೊಸ ಭಾಷ್ಯ ಬರೆಯಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲು ಹೇಳಿದರು.
ಸ್ಮಾರ್ಟ್‌ಸಿಟಿ ಯೋಜನೆಯಡಿ 3.75 ಕೋ.ರೂ. ವೆಚ್ಚದಲ್ಲಿ ಮಂಗಳೂ ರಿನ ಪುರಾತನ ಗುಜ್ಜರಕೆರೆ ಪುನಶ್ಚೇತನ ಹಾಗೂ ಅಭಿವೃದ್ಧಿ ಯೋಜನೆಯನ್ನು ರವಿವಾರ ಉದ್ಘಾಟಿಸಿ ಅವರು ಮಾತ ನಾಡಿದರು. ಇದಕ್ಕೂ ಮುನ್ನ ಸೆಂಟ್ರಲ್ ಮಾರುಕಟ್ಟೆ ಸುತ್ತಮುತ್ತ ಹಾಗೂ ಶ್ರೀ ಮಂಗಳಾದೇವಿ ರಸ್ತೆ ಉದ್ಘಾಟನೆ ನೆರವೇರಿಸಿದರು.
ಮಂಗಳೂರಿನಲ್ಲಿ ಹತ್ತಾರು ಬಗೆಯ ಕಾರ್ಯಗಳು ಇದೀಗ ಸ್ಮಾರ್ಟ್ ಸಿಟಿಯ ಮೂಲಕ ನಡೆ ಯು ತ್ತಿವೆ. ಈ ಮೂಲಕ ಮುಂದಿನ ಕೆಲವೇ ವರ್ಷದಲ್ಲಿ ಅಭಿವೃದ್ಧಿಯಲ್ಲಿ ಮಂಗಳೂರಿನ ಚಿತ್ರಣ ರಾಜ್ಯಕ್ಕೆ ಮಾದರಿಯಾಗಲಿದೆ. ಒಂದೊಮ್ಮೆ ಗುಜ್ಜರಕೆರೆ ದುಸ್ಥಿತಿಯ ರೂಪದಲ್ಲಿತ್ತು. ಆದರೆ ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಇದೀಗ ಗುಜ್ಜರಕೆರೆ ಶ್ರೀರಂಗಪಟ್ಟಣದ ಕೆಆರ್‌ಎಸ್ ಮಾದರಿಯಲ್ಲಿ ಬೆಳಗುತ್ತಿದೆ ಎಂದರು.
ಗುಜ್ಜರಕೆರೆ ಪ್ರವಾಸಿ ತಾಣ: ಕಾಮತ್
ಅಧ್ಯಕ್ಷತೆ ವಹಿಸಿದ ಶಾಸಕ ಡಿ. ವೇದವ್ಯಾಸ್ ಕಾಮತ್ ಮಾತನಾಡಿ, ಬಿಜೆಪಿ ಸರಕಾರ ಅಧಿಕಾರಕ್ಕೆ ಬಂದ ಮೇಲೆ ಮಂಗಳೂರು ದಕ್ಷಿಣ ಕ್ಷೇತ್ರಕ್ಕೆ ವಿವಿಧ ಯೋಜನೆಯ ಮೂಲಕ ಸುಮಾರು 3 ಸಾವಿರ ಕೋ.ರೂ. ಅನುದಾನ ಬಿಡುಗಡೆಗೊಂಡಿದ್ದು, ಅಭಿವೃದ್ಧಿ ದೃಷ್ಟಿಯಲ್ಲಿ ಮಂಗಳೂರು ದಕ್ಷಿಣ ಕ್ಷೇತ್ರವು ರಾಜ್ಯದಲ್ಲಿಯೇ ಮುಂಚೂಣಿಯಲ್ಲಿದೆ. ಗುಜ್ಜರಕೆರೆ ಇಂದು ಮಂಗಳೂರಿನ ಪ್ರವಾಸಿ ತಾಣವಾಗಿ ಅಭಿವೃದ್ಧಿಗೊಂಡಿದೆ ಎಂದರು.
ಅಭಿವೃದ್ಧಿ ಸಂಕಲ್ಪ: ಮೇಯರ್
ಮೇಯರ್ ಪ್ರೇಮಾನಂದ ಶೆಟ್ಟಿ ಮಾತನಾಡಿ, ಮಂಗಳೂರಿನ ಅಭಿವೃದ್ಧಿಯಲ್ಲಿ ಸ್ಮಾರ್ಟ್‌ಸಿಟಿ ಯೋಜನೆಯ ಪಾಲು ಅಮೂಲ್ಯ. ನಗರ ಅಭಿವೃದ್ಧಿಯ ಮಹಾ ಸಂಕಲ್ಪ ಈಗ ಸಾಕಾರಗೊಳ್ಳುತ್ತಿದೆ ಎಂದರು.
ಮುಡಾ ಅಧ್ಯಕ್ಷ ರವಿಶಂಕರ ಮಿಜಾರು, ಮೀನುಗಾರಿಕಾ ಅಭಿವೃದ್ಧಿ ನಿಗಮದ ಅಧ್ಯಕ್ಷ ನಿತಿನ್ ಕುಮಾರ್, ಉಪಮೇಯರ್ ಸುಮಂಗಲಾ, ಸಚೇತಕ ಸುಧೀರ್ ಶೆಟ್ಟಿ, ಸದಸ್ಯೆ ಭಾನುಮತಿ, ಪ್ರಮುಖರಾದ ವಿಜಯ್ ಕುಮಾರ್, ಆಯುಕ್ತರಾದ ಅಕ್ಷಯ್ ಶ್ರೀಧರ್, ಸ್ಮಾರ್ಟ್‌ಸಿಟಿ ಎಂಡಿ ಪ್ರಶಾಂತ್ ಕುಮಾರ್ ಮಿಶ್ರಾ ಮುಂತಾದವರು ಉಪಸ್ಥಿತರಿದ್ದರು.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.