ಮಂಗಳೂರು: ವಿದ್ಯಾರ್ಥಿನಿಯ ಕೊಲೆ
ಕುತ್ತಿಗೆಗೆ ವೈರ್ ಬಿಗಿದು ಕೊಲೆ ಮಾಡಿದ ರೀತಿ ಚಿಕ್ಕಮಗಳೂರು ಯುವತಿಯ ಶವ ಪತ್ತೆ
Team Udayavani, Jun 7, 2019, 11:55 PM IST
ಮಂಗಳೂರು: ಬ್ಯಾಂಕಿಂಗ್ ಪರೀಕ್ಷೆ ತರಬೇತಿಗೆಂದು ಮಂಗಳೂರಿಗೆ ಬಂದಿದ್ದ ಚಿಕ್ಕಮಗಳೂರು ಮೂಲದ ವಿದ್ಯಾರ್ಥಿನಿಯೊಬ್ಬಳು ದಾರುಣವಾಗಿ ಕೊಲೆಯಾದ ಘಟನೆ ಶುಕ್ರವಾರ ಸಂಜೆ ನಗರದಲ್ಲಿ ನಡೆದಿದೆ.
ಚಿಕ್ಕಮಗಳೂರಿನ ತರೀಕೆರೆಯ ಮಂಜುನಾಥ ವೈ.ಎನ್ ಎಂಬವರ ಪುತ್ರಿ ಅಂಜನಾ ವಸಿಷ್ಠ (22) ಕೊಲೆಯಾದ ವಿದ್ಯಾರ್ಥಿನಿಯಾಗಿದ್ದಾಳೆ.
ಅಂಜನಾ ಉಜಿರೆಯ ಶಿಕ್ಷಣ ಸಂಸ್ಥೆಯೊಂದರಲ್ಲಿ ಎಂ.ಎಸ್ಸಿ ಪೂರೈ ಸಿದ್ದು, ಜೂ. 2ರಂದು ಕೋಚಿಂಗ್ ಸೆಂಟರ್ ಒಂದರಲ್ಲಿ ಬ್ಯಾಂಕಿಂಗ್ ಪರೀಕ್ಷೆ ತರಬೇತಿಗೆ ಮಂಗಳೂರಿಗೆ ಬಂದಿದ್ದಳು. ಆಕೆಯೊಂದಿಗೆ ಉಜಿರೆಯಲ್ಲಿ ಪರಿಚಿತ ಯುವಕ ನೋರ್ವನೂ ತರಬೇತಿಗೆ ಬಂದಿದ್ದ. ಇಬ್ಬರೂ ತಾವು ದಂಪತಿ ಎಂದು ಸುಳ್ಳು ಹೇಳಿ ಅತ್ತಾವರ ಕೆಎಂಸಿ ಆಸ್ಪತ್ರೆಯ ಹಿಂದಿನ ಮನೆಯ ಪಿಜಿಯಲ್ಲಿ ಇದ್ದರು ಎನ್ನಲಾಗಿದೆ.
2 ದಿನಗಳ ಬಳಿಕ ಆಕೆ ಊರಿಗೆ ಮರಳಿದ್ದು, ಆತ ಫೋನ್ ಮೂಲಕ ಆಕೆಯನ್ನು ಕರೆಸಿಕೊಂಡಿದ್ದ ಹಿನ್ನೆಲೆಯಲ್ಲಿ ಶುಕ್ರವಾರ ಮಂಗಳೂರಿಗೆ ಬಂದಿದ್ದಳು. ಪಿಜಿಗೆ ಬಂದ ಬಳಿಕ ಸಂಜೆ ವೇಳೆ ಆಕೆ ಶವವಾಗಿ ಪತ್ತೆಯಾಗಿದ್ದಾಳೆ.
ವೈರ್ ಬಿಗಿದು ಕೊಲೆ?
ಜತೆಗಿದ್ದ ಯುವಕ ಬೆಳಗ್ಗೆ ಆಕೆಯನ್ನು ಬೆಡ್‌ನಲ್ಲಿ ಟಿವಿ ಕೇಬಲ್ ವೈಯರ್ ಕತ್ತಿಗೆ ಬಿಗಿದು ಕೊಲೆ ಮಾಡಿ ಹೊರಗಿನಿಂದ ಬಾಗಿಲು ಹಾಕಿ ಪರಾರಿಯಾಗಿರುವುದು ಮೇಲ್ನೋಟಕ್ಕೆ ಗೊತ್ತಾಗಿದೆ. ಸಂಜೆವರೆಗೆ ಬಾಗಿಲು ತೆರೆಯದ್ದರಿಂದ ಕಸ ಗುಡಿ ಸುವ ಮಹಿಳೆಗೆ ಸಂಶಯ ಬಂದಿತ್ತು. ಈ ಹಿನ್ನೆಲೆಯಲ್ಲಿ ಬಾಗಿಲು ಒಡೆದು ನೋಡಿ ದಾಗ ಕೊಲೆಯಾಗಿರುವುದು ಗೊತ್ತಾಗಿದೆ. ಅಂಜನಾಳಿಗೆ ಇತ್ತೀಚೆಗೆ ಮನೆ ಯವರು ಬೇರೆ ಹುಡುಗ ನೊಂದಿಗೆ ಮದುವೆಗೆ ಮಾತುಕತೆ ನಡೆಸಿ ದ್ದರು. ಇದೇ ಆಕೆಯ ಕೊಲೆಗೆ ಕಾರಣ ವಾಗಿರಬಹುದು ಎಂದು ಶಂಕಿಸಲಾಗಿದೆ.
