ಆಯೋಗದ ಕಟ್ಟುನಿಟ್ಟಿನಿಂದ ಅಭ್ಯರ್ಥಿ ಯಾರೆಂದೇ ತಿಳಿಯುತ್ತಿಲ್ಲ !


Team Udayavani, May 6, 2018, 6:10 AM IST

0505mlr6-kankanady.jpg

ಮಂಗಳೂರು: ಒಂದು ಕಡೆ ಸಂಜೆ ನಡೆಯುವ ಪ್ರಚಾರ ಸಭೆಗೆ ಕಾರ್ಯ ಕರ್ತರಿಂದ ಸಿದ್ಧತೆ; ಇನ್ನೊಂದು ಕಡೆ ಅಭ್ಯರ್ಥಿಯೊಬ್ಬರ ಪರವಾಗಿ ವಾಹನದಲ್ಲಿ ಪ್ರಚಾರ… ಇದು ಮಂಗಳೂರು ನಗರ ದಕ್ಷಿ ಣದ ಬಿಕರ್ನಕಟ್ಟೆ, ಮರೋಳಿ, ಪಡೀಲ್‌,ಪಂಪ್‌ವೆಲ್‌, ಕಂಕನಾಡಿ, ವೆಲೆನ್ಸಿಯಾ ಪ್ರದೇಶಗಳಲ್ಲಿ ಕ್ಷೇತ್ರ ಸಂಚಾರ ಸಮಾಚಾರ ಕಂಡ ದೃಶ್ಯ.
 
“ಉದಯವಾಣಿ’ಯ ನಮ್ಮ ತಂಡವು ಮೊದಲು ಹೋದದ್ದು ಜನವಾಸದ ಜತೆಗೆ ವಾಣಿಜ್ಯ ಚಟುವಟಿಕೆಗಳು ಬಹಳವಾಗಿರುವ ಬಿಕರ್ನಕಟ್ಟೆ ಹಾಗೂ ಸುತ್ತಲಿನ ಪ್ರದೇಶಗಳಿಗೆ. ಅಲ್ಲಿ ಪಕ್ಷವೊಂದರ ಬಹಿರಂಗ ಪ್ರಚಾರಕ್ಕೆ ಸಿದ್ಧತೆ ಕಾಣಿಸಿತು. “ಇವತ್ತಿನ ಸಭೆಯಲ್ಲಿ ನಮ್ಮ ಪಕ್ಷಕ್ಕೆ ಬೇರೆ ಪಕ್ಷದ ಕೆಲವರು ಸೇರ್ಪಡೆಗೊಳ್ಳುವವರಿದ್ದಾರೆ. ಅವರು ಬರುತ್ತೇನೆಂದು ಮೊನ್ನೆ ಹೇಳಿದ್ದರು. ಇವತ್ತು ಅವರೆಲ್ಲ ಸೇರ್ಪಡೆಯಾಗುತ್ತಾರಲ್ಲವೇ?’ ಎಂದು ಸಭೆ ಮೇಲುಸ್ತುವಾರಿ ವಹಿಸಿದ್ದ ಮುಖಂಡರೊಬ್ಬರು ಪಕ್ಕದಲ್ಲಿದ್ದ ಕಾರ್ಯ ಕರ್ತರಲ್ಲಿ ಆತಂಕದಿಂದ ವಿಚಾರಿಸುತ್ತಿರು ವುದು ಕೇಳಿಸಿತು. “ಅವರು ಬಾರದಿದ್ದರೆ ನಮ್ಮ ಕಥೆ ಕೈಲಾಸ. ಅವರನ್ನು ಕರೆತರುವ ಕೆಲಸ ಆಗಬೇಕು’ ಎಂದು ಕೆಲವರು ಸಲಹೆ ಮಾಡುತ್ತಿದ್ದರು. ಮುಂದೆ ಸಾಗಿದಾಗ ಮರೋಳಿಯಲ್ಲಿ ಇನ್ನೊಂದು ಪಕ್ಷದ ಅಭ್ಯರ್ಥಿಯ ಪರವಾಗಿ ಪ್ರಚಾರ ಮಾಡುತ್ತಿರುವ ವಾಹನ ರೊಯ್ಯನೆ ಸಾಗಿತು. ಪ್ರಚಾರದ ಕಾವು ಈ ಭಾಗದಲ್ಲಿ ಸ್ವಲ್ಪ ಹೆಚ್ಚೇ ಇರುವ ಅನುಭವಾಯಿತು. 

