Mangaluru ಕಳ್ಳತನ ಪ್ರಕರಣ: 6 ಮಂದಿ ಬಂಧನ; 22.50 ಲ.ರೂ. ಮೌಲ್ಯದ ಸೊತ್ತುಗಳ ವಶ
ಪಂಪ್‌ವೆಲ್, ಕೊಣಾಜೆಯ ಅಂಗಡಿ, ಮನೆಗಳಲ್ಲಿ ಕಳ್ಳತನ
Team Udayavani, Jul 12, 2024, 6:30 PM IST
ಮಂಗಳೂರು: ಪಂಪ್‌ವೆಲ್‌ನಲ್ಲಿ 1 ಅಂಗಡಿ ಹಾಗೂ ಕೊಣಾಜೆ ಪೊಲೀಸ್ ಠಾಣೆ ವ್ಯಾಪ್ತಿಯ 3 ಮನೆಗಳಲ್ಲಿ ನಡೆದ ಕಳ್ಳತನ ಸಹಿತ ಒಟ್ಟು 4 ಕಳವು ಪ್ರಕರಣಗಳಿಗೆ ಸಂಬಂಧಿಸಿ 6 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ.
ಜು.8ರಂದು ರಾತ್ರಿ ಕಪಿತಾನಿಯೋ ಬಳಿಯ ದಿನಸಿ ಅಂಗಡಿಯ ಶಟರ್ ಎತ್ತಿ ಕ್ಯಾಶ್ ಕೌಂಟರ್‌ನಲ್ಲಿದ್ದ 10.20 ಲಕ್ಷ ರೂ. ಗಳನ್ನು ಕಳವು ಮಾಡಲಾಗಿತ್ತು. ಇದಕ್ಕೆ ಸಂಬಂಧಿಸಿ ಪೊಲೀಸರು ಉತ್ತರ ಪ್ರದೇಶದ ಮಹಮ್ಮದ್ ನಜೀರ್ ಹೌಸಿಲ್ ಖಾನ್(27) ಮತ್ತು ಇಲಿಯಾಸ್ ಖಾನ್ (22)ನನ್ನು ಬಂಧಿಸಿದ್ದಾರೆ.
ಸಿಸಿಟಿವಿ ಫೂಟೇಜ್‌ನಿಂದ ಸುಳಿವು
ಪ್ರಕರಣ ನಡೆದ ಅಂಗಡಿಯ ಸುತ್ತಮುತ್ತ ದೊರೆತ ಸಿಸಿಟಿವಿ ಫೂಟೇಜ್ ಆಧಾರದಲ್ಲಿ ಸಂಶಯಿತರ ಬಗ್ಗೆ ಪೊಲೀಸರು ಆಟೋರಿಕ್ಷಾ ಚಾಲಕರನ್ನು ವಿಚಾರಿಸಿದರು. ಆಗ ಕೃತ್ಯ ನಡೆದ ರಾತ್ರಿ ಇಬ್ಬರು ಹಿಂದಿ ಭಾಷಿಗರಾದ ಸಂಶಯಿ ತರನ್ನು ರೈಲು ನಿಲ್ದಾಣಕ್ಕೆ ಬಿಟ್ಟು ಬಂದಿರುವ ಬಗ್ಗೆ ಮಾಹಿತಿ ಸಿಕ್ಕಿತು. ಬಳಿಕ ರೈಲು ನಿಲ್ದಾಣದ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಿದಾಗ ಎರ್ನಾಕುಲಂ- ಪುಣೆ ಎಕ್ಸ್‌ಪ್ರೆಸ್‌ನಲ್ಲಿ ಅದೇ ದಿನ ರಾತ್ರಿ ಇಬ್ಬರು ಮಂಗಳೂರಿನಿಂದ ಪುಣೆಗೆ ಎರಡು ಟಿಕೆಟ್ ಕಾದಿರಿಸಿ ಹೊರಟಿರುವ ಮಾಹಿತಿ ದೊರೆಯಿತು. ರಾತ್ರಿ 8.30 ರ ಸುಮಾರಿಗೆ ರೈಲು ಮಹಾರಾಷ್ಟ್ರದ ಸತಾರ ದಾಟಿ ಹೋಗುತ್ತಿದ್ದಾಗ 11.45 ರ ಸುಮಾರಿಗೆ ಪುಣೆ ತಲುಪುವ ಮಾಹಿತಿ ಪಡೆದು ಮಂಗಳೂರಿನ ಆರ್‌ಪಿಎಫ್ ಪೊಲೀಸರ ಮುಖಾಂತರ ಪುಣೆ ಆರ್‌ಪಿಎಫ್ ಪೊಲೀಸರನ್ನು ಸಂಪರ್ಕಿಸಲಾಯಿತು ಎಂದು ಪೊಲೀಸ್ ಆಯುಕ್ತ ಅನುಪಮ್ ಅಗರ್‌ವಾಲ್ ಶುಕ್ರವಾರದಂದು ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದ್ದಾರೆ.
