Mangalore University: ಮಾನವತಾವಾದದ ಮೌಲ್ಯ ಬೆಳೆಸಿಕೊಳ್ಳಿ:ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ

ಮಂಗಳೂರು ವಿವಿ ಸಂಸ್ಥಾಪನ ದಿನ

Team Udayavani, Sep 26, 2024, 12:39 AM IST

Mangalore University: ಮಾನವತಾವಾದದ ಮೌಲ್ಯ ಬೆಳೆಸಿಕೊಳ್ಳಿ:ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ

ಉಳ್ಳಾಲ: ಯುವಜನರು ತಮ್ಮ ಜೀವನದಲ್ಲಿ ಸಂತೃಪ್ತಿ ಮತ್ತು ಮಾನವತಾವಾದದ ಮೌಲ್ಯಗಳನ್ನು ಬೆಳೆಸಿಕೊಳ್ಳಬೇಕು ಎಂದು ಮಾಜಿ ಲೋಕಾಯುಕ್ತ ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ ಹೇಳಿದರು.

ಕೊಣಾಜೆ ಮಂಗಳಗಂಗೋತ್ರಿ ಕ್ಯಾಂಪಸ್‌ನಲ್ಲಿರುವ ಮಂಗಳಾ ಸಭಾಂಗಣದಲ್ಲಿ ಬುಧವಾರ ಮಂಗಳೂರು ವಿಶ್ವವಿದ್ಯಾನಿಲಯದ 45ನೇ ಸಂಸ್ಥಾಪನ ದಿನದ ಉಪನ್ಯಾಸ ನೀಡಿದ ಅವರು, ನಾವು ದುರಾಸೆಯ ರೋಗವನ್ನು ತೊಡೆದು ಹಾಕಿದರೆ ದೇಶದ ಆರ್ಥಿಕ ಪರಿಸ್ಥಿತಿ ತುಂಬಾ ಉತ್ತಮವಾಗಿರುತ್ತದೆ. ನಮ್ಮಲ್ಲಿ ಕಾನೂನುಬದ್ಧ ಸಂಪತ್ತು ಇದ್ದಾಗ, ನಾವು ಐಟಿ/ಇಡಿ ದಾಳಿಗಳ ಬಗ್ಗೆ ಚಿಂತಿಸಬೇಕಾಗಿಲ್ಲ.

ಭ್ರಷ್ಟಾಚಾರ ಮುಂದುವರಿದರೆ ದೇಶದಲ್ಲಿ ಕ್ರಾಂತಿ ಉಂಟಾಗುತ್ತದೆ. ದೇಶ ತುಂಡಾಗುವ ಭೀತಿ ಇದೆ. ಆಗ ನ್ಯಾಯತೀರ್ಮಾನಕ್ಕೆ ಸುಪ್ರೀಂಕೋರ್ಟ್‌ ಕೂಡ ಇಲ್ಲದ ಪರಿಸ್ಥಿತಿ ತಲೆದೋರಬಹುದು. ದೇಶ ರಣಾಂಗಣವಾಗಲಿದೆ. ದೇಶದ ಭವಿಷ್ಯದ ಬಗ್ಗೆ ಗಂಭೀರವಾಗಿ ಯೋಚಿಸಿ ಈಗಿಂದಲೇ ಮಾನವೀಯ ಮೌಲ್ಯಗಳನ್ನು ಜೀವನದಲ್ಲಿ ರೂಢಿಸಿಕೊಳ್ಳುವ ಅಗತ್ಯ ಇದೆ. ದೇಶವನ್ನು ಕಾಡುತ್ತಿರುವ ಭ್ರಷ್ಟಾಚಾರವನ್ನು ನಿರ್ಮೂಲ ಮಾಡುವ ಮೂಲಕ ಸಮಾಜವನ್ನು ಪರಿಷ್ಕರಿಸುವ ಕಾರ್ಯ ಆಗಬೇಕು ಎಂದರು.