ಅಲ್ಲಿ ಇಲ್ಲಿ ಬಿಸಿ; ಕೆಲವೆಡೆ ತಣ್ಣನೆ
ಪಡೀಲ್‌ನ ಲ್ಲಿ ಚುನಾವಣೆ ವಾತಾವರಣ ಎಲ್ಲಿಯೂ ಕಾಣಿಸಲಿಲ್ಲ. ಅಂಗಡಿಯೊಂದರ ಬಳಿ ಹಿಂದಿನ ದಿನ ಸಂಜೆ ನಾಗುರಿಯಲ್ಲಿ ನಡೆದ ಒಂದು ಪಕ್ಷದ ಪ್ರಚಾರದ ಸಭೆಯ ಕುರಿತು ಮಾತುಕತೆ ನಡೆಯುತ್ತಿತ್ತು. ಪಡೀ ಲ್‌- ಬಜಾಲ್‌ ರಸ್ತೆಯ ಅಂಗಡಿ ಬಳಿ ತೆರಳಿ ಮಾತಿಗೆಳೆದಾಗ, “ಏರೆನ್‌ ಕೇಂಡಲಾ ಎಂಕ್ಲೇ ಬರ್ಪ . ಪಕ್ಷೇತೆರೆರೆನ್‌ ಕೇಂಡಲಾ ಅವೇ ಪಾತೆರ’ (ಯಾರನ್ನು ಕೇಳಿದರೂ ನಾವೇ ಗೆಲ್ಲುತ್ತೇವೆ ಎಂಬ ಮಾತು ಕೇಳಿಬರುತ್ತದೆ) ಎಂದರು. 

“ಹಿಂದಿನ ಕಾಲದಲ್ಲಿ ಚುನಾವಣೆ ಬಂದಾಗ ರಸ್ತೆ ಬದಿ, ಪ್ರಮುಖ ಜಂಕ್ಷನ್‌ಗಳಲ್ಲಿ ಅಭ್ಯರ್ಥಿಗಳ ಫೋಟೋಗಳು ರಾರಾ ಜಿಸುತ್ತಿದ್ದವು. ಈಗ ಅದಕ್ಕೆ ಅವಕಾಶ ವಿಲ್ಲ. ಚುನಾವಣಾ ಆಯೋಗದ ಈ ಕ್ರಮದಿಂದಾಗಿ ಬಹಳಷ್ಟು ಮಂದಿ ಮತದಾರರಿಗೆ ಚುನಾವಣೆ ಯಲ್ಲಿ ಸ್ಪರ್ಧಿ ಸುತ್ತಿರುವ ಅಭ್ಯರ್ಥಿಗಳು ಯಾರೆಂಬುದೇ ತಿಳಿದಿಲ್ಲ. ಹಿರಿ ವಯಸ್ಸಿನ ಅನೇಕ ಮಂದಿಗೆ ಈ ಸಮಸ್ಯೆ ಇದೆ. ತಮ್ಮ ಕ್ಷೇತ್ರದಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ ಬಗೆಗೆ ಕುಟುಂಬದ ಕಿರಿಯ ಸದಸ್ಯರಿಂದ ಅಥವಾ ಬೇರೆಯವರಿಂದ ಕೇಳಿ ತಿಳಿದು ಕೊಳ್ಳಬೇಕಾದ ಅನಿವಾರ್ಯತೆ ಇದೆ. ಚುನಾವಣ ಆಯೋಗ ಈ ವಿಷಯವನ್ನು ಪರಿಗಣನೆಗೆ ತೆಗೆದುಕೊಳ್ಳಬೇಕು’ ಎಂದು ಕಂಕನಾಡಿಯ ರೊನಾಲ್ಡ್‌ ಹೇಳಿದರು.

ಕಂಕನಾಡಿಯ ಪರಿಸರದಲ್ಲಿ ಸುತ್ತಾಡಿ ದಾಗ ಜನರು ತಮ್ಮ ದೈನಂದಿನ ಕೆಲಸ ಕಾರ್ಯಗಳಲ್ಲಿ ಮಗ್ನರಾಗಿ ಓಡಾಡು ತ್ತಿರುವುದು ಕಂಡು ಬಂತು ವಿನಾ ಚುನಾ ವಣೆಯ ಮಾತುಕತೆ ಎಲ್ಲಿಯೂ ಕೇಳಿಸಲಿಲ್ಲ. ಸ್ಥಳೀಯ ನಾಗೇಶ್‌ ಅವರನ್ನು ಮಾತನಾಡಿಸಿದಾಗ, “ಜನರಿಗೆ ಅಭಿವೃದ್ಧಿ ಕೆಲಸ ಬೇಕು. ಯಾರೂ ಗಲಾಟೆ ಬಯಸುವುದಿಲ್ಲ’ ಎಂದರು.

