ಮಂಗಳೂರು ವಿಶ್ವವಿದ್ಯಾನಿಲಯ ಪಿಎಚ್‌ಡಿ “ಅವಧಿ’ ನಿಯಮ ಬಿಗಿ


Team Udayavani, Jul 19, 2022, 7:35 AM IST

ಮಂಗಳೂರು ವಿಶ್ವವಿದ್ಯಾನಿಲಯ ಪಿಎಚ್‌ಡಿ “ಅವಧಿ’ ನಿಯಮ ಬಿಗಿ

ಮಂಗಳೂರು: ಪಿಎಚ್‌ಡಿ ಪೂರ್ಣಗೊಳಿಸಲು ಎಷ್ಟು ಸಮಯ ನೀಡಲಾಗಿದೆಯೋ ಆ ಸಮಯದೊಳಗೆ ಮಂಡನೆ ಮಾಡಬೇಕು; ಇಲ್ಲದಿದ್ದರೆ ಅಂತಹ ಸಂಶೋಧನಾ ವಿದ್ಯಾರ್ಥಿಯ ಪಿಎಚ್‌ಡಿ ಅನುಮತಿಯೇ ರದ್ದುಗೊಳ್ಳುತ್ತದೆ.
ಮಂಗಳೂರು ವಿಶ್ವವಿದ್ಯಾನಿಲಯ ಜಾರಿಗೊಳಿಸಿರುವ ಪಿಎಚ್‌ಡಿ ಹೊಸ ನೀತಿಯನ್ವಯ “ಅವಧಿ ಪಾಲನೆ’ ಇನ್ನು ಮುಂದೆ ಕಡ್ಡಾಯವಾಗಿರುತ್ತದೆ.

ಈ ಹಿಂದೆ ಸಂಶೋಧನಾ ವಿದ್ಯಾರ್ಥಿ 10 ವರ್ಷ ಕಳೆದು ಪಿಎಚ್‌ಡಿ ಮಂಡನೆ ಮಾಡದಿದ್ದರೂ, ವಿ.ವಿ., ಕುಲಪತಿ, ಮಾರ್ಗ ದರ್ಶಕರು ಅನುಮತಿ ನೀಡಿದರೆ ಪಿಎಚ್‌ಡಿ ಸಂಶೋಧನೆ ಮುಂದುವರಿಸಲು ಅವಕಾಶ ಸಿಗುತ್ತಿತ್ತು. ಆದರೆ, ಇನ್ನು ಮುಂದೆ ಇದಕ್ಕೆ ಅವಕಾಶ ಇಲ್ಲ. ಹೊಸ ನೀತಿಯ ಪ್ರಕಾರ, ಪೂರ್ಣಕಾಲಿಕ ಸಂಶೋಧನಾರ್ಥಿ 3 ವರ್ಷ ಹಾಗೂ 2 ವರ್ಷದ ಅವಧಿ ವಿಸ್ತರಣೆ ಸೇರಿ ಒಟ್ಟು 5 ವರ್ಷವನ್ನು ಮಾತ್ರ ಬಳಸಬಹುದು. ಅರೆಕಾಲಿಕ ಸಂಶೋಧನಾರ್ಥಿ ಒಟ್ಟು 6 ವರ್ಷವನ್ನು ಬಳಸಿಕೊಳ್ಳಲು ಮತ್ತು ಕೇವಲ ವಿಶೇಷ ಸಂದರ್ಭದಲ್ಲಿ ಮಾತ್ರ 1 ವರ್ಷದ ಅವಧಿ ವಿಸ್ತರಣೆ ಅನ್ವಯವಾಗುತ್ತದೆ. ಆದರೆ, ವಿಶೇಷ ಭಿನ್ನ ಸಾಮರ್ಥ್ಯದ ವಿದ್ಯಾರ್ಥಿಗಳಿಗೆ ಮಾತ್ರ 2 ವರ್ಷ ಅಧಿಕ ಅವಧಿ ವಿಸ್ತರಣೆ ಅನುಕೂಲ ಒದಗಿಸಲಾಗಿದೆ.

