ಮಂಗಳೂರು ವಿ.ವಿ. ಪದವಿ ಫಲಿತಾಂಶ; ಸರ್ವರ್‌ ಸಮಸ್ಯೆ ನಿವಾರಣೆ

Team Udayavani, Nov 21, 2020, 7:50 AM IST

ಮಂಗಳೂರು ವಿ.ವಿ. ಪದವಿ ಫಲಿತಾಂಶ; ಸರ್ವರ್‌ ಸಮಸ್ಯೆ ನಿವಾರಣೆ

ಮಂಗಳೂರು: ಮಂಗಳೂರು ವಿಶ್ವವಿದ್ಯಾನಿಲಯದ ಅಂತಿಮ ಪದವಿ ಪರೀಕ್ಷಾ ಫಲಿತಾಂಶ ಪ್ರಕಟನೆಯಲ್ಲಿ ಉಂಟಾಗಿದ್ದ ಗೊಂದಲವು ಶೇ. 99ರಷ್ಟು ನಿವಾರಣೆಯಾಗಿದೆ. ಶನಿವಾರ ಮಧ್ಯಾಹ್ನದೊಳಗೆ ಎಲ್ಲ ವಿದ್ಯಾರ್ಥಿಗಳಿಗೆ ಫಲಿತಾಂಶ ದೊರಕುವಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು ಎಂದು ವಿ.ವಿ. ಅಧಿಕಾರಿಗಳು ತಿಳಿಸಿದ್ದಾರೆ.

ಮಂಗಳೂರು ವಿ.ವಿ.ಯ ಅಂತಿಮ ಪದವಿ ಫಲಿತಾಂಶ ಕಳೆದ ರವಿವಾರ ಮತ್ತು ಸೋಮವಾರ ಪ್ರಕಟಿಸಲಾಗಿತ್ತು. ಆದರೆ ಸರ್ವರ್‌ ಸಮಸ್ಯೆಯಿಂದಾಗಿ ಕೆಲವೇ ವಿದ್ಯಾರ್ಥಿಗಳು ಫಲಿತಾಂಶ ಪಡೆದರೆ, ಬಹುತೇಕರಿಗೆ ಫಲಿತಾಂಶ ಲಭ್ಯವಾಗಿರಲಿಲ್ಲ. ಇದರಿಂದ ವಿದ್ಯಾರ್ಥಿಗಳು ಆತಂಕಕ್ಕೊಳಗಾಗಿದ್ದರು. ವಿ.ವಿ. ಸಂಬಂಧಪಟ್ಟವರು ಸಮಸ್ಯೆ ನಿವಾರಣೆಗೆ ಪ್ರಯತ್ನ ಪಡುತ್ತಿದ್ದು, ಈಗಾಗಲೇ ಶೇ. 99ರಷ್ಟು ನಿವಾರಣೆಯಾಗಿದೆ. ವಿದ್ಯಾರ್ಥಿಗಳ ಗೊಂದಲ ಪರಿಹರಿಸಿ ಫಲಿತಾಂಶ ಒದಗಿಸಲು ಎಲ್ಲ ರೀತಿಯ ಪ್ರಯತ್ನ ಮಾಡಲಾಗುತ್ತಿದೆ ಎಂದು ವಿ.ವಿ. ಕುಲಸಚಿವ (ಪರೀಕ್ಷಾಂಗ) ಪ್ರೊ| ಪಿ. ಎಲ್‌. ಧರ್ಮ ತಿಳಿಸಿದ್ದಾರೆ.

ದಾಖಲಾತಿ ನ. 30ರ ವರೆಗೆ ವಿಸ್ತರಣೆ
ಫಲಿತಾಂಶ ಪ್ರಕಟನೆಯಲ್ಲಿ ಉಂಟಾದ ಗೊಂದಲದ ಕಾರಣ ದಿಂದಾಗಿ ಸ್ನಾತಕೋತ್ತರ ಪದವಿಗಳಿಗೆ ದಾಖಲಾತಿ ಪ್ರಕ್ರಿಯೆಯನ್ನು ವಿವಿ ಮುಂದೂಡಿದೆ.

