ಪದವಿ ಸ್ವೀಕರಿಸುವವರಿಗೆ “ವಸ್ತ್ರಸಂಹಿತೆ’ ಕಡ್ಡಾಯ!
ಮಂಗಳೂರು ವಿ.ವಿ.ಯಿಂದ ಘಟಿಕೋತ್ಸವದಲ್ಲಿ ನಿಯಮ ಪಾಲನೆಗೆ ಚಿಂತನೆ
Team Udayavani, Apr 7, 2022, 8:15 AM IST
ಮಂಗಳೂರು: ಮಂಗಳೂರು ವಿ.ವಿ. ಘಟಿಕೋತ್ಸವ ಸಂದರ್ಭ ರಾಜ್ಯ ಪಾಲರಿಂದ ಪದವಿ ಸ್ವೀಕರಿಸುವ ವಿದ್ಯಾರ್ಥಿಗಳು ಈ ಬಾರಿ ಕಡ್ಡಾಯವಾಗಿ “ವಸ್ತ್ರ ಸಂಹಿತೆ’ ಪಾಲಿಸಬೇಕು; ಇಲ್ಲ ವಾದರೆ ವೇದಿಕೆಯ ಮೇಲೆ ಪದವಿ ಸ್ವೀಕರಿಸಲು ಅನುಮತಿ ಇಲ್ಲ!
ವಿ.ವಿ.ಯ 40ನೇ ವಾರ್ಷಿಕ ಘಟಿಕೋತ್ಸವ ಎ. 23ರ ಬೆಳಗ್ಗೆ 11ಕ್ಕೆ ಮಂಗಳಗಂಗೋತ್ರಿಯಲ್ಲಿ ನಡೆಯಲಿದೆ. ಈ ವೇಳೆ ಪದವಿ ಪಡೆಯು ವವರು ಪೂರ್ಣ ಬಿಳಿ ಬಣ್ಣದ ಉಡುಗೆ ಧರಿಸಿರಬೇಕು. ನಿಯಮ ಪಾಲಿಸದಿದ್ದರೆ ವೇದಿ ಕೆಯಲ್ಲಿ ಸರ್ಟಿಫಿಕೇಟ್ ಸಿಗದು. ಅವರು ಕಾರ್ಯಕ್ರಮ ಮುಗಿದ ಬಳಿಕ ಸರ್ಟಿಫಿಕೇಟ್ ಪಡೆಯಬೇಕಾಗುತ್ತದೆ.
ಘಟಿಕೋತ್ಸವದಲ್ಲಿ ಪದವಿ ಪಡೆಯುವ ವಿದ್ಯಾರ್ಥಿಗಳು ಸಮವಸ್ತ್ರ ನಿಯಮ ಪಾಲಿಸು ವಂತೆ ನಿರ್ದೇಶನ ಈ ಹಿಂದೆಯೇ ಇತ್ತು. ಆದರೂ ಕೆಲವು ವಿದ್ಯಾರ್ಥಿಗಳು ಬಣ್ಣ ಬಣ್ಣದ ಬಟ್ಟೆ ಧರಿಸಿ ಬಂದು ಪದವಿ ಪಡೆದದ್ದಿದೆ. ಇದು ವಿ.ವಿ.ಯ ಶೈಕ್ಷಣಿಕ ಶಿಸ್ತಿಗೆ ವಿರುದ್ಧವಾದದ್ದು ಎಂದು ವಸ್ತ್ರಸಂಹಿತೆ ಕಡ್ಡಾಯ ಪಾಲನೆಗೆ ಈ ಬಾರಿ ನಿರ್ಧರಿಸಲಾಗಿದೆ. ವಿದ್ಯಾರ್ಥಿಗಳು ದಾಖಲಾತಿ ಪಡೆಯುವ ಸಂದರ್ಭ ಈ ಸೂಚನೆಯನ್ನು ಮಂಗಳೂರು ವಿ.ವಿ. ನೀಡಲಿದೆ ಎಂದು ಮಂಗಳೂರು ವಿ.ವಿ. ಕುಲಸಚಿವ (ಪರೀಕ್ಷಾಂಗ) ಪ್ರೊ| ಪಿ.ಎಲ್. ಧರ್ಮ ಹೇಳಿದ್ದಾರೆ.
ಈ ಬಾರಿ ಚಿನ್ನದ ಪದಕ!
ಮಂಗಳೂರು ವಿ.ವಿ.ಯ ಈ ಹಿಂದಿನ ಘಟಿಕೋತ್ಸವ ಸಂದರ್ಭ ಚಿನ್ನದ ಪದಕ ನೀಡಿರಲಿಲ್ಲ. ಯಾಕೆಂದರೆ ಚಿನ್ನದ ಮೌಲ್ಯ ದುಪ್ಪಟ್ಟಾಗಿತ್ತು. ಬದಲಾಗಿ, ಅವರಿಗೆ “ನಗದು ಬಹುಮಾನ ಪರಿವರ್ತಿತ’ ಎಂಬ ಮಾದರಿಯಲ್ಲಿ ನೀಡಲಾಗುತ್ತಿತ್ತು. ಈ ಬಾರಿ ಚಿನ್ನದ ಪದಕ ಪಡೆಯಲಿರುವವರಿಗೆ ಚಿನ್ನದ ಪದಕವನ್ನೇ ನೀಡಬೇಕು ಎಂದು ವಿ.ವಿ. ಚಿಂತನೆ ನಡೆಸಿದೆ.
