![Gun-Fire](https://www.udayavani.com/wp-content/uploads/2025/02/Gun-Fire-415x249.jpg)
![Gun-Fire](https://www.udayavani.com/wp-content/uploads/2025/02/Gun-Fire-415x249.jpg)
Team Udayavani, May 23, 2018, 12:26 PM IST
ಮಂಗಳೂರು: ನಗರದ ಕೊಡಿಯಾಲ್‌ಬೈಲಿನಲ್ಲಿರುವ ಜಿಲ್ಲಾ ಕಾರಾಗೃಹದಲ್ಲಿ ಸೋಮವಾರ ಕೈದಿಗಳ ನಡುವೆ ಮತ್ತೆ ಸಂಘರ್ಷ ಮರುಕಳಿಸಿದ್ದು, ಜಗಳ ಬಿಡಿಸಲು ಹೋದ ಜೈಲು ಅಧೀಕ್ಷಕರು ಸಹಿತ ಆರು ಮಂದಿ ಸಿಬಂದಿ ಗಾಯಗೊಂಡಿದ್ದಾರೆ.
ಸೋಮವಾರ ತಡರಾತ್ರಿ ವಿಚಾರಾಣಾಧೀನ ಕೈದಿಗಳು ಪರಸ್ಪರ ಜಗಳವಾಡುತ್ತಿದ್ದು ಈ ಜಗಳ ಬಿಡಿಸಲು ಹೋದ ಜೈಲು ಸೂಪರಿಂಟೆಂಡೆಂಟ್ ಹಾಗೂ ಪೊಲೀಸರ ಮೇಲೆ ಕೈದಿಗಳು ಹಲ್ಲೆ ನಡೆಸಿ ಗಾಯಗೊಳಿಸಿದ್ದಾರೆ.
ಜಲಾಲುದ್ದೀನ್, ಮೊಹಮ್ಮದ್ ಇಂಮಿ¤ಯಾಝ್, ಅಮ್ಜದ್, ನವೀದ್ ಅಹ್ಮದ್, ಉಬೈದುಲ್ಲಾ, ಹಫೀಜ್, ಮೊಹಮ್ಮದ್ ಆಸ್ರು, ಮಹಮ್ಮದ್ ಶಾಫಿ ದಾಳಿ ನಡೆಸಿದ ಆರೋಪಿಗಳಾಗಿದ್ದಾರೆ.
ಈ ಘಟನೆಯಿಂದ ಜೈಲು ಸೂಪರಿಂಟೆಂಡೆಂಟ್ ಪರಮೇಶ್ವರ್, ವಾರ್ಡರ್ ಮುತ್ತಪ್ಪ ವಿರೂಪಾಕ್ಷಪ್ಪ, ಪೊಲೀಸ್ ರಮೇಶ್ ಸಹಿತ ಒಟ್ಟು ಆರು ಜನರು ಗಾಯಗೊಂಡಿದ್ದಾರೆ.
ಸೋಮವಾರ ರಾತ್ರಿ 11.30ರ ವೇಳೆಗೆ ಜೈಲು ಸೂಪರಿಂಡೆಂಟ್ ಪರಮೇಶ್ ಅವರು ಗಸ್ತು ತಿರುಗುತ್ತಿದ್ದಾಗ ಜೈಲಿನ ಎ ಬ್ಲಾಕ್‌ನಲ್ಲಿ ವಿಚಾರಣಾಧೀನ ಕೈದಿಗಳ ಎರಡು ತಂಡಗಳ ಮಧ್ಯೆ ಕ್ಷುಲ್ಲಕ ಕಾರಣಕ್ಕೆ, ಪರಸ್ಪರ ಅವಾಚ್ಯ ಶಬ್ದಗಳಿಂದ ನಿಂದಿಸಿಕೊಂಡು ಜಗಳ ನಡೆಯುತ್ತಿತ್ತು. ಅದನ್ನು ಗಮನಿಸಿದ ಜೈಲು ಸೂಪರಿಂಟೆಂಡೆಂಟ್ ಹಾಗೂ ಸಿಬಂದಿ ತತ್‌ಕ್ಷಣ ಜೈಲಿನೊಳಗೆ ಹೋಗಿ ಜಗಳ ನಿಲ್ಲಿಸಲು ಪ್ರಯತ್ನಿಸಿದರು.