ಸ್ನಾತಕೋತ್ತರ ಪದವಿ ಸೇರ್ಪಡೆಗೆ ದಾಖಲಾತಿ ಪ್ರಕ್ರಿಯೆಗೆ ಕೊನೆಯ ದಿನಾಂಕವನ್ನು ನ. 21ಕ್ಕೆ ನಿಗದಿ ಪಡಿಸಲಾಗಿತ್ತು. ಆದರೆ ಸರ್ವರ್‌ ಸಮಸ್ಯೆ ಯಿಂದಾಗಿ ಬಹುತೇಕ ವಿದ್ಯಾರ್ಥಿಗಳಿಗೆ ಫಲಿತಾಂಶ ಲಭ್ಯ ವಾಗದ ಕಾರಣ ನ. 30ರ ವರೆಗೆ ದಾಖಲಾತಿ ಅವಧಿಯನ್ನು ವಿಸ್ತರಿಸಲಾಗಿದೆ. ಮಂಗಳೂರು ವಿ.ವಿ.ಯ ಸ್ನಾತಕೋತ್ತರ ವಿಭಾಗಗಳು/ವಿ.ವಿ. ಕಾಲೇಜು ಮಂಗಳೂರು/ವಿ.ವಿ. ಸಂಧ್ಯಾ ಕಾಲೇಜು ಮಂಗಳೂರು/ ಫೀಲ್ಡ್‌  ಮಾರ್ಷಲ್‌ ಕೆ.ಎಂ. ಕಾರ್ಯಪ್ಪಕಾಲೇಜು ಮಡಿಕೇರಿ/ ಸ್ನಾತಕೋತ್ತರ ಕೇಂದ್ರ ಚಿಕ್ಕ ಅಳುವಾರ ಹಾಗೂ ಮಂಗಳೂರು ವಿವಿಯ ಸಂಯೋಜಿತ ಕಾಲೇಜುಗಳು ಮತ್ತು ಸರಕಾರಿ ಕಾಲೇಜುಗಳಲ್ಲಿ ನಡೆಸಲ್ಪಡುವ ವಿವಿಧ ಸ್ನಾತ ಕೋತ್ತರ ಕಾರ್ಯಕ್ರಮಗಳ ಪ್ರವೇಶಾತಿಗೆ ನ. 30ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ.

ಪಿ.ಜಿ. ಡಿಪ್ಲೊಮಾ ಮತ್ತು ಸರ್ಟಿಫಿಕೆಟ್‌ ಕಾರ್ಯಕ್ರಮಗಳ ಭರ್ತಿ ಮಾಡಿದ ಅರ್ಜಿ ಸಲ್ಲಿಕೆಯ ಅಂತಿಮ ದಿನಾಂಕದಲ್ಲಿ ಯಾವುದೇ ಬದಲಾವಣೆ ಇರುವುದಿಲ್ಲ. ಪ್ರವೇಶ ಪರೀಕ್ಷೆ ಹಾಗೂ ಇನ್ನಿತರ ಮಾಹಿತಿಗಳನ್ನು ಮಂಗಳೂರು ವಿ.ವಿ. ವೆಬ್‌ಸೈಟ್‌ www.mangaloreuniversity.ac.in ನಲ್ಲಿ ಪಡೆಯಬಹುದು ಎಂದು ಕುಲಸಚಿವರು ತಿಳಿಸಿದ್ದಾರೆ.