ತಜ್ಞರು ಆಗಮಿಸಲು ಪಟ್ಟು
ಘಟನೆ ಸುದ್ದಿ ತಿಳಿದು ಅಂಜನಾಳ ಹೆತ್ತವರು ಮಂಗಳೂರಿಗೆ ಧಾವಿಸಿ ಬಂದಿದ್ದು, ಸಂಜೆ ಪಿಜಿಯಿಂದ ಶವ ತೆಗೆಯಲು ನಿರಾಕರಿಸಿದ್ದರು. ಸ್ಥಳಕ್ಕೆ ವಿಧಿ-ವಿಜ್ಞಾನ ತಜ್ಞರು ಬಂದು ಪರಿಶೀಲಿಸಿದ ಬಳಿಕವೇ ಮೃತದೇಹವನ್ನು ಹೊರ ತೆಗೆಯಬೇಕೆಂದು ಪಟ್ಟು ಹಿಡಿದಿದ್ದರು. ಆ ಹಿನ್ನೆಲೆಯಲ್ಲಿ ಸ್ಥಳಕ್ಕೆ ತಜ್ಞರು ಆಗಮಿಸಿ ಪರಿಶೀಲಿಸಿದ ಬಳಿಕವೇ ಮೃತದೇಹ ಪಿಜಿಯಿಂದ ಹೊರತರಲಾಯಿತು.
ಚಿಕ್ಕಮಗಳೂರಿಂದ ತಂದೆಯೆ ಕಳಿಸಿದ್ದರು
ವಾಪಸ್ ಮಂಗಳೂರಿಗೆ ಹೊರ ಟಿದ್ದ ಅಂಜನಾಳನ್ನು ಆಕೆಯ ತಂದೆಯೇ ಚಿಕ್ಕಮಗಳೂರಿನಲ್ಲಿ ಬಸ್ ಹತ್ತಿಸಿ ಕಳುಹಿಸಿದ್ದರು. ಜತೆಗೆ ಮಂಗಳೂರಿಗೆ ತಲುಪಿದ ಬಗ್ಗೆಯೂ ಆಕೆ ಮನೆಗೆ ತಿಳಿಸಿದ್ದಳು. ಕೋಚಿಂಗ್‌ಗಾಗಿ ಮಂಗಳೂರಿನಲ್ಲಿ ಪಿಜಿಯಲ್ಲಿರುವುದಾಗಿಯೂ ಆಕೆ ಮನೆಯವರಿಗೆ ತಿಳಿಸಿದ್ದಳು. ಇದೀಗ ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿ ತನಿಖೆಗೆ ಮಾರ್ಗದರ್ಶನ ನೀಡಿದ್ದಾರೆ.
ಪಾಂಡೇಶ್ವರ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
CM Siddaramaiah: ಕರಾವಳಿಗೆ ಎರಡು ಸರಕಾರಿ ಮೆಡಿಕಲ್ ಕಾಲೇಜು
CM Siddaramaiah: ಜಾತಿಗಣತಿ ವರದಿ ಮುಂದಿನ ಸಂಪುಟ ಸಭೆಯಲ್ಲಿ ಮಂಡನೆ
Mangaluru: ರಾಷ್ಟ್ರೀಯ, ಅಂತಾರಾಷ್ಟ್ರೀಯ ಕ್ರೀಡಾಳುಗಳಿಗೆ ಕೃಪಾಂಕ ನೀಡಲು ತೀರ್ಮಾನ : ಸಿಎಂ
Fraud: ಆನ್‌ಲೈನ್ ಟ್ರೇಡಿಂಗ್: ಮಹಿಳೆಗೆ 15.27 ಲಕ್ಷ ರೂ. ವಂಚನೆ
Mangaluru: ಆರೋಪಿಗೆ 20 ವರ್ಷ ಕಠಿನ ಜೈಲು ಶಿಕ್ಷೆ, 1 ಲಕ್ಷ ರೂ. ದಂಡ
MUST WATCH
ಹೊಸ ಸೇರ್ಪಡೆ
ಗೋಡ್ಸೆ ವಿಚಾರಧಾರೆಗಳ ಹೊಂದಿರುವ ಬಿಜೆಪಿಗರು ಗಾಂಧಿ ವಿಚಾರಗಳ ಒಪ್ಪಲ್ಲ: ಸುರ್ಜೇವಾಲಾ
BCCI 10-point ಆದೇಶ ಸಮಸ್ಯೆ; ಮೀಸಲಾತಿ ಹೊಂದಿದ್ದೇವೆ ಎಂದು ರೋಹಿತ್ ಸುಳಿವು
Ranji Trophy; ಸೌರಾಷ್ಟ್ರ ವಿರುದ್ಧ ರಣಜಿ ಪಂದ್ಯದಿಂದ ಹೊರಗುಳಿದ ಕೊಹ್ಲಿ
ವಿಜಯೇಂದ್ರ ಪೂರ್ಣಾವಧಿ ಬಿಜೆಪಿ ಅಧ್ಯಕ್ಷರಾಗಿರ್ತಾರೆನ್ನುವ ವಿಶ್ವಾಸವಿದೆಯಾ?: ಎಂ.ಬಿ.ಪಾಟೀಲ್
Puthige Matha: ವಿಶ್ವ ಗೀತಾ ಪರ್ಯಾಯಕ್ಕೆ ಇಂದಿಗೆ ವರ್ಷ ಪೂರ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.