ಮಂಗಳೂರು ಅಂ.ರಾ. ವಿಮಾನ ನಿಲ್ದಾಣ: 2 ನೂತನ ಪಾರ್ಕಿಂಗ್ ಬೇ ಕಾರ್ಯಾರಂಭ
Team Udayavani, Apr 26, 2017, 11:44 AM IST
ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನೂತನ 2 ಪಾರ್ಕಿಂಗ್ ಬೇಗಳು ಎ. 21ರಂದು ಕಾರ್ಯಾರಂಭ ಮಾಡಿವೆ. ಇದರೊಂದಿಗೆ ಏಕಕಾಲಕ್ಕೆ 8 ವಿಮಾನಗಳನ್ನು ನಿಲ್ಲಿಸಲು ಅವಕಾಶ ಲಭ್ಯವಾಗಿದೆ. ಮೊದಲು 6 ವಿಮಾನ ನಿಲ್ಲಿಸಲು ಮಾತ್ರ ಅವಕಾಶವಿತ್ತು. ನೂತನ ಪಾರ್ಕಿಂಗ್ ಬೇಗಳನ್ನು 4 ಕೋ.ರೂ. ವೆಚ್ಚದಲ್ಲಿ ನಿರ್ಮಿಸಲಾಗಿದೆ.
ಈ ಹಿಂದೆ ಸಂಚಾರ ದಟ್ಟಣೆ ವೇಳೆ ಪಾರ್ಕಿಂಗ್ ಬೇ ಲಭ್ಯತೆ ಕೊರತೆಯಿಂದ ಕೆಲವು ಬಾರಿ ವಿಮಾನ 5ರಿಂದ 10 ನಿಮಿಷ ವಿಳಂಬವಾಗುತ್ತಿತ್ತು, ಇಲ್ಲವೆ ಪಾರ್ಕಿಂಗ್‌ಗೆ ಕಾಯಬೇಕಾಗುತ್ತಿತ್ತು. ಇದೀಗ ನೂತನ ಪಾರ್ಕಿಂಗ್‌ಬೇಗಳ ಆರಂಭದೊಂದಿಗೆ ಈ ಸಮಸ್ಯೆ ನಿವಾರಣೆಯಾಗಿದೆ. ವಿಮಾನ ನಿಲ್ದಾಣ ಪ್ರಾಧಿಕಾರ ಮುಂದಿನ ವರ್ಷದಲ್ಲಿ 8 ಕೋ. ರೂ. ವೆಚ್ಚದಲ್ಲಿ ಇನ್ನೂ 4 ಪಾರ್ಕಿಂಗ್ ಬೇಗಳನ್ನು ನಿರ್ಮಿಸಲು ಯೋಜನೆ ರೂಪಿಸುತ್ತಿದೆ.
17,46,792 ಪ್ರಯಾಣಿಕರು: ಮಂಗಳೂರು ವಿಮಾನ ನಿಲ್ದಾಣದ ಮೂಲಕ 2016-17ನೇ ಸಾಲಿನಲ್ಲಿ 7,09,462 ಅಂತಾರಾಷ್ಟ್ರೀಯ ಹಾಗೂ 10,37,330 ಆಂತರಿಕ ಪ್ರಯಾಣಿಕರು ಸೇರಿದಂತೆ ಒಟ್ಟು 17,46,792 ಪ್ರಯಾಣಿಕರು ಸಂಚರಿಸಿದ್ದಾರೆ. 2015-16ರಲ್ಲಿ 16,76,112 ಪ್ರಯಾಣಿಕರು ಸಂಚರಿಸಿದ್ದರು. ವರ್ಷದಿಂದ ವರ್ಷಕ್ಕೆ ಒಟ್ಟು ಶೇ. 5 ಪ್ರಗತಿ ಸಾಧಿಸಲಾಗಿದೆ. ಹೊಸ ಪಾರ್ಕಿಂಗ್ ಬೇಗಳ ಆರಂಭದೊಂದಿಗೆ ಇನ್ನಷ್ಟು ಪ್ರಗತಿಯಾಗಲಿದೆ ಎಂದು ನಿಲ್ದಾಣ ನಿರ್ದೇಶಕ ಜೆ.ಟಿ. ರಾಧಾಕೃಷ್ಣ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಅನಧಿಕೃತ ಫ್ಲೆಕ್ಸ್ , ಬ್ಯಾನರ್ ತೆರವು ಆರಂಭ
Ullala: ಉಚ್ಚಿಲದ ರೆಸಾರ್ಟ್ ಈಜುಕೊಳದಲ್ಲಿ ಮುಳುಗಿ ಮೂವರು ವಿದ್ಯಾರ್ಥಿನಿಯರ ಸಾವು!
Mangaluru;ಅಕ್ರಮ ಮರಳುಗಾರಿಕೆ ಅಡ್ಡೆಗೆ ಗಣಿ ಇಲಾಖೆ ದಾಳಿ: 5 ದೋಣಿ ವಶಕ್ಕೆ
Mangaluru: ಕುಮಾರಸ್ವಾಮಿ ಯಾವಾಗ, ಹೇಗೆ ಬೇಕಾದರೂ ಟರ್ನ್ ಆಗುತ್ತಾರೆ: ಜಮೀರ್ ಅಹಮದ್
Mangaluru: ನೋಟು ಬ್ಯಾನ್‌ಗೆ 8 ವರ್ಷ: ಹುಂಡಿಗೆ ಹಾಕೋದು ನಿಂತಿಲ್ಲ!
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.