ಟಾಪ್ ನ್ಯೂಸ್

Udupi ಅಧಿಕ ಲಾಭಾಂಶ ಆಮಿಷ: ಲಕ್ಷಾಂತರ ರೂ. ವಂಚನೆ

Udupi ಅಧಿಕ ಲಾಭಾಂಶ ಆಮಿಷ: ಲಕ್ಷಾಂತರ ರೂ. ವಂಚನೆ

Malpe ಮೆಹಂದಿ ಕಾರ್ಯಕ್ರಮಕ್ಕೆ ಪೊಲೀಸ್‌ ದಾಳಿ

Malpe ಮೆಹಂದಿ ಕಾರ್ಯಕ್ರಮಕ್ಕೆ ಪೊಲೀಸ್‌ ದಾಳಿ

MUDA ಹಗರಣದಲ್ಲಿ ಯಾರೇ ತಪ್ಪು ಮಾಡಿದ್ದರೂ ಕ್ರಮ: ಸಚಿವ ಬೈರತಿ ಸುರೇಶ್‌

MUDA ಹಗರಣದಲ್ಲಿ ಯಾರೇ ತಪ್ಪು ಮಾಡಿದ್ದರೂ ಕ್ರಮ: ಸಚಿವ ಬೈರತಿ ಸುರೇಶ್‌

Karnataka Govt., ಅಗ್ನಿಶಾಮಕ ಇಲಾಖೆ 68 ಚಾಲಕರ ಹುದ್ದೆ ಅಂತಿಮ

Karnataka Govt., ಅಗ್ನಿಶಾಮಕ ಇಲಾಖೆ 68 ಚಾಲಕರ ಹುದ್ದೆ ಅಂತಿಮ

Laxmeshwar ಮಗನ ಹಠಕ್ಕೆ ಮುಸ್ಲಿಮರ ಮನೆಯಲ್ಲಿ ಗಣೇಶ ಹಬ್ಬ !

Laxmeshwar ಮಗನ ಹಠಕ್ಕೆ ಮುಸ್ಲಿಮರ ಮನೆಯಲ್ಲಿ ಗಣೇಶ ಹಬ್ಬ !

Arrest

Mandya ಹೆಣ್ಣು ಭ್ರೂಣ ಹತ್ಯೆ ಕೇಸ್‌: ಮತ್ತೆ ಮೂವರ ಬಂಧನ

ಕರಾವಳಿಯಲ್ಲಿ ಮತ್ಸ್ಯಕ್ಷಾಮ: ಸಚಿವ ವೈದ್ಯ ಬಾಗಿನ

Fishing ಕರಾವಳಿಯಲ್ಲಿ ಮತ್ಸ್ಯಕ್ಷಾಮ: ಸಚಿವ ವೈದ್ಯ ಬಾಗಿನ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Drinking Water198 ಕೋ.ರೂ.ವೆಚ್ಚದ ಶಾಶ್ವತ ಕುಡಿಯುವ ನೀರಿನ ಯೋಜನೆ: ಇಂದು ಪ್ರಾಯೋಗಿಕ ಚಾಲನೆ

Drinking Water198 ಕೋ.ರೂ.ವೆಚ್ಚದ ಶಾಶ್ವತ ಕುಡಿಯುವ ನೀರಿನ ಯೋಜನೆ: ಇಂದು ಪ್ರಾಯೋಗಿಕ ಚಾಲನೆ

ಈಗ ಮಂಗಳೂರಿನ ಗಾಳಿಯೂ ಕಲುಷಿತ! ಬೆಂಗಳೂರು, ಮೈಸೂರಿನಲ್ಲೂ ಮಾಲಿನ್ಯ ಅಪಾಯಕಾರಿ ಮಟ್ಟದಲ್ಲಿ

ಈಗ ಮಂಗಳೂರಿನ ಗಾಳಿಯೂ ಕಲುಷಿತ! ಬೆಂಗಳೂರು, ಮೈಸೂರಿನಲ್ಲೂ ಮಾಲಿನ್ಯ ಅಪಾಯಕಾರಿ ಮಟ್ಟದಲ್ಲಿ

Surathkal ನಾಲ್ಕು ತಿಂಗಳ ಮಗುವಿಗೆ ಥೈರಾಯ್ಡ್ ಎಂದ ವೈದ್ಯರು!

Surathkal ನಾಲ್ಕು ತಿಂಗಳ ಮಗುವಿಗೆ ಥೈರಾಯ್ಡ್ ಎಂದ ವೈದ್ಯರು!