ವಿದ್ಯಾರ್ಥಿಯು ಒಂದು ವಿಷಯದ ಆಧಾರದಲ್ಲಿ ಮಾಡುವ ಸಂಶೋಧನೆ ಹಾಗೂ ಅದಕ್ಕೆ ಪೂರಕವಾದ ದಾಖಲೆಗಳು ವರ್ಷ ಕಳೆದಂತೆ ಬದಲಾಗುತ್ತಿರುತ್ತವೆ. ಹೀಗಾಗಿ ಯಾವತ್ತೋ ತೆಗೆದುಕೊಂಡ ದಾಖಲೆ-ಮಾಹಿತಿ 10 ವರ್ಷಗಳ ಅನಂತರ ಪ್ರಸ್ತುತವೂ ಆಗಿರುವುದಿಲ್ಲ. ಜತೆಗೆ ಪಿಎಚ್‌ಡಿಗಾಗಿ ಹೊಸ ವಿದ್ಯಾರ್ಥಿಗಳಿಗೆ ಅವಕಾಶ ಸಿಗಬೇಕೆಂಬ ಕಾರಣದಿಂದ “ಅವಧಿ’ ನಿಯಮಾವಳಿ ಜಾರಿಗೆ ಉದ್ದೇಶಿಸಲಾಗಿದೆ.

ನಿವೃತ್ತಿನ ಅಂಚಿನ ಉಪನ್ಯಾಸಕರಿಗೆ ಅವಕಾಶವಿಲ್ಲ!
ಹಿರಿಯ ಉಪನ್ಯಾಸಕರು ನಿವೃತ್ತಿ ಯಾಗಲು 2 ವರ್ಷ ಇರುವ ಸಂದರ್ಭದಲ್ಲಿ ಪಿಎಚ್‌ಡಿಗೆ ಮಾರ್ಗದರ್ಶಕರಾಗಿ ಬರುವುದರಿಂದ ಕೆಲವು ವಿದ್ಯಾರ್ಥಿಗಳ ಪಿಎಚ್‌ಡಿ ಪೂರ್ಣಗೊಳಿಸಲು ಸಮಸ್ಯೆಗಳಾಗುತ್ತಿವೆ. ಯಾಕೆಂದರೆ, ಮಾರ್ಗದರ್ಶಕರು ಬದಲಾದ ಬಳಿಕ ಮತ್ತೆ ಹೊಸ ಮಾರ್ಗದರ್ಶಕರು ದೊರಕಿ ಪ್ರಬಂಧ ಮಂಡನೆ ಪ್ರಕ್ರಿಯೆ ನಿಧಾನವಾಗುತ್ತದೆ. ಹೀಗಾಗಿ ನಿವೃತ್ತರಾಗಲು 2 ವರ್ಷ ಇರುವವರಿಗೆ ಮಾರ್ಗದರ್ಶಕ ಅವಕಾಶ ನೀಡದಿರಲು ವಿ.ವಿ. ತೀರ್ಮಾನಿಸಿದೆ.

ಪಿಎಚ್‌ಡಿಗೆ ಸಂಬಂಧಿಸಿ ಜಾರಿಯಲ್ಲಿರುವ “ಡಾಕ್ಟರೆಟ್‌ ಸಮಿತಿ’ ಈ ಹಿಂದೆ 2 ವರ್ಷಕ್ಕೊಮ್ಮೆ ಸೇರಿ ಸಭೆ ನಡೆಸುತ್ತಿತ್ತು. ಆದರೆ ಇನ್ನು ಮುಂದೆ 1 ವರ್ಷದಲ್ಲಿ 2 ಬಾರಿ ಸಭೆ ನಡೆಸಿ ನಿಗಾ ಇರಿಸಲು ತೀರ್ಮಾನಿಸಲಾಗಿದೆ.