ಇದರಿಂದ ಕೋಪಗೊಂಡ ವಿಚಾರಣಾಧೀನ ಕೈದಿಗಳ ತಂಡವೊಂದು ಸೂಪರಿಂಟೆಂಡೆಂಟ್, ವಾರ್ಡನ್ ಹಾಗೂ ಇತರ ಸಿಬಂದಿ ಮೇಲೆ ದಾಳಿ ನಡೆಸಿದೆ. ಸೂಪರಿಂಟೆಂಡೆಂಟ್ ಪರಮೇಶ್‌ಗೆ ಕೈದಿಗಳು ಚೊಂಬಿನಿಂದ ಹಣೆಗೆ ಹೊಡೆದ ಪರಿಣಾಮ ರಕ್ತ ಗಾಯ ಉಂಟಾಗಿದೆ. ಇದೇ ವೇಳೆ ಜೈಲಿನ ಸಿಸಿಟಿವಿ ಕ್ಯಾಮೆರಾ, ಟ್ಯೂಬ್‌ಲೈಟ್ ಸೇರಿದಂತೆ ಇತರ ಸೊತ್ತುಗಳಿಗೆ ಹಾನಿಯಾಗಿದೆ.
ಘಟನೆ ತಿಳಿದ ಕೂಡಲೇ ಇತರ ಸಿಬಂದಿ ಸ್ಥಳಕ್ಕೆ ಧಾವಿಸಿ ಬಂದು ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ.
ಬರ್ಕೆ ಪೊಲೀಸರು ಸ್ಥಳಕ್ಕೆ ತೆರಳಿ ಪರಿಶೀಲನೆ ನಡೆಸಿದ್ದು, ಆರೋಪಿಗಳ ಮೇಲೆ ಐಪಿಸಿ ಸೆಕ್ಷನ್ 341, 332, 147, 143, 427, 149 ರಡಿ ಪ್ರಕರಣ ದಾಖಲಾಗಿದ್ದು ತನಿಖೆ ನಡೆಯುತ್ತಿದೆ.
ಮಂಗಳೂರು ಕೇಂದ್ರ ಕಾರಾಗೃಹ ಕೈದಿಗಳ ನಡುವೆ ಮಾರಾಮಾರಿ ಘಟನೆಗಳು ಪದೆ ಪದೇ ನಡೆಯುತ್ತಿದ್ದು ಈ ಮೂಲಕ ಸದಾ ಸುದ್ದಿಯಲ್ಲಿರುತ್ತದೆ.
Mandya: ನಾಗಮಂಗಲದಲ್ಲಿ ಆಕಸ್ಮಿಕ ಫೈರಿಂಗ್: 3 ವರ್ಷದ ಮಗು ಮೃತ್ಯು!
Kaup: ಸ್ಕೂಟಿ, ಕಾರಿಗೆ ಬಸ್ ಢಿಕ್ಕಿ; ಸವಾರನಿಗೆ ಗಾಯ
Thirthahalli: ಸಾಲ ಕಟ್ಟದ್ದಕ್ಕೆ ಕಿವಿಯೋಲೆ ಕಿತ್ತ ಬ್ಯಾಂಕ್ ಸಿಬ್ಬಂದಿ!
Padubidri: ಕಬ್ಬಿಣದ ತುಂಡು ಹೆಕ್ಕಿದ ಬಾಲಕರಿಗೆ ರೈಲ್ವೇ ಗ್ಯಾಂಗ್‌ಮನ್ ಹಲ್ಲೆ; ದೂರು
Restriction: ನಿಷೇಧವಿದ್ದರೂ ಗೂಡ್ಸ್ ವಾಹನಗಳಲ್ಲಿ ಜನರು ಬಿಳಿಗಿರಿ ರಂಗನ ಬೆಟ್ಟಕ್ಕೆ ಪಯಣ!
You seem to have an Ad Blocker on.
To continue reading, please turn it off or whitelist Udayavani.