ಬಳಿಕ ಪುಣೆ ಜಿಆರ್‌ಪಿ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿ ಶಂಕಿತ ರನ್ನು ವಿಚಾರಿಸಲಾಯಿತು. ಸುಳಿವು ಸಿಕ್ಕ ಹಿನ್ನೆಲೆಯಲ್ಲಿ ಕಂಕನಾಡಿ ನಗರ ಠಾಣೆಯ ಪೊಲೀಸ್ ನಿರೀಕ್ಷಕ ಟಿ.ಡಿ.ನಾಗರಾಜ್ ನೇತೃತ್ವದಲ್ಲಿ ಪಿಎಸ್‌ಐ ಶಿವಕುಮಾರ್, ಎಚ್‌ಸಿ ಜಯಾನಂದ, ಪಿಸಿಗಳಾದ ರಾಜೇಸಾಬ್ ಮುಲ್ಲಾ, ಚೇತನ್, ಎಎಚ್‌ಸಿ ಪ್ರವೀಣ್ ಅವರು ಪುಣೆಗೆ ತೆರಳಿ ಆರೋಪಿಗಳನ್ನು ವಶಕ್ಕೆ ಪಡೆದುಕೊಂಡರು. ಆರೋಪಿಗಳು ಹಣದ ಬ್ಯಾಗ್‌ನ್ನು ರೈಲ್ವೆ ಪ್ಲಾಟ್‌ಫಾರಂನ ಬೇರೊಂದು ಕಡೆ ಬಚ್ಚಿಟ್ಟಿದ್ದ ಬ್ಯಾಗಿನಲ್ಲಿದ್ದ 10.13 ಲಕ್ಷ ರೂ. ಗಳನ್ನು ವಶ ಪಡಿಸಿಕೊಳ್ಳಲಾಗಿದೆ ಎಂದರು.
ಕೆಲಸಕ್ಕಾಗಿ ಬಂದು ಕಳವು
ಮಂಗಳೂರು ಶ್ರೀಮಂತ ನಗರವಾಗಿದ್ದು, ಇಲ್ಲಿನ ಹೊಟೇಲ್, ಕೈಗಾರಿಕೆಗಳಲ್ಲಿ ಕೇಟರಿಂಗ್ ಅಥವಾ ಬೇರೆ ಕೆಲಸ ಮಾಡಬಹುದು ಎಂದು ಆರೋಪಿಗಳು ಬಂದಿದ್ದರು. ತತ್‌ಕ್ಷಣಕ್ಕೆ ಕೆಲಸ ಸಿಗದೇ ಕೈಯಲ್ಲಿದ್ದ ಹಣ ಖರ್ಚಾದ ಕಾರಣದಿಂದ ಕಳ್ಳತನಕ್ಕೆ ನಿರ್ಧರಿಸಿ ಜು.8 ರಂದು ಮಧ್ಯಾಹ್ನ 2 ಕ್ಕೆ ರೈಲು ನಿಲ್ದಾಣದಿಂದ ಪಂಪ್‌ವೆಲ್ ಕಡೆಗೆ ಬಂದು ಎಲ್ಲ ಅಂಗಡಿ ಮುಂಗಟ್ಟುಗಳನ್ನು ಗಮನಿಸ ತೊಡಗಿದರು. ಬಿ.ಎಚ್. ಟ್ರೇಡರ್ಸ್ ಅಂಗಡಿಯಲ್ಲಿ ಹೆಚ್ಚು ವ್ಯಾಪಾರವಾಗುವುದನ್ನು ಗಮನಿಸಿ ರೈಲು ನಿಲ್ದಾಣಕ್ಕೆ ಮರಳಿದ್ದರು. ರಾತ್ರಿ ಬಂದು ಕದ್ದು, ದೊಡ್ಡ ಮೊತ್ತದ ಹಣ ದೊರೆತ ಕಾರಣ ಪುಣೆಗೆ ಪ್ರಯಾಣಿಸಿದ್ದರು. ಮಾಹಿತಿ ಸಿಕ್ಕ 7 ಗಂಟೆಗಳಲ್ಲಿ ಆರೋಪಿಗಳನ್ನು ಪತ್ತೆ ಮಾಡುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ ಎಂದರು.