18 ವಿದ್ಯಾರ್ಥಿಗಳ ಪಿಎಚ್‌ಡಿ ಬಾಕಿ;
3 ಪಟ್ಟು ದಂಡದ ಜತೆಗೆ ವಿಶೇಷ ಅನುಮತಿ
ಮಂಗಳೂರು ವಿ.ವಿ.ಯ ವಿವಿಧ ಸ್ನಾತಕೋತ್ತರ ವಿಭಾಗಗಳಲ್ಲಿ ಸಂಶೋಧನಾ ಕಾರ್ಯಕ್ರಮಕ್ಕೆ ನೋಂದಣಿ ಮಾಡಿಕೊಂಡು ಸಂಶೋಧನೆ ಮುಂದುವರಿಕೆಗೆ/ ನಿಗದಿತ ಸಮಯದಲ್ಲಿ ಪ್ರಬಂಧ ಮಂಡನೆಗೆ ಅಸಾಧ್ಯವಾಗಿರುವ 18 ಮಂದಿ ಸಂಶೋಧನಾ ವಿದ್ಯಾರ್ಥಿಗಳು ಅನುಮತಿ ಸಿಗದೆ ಸಂಕಷ್ಟದಲ್ಲಿದ್ದರು. ಇವರಲ್ಲಿ 2005ರಲ್ಲಿ ನೋಂದಣಿ ಮಾಡಿದ ಓರ್ವ ವಿದ್ಯಾರ್ಥಿಯಿದ್ದರೆ 2010-11ರಲ್ಲಿ ನೋಂದಣಿ ಮಾಡಿದ ಕೆಲವು ವಿದ್ಯಾರ್ಥಿಗಳಿದ್ದಾರೆ. ಉಳಿದವರು ಆಬಳಿಕ ನೋಂದಣಿ ಮಾಡಿದವರು. ಈ ಎಲ್ಲ ವಿದ್ಯಾರ್ಥಿಗಳ ಭವಿಷ್ಯದ ದೃಷ್ಟಿಯಿಂದ “ಮುಂದೆ ಇಂತಹ ಪ್ರಕರಣಕ್ಕೆ ಅನುಮತಿ ನೀಡುವುದಿಲ್ಲ’ ಎಂಬ ಷರತ್ತಿನ “ವಿಶೇಷ ಪ್ರಕರಣ’ ಎಂದು ಪರಿಗಣಿಸಿ ವಿ.ವಿ. ಸಿಂಡಿಕೇಟ್‌, ಶೈಕ್ಷಣಿಕ ಮಂಡಳಿ ಸಭೆ ತೀರ್ಮಾನದಂತೆ ಅವರಿಗೆ 2 ವರ್ಷದ ವಿಸ್ತರಣೆ ಒದಗಿಸಲಾಗಿದೆ. ಅವರು ಸಾಮಾನ್ಯ ಶುಲ್ಕದ ಜತೆಗೆ 3 ಪಟ್ಟು ದಂಡ ಶುಲ್ಕ ಪಾವತಿಸಬೇಕಾಗಿದೆ.

ಪಿಎಚ್‌ಡಿಗೆ ಅವಧಿ ವಿಸ್ತರಣೆ ಇಲ್ಲ’
ಪಿಎಚ್‌ಡಿಯ ಅವಧಿ ನಿಗದಿ ಮಾಡುವ ಮಹತ್ವದ ತೀರ್ಮಾನವನ್ನು ಮಂಗಳೂರು ವಿಶ್ವವಿದ್ಯಾನಿಲಯ ಕೈಗೊಂಡಿದೆ. ಸಂಶೋಧನಾ ವಿದ್ಯಾರ್ಥಿಗೆ ನೀಡಿದ ಅವಧಿಯನ್ನು ಇನ್ನು ಮುಂದೆ ಯಾವುದೇ ಕಾರಣಕ್ಕೂ ವಿಸ್ತರಣೆ ಮಾಡಲು ಅವಕಾಶ ನೀಡಲಾಗುವುದಿಲ್ಲ. ಹೊಸ ವಿದ್ಯಾರ್ಥಿಗಳ ದಾಖಲಾತಿಗೆ ಇದರಿಂದ ಹೆಚ್ಚು ಅನುಕೂಲವಾಗಲಿದೆ.
-ಪ್ರೊ| ಪಿ.ಎಲ್‌. ಧರ್ಮ, ಕುಲಸಚಿವರು (ಪರೀಕ್ಷಾಂಗ) ಮಂಗಳೂರು ವಿ.ವಿ.

