ಮಂಗಳೂರು ವಿವಿ ಘಟಕ ಕಾಲೇಜು: ಮುಂದಿನ ವರ್ಷ ನೆಲ್ಯಾಡಿಯಲ್ಲಿ ಕಾರ್ಯಾರಂಭ

Team Udayavani, Aug 5, 2017, 9:00 AM IST

Nellyadi-VV-4-8.jpg

ನೆಲ್ಯಾಡಿ: ನೆಲ್ಯಾಡಿಯ ಬಹುಕಾಲದ ಬೇಡಿಕೆಯಾದ ವಿ.ವಿ. ಕಾಲೇಜು ಘಟಕ ನಿರ್ಮಾಣಕ್ಕೆ ಸಂಬಂಧಿಸಿ ಕಟ್ಟಡ ನಿರ್ಮಿಸಲು 20ರಿಂದ 25 ಕೋಟಿ ರೂ.ಅಗತ್ಯವಿದೆ. ಇದು ಸರಕಾರದ ಮಟ್ಟದಲ್ಲಿ ಮಂಜೂರಾತಿಗೊಂಡು ಬರುವಾಗ ತಡವಾಗುವುದರಿಂದ ಈಗ ಇಲ್ಲಿ ಸರಳ ಕಟ್ಟಡ ನಿರ್ಮಿಸಿ ಮುಂದಿನ ವರ್ಷದಿಂದಲೇ ಕಾಲೇಜು ಕಾರ್ಯಾರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ಮಂಗಳೂರು ವಿ.ವಿ ಕುಲಪತಿ ಡಾ| ಭೈರಪ್ಪ ತಿಳಿಸಿದರು. ಅವರು ನೆಲ್ಯಾಡಿ ಗ್ರಾ.ಪಂ. ಕಚೇರಿ ಸಭಾಂಗಣದಲ್ಲಿ ನೆಲ್ಯಾಡಿಯಲ್ಲಿ ಮಂಗಳೂರು ವಿ.ವಿ. ಘಟಕ ಕಾಲೇಜು ಆರಂಭಕ್ಕೆ ಸಂಬಂಧಿಸಿದಂತೆ ನಡೆದ ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಮಂಗಳೂರು ವಿವಿ ಸಿಂಡಿಕೇಟ್‌ ಸದಸ್ಯ ವಿಜಯಕುಮಾರ್‌ ಸೊರಕೆಯವರ ಕಾಳಜಿಯಿಂದ ಹಾಗೂ ನೆಲ್ಯಾಡಿ ಗ್ರಾ.ಪಂ.ನ ಸಹಕಾರದಿಂದಾಗಿ ನೆಲ್ಯಾಡಿಯಲ್ಲಿ ವಿವಿ ಘಟಕ ಸ್ಥಾಪನೆಗೆ ಮಂಜೂರಾಗಿರುವ 25 ಎಕ್ರೆ ಜಾಗದಲ್ಲಿ ಕಾಲೇಜು ಕಟ್ಟಡ, ವಿದ್ಯಾರ್ಥಿ ನಿಲಯ, ಆಟದ ಮೈದಾನ, ಉದ್ಯಾನವನ ಸೇರಿದಂತೆ ಇತರೆ ಆವಶ್ಯಕ ಕಾಮಗಾರಿ ನಡೆಸುವ ಬಗ್ಗೆ ನೀಲನಕ್ಷೆ ಸಿದ್ಧಪಡಿಸಿ, ಸಿಂಡಿಕೇಟ್‌ ಸಭೆಯಲ್ಲಿಟ್ಟು ಅನುಮೋದನೆಗೊಂಡ ಬಳಿಕ ಸರಕಾರಕ್ಕೆ ಸಲ್ಲಿಸಲಾಗುವುದು. ಮಂಗಳೂರು ವಿವಿಯ ನಾಲ್ಕು ಘಟಕ ಕಾಲೇಜುಗಳು ಈಗಾಗಲೇ ಕಾರ್ಯಾರಂಭಿಸುತ್ತಿದ್ದು ನೆಲ್ಯಾಡಿಯಲ್ಲಿ ಆರಂಭಗೊಳ್ಳುತ್ತಿರುವುದು 5ನೇ ಘಟಕ ಕಾಲೇಜು ಆಗಿದೆ. ಕೊಡಗು, ಉಡುಪಿ, ಕೊಣಾಜೆ ವಿವಿ ಆವರಣ ಹಾಗೂ ಮಂಗಳೂರಿನಲ್ಲಿ ಸಂಧ್ಯಾ ಕಾಲೇಜು ಈಗಾಗಲೇ ನಡೆಯುತ್ತಿವೆ. ಮಂಗಳೂರಿನಲ್ಲಿ ಇನ್ನೊಂದು ಘಟಕ ಕಾಲೇಜಿನ ಆರಂಭಕ್ಕೂ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ಕಾಪು ಬೆಳಪುನಲ್ಲಿ ವಿಜ್ಞಾನ ಸಂಶೋಧನಾ ಕಾಲೇಜು ಆರಂಭಗೊಳ್ಳಲಿದ್ದು ಇದಕ್ಕೆ ಸರಕಾರದಿಂದ ಈಗಾಗಲೇ 75 ಕೋಟಿ ರೂ.ಅನುದಾನ ಘೋಷಣೆಯಾಗಿದೆ ಎಂದು ಭೈರಪ್ಪ ಹೇಳಿದರು. ಮಂಗಳೂರು ವಿವಿಗೆಂದೇ ಗೀತೆಯೊಂದು ಸಿದ್ಧಗೊಳ್ಳುತ್ತಿದ್ದು ಗುರುಕಿರಣ್‌ ಸಂಗೀತ ನೀಡುತ್ತಿದ್ದಾರೆ. ಮುಂದಿನ ಸೆಪ್ಟಂಬರ್‌ ವೇಳೆಗೆ ಇದು ಅಂತಿಮಗೊಳ್ಳಲಿದೆ ಎಂದು ತಿಳಿಸಿದರು.