ಜಪ್ಪು ಪರಿಸರದಲ್ಲಿ ಚುನಾವಣೆಯ ವಾಸನೆ ಮೇಲ್ನೋಟಕ್ಕೆ ಕಂಡುಬಾರದಿದ್ದರೂ ಒಳಸುಳಿಯಾಗಿ ಹರಿಯುತ್ತಿರುವುದು ಜನರ ಮಾತಿನ ಮೂಲಕ ಅರಿವಿಗೆ ಬಂತು. ಅಭ್ಯರ್ಥಿಗಳ ಮನೆ ಭೇಟಿ ವಿಚಾರವೂ ಮತದಾರರ ಚರ್ಚೆಗೆ ವಸ್ತುವಾಗಿದೆ. 

ಸುತ್ತಾಟ: ಬಿಕರ್ನಕಟ್ಟೆ, ಪಡೀಲ್‌, ಪಂಪ್‌ವೆಲ್‌, ಎಕ್ಕೂರು,ಕಂಕನಾಡಿ, ವೆಲೆನ್ಸಿಯಾ, ಜಪ್ಪು

ಬೇಸಗೆ ರಜಾ ದಿನವಾದ ಕಾರಣ ಮನೆಯಲ್ಲಿ ಯಾರೂ ಇರುವುದಿಲ್ಲ. ಹೀಗಾಗಿ ಪ್ರಚಾರದ ಕರಪತ್ರಗಳನ್ನು ಆವರಣದಲ್ಲಿ ಎಸೆದು ಹೋಗುತ್ತಾರೆ, ಅಥವಾ ಪಕ್ಕದ ಮನೆಯವರ ಬಳಿ ಕೊಟ್ಟು ಹೋಗುತ್ತಾರೆ. ಹಾಗಾಗಿ ಕೆಲವೊಂದು ಬಾರಿ ಮನೆ ಮಂದಿಗೆ ಅಭ್ಯರ್ಥಿಗಳ ದರ್ಶನವೇ ಆಗುತ್ತಿಲ್ಲ.
– ಮಾರ್ಶಲ್‌, ಬಿಕರ್ನಕಟ್ಟೆ

ಈಗ ಜನರಲ್ಲಿ ಮತ ಚಲಾಯಿಸುವ ಉಮೇದು ಕಡಿಮೆಯಾಗಿದೆ. ಚುನಾವಣೆ ಬಂದಾಗ ನಮ್ಮ ಬಳಿಗೆ ಬಂದು ಓಟು ಕೊಡಿ ಎಂದು ಕಾಲು ಹಿಡಿಯುತ್ತಾರೆ; ಗೆದ್ದ ಮೇಲೆ ನಾವೇ ಅವರ ಕಾಲು ಹಿಡಿದರೂ ನಮ್ಮ ಕೆಲಸ ಮಾಡಿಸಿ ಕೊಡುವುದಿಲ್ಲ ಎಂಬುದೇ ಇದಕ್ಕೆ ಕಾರಣ.
-ಚೇತನ್‌, ಎಕ್ಕೂರು

– ಹಿಲರಿ ಕ್ರಾಸ್ತಾ 

ಟಾಪ್ ನ್ಯೂಸ್

Vijay Hazare Trophy; Abhinav Manohar’s brilliant century; Karnataka won easily against Arunchal Pradesh

Vijay Hazare Trophy; ಅಭಿನವ್‌ ಮನೋಹರ್‌ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ

Video: ಜನವರಿಯಲ್ಲಿ ಮದುವೆ ನಿಶ್ಚಯವಾಗಿದ್ದ ಯುವತಿ 70 ಅಡಿ ಎತ್ತರದ ಸೇತುವೆಯಿಂದ ಜಿಗಿದಳು

Video: 2 ವಾರದಲ್ಲಿ ಮದುವೆಯಾಗಬೇಕಿದ್ದ ಯುವತಿ 70 ಅಡಿ ಎತ್ತರದ ಸೇತುವೆಯಿಂದ ನದಿಗೆ ಜಿಗಿದಳು

New Year 2025: ಹೊಸ ವರುಷ, ಹೊಸ ಹರುಷ 2025: ಆಲೋಚನೆಗಳು ಹೊಸ ಹಾದಿ ಕಾಣಲಿ

New Year 2025: ಹೊಸ ವರುಷ, ಹೊಸ ಹರುಷ 2025: ಆಲೋಚನೆಗಳು ಹೊಸ ಹಾದಿ ಕಾಣಲಿ

Actress kashima is in Nee nange movie

Kashima; ನೀ ನಂಗೆ ಎಂದ ಕಾಶಿಮಾ…; ನಾಯಕಿ ಹೆಸರು ಘೋಷಣೆ

Hubli: ಮನೆ ದರೋಡೆಗೆ ಯತ್ನಿಸಿದ ದರೋಡಕೋರನ ಕಾಲಿಗೆ ಗುಂಡೇಟು

Hubli: ಮನೆ ದರೋಡೆಗೆ ಯತ್ನಿಸಿದ ದರೋಡಕೋರನ ಕಾಲಿಗೆ ಗುಂಡೇಟು

11-2

Belthangady: ಶಾಲೆಯ ಮಕ್ಕಳು ನೆಟ್ಟಿದ್ದ ಹೂ ಗಿಡಗಳ ಕುಂಡಗಳನ್ನು ಪುಡಿಗೈದ ಕಿಡಿಗೇಡಿಗಳು

Team India; ಮುಗಿಯಿತಾ ರೋಹಿತ್‌ ವೃತ್ತಿಜೀವನ? ಮೆಲ್ಬೋರ್ನ್‌ ಗೆ ಬಂದ ಅಗರ್ಕರ್‌ ಹೇಳಿದ್ದೇನು?

TeamIndia; ಮುಗಿಯಿತಾ ರೋಹಿತ್‌ ವೃತ್ತಿಜೀವನ? ಮೆಲ್ಬೋರ್ನ್‌ ಗೆ ಬಂದ ಅಗರ್ಕರ್‌ ಹೇಳಿದ್ದೇನು?


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

10(1

Mangaluru: ನಗರದ 18 ಕಡೆಗಳಲ್ಲಿ ಪೇ ಪಾರ್ಕಿಂಗ್‌

8

Mangaluru: ‘ಹೆಲಿಟೂರಿಸಂ’ಗೆ ಮುನ್ನುಡಿ ಬರೆದ ‘ಕುಡ್ಲ ಹೈ’ದರ್ಶನ

7

Mulki: ಉಗುಳಿದರೆ ದಂಡ; ಹಾಕುವವರು ಯಾರು?

6

Mudbidri: ಕಲ್ಲಮುಂಡ್ಕೂರು-ಕುಂಟಲಪಲ್ಕೆ ಎಸ್‌ಟಿ ಕಾಲನಿ ರಸ್ತೆ ಜಲ್ಲಿಕಲ್ಲು!

5

Kinnigoli: ದಾಮಸ್‌ಕಟ್ಟೆ – ಏಳಿಂಜೆ ರಸ್ತೆ ಹೊಂಡಮಯ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

10(1

Mangaluru: ನಗರದ 18 ಕಡೆಗಳಲ್ಲಿ ಪೇ ಪಾರ್ಕಿಂಗ್‌

9(1

Kundapura: ಟಿಟಿ ರೋಡ್‌ನ‌ಲ್ಲಿವೆ 4 ಬಾವಿ; ನೀರಿದೆ, ನಿರ್ವಹಣೆಯೇ ಇಲ್ಲ!

Sandalwood: ಭೂಗತ ಲೋಕದತ್ತ ʼಕ್ಯಾಪಿಟಲ್‌ ಸಿಟಿʼ

Sandalwood: ಭೂಗತ ಲೋಕದತ್ತ ʼಕ್ಯಾಪಿಟಲ್‌ ಸಿಟಿʼ

Vijay Hazare Trophy; Abhinav Manohar’s brilliant century; Karnataka won easily against Arunchal Pradesh

Vijay Hazare Trophy; ಅಭಿನವ್‌ ಮನೋಹರ್‌ ಭರ್ಜರಿ ಶತಕ; ಸುಲಭ ಜಯ ಸಾಧಿಸಿದ ಕರ್ನಾಟಕ

12-udupi

Udupi: ದೊಡ್ಡಣ್ಣ ಗುಡ್ಡೆ ದೇವಸ್ಥಾನ; ಕಲ್ಕುಡ-ಕಲ್ಲುರ್ಟಿ ದೈವಗಳ ನೂತನ ಗುಡಿಗೆ ಶಿಲಾನ್ಯಾಸ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.