ಹೊರರಾಜ್ಯದ ಕಳ್ಳರ ಕಣ್ಣು
ಮಂಗಳೂರು ನಗರ ಹಾಗೂ ಹೊರವಲಯದಲ್ಲಿ ಇತ್ತೀಚೆಗೆ ನಡೆದಿರುವ ಕಳವು, ದರೋಡೆ ಪ್ರಕರಣಗಳಲ್ಲಿ ಉತ್ತರ ಭಾರತ ಸಹಿತ ಹೊರ ರಾಜ್ಯದ ಕಳ್ಳರೇ ಹೆಚ್ಚಾಗಿ ಭಾಗಿಯಾಗಿದ್ದಾರೆ. ಉಳಾಯಿಬೆಟ್ಟಿನಲ್ಲಿ ಉದ್ಯಮಿಯ ಮನೆಯಲ್ಲಿ ನಡೆದಿದ್ದ ದರೋಡೆ ಪ್ರಕರಣದಲ್ಲಿ ಬಂಧಿಸ್ಪಟ್ಟಿರುವ ಆರೋಪಿಗಳಲ್ಲಿ 6 ಮಂದಿ ಕೇರಳದವರಾಗಿದ್ದರು. ಉರ್ವ ಪೊಲೀಸ್ ಠಾಣೆ ವ್ಯಾಪ್ತಿಯ ಕೋಟೆಕಣಿಯಲ್ಲಿ ನಡೆದ ದರೋಡೆ ಪ್ರಕರಣದ ನಾಲ್ವರು ಆರೋಪಿಗಳು ಕೂಡ ಮಧ್ಯಪ್ರದೇಶದ “ಚಡ್ಡಿಗ್ಯಾಂಗ್’ನವರಾಗಿದ್ದರು. ಪಂಪ್‌ವೆಲ್‌ನಲ್ಲಿ ನಡೆದ ಅಂಗಡಿ ಕಳವು ಪ್ರಕರಣದಲ್ಲಿ ಸೆರೆಯಾದ ಇಬ್ಬರು ಕೂಡ ಉತ್ತರ ಪ್ರದೇಶದವರು. ಕೊಣಾಜೆ ಠಾಣೆ ವ್ಯಾಪ್ತಿಯ ಮನೆ ಕಳ್ಳತನದ ಇಬ್ಬರು ಆರೋಪಿಗಳು ಕೇರಳದವರು.
20,000 ರೂ. ನಿರೀಕ್ಷೆ: ಸಿಕ್ಕಿದ್ದು 10 ಲ.ರೂ.!
ಪಂಪ್‌ವೆಲ್‌ನ ಅಂಗಡಿಯಲ್ಲಿ 20,000 ರೂ. ಸಿಗಬಹುದು ಎಂದು ಆರೋಪಿಗಳು ಅಂದಾಜಿಸಿದ್ದರು. ಆದರೆ ಅವರಿಗೆ 10 ಲ.ರೂ. ಸಿಕ್ಕಿತ್ತು. ಆ ಖುಷಿಯಲ್ಲಿ ಅವರು ಊರಿಗೆ ವಾಪಸಾಗಿದ್ದರು. ಅದರಲ್ಲಿ 7,000 ರೂ.ಗಳನ್ನು ಖರ್ಚು ಮಾಡಿದ್ದರು.
ತಂಡಕ್ಕೆ 25,000 ರೂ. ಬಹುಮಾನ
ಪಂಪ್‌ವೆಲ್‌ನ ಅಂಗಡಿಯಲ್ಲಿ ನಡೆದ ಕಳವು ಪ್ರಕರಣವನ್ನು ಶೀಘ್ರವಾಗಿ ಭೇದಿಸಿದ ಕಂಕನಾಡಿ ನಗರ ಠಾಣಾ ಪೊಲೀಸರಿಗೆ ಮಂಗಳೂರು ಪೊಲೀಸ್ ಆಯುಕ್ತರು 25,000 ರೂ. ಬಹುಮಾನ ಘೋಷಿಸಿದ್ದಾರೆ.