ದೀಪಾವಳಿ ವೇಳೆ ಶಂಕುಸ್ಥಾಪನೆ
ದೀಪಾವಳಿ ವೇಳೆಗೆ ನೂತನ ಕಟ್ಟಡಕ್ಕೆ ಶಂಕುಸ್ಥಾಪನೆ ನೆರವೇರಿಸಲು ಕ್ರಮಕೈಗೊಳ್ಳಲಾಗುವುದು. ಕಟ್ಟಡ ಶಂಕುಸ್ಥಾಪನೆಗೆ ಮುಖ್ಯಮಂತ್ರಿಗಳನ್ನು ಆಹ್ವಾನಿಸಲಾಗುವುದು. ಇಲ್ಲಿ ಆರಂಭಗೊಳ್ಳುವ ಕಾಲೇಜಿಗೆ ಈ ನಾಡಿನ ಸಂಸ್ಕೃತಿ, ಕಲೆ ಬಿಂಬಿಸುವ ಅಥವಾ ಹೋರಾಟಗಾರರ, ಗಣನೀಯ ಸೇವೆ ಸಲ್ಲಿಸಿದ, ದಾನಿಗಳ ಹೆಸರು ನಮೂದಿಸಲು ಅವಕಾಶವಿದೆ. ಇದನ್ನು ಇಲ್ಲಿನ ಸ್ಥಳೀಯರೇ ನಿರ್ಧರಿಸಿ, ಹೆಸರು ಸೂಚಿಸಿ ಎಂದು ಹೇಳಿದರು. ಮುಂದಿನ ಶೈಕ್ಷಣಿಕ ವರ್ಷದಿಂದ ಇಲ್ಲಿ ಬಿ.ಎ., ಬಿ.ಕಾಂ., ಬಿ.ಎಸ್ಸಿ., ಬಿ.ಬಿ.ಎ., ಸೇರಿದಂತೆ ಪದವಿ ತರಗತಿಗಳು ಆರಂಭಗೊಳ್ಳಲಿದೆ. ಮುಂದಿನ ನಾಲ್ಕೈದು ವರ್ಷಗಳ ಬಳಿಕ ಇಲ್ಲಿನ ಪರಿಸ್ಥಿತಿ ನೋಡಿಕೊಂಡು ಎಂ.ಎ., ಎಂ.ಕಾಂ., ಸೇರಿದಂತೆ ಸ್ನಾತಕೋತ್ತರ ಪದವಿ ತರಗತಿಗಳ ಆರಂಭಕ್ಕೆ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದರು. ಸಭೆಯ ಬಳಿಕ ಕುಲಪತಿಯವರು ಮಂಗಳೂರು ವಿವಿಗೆ ಕಾದಿರಿಸಿದ ಜಾಗಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು.

ಮಂಗಳೂರು ವಿವಿ ಸಿಂಡಕೇಟ್‌ ಸದಸ್ಯ ವಿಜಯಕುಮಾರ್‌ ಸೊರಕೆ, ಜಿ.ಪಂ.ಸದಸ್ಯ ಸರ್ವೋತ್ತಮ ಗೌಡ, ತಾ.ಪಂ.ಸದಸ್ಯೆ ಉಷಾ ಅಂಚನ್‌ ಮಾತನಾಡಿದರು. ತಾ.ಪಂ. ಸದಸ್ಯೆಯರಾದ ಆಶಾ ಲಕ್ಷ್ಮಣ್‌, ಕೆ.ಟಿ.ವಲ್ಸಮ್ಮ, ನೆಲ್ಯಾಡಿ ಗ್ರಾ.ಪಂ.ಅಧ್ಯಕ್ಷ ಜಯಾನಂದ ಬಂಟ್ರಿಯಾಲ್‌, ಪಿಡಿಒ ದೇವರಾಜ್‌ ವೇದಿಕೆಯಲ್ಲಿ ಉಪಸ್ಥಿತರಿದ್ದರು. ನೆಲ್ಯಾಡಿ ಸಂತಜಾರ್ಜ್‌ ವಿದ್ಯಾಸಂಸ್ಥೆಯ ಸಂಚಾಲಕ ಅಬ್ರಹಾಂ ವರ್ಗೀಸ್‌ ಸ್ವಾಗತಿಸಿದರು. ನೆಲ್ಯಾಡಿ ದ.ಕ.ಜಿ.ಪಂ.ಉ.ಹಿ.ಪ್ರಾ.ಶಾಲೆಯ ಸಹಶಿಕ್ಷಕ ವಿಮಲ್‌ ಕುಮಾರ್‌ ಕಾರ್ಯಕ್ರಮ ನಿರೂಪಿಸಿದರು.

ಟಾಪ್ ನ್ಯೂಸ್

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Kasaragod: ಬಾಲಕಿಯೊಂದಿಗೆ ಅನುಚಿತ ವರ್ತನೆ: ಯುವಕನ ಬಂಧನ

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ

Mangaluru: ಷೇರು ಮಾರುಕಟ್ಟೆಯಲ್ಲಿ ಹೂಡಿಕೆ ನೆಪದಲ್ಲಿ 10.84 ಲಕ್ಷ ರೂ. ವಂಚನೆ: ಆರೋಪಿ ಬಂಧನ

Mangaluru: ಎಂಸಿಸಿ ಬ್ಯಾಂಕ್‌ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

Mangaluru: ಎಂಸಿಸಿ ಬ್ಯಾಂಕ್‌ ಅಧ್ಯಕ್ಷರ ಮಧ್ಯಂತರ ಜಾಮೀನು ಅರ್ಜಿ ತಿರಸ್ಕೃತ

Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ

Fraud Case: ಷೇರು ಮಾರುಕಟ್ಟೆಯಲ್ಲಿ ಲಾಭ ಆಮಿಷ 40.64 ಲಕ್ಷ ರೂ. ವಂಚನೆ: ಆರೋಪಿಯ ಬಂಧನ

1-ct

C.T.Ravi; ಬಿಡುಗಡೆ ಬಳಿಕ ಬಿಜೆಪಿ ಕಿಡಿ ಕಿಡಿ: ನಾವೇನು ಬಳೆ ತೊಟ್ಟು ಕುಳಿತಿಲ್ಲ…!

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Sullia: ಅಸೌಖ್ಯದಿಂದ ಮಹಿಳೆ ಸಾವು

Sullia: ಅಸೌಖ್ಯದಿಂದ ಮಹಿಳೆ ಸಾವು

Sullia: ಚಿನ್ನ ಕಳ್ಳತನ ಪ್ರಕರಣ: ಇಬ್ಬರು ಪೊಲೀಸರ ವಶಕ್ಕೆ

Sullia: ಚಿನ್ನ ಕಳ್ಳತನ ಪ್ರಕರಣ: ಇಬ್ಬರು ಪೊಲೀಸರ ವಶಕ್ಕೆ

Puttur: ಅತ್ಯಾ*ಚಾರ ಪ್ರಕರಣ: ಆರೋಪಿಗೆ ಜಾಮೀನು

Puttur: ಅತ್ಯಾ*ಚಾರ ಪ್ರಕರಣ: ಆರೋಪಿಗೆ ಜಾಮೀನು

2

Bantwal: ಪುರಸಭೆ ಆಸ್ತಿ ರಕ್ಷಣೆಗೆ ಸದಸ್ಯರ ಆಗ್ರಹ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

1-cbl

Chintamani: ರಸ್ತೆ ಅಪಘಾ*ತದಲ್ಲಿ ಯುವಕ ಸಾ*ವು,ಇಬ್ಬರಿಗೆ ಗಂಭೀರ ಗಾಯ

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

BBK11: ಸತತ ಮೂರನೇ ವಾರವೂ ಕಳಪೆ ಪಟ್ಟಿ: ಖುಷಿಯಿಂದಲೇ ಜೈಲು ಸೇರಿದ ಚೈತ್ರಾ

Surathkal: ನೇಣು ಬಿಗಿದು ಯುವಕ ಆತ್ಮಹ*ತ್ಯೆ

Surathkal: ನೇಣು ಬಿಗಿದು ಯುವಕ ಆತ್ಮಹ*ತ್ಯೆ

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Belthangady: ಕಬ್ಬಿಣದ ಗುಜರಿ ವಸ್ತು ಅಕ್ರಮವಾಗಿ ಸಾಗಾಟ; ಲಾರಿ ವಶ

Sullia: ಅಸೌಖ್ಯದಿಂದ ಮಹಿಳೆ ಸಾವು

Sullia: ಅಸೌಖ್ಯದಿಂದ ಮಹಿಳೆ ಸಾವು

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.