Mangaluruವಿವಿ ಶೈಕ್ಷಣಿಕ ಕ್ಯಾಲೆಂಡರ್‌ ವಿಳಂಬ: ಪದವಿ ಕೋರ್ಸ್‌ಗಳಿಂದ ವಿದ್ಯಾರ್ಥಿಗಳು ವಿಮುಖ

Team Udayavani, Jul 8, 2024, 7:45 AM IST

Mangaluruವಿವಿ ಶೈಕ್ಷಣಿಕ ಕ್ಯಾಲೆಂಡರ್‌ ವಿಳಂಬ: ಪದವಿ ಕೋರ್ಸ್‌ಗಳಿಂದ ವಿದ್ಯಾರ್ಥಿಗಳು ವಿಮುಖ

ಮಂಗಳೂರು: ಕೋವಿಡ್‌ ಬಳಿಕ ಬದಲಾಗಿರುವ ಮಂಗಳೂರು ವಿಶ್ವವಿದ್ಯಾನಿಲಯದ ಶೈಕ್ಷಣಿಕ ಕ್ಯಾಲೆಂಡರ್‌ನಿಂದಾಗಿ ವಿವಿ ಅಧೀನದ ಕಾಲೇಜುಗಳಿಂದ ಪದವಿ ಕೋರ್ಸ್‌ಗಳಿಂದ ವಿದ್ಯಾರ್ಥಿಗಳು ವಿಮುಖ ರಾಗುತ್ತಿದ್ದಾರೆ.ಇದರ ಪರಿಣಾಮವಾಗಿಯೇ ವಿವಿ ವ್ಯಾಪ್ತಿಯ 17 ಕಾಲೇಜುಗಳು ಈ ಬಾರಿ ಸಂಯೋಜನೆಗೆ ಅರ್ಜಿ ಹಾಕುವುದಕ್ಕೂ ಆಸಕ್ತಿ ತೋರಿಸಿಲ್ಲ. ಅಂದರೆ ಆ ಕಾಲೇಜುಗಳಲ್ಲಿ ಬಹುತೇಕ ಕೋರ್ಸ್‌ಗಳಿಗೆ ವಿದ್ಯಾರ್ಥಿಗಳೇ ಬರುತ್ತಿಲ್ಲ.

ಈಮೊದಲು ಶೈಕ್ಷಣಿಕ ಕ್ಯಾಲೆಂಡರ್‌ ಪದವಿ ವಿದ್ಯಾರ್ಥಿಗಳಿಗೆ ಪೂರಕವಾಗಿ ಇರುತ್ತಿತ್ತು. ಆದರೆ ಕೋವಿಡ್‌ ಬಂದ ಬಳಿಕ ಇಡೀ ವೇಳಾಪಟ್ಟಿಯೇ ಏರುಪೇರಾಯಿತು. ಎಪ್ರಿಲ್‌ನಲ್ಲಿ ಪಿಯುಸಿ ಪರೀಕ್ಷೆ ಫಲಿತಾಂಶ ಬಂದರೆ, ಜೂನ್‌ ವೇಳೆಗೆ ಪದವಿಗೆ ಪ್ರವೇಶ ಸಿಗುತ್ತಿತ್ತು. ಆದರೆ ಕಳೆದ 2-3 ವರ್ಷಗಳಿಂದ ಸೆಪ್ಟಂಬರ್‌-ಅಕ್ಟೋಬರ್‌ ವೇಳೆಯಲ್ಲಿ ವಿವಿ ವ್ಯಾಪ್ತಿಯ ಪದವಿ ಕಾಲೇಜುಗಳು ಆರಂಭಗೊಳ್ಳುತ್ತಿವೆ.

ಈಗ ಪಿಯುಸಿ ಫಲಿತಾಂಶ ಬಂದ ಬಳಿಕ ದೀರ್ಘ‌ ಕಾಲ ವಿಶ್ವವಿದ್ಯಾನಿಲಯದ ಪದವಿ ಕೋರ್ಸ್‌ ಗಳಿಗೆ ಕಾಯುವ ವ್ಯವಧಾನ ವಿದ್ಯಾರ್ಥಿಗಳಲ್ಲಿಲ್ಲ. ಅವರು ಇತರ ಪರ್ಯಾಯ ಕೋರ್ಸ್‌ಗಳತ್ತ ಗಮನ ಹರಿಸುತ್ತಿದ್ದಾರೆ ಎನ್ನುತ್ತಾರೆ ಮಂಗಳೂರು ವಿವಿ ಕಾಲೇಜು ಶಿಕ್ಷಕರ ಸಂಘದವರು.

ಸ್ವಾಯತ್ತ ಕಾಲೇಜು ಹಾಗೂ ಹೊಸ ಹೊಸ ಕೋರ್ಸ್‌ಗಳು
ಮುಖ್ಯವಾಗಿ ವಿದ್ಯಾರ್ಥಿಗಳು ಮಂಗಳೂರು ವಿವಿ ವ್ಯಾಪ್ತಿಯಲ್ಲೇ ಕಾರ್ಯವೆಸಗುತ್ತಿರುವ ಸ್ವಾಯತ್ತ ಕಾಲೇಜುಗಳತ್ತ ಗಮನ ಹರಿಸುತ್ತಿದ್ದಾರೆ. ಯಾಕೆಂದರೆ ಸ್ವಾಯತ್ತ ಕಾಲೇಜುಗಳು ಹಾಗೂ ಡೀಮ್ಡ್ ವಿವಿಗಳು ತಮ್ಮ ಶೈಕ್ಷಣಿಕ ಕ್ಯಾಲೆಂಡರನ್ನು ಸೂಕ್ತವಾಗಿ ಪರಿಷ್ಕರಿಸಿಕೊಂಡು ಇತರ ಕಾಲೇಜುಗಳಿಗಿಂತ ಬೇಗನೆ ಪದವಿ ತರಗತಿಗಳಿಗೆ ಪ್ರವೇಶ ನೀಡುತ್ತಿವೆ. ಜೂನ್‌ ಅಂತ್ಯ ಅಥವಾ ಜುಲೈ ತಿಂಗಳಲ್ಲಿ ಈ ಕಾಲೇಜುಗಳು ಪ್ರವೇಶ ಪ್ರಕ್ರಿಯೆ ಮುಗಿಸುತ್ತಿವೆ. ಅಲ್ಲದೆ ಈಗಿನ ಕಾಲಕ್ಕೆ ಅಗತ್ಯವಿರುವಂಥ ಕೋರ್ಸ್‌ಗಳನ್ನೂ ನೀಡುತ್ತಿರುವುದು ಪ್ರಯೋಜನಕಾರಿಯಾಗಿದೆ.

ಆದರೆ ಉತ್ತಮ ಸೌಲಭ್ಯಗಳಿರುವ ಕೆಲವು ಸರಕಾರಿ ಕಾಲೇಜುಗಳಲ್ಲಿ ಶುಲ್ಕವೂ ಕಡಿಮೆ ಶುಲ್ಕ ಇರುವ ಕಾರಣ ಅಲ್ಲಿ ಪ್ರವೇಶ ಪಡೆಯಲು ಕೆಲವರು ಕಾಯುವುದೂ ಇದೆ. ವಿ.ವಿ.ಯಡಿ ಒಟ್ಟು 178 ಕಾಲೇಜುಗಳಿದ್ದು, ಇದರಲ್ಲಿ 7 ಸ್ವಾಯತ್ತ ಹಾಗೂ 5 ವಿ.ವಿ. ಸಂಯೋಜಿತ ಕಾಲೇಜುಗಳಾಗಿವೆ.

ಎಂಜಿನಿಯರಿಂಗ್‌ ಕಾಲೇಜುಗಳತ್ತ ವಿದ್ಯಾರ್ಥಿಗಳು!
ಈ ಬಾರಿಯ ಮತ್ತೊಂದು ಬೆಳವಣಿಗೆ ಎಂದರೆ ಎಂಜಿನಿಯರಿಂಗ್‌-ಮ್ಯಾನೇಜ್‌ಮೆಂಟ್‌ ಕಾಲೇಜುಗಳಲ್ಲಿ ಆರಂಭಗೊಂಡಿರುವ ಬಿಬಿಎ, ಬಿಸಿಎ ಕೋರ್ಸ್‌ಗಳು. ಎಐಸಿಟಿಇನಿಂದ ಮಾನ್ಯತೆ ಪಡೆದುಕೊಂಡು ಈ ಕೋರ್ಸ್‌ಗಳನ್ನು ಆರಂಭಿಸಲಾಗಿದ್ದು, ಇತರ ಪದವಿ ಕೋರ್ಸ್‌ಗಳಿಗೆ ಹೋಗುವ ವಿದ್ಯಾರ್ಥಿಗಳು ಬಿಸಿಎಯತ್ತ ಮುಖ ಮಾಡಿದ್ದಾರೆ. ಇದು ಓಪನ್‌ ಎಂಡೆಡ್‌ ಕೋರ್ಸ್‌ ಆಗಿದ್ದು, ಕಲೆ, ವಿಜ್ಞಾನ, ವಾಣಿಜ್ಯ ಮೂರೂ ವಿಭಾಗದ ವಿದ್ಯಾರ್ಥಿಗಳೂ ಸೇರಬಹುದು. ಅಲ್ಲದೆ ಹೆಚ್ಚು ಉದ್ಯೋಗಾವಕಾಶವೂ ಇದೆ ಎಂಬ ಕಾರಣಕ್ಕೆ ಬಿಸಿಎ ಕೋರ್ಸ್‌ಗೆ ಹೆಚ್ಚಿನ ಬೇಡಿಕೆ ಇದೆ.

ಈ ಬಾರಿ ಆಗಸ್ಟ್‌ 8ಕ್ಕೆ ಪ್ರಾರಂಭಕ್ಕೆ ಸಿದ್ಧತೆ: ಡಾ| ಧರ್ಮ ಕಳೆದ ಎರಡು ಶೈಕ್ಷಣಿಕ ವರ್ಷಕ್ಕೆ ಹೋಲಿಸಿದರೆ ಈ ಬಾರಿ ತುಸು ಬೇಗನೆ, ಅಂದರೆ ಆಗಸ್ಟ್‌ 8ರ ಹೊತ್ತಿಗೆ ಪದವಿ ತರಗತಿ ಆರಂಭಿಸುವ ಉದ್ದೇಶವಿದೆ ಎಂದು ಮಂಗಳೂರು ವಿವಿ ಕುಲಪತಿ ಪ್ರೊ| ಪಿ.ಎಲ್‌. ಧರ್ಮ ತಿಳಿಸಿದ್ದಾರೆ. ಇದಕ್ಕಾಗಿ ಜು.8ರಂದು ಪದವಿ ಕಾಲೇಜು ಪ್ರಾಂಶುಪಾಲರನ್ನು ಕರೆದು ಸಮಾಲೋಚನೆ ನಡೆಸಲಾಗುವುದು. ಅಲ್ಲದೆ ಜು.15 ಅಥವಾ 16ರಂದು ಉನ್ನತ ಶಿಕ್ಷಣ ಸಚಿವರನ್ನು ಭೇಟಿಯಾಗಿ ಮಾತನಾಡಲಾಗುವುದು ಎಂದೂ ಉದಯವಾಣಿಗೆ ತಿಳಿಸಿದ್ದಾರೆ.

– ವೇಣುವಿನೋದ್‌ ಕೆ.ಎಸ್‌.

ಟಾಪ್ ನ್ಯೂಸ್

Agra: ಶಿಕ್ಷಕಿಯ ಆಕ್ಷೇಪಾರ್ಹ ವಿಡಿಯೋ ಹಂಚಿಕೊಂಡ ವಿದ್ಯಾರ್ಥಿಗಳು; ನಾಲ್ವರ ಬಂಧನ

Agra: ಶಿಕ್ಷಕಿಯ ಆಕ್ಷೇಪಾರ್ಹ ವಿಡಿಯೋ ಹಂಚಿಕೊಂಡ ವಿದ್ಯಾರ್ಥಿಗಳು; ನಾಲ್ವರ ಬಂಧನ

2-kulur-1

Kuloor: ಮೊಯ್ದೀನ್‌ ಬಾವಾ ಸೋದರ ಮಮ್ತಾಜ್‌ ಅಲಿ ನಾಪತ್ತೆ; ಅಪಘಾತ ಸ್ಥಿತಿಯಲ್ಲಿ ಕಾರು ಪತ್ತೆ

Navratri special: ಮತ್ತೆ ಪರಪಂಚಕೆ ಸಿಗುವುದೇ ಉಸಿರಲಿ ಬೆರೆಯುವ ಹಸಿರಾದ ಪ್ರೀತಿ?

Navratri special: ಮತ್ತೆ ಪರಪಂಚಕೆ ಸಿಗುವುದೇ ಉಸಿರಲಿ ಬೆರೆಯುವ ಹಸಿರಾದ ಪ್ರೀತಿ?

Martin: ಇಂದು ಧ್ರುವ ಸರ್ಜಾ ಬರ್ತ್‌ಡೇ; ದಾವಣಗೆರೆಯಲ್ಲಿ ಪ್ರೀ ರಿಲೀಸ್‌ ಇವೆಂಟ್‌

Martin: ಇಂದು ಧ್ರುವ ಸರ್ಜಾ ಬರ್ತ್‌ಡೇ; ದಾವಣಗೆರೆಯಲ್ಲಿ ಪ್ರೀ ರಿಲೀಸ್‌ ಇವೆಂಟ್‌

Kumara-Parvatha

New Guideline For Trekkers: ಇಂದಿನಿಂದ ಕುಮಾರ ಪರ್ವತ ಚಾರಣಕ್ಕೆ ಅವಕಾಶ

Malpe-See-Ambulance

Tender Open: ತುರ್ತು ಸೇವೆಗೆ ಬರಲಿದೆ ಮೂರು ಸೀ ಆ್ಯಂಬುಲೆನ್ಸ್‌

Bus-Travel-1

Mangaluru: ಖಾಸಗಿ ಬಸ್ಸಿಗೆ “ಇಸ್ರೇಲ್‌’ ಹೆಸರು; ಆಕ್ಷೇಪದ ಬಳಿಕ “ಜೆರುಸಲೇಂ”!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

2-kulur-1

Kuloor: ಮೊಯ್ದೀನ್‌ ಬಾವಾ ಸೋದರ ಮಮ್ತಾಜ್‌ ಅಲಿ ನಾಪತ್ತೆ; ಅಪಘಾತ ಸ್ಥಿತಿಯಲ್ಲಿ ಕಾರು ಪತ್ತೆ

Bus-Travel-1

Mangaluru: ಖಾಸಗಿ ಬಸ್ಸಿಗೆ “ಇಸ್ರೇಲ್‌’ ಹೆಸರು; ಆಕ್ಷೇಪದ ಬಳಿಕ “ಜೆರುಸಲೇಂ”!

Mulki: ಮಾದಕ ವಸ್ತು ಸಾಗಾಟ ಆರೋಪಿಗಳ ಸೆರೆ

Mulki: ಮಾದಕ ವಸ್ತು ಸಾಗಾಟ ಆರೋಪಿಗಳ ಸೆರೆ

16

Ullal: ನಾಪತ್ತೆಯಾಗಿದ್ದ ವ್ಯಕ್ತಿಯ ಶವ ಬಾವಿಯಲ್ಲಿ ಪತ್ತೆ

17-mng-dasara

Mangaluru Dasara: ನವರಾತ್ರಿ, ಶಾರದಾ ಮಹೋತ್ಸವ: ಪೊಲೀಸರಿಂದ ಮಾರ್ಗಸೂಚಿ

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

Agra: ಶಿಕ್ಷಕಿಯ ಆಕ್ಷೇಪಾರ್ಹ ವಿಡಿಯೋ ಹಂಚಿಕೊಂಡ ವಿದ್ಯಾರ್ಥಿಗಳು; ನಾಲ್ವರ ಬಂಧನ

Agra: ಶಿಕ್ಷಕಿಯ ಆಕ್ಷೇಪಾರ್ಹ ವಿಡಿಯೋ ಹಂಚಿಕೊಂಡ ವಿದ್ಯಾರ್ಥಿಗಳು; ನಾಲ್ವರ ಬಂಧನ

2-kulur-1

Kuloor: ಮೊಯ್ದೀನ್‌ ಬಾವಾ ಸೋದರ ಮಮ್ತಾಜ್‌ ಅಲಿ ನಾಪತ್ತೆ; ಅಪಘಾತ ಸ್ಥಿತಿಯಲ್ಲಿ ಕಾರು ಪತ್ತೆ

Navratri special: ಮತ್ತೆ ಪರಪಂಚಕೆ ಸಿಗುವುದೇ ಉಸಿರಲಿ ಬೆರೆಯುವ ಹಸಿರಾದ ಪ್ರೀತಿ?

Navratri special: ಮತ್ತೆ ಪರಪಂಚಕೆ ಸಿಗುವುದೇ ಉಸಿರಲಿ ಬೆರೆಯುವ ಹಸಿರಾದ ಪ್ರೀತಿ?

Martin: ಇಂದು ಧ್ರುವ ಸರ್ಜಾ ಬರ್ತ್‌ಡೇ; ದಾವಣಗೆರೆಯಲ್ಲಿ ಪ್ರೀ ರಿಲೀಸ್‌ ಇವೆಂಟ್‌

Martin: ಇಂದು ಧ್ರುವ ಸರ್ಜಾ ಬರ್ತ್‌ಡೇ; ದಾವಣಗೆರೆಯಲ್ಲಿ ಪ್ರೀ ರಿಲೀಸ್‌ ಇವೆಂಟ್‌

Kumara-Parvatha

New Guideline For Trekkers: ಇಂದಿನಿಂದ ಕುಮಾರ ಪರ್ವತ ಚಾರಣಕ್ಕೆ ಅವಕಾಶ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.