Rain ಕರಾವಳಿಯಲ್ಲಿ ಎಲ್ಲೋ ಅಲರ್ಟ್‌

Rain ಕರಾವಳಿಯಲ್ಲಿ ಎಲ್ಲೋ ಅಲರ್ಟ್‌

Campco ಸದಸ್ಯತ್ವ ಚೀಟಿ ದುರ್ಬಳಕೆ ಮಾಡಿ ಕಳಪೆ ಅಡಿಕೆ ಮಾರಾಟ ಯತ್ನ

Campco ಸದಸ್ಯತ್ವ ಚೀಟಿ ದುರ್ಬಳಕೆ ಮಾಡಿ ಕಳಪೆ ಅಡಿಕೆ ಮಾರಾಟ ಯತ್ನ

MUST WATCH

udayavani youtube

ಗಜಪಯಣಕ್ಕೆ ಚಾಲನೆ : ಕ್ಯಾಪ್ಟನ್‌ ಅಭಿಮನ್ಯು ನೇತೃತ್ವದ 9 ಆನೆಗಳ ಗಜಪಡೆ

udayavani youtube

ರಕ್ಷಾ ಬಂಧನದ ಅರ್ಥ ಮತ್ತು ಮಹತ್ವ | ರಕ್ಷಾ ಬಂಧನ 2024

udayavani youtube

ಕಡಿಮೆ ಬೆಲೆಗೆ ಫಸ್ಟ್ ಕ್ಲಾಸ್ ಬಾಳೆಎಲೆ ಊಟ

udayavani youtube

ಆ.18 ರಿಂದ ಶ್ರೀಕೃಷ್ಣ ಮಠದಲ್ಲಿ ಕ್ರೀಡೋತ್ಸವ

udayavani youtube

ತಮ್ಮ ಮಕ್ಕಳನ್ನು ಬೆಳೆಸುವ ಸಲುವಾಗಿ ಕಂಡೋರ ಮಕ್ಕಳ ಭವಿಷ್ಯ ನಾಶ. ಈ ವ್ಯವಸ್ಥೆಗೆ ನಾನೂ ಬಲಿ

ಹೊಸ ಸೇರ್ಪಡೆ

Udupi ಅಧಿಕ ಲಾಭಾಂಶ ಆಮಿಷ: ಲಕ್ಷಾಂತರ ರೂ. ವಂಚನೆ

Udupi ಅಧಿಕ ಲಾಭಾಂಶ ಆಮಿಷ: ಲಕ್ಷಾಂತರ ರೂ. ವಂಚನೆ

Malpe ಮೆಹಂದಿ ಕಾರ್ಯಕ್ರಮಕ್ಕೆ ಪೊಲೀಸ್‌ ದಾಳಿ

Malpe ಮೆಹಂದಿ ಕಾರ್ಯಕ್ರಮಕ್ಕೆ ಪೊಲೀಸ್‌ ದಾಳಿ

1-bhat-bg

Bhatkal;ಗಣಪತಿ ವಿಸರ್ಜನೆ ವೇಳೆ ಸಮುದ್ರದಲ್ಲಿ ಕೊಚ್ಚಿಹೋದ ಬಾಲಕನ ರಕ್ಷಣೆ

ಅನುದಾನಿತ ಪ್ರೌಢಶಾಲೆಗೆ ನೇಮಕಾತಿ ಮಾಡಿಕೊಳ್ಳಬೇಡಿ;ಮಾರ್ಗಸೂಚಿ/ಸುತ್ತೋಲೆ ಬಿಡುಗಡೆವರೆಗೆ ತಡೆ

ಅನುದಾನಿತ ಪ್ರೌಢಶಾಲೆಗೆ ನೇಮಕಾತಿ ಮಾಡಿಕೊಳ್ಳಬೇಡಿ;ಮಾರ್ಗಸೂಚಿ/ಸುತ್ತೋಲೆ ಬಿಡುಗಡೆವರೆಗೆ ತಡೆ

MUDA ಹಗರಣದಲ್ಲಿ ಯಾರೇ ತಪ್ಪು ಮಾಡಿದ್ದರೂ ಕ್ರಮ: ಸಚಿವ ಬೈರತಿ ಸುರೇಶ್‌

MUDA ಹಗರಣದಲ್ಲಿ ಯಾರೇ ತಪ್ಪು ಮಾಡಿದ್ದರೂ ಕ್ರಮ: ಸಚಿವ ಬೈರತಿ ಸುರೇಶ್‌