ಅಂತರ್‌ರಾಜ್ಯ ಕಳ್ಳರ ಸೆರೆ
ಕೊಣಾಜೆ ಠಾಣೆ ವ್ಯಾಪ್ತಿಯ ಮೂರು ಕಡೆ 2-3 ತಿಂಗಳಲ್ಲಿ ನಡೆದ ಮನೆ ಕಳವು ಪ್ರಕರಣಗಳಿಗೆ ಸಂಬಂಧಿಸಿ ಪೊಲೀಸರು ಮಂಜೇಶ್ವರ ಮೂಲದ ಮಹಮ್ಮದ್ ಸಿಯಾಬ್ ಆಲಿಯಾಸ್ ಸಿಯಾ(30), ಬಜಪೆ ಮೂಲದ ಮಹಮ್ಮದ್ ಅರ್ಪಾಜ್ ಆಲಿಯಾಸ್ ಅರ್ಪಾ (19), ಸಪ್ವಾನ್(20) ಮತ್ತು ಮೊಹಮ್ಮದ್ ಜಂಶೀರ್(20)ನನ್ನು ಬಂಧಿಸಿದ್ದಾರೆ. ಆರೋಪಿಗಳು 3 ಮನೆಗಳ ಬೀಗ ಒಡೆದು 9.25 ಲ.ರೂ. ಮೌಲ್ಯದ ಸೊತ್ತುಗಳನ್ನು ಕದ್ದಿದ್ದರು.
ಜು.10ರಂದು ಮುಂಜಾನೆ ಕೊಣಾಜೆ ಠಾಣೆ ವ್ಯಾಪ್ತಿಯ ಮುದುಂಗಾರಕಟ್ಟೆ ಚೆಕ್‌ಪಾಯಿಂಟ್ ಬಳಿ ಪಿಎಸ್‌ಐ ವಿನೋದ್ ಹಾಗೂ ಸಿಬಂದಿ ಪಾತೂರು ಕಡೆಯಿಂದ ಬಂದ ಕಾರನ್ನು ತಪಾಸಣೆ ನಡೆಸಿದಾಗ ಅದರಲ್ಲಿ 2 ಡ್ರ್ಯಾಗನ್, 3 ಡಮ್ಮಿ ಪಿಸ್ತೂಲ್, ಮಂಕಿ ಕ್ಯಾಪ್‌ಗ್ಳು, ಹ್ಯಾಂಡ್‌ಗ್ಲೌಸ್, ಮನೆಯ ಬಾಗಿಲನ್ನು ಒಡೆಯುವ ಸಲಕರಣೆ ಕಂಡರು. ಬಳಿಕ ವಾಹನದಲ್ಲಿದ್ದವರನ್ನು ವಶಕ್ಕೆ ಪಡೆದಾಗ ಸಿಕ್ಕ ಮಾಹಿತಿಯಂತೆ ಸಜಿಪ ನಿವಾಸಿ ಮೊಹಮ್ಮದ್ ಜಂಶೀರ್‌ನನ್ನು ವಶಕ್ಕೆ ಪಡೆಯ ಲಾಯಿತು ಎಂದು ಆಯುಕ್ತರು ತಿಳಿಸಿದ್ದಾರೆ.
ಆರೋಪಿಗಳಿಂದ 130 ಗ್ರಾಂ ತೂಕದ ಚಿನ್ನಾ ಭರಣ, 1 ವಾಚ್, ಕಾರು ಸಹಿತ 12.50 ಲಕ್ಷ ರೂ. ಮೌಲ್ಯದ ಸೊತ್ತುಗಳನ್ನು ವಶಪಡಿಸಿ ಕೊಳ್ಳ ಲಾಗಿದೆ. ಆರೋಪಿಗಳು ಕೇರಳ ಮೂಲದ ಅಶ್ರಫ್ ಅಲಿ ಎಂಬಾತನೊಂದಿಗೆ ಸೇರಿಕೊಂಡು ತನ್ನ ಸಹಚರರ ಜತೆಯಲ್ಲಿ ಬಾಡಿಗೆ ಕಾರುಗಳನ್ನು ಪಡೆದು ಹಗಲು ಮತ್ತು ರಾತ್ರಿ ಮನೆ ಕಳವು ಹಾಗೂ ದರೋಡೆ ನಡೆಸುತ್ತಿದ್ದರು. ಅಶ್ರಫ್ ಆಲಿ ಈಗಾಗಲೇ ಕುಂಬಳೆ ಪೊಲೀಸರಿಂದ ಬಂಧಿಸಲ್ಪ ಟ್ಟಿದ್ದಾನೆ ಎಂದವರು ತಿಳಿಸಿದರು.
ಮಹಮ್ಮದ್ ಸಿಯಾಬ್ ಮೇಲೆ 13 ಪ್ರಕರ ಣಗಳು ದಾಖಲಾಗಿದ್ದು, ಕೊಣಾಜೆ ಠಾಣೆಯಲ್ಲಿ 4 ದರೋಡೆ, ಮನೆ ಕಳ್ಳತನ ಪ್ರಕರಣ, ಉಳ್ಳಾಲ ಠಾಣೆಯಲ್ಲಿ ಕೊಲೆಯತ್ನ ಹಾಗೂ ಮಾದಕ ವಸ್ತು ಮಾರಾಟ, ಬಜಪೆ ಠಾಣೆಯಲ್ಲಿ 2 ಮನೆ ಕಳವು, ಕಡಬ ಠಾಣೆಯಲ್ಲಿ 1 ಹನಿಟ್ರ್ಯಾಪ್, ಕುಂಬಳೆ ಠಾಣೆಯಲ್ಲಿ 3 ಮನೆ ಕಳವು, ಮಂಜೇಶ್ವರ ಠಾಣೆಯಲ್ಲಿ 1 ಮನೆ ಕಳವು ಪ್ರಕರಣ ದಾಖಲಾಗಿದೆ. ಮಹಮ್ಮದ್ ಅರ್ಪಾಜ್ ಮೇಲೆ ಬಜಪೆ ಠಾಣೆಯಲ್ಲಿ 1 ಮನೆ ಕಳವು, ಮಂಜೇಶ್ವರ ಠಾಣೆಯಲ್ಲಿ 1 ಮನೆ ಕಳವು, ಹಾಸನ ಗ್ರಾಮಾಂತರ ಠಾಣೆಯಲ್ಲಿ 1 ದರೋಡೆ ಪ್ರಕರಣ ಸಹಿತ 3 ಪ್ರಕರಣಗಳು ದಾಖಲಾಗಿವೆ. ಸಫಾÌನ್ ಮೇಲೆ ಕಡಬ ಠಾಣೆಯಲ್ಲಿ 1 ಮನೆ ಕಳವು ಪ್ರಕರಣ ದಾಖಲಾಗಿದೆ. ಮೊಹಮ್ಮದ್ ಜಂಶೀರ್ ಮೊದಲ ಬಾರಿಗೆ ಕೃತ್ಯದಲ್ಲಿ ಭಾಗಿಯಾಗಿದ್ದ. ಆರೋಪಿಗಳು ಮಂಗಳೂರು ನಗರ ಸಹಿತ ದಕ್ಷಿಣ ಕನ್ನಡ,, ಉಡುಪಿ, ಹಾಸನ ಹಾಗೂ ಕಾಸರಗೋಡು ಜಿಲ್ಲೆಗಳಲ್ಲಿ ಮನೆ ಕಳ್ಳತನ, ದರೋಡೆ ನಡೆಸಿರುವ ಮಾಹಿತಿ ಇದ್ದು, ವಿಚಾರಣೆ ನಡೆಸಲಾಗುತ್ತಿದೆ ಎಂದು ಆಯುಕ್ತರು ತಿಳಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
Doctor; ಖ್ಯಾತ ಹೃದ್ರೋಗ ತಜ್ಞ ಡಾ.ಎಸ್.ಜಿ.ಸರ್ವೋತ್ತಮ ಪ್ರಭು ವಿಧಿವಶ
Vertex Workspace ಸಂಸ್ಥೆಗೆ ಬೆಸ್ಟ್ ಇನ್ನೋವೇಟಿವ್ ಎಂಟರ್‌ಪೈಸ್ ಅವಾರ್ಡ್
MUST WATCH
ಹೊಸ ಸೇರ್ಪಡೆ
Kundapura: ಅಕ್ರಮ ಮರಳು ಸಾಗಾಟ: ಟಿಪ್ಪರ್ ಸಹಿತ ಮರಳು ವಶಕ್ಕೆ ;ಚಾಲಕ ಪರಾರಿ
Puttur: ಸ್ಕೂಲ್ ಬಸ್‌ಗೆ ಢಿಕ್ಕಿಯಾಗುವುದನ್ನು ತಪ್ಪಿಸಿ ಮನೆಗೆ ನುಗ್ಗಿದ ಖಾಸಗಿ ಬಸ್
Puttur: ಕಾರು ಚಾಲಕನಿಗೆ ಮೂರ್ಛೆ ರೋಗ: ಅಪಾಯದಿಂದ ಪಾರು
Kasaragod: ಫ್ಯಾಶನ್ ಗೋಲ್ಡ್ ವಂಚನೆ ಪ್ರಕರಣ: ಪೂಕೋಯ ತಂಙಳ್ ಮತ್ತೆ ಬಂಧನ
Actress Kasthuri; ನನ್ನನ್ನು ಕೆರಳಿದ ಬಿರುಗಾಳಿಯಂತೆ ಮಾಡಿದವರಿಗೆ ಧನ್ಯವಾದ!!
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.