-ದಿನೇಶ್‌ ಇರಾ

ಟಾಪ್ ನ್ಯೂಸ್

sunil-karkala

Waqf Notice: ನೋಟಿಸ್‌ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್‌

ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್

ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್

ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ

Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ

aane

Shimoga; ವಿದ್ಯುತ್‌ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ

Kalaburagi: Arrest of three including husband who hits his wife

Kalaburagi: ಗುರುತು ಸಿಗದ ಹಾಗೆ ಪತ್ನಿಯ ಹತ್ಯೆಗೈದ ಪತಿ ಸೇರಿ ಮೂವರ ಬಂಧನ

Surya—jagadmbika-Pal-(JPC)

Waqf Issue: ಹುಬ್ಬಳ್ಳಿ, ವಿಜಯಪುರಕ್ಕೆ ನ.7ರಂದು ಜೆಪಿಸಿ ಅಧ್ಯಕ್ಷ ಜಗದಾಂಬಿಕಾ ಪಾಲ್ ಭೇಟಿ

3-udupi

Udupi: ವಕ್ಫ್ ಬೋರ್ಡ್ ಭೂ ಕಬಳಿಕೆ  ಖಂಡಿಸಿ ನ.6 ರಂದು ಬೃಹತ್ ಪ್ರತಿಭಟನೆ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

11

Vyasanagar: ಮಣ್ಣಿನ ಒಳ ರಸ್ತೆಗಳಿಗೆ ಬೇಕು ಬೀದಿದೀಪ

10

Mangalore: ಅಡ್ಯಾರ್‌ ಕಣ್ಣೂರಿನಲ್ಲಿ ತ್ಯಾಜ್ಯ ಸುಡುವಿಕೆಯಿಂದ ಪರಿಸರ ಮಾಲಿನ್ಯ

9

Bunts Hostel, ಕರಂಗಲ್ಪಾಡಿ ಜಂಕ್ಷನ್‌: ಶಾಶ್ವತ ಡಿವೈಡರ್‌ ನಿರ್ಮಾಣ ಕಾಮಗಾರಿ

8

Mangaluru: ರಾತ್ರಿ ಪ್ರಿಪೇಯ್ಡ್  ಆಟೋ ಇಲ್ಲದೆ ಪ್ರಯಾಣಿಕರ ಪರದಾಟ

7

Urwa: ಬಾಯ್ದೆರೆದ ಕಾಂಕ್ರೀಟ್‌ ಚೇಂಬರ್‌ಗಳಿಗೆ ಬಿತ್ತು ಮುಚ್ಚಳ

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

sunil-karkala

Waqf Notice: ನೋಟಿಸ್‌ ಕಣ್ತಪ್ಪಿನ ಕಾರ್ಯವಲ್ಲ, ಸರಕಾರದ ವ್ಯವಸ್ಥಿತ ಷಡ್ಯಂತ್ರ: ವಿ.ಸುನೀಲ್‌

ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್

ODI Rankings: ಮತ್ತೆ ಅಗ್ರ ಹತ್ತರೊಳಗೆ ಬಂದ ಹರ್ಮನ್‌ಪ್ರೀತ್ ಕೌರ್

2

Kasaragod: ಸಿಡಿಲು ಬಡಿದು ಹಾನಿ; 25 ಲಕ್ಷ ರೂ. ನಷ್ಟ

ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ

Davanagere: ದೇವಸ್ಥಾನಗಳ ಆಸ್ತಿಗಳ ರಕ್ಷಣೆಗೆ ರಾಜ್ಯ ಸರ್ಕಾರ ಮುಂದಾಗಬೇಕು: ಪೇಜಾವರ ಶ್ರೀ

aane

Shimoga; ವಿದ್ಯುತ್‌ ಬೇಲಿ ಸ್ಪರ್ಶಿಸಿ ಕಾಡಾನೆ ಸಾವು; ಜಮೀನು ಮಾಲೀಕನ ಬಂಧನ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.