ರಾಜಕೀಯ ವೃತ್ತಿಯಾಗಿದೆ
ಜನರು ಸೇವೆಗಾಗಿ ರಾಜಕೀಯಕ್ಕೆ ಬರಬೇಕೇ ಹೊರತು ಹಣ ಗಳಿಸಲು ಅಲ್ಲ. ದುರದೃಷ್ಟವಶಾತ್‌ ಇಂದು ರಾಜಕೀಯವು ಒಂದು ವೃತ್ತಿಯಾಗಿ ಮಾರ್ಪಟ್ಟಿದೆ. ಈ ಹಿಂದೆ ಚುನಾಯಿತ ಪ್ರತಿನಿಧಿಗಳಿಗೆ ವೇತನ ಇರಲಿಲ್ಲ. ಈಗ ಸಂಸತ್ತಿನ ಅಧಿವೇಶನಗಳು 120 ದಿನಗಳ ಕಾಲ ನಡೆಯುತ್ತಿದ್ದರೂ, ಅವರಿಗೆ ವೇತನ ನೀಡಲಾಗುತ್ತದೆ ಎಂದರು. ಚುನಾಯಿತ ಪ್ರತಿನಿಧಿಗಳು ಜನರ ಕಲ್ಯಾಣಕ್ಕಾಗಿ ತಮ್ಮ ಪಾತ್ರದ ಮಹತ್ವವನ್ನು ಅರಿತುಕೊಳ್ಳದೆ ಸಂಸತ್ತು ಮತ್ತು ರಾಜ್ಯ ವಿಧಾನಸಭೆಗಳಲ್ಲಿ ಕಲಾಪಗಳನ್ನು ಸ್ಥಗಿತಗೊಳಿಸಿದ್ದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ನ್ಯಾ| ಹೆಗ್ಡೆ, ಇಂದು ಯಾವುದೇ ಚರ್ಚೆಯಿಲ್ಲದೆ ಮಸೂದೆಗಳನ್ನು ಅಂಗೀಕರಿಸಲಾಗುತ್ತದೆ ಎಂದರು.

ಅಧಿಕಾರಶಾಹಿಯಲ್ಲಿನ ಮೌಲ್ಯಗಳ ಕುಸಿತ
ನೇಮಕಾತಿಗಳ ಸಮಯದಲ್ಲಿ ಅತಿರೇಕದ ಭ್ರಷ್ಟಾಚಾರಕ್ಕೆ ಕಾರಣ ವಾಗಿದೆ. ಲಂಚ ನೀಡುವ ಮೂಲಕ ನೇಮಕ ಗೊಳ್ಳುವ ಅಧಿಕಾರಿಗಳು ನಿರ್ಗತಿಕರಿಗೆ ಹೇಗೆ ನ್ಯಾಯ ಒದಗಿಸುತ್ತಾರೆ ಎಂದು ಪ್ರಶ್ನಿಸಿದ ನ್ಯಾ| ಹೆಗ್ಡೆ, ನಾವು ಸಂವಿಧಾನದ ಆಕಾಂಕ್ಷೆಯಿಂದ ದೂರ ಸರಿಯುತ್ತಿದ್ದೇವೆ. ಭ್ರಷ್ಟಾಚಾರ ತಡೆ ಕಾಯ್ದೆಯಡಿ ಶಿಕ್ಷೆ ಪ್ರಮಾಣವು ಕೇವಲ ಶೇ. 27 ಆಗಿದೆ. ಇದರಿಂದಾಗಿ ಯಾರೂ ಹೆದರುವುದಿಲ್ಲ ಎಂದರು.

ಕುಲಪತಿ ಪ್ರೊ| ಪಿ.ಎಲ್‌.ಧರ್ಮ ಅಧ್ಯಕ್ಷತೆ ವಹಿಸಿ ಮಾತನಾಡಿ, ಉನ್ನತ ಶಿಕ್ಷಣಕ್ಕೆ 45 ವರ್ಷಗಳಿಂದ ಅಪಾರ ಕೊಡುಗೆ ನೀಡುತ್ತಿರುವ ಮಂಗಳೂರು ವಿವಿಯನ್ನು ಉಳಿಸಿಕೊಳ್ಳುವ ಕೆಲಸ ಆಗಬೇಕು. ಮುಂದಿನ ಭವಿಷ್ಯಕ್ಕಾಗಿ ಹಕ್ಕನ್ನು ಬದಿಗೆ ಸರಿಸಿ, ಕರ್ತವ್ಯದ ಬಗ್ಗೆ ಪ್ರತಿಜ್ಞೆ ಕೈಗೊಳ್ಳಬೇಕು ಎಂದರು.

ಪರೀಕ್ಷಾಂಗ ಕುಲಸಚಿವ ದೇವೇಂದ್ರಪ್ಪ ಸ್ವಾಗತಿಸಿದರು. ಕಾರ್ಯಕ್ರಮ ಸಂಯೋಜಕ ಪ್ರೊ| ಎ.ಎಂ.ಖಾನ್‌ ವಂದಿಸಿದರು. ಶ್ರೀದೇವಿ ಕಾರ್ಯಕ್ರಮ ನಿರ್ವಹಿಸಿದರು.

ಟಾಪ್ ನ್ಯೂಸ್

JDS

MUDA Case: ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಜೆಡಿಎಸ್‌ ಪಟ್ಟು, ಪ್ರತಿಭಟನೆ

Udupi: ಗೀತಾರ್ಥ ಚಿಂತನೆ-46: ಖರ್ಚಿಲ್ಲದ ಪ್ರೀತಿ, ಸ್ನೇಹದಿಂದಲೇ ಭಗವಂತನೊಲುಮೆ

Udupi: ಗೀತಾರ್ಥ ಚಿಂತನೆ-46: ಖರ್ಚಿಲ್ಲದ ಪ್ರೀತಿ, ಸ್ನೇಹದಿಂದಲೇ ಭಗವಂತನೊಲುಮೆ

DK-Shivakumar

MUDA Case: ಸಿಎಂ ತಪ್ಪು ಮಾಡಿಲ್ಲ, ಅಧಿಕಾರಿಗಳು ಮಾಡಿರಬಹುದು: ಡಿ.ಕೆ.ಶಿವಕುಮಾರ್‌

Parameshwar

MUDA Case: ಅಭಿಯೋಜನೆಗೆ ಅನುಮತಿ ಎಲ್ಲರಿಗೂ ಅನ್ವಯ ಆಗಲಿ: ಗೃಹ ಸಚಿವ ಡಾ.ಜಿ. ಪರಮೇಶ್ವರ್‌

Mangalore University: ಮಾನವತಾವಾದದ ಮೌಲ್ಯ ಬೆಳೆಸಿಕೊಳ್ಳಿ:ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ

Mangalore University: ಮಾನವತಾವಾದದ ಮೌಲ್ಯ ಬೆಳೆಸಿಕೊಳ್ಳಿ:ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ

ಬ್ಯಾಂಕ್‌ಗಳಲ್ಲಿ ಕನ್ನಡ ಕಡ್ಡಾಯ ಮಾಡಿ: ಜಿಪಂ ಸಿಇಒ ಪ್ರತೀಕ್‌ ಬಾಯಲ್‌

Manipal: ಬ್ಯಾಂಕ್‌ಗಳಲ್ಲಿ ಕನ್ನಡ ಕಡ್ಡಾಯ ಮಾಡಿ: ಜಿಪಂ ಸಿಇಒ ಪ್ರತೀಕ್‌ ಬಾಯಲ್‌

Arrest

Ajjampura: ಪತ್ನಿಯ ಶೀಲ ಶಂಕಿಸಿ 5 ವರ್ಷದ ಮಗಳನ್ನೇ ಕೊಂದ ತಂದೆ ಬಂಧನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ವಿಧಾನ ಪರಿಷತ್‌ ಉಪಚುನಾವಣೆ; ಡಿಸಿ ಕಚೇರಿ ಸುತ್ತ ನಿಷೇಧಾಜ್ಞೆ

Mangaluru: ವಿಧಾನ ಪರಿಷತ್‌ ಉಪಚುನಾವಣೆ; ಡಿಸಿ ಕಚೇರಿ ಸುತ್ತ ನಿಷೇಧಾಜ್ಞೆ

Mangaluru: ಬೆಳೆ ವಿಮೆ ಯೋಜನೆ: ದ.ಕ.ಕ್ಕೆ 349 ಕೋ. ರೂ.

Mangaluru: ಬೆಳೆ ವಿಮೆ ಯೋಜನೆ: ದ.ಕ.ಕ್ಕೆ 349 ಕೋ. ರೂ.

Mangaluru: ಅನುಮಾನಾಸ್ಪದ ಸಾವು ಪ್ರಕರಣ: ಆರೋಗ್ಯ ಇಲಾಖೆಯಿಂದ ತಂಡ

Mangaluru: ಅನುಮಾನಾಸ್ಪದ ಸಾವು ಪ್ರಕರಣ: ಆರೋಗ್ಯ ಇಲಾಖೆಯಿಂದ ತಂಡ

WhatsApp Image 2024-09-25 at 20.56.17

Mangaluru: ಆ್ಯಂಬುಲೆನ್ಸ್‌ ಪಲ್ಟಿ; ರೋಗಿ ಸಾವು

10

Kodailbail: ಕೆ.ಎಸ್‌.ರಾವ್‌ ರಸ್ತೆ; ಪಾದಚಾರಿಗಳಿಗಿಲ್ಲ ಸುರಕ್ಷತೆ !

MUST WATCH

udayavani youtube

ಉಡುಪಿಯ ಈ ಜಾಗದಲ್ಲಿ ರಸಂ ಪುರಿ ತುಂಬಾನೇ ಫೇಮಸ್

udayavani youtube

ತಿರುಪತಿ ಲಡ್ಡು ವಿವಾದ ಪೇಜಾವರ ಶ್ರೀಗಳು ಹೇಳಿದ್ದೇನು ?

udayavani youtube

Kaljigaದಲ್ಲಿ ದೈವದ ಅಪಪ್ರಚಾರ ನಡೆದಿಲ್ಲ, ಸಿನಿಮಾ ನೋಡಿದ ಬಳಿಕ ಈ ಬಗ್ಗೆ ಪ್ರತಿಕ್ರಿಯಿಸಿ

udayavani youtube

ನವಜಾತ ಶಿಶುಗಳಲ್ಲಿ ಶ್ರವಣ ಶಕ್ತಿ ಸಮಸ್ಯೆ ಕುರಿತು ಸಂಪೂರ್ಣ ಮಾಹಿತಿ

udayavani youtube

ಅಂತರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ ಅಂಗವಾಗಿ ತಾಲೂಕು ಮಟ್ಟದ ಮಾನವ ಸರಪಳಿ ಕಾರ್ಯಕ್ರಮ

ಹೊಸ ಸೇರ್ಪಡೆ

JDS

MUDA Case: ಸಿಎಂ ಸಿದ್ದರಾಮಯ್ಯ ರಾಜೀನಾಮೆಗೆ ಜೆಡಿಎಸ್‌ ಪಟ್ಟು, ಪ್ರತಿಭಟನೆ

Udupi: ಗೀತಾರ್ಥ ಚಿಂತನೆ-46: ಖರ್ಚಿಲ್ಲದ ಪ್ರೀತಿ, ಸ್ನೇಹದಿಂದಲೇ ಭಗವಂತನೊಲುಮೆ

Udupi: ಗೀತಾರ್ಥ ಚಿಂತನೆ-46: ಖರ್ಚಿಲ್ಲದ ಪ್ರೀತಿ, ಸ್ನೇಹದಿಂದಲೇ ಭಗವಂತನೊಲುಮೆ

DK-Shivakumar

MUDA Case: ಸಿಎಂ ತಪ್ಪು ಮಾಡಿಲ್ಲ, ಅಧಿಕಾರಿಗಳು ಮಾಡಿರಬಹುದು: ಡಿ.ಕೆ.ಶಿವಕುಮಾರ್‌

Parameshwar

MUDA Case: ಅಭಿಯೋಜನೆಗೆ ಅನುಮತಿ ಎಲ್ಲರಿಗೂ ಅನ್ವಯ ಆಗಲಿ: ಗೃಹ ಸಚಿವ ಡಾ.ಜಿ. ಪರಮೇಶ್ವರ್‌

Mangalore University: ಮಾನವತಾವಾದದ ಮೌಲ್ಯ ಬೆಳೆಸಿಕೊಳ್ಳಿ:ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ

Mangalore University: ಮಾನವತಾವಾದದ ಮೌಲ್ಯ ಬೆಳೆಸಿಕೊಳ್ಳಿ:ನ್ಯಾಯಮೂರ್ತಿ ಸಂತೋಷ್‌ ಹೆಗ್ಡೆ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.