ಘಟಿಕೋತ್ಸವದ ಮುನ್ನಾ ದಿನ ವಿದ್ಯಾರ್ಥಿಗಳು ವಿ.ವಿ.ಗೆ ಆಗಮಿಸಿ ದಾಖಲಾತಿ ಮಾಡಬೇಕು. ಆದರೆ ದೂರದ ಕೆಲವು ವಿದ್ಯಾರ್ಥಿಗಳಿಗೆ ಇದು ಸಮಸ್ಯೆ. ಹೀಗಾಗಿ ಈ ಪ್ರಕ್ರಿಯೆಯನ್ನು ಆನ್‌ಲೈನ್ ಮಾಡುವ ಬಗ್ಗೆಯೂ ವಿ.ವಿ. ಚಿಂತನೆ ನಡೆಸಿದೆ.
2 ಅಥವಾ 3 ಮಂದಿಗೆ ಗೌರವ ಡಾಕ್ಟರೇಟ್
ಮಂಗಳೂರು ವಿ.ವಿ.ಯ ಬಹುಮಹತ್ವದ “ಗೌರವ ಡಾಕ್ಟರೇಟ್’ ಈ ಬಾರಿ ಇಬ್ಬರು ಅಥವಾ ಮೂವರಿಗೆ ಸಿಗುವ ಸಾಧ್ಯತೆ ಇದೆ. ವಿ.ವಿ.ಯಿಂದ ಸುಮಾರು 10 ಮಂದಿಯ ಹೆಸರುಗಳನ್ನು ಶಿಫಾರಸು ಮಾಡಲಾಗಿತ್ತು. ಈ ಪೈಕಿ ಆಂತರಿಕ ತಂಡ 2-3 ಮಂದಿಯನ್ನು ಅಂತಿಮಗೊಳಿಸುವ ಸಾಧ್ಯತೆ ಇದೆ ಎನ್ನಲಾಗುತ್ತಿದೆ. ಕಳೆದ ವರ್ಷ ಗೌರವ ಡಾಕ್ಟರೇಟ್ ನೀಡಿರಲಿಲ್ಲ. ಅದಕ್ಕೂ ಹಿಂದಿನ ವರ್ಷ ಒಬ್ಬರಿಗೆ ಮಾತ್ರ ಪ್ರದಾನ ಮಾಡಲಾಗಿತ್ತು. ರಾಜ್ಯದ ಇತರ ವಿ.ವಿ.ಗಳಲ್ಲಿ ಇತ್ತೀಚೆಗೆ ನಡೆದ ಘಟಿಕೋತ್ಸವಗಳಲ್ಲಿ ಸರಾಸರಿ ಮೂವರಿಗೆ ಗೌರವ ಡಾಕ್ಟರೇಟ್ ನೀಡಲಾಗಿದೆ. ಹೀಗಾಗಿ ಮಂಗಳೂರು ವಿ.ವಿ.ಯಲ್ಲಿಯೂ ಇಬ್ಬರು ಅಥವಾ ಮೂವರಿಗೆ ಈ ಗೌರವ ಲಭಿಸಬಹುದೆನ್ನುವ ನಿರೀಕ್ಷೆಗೆ ಪುಷ್ಟಿ ದೊರೆತಿದೆ.
ಈ ಬಾರಿಯ ಘಟಿಕೋತ್ಸವ ಹಲವು ವಿಶೇಷಗಳನ್ನು ಒಳಗೊಂಡಿದೆ. ಇದೇ ಮೊದಲ ಬಾರಿಗೆ ರಾಜ್ಯಪಾಲರು ಘಟಿಕೋತ್ಸವದಲ್ಲಿ ಅಧ್ಯಕ್ಷೀಯ ಭಾಷಣ ಮಾಡಲಿದ್ದಾರೆ. ವಿಶೇಷ ವಾಗಿ ಪದವಿ ಸ್ವೀಕರಿಸುವವರು ಕಡ್ಡಾಯವಾಗಿ ವಿ.ವಿ. ಸೂಚಿಸುವ ಡ್ರೆಸ್‌ಕೋಡ್ ಪಾಲಿಸಬೇಕು. ಈ ಬಗ್ಗೆ ಎಲ್ಲ ವಿದ್ಯಾರ್ಥಿಗಳಿಗೆ ಸೂಚನೆ ನೀಡಲಾಗುತ್ತಿದೆ.
-ಪ್ರೊ| ಪಿ.ಎಸ್.ಯಡಪಡಿತ್ತಾಯ,
ಕುಲಪತಿಗಳು, ಮಂಗಳೂರು ವಿ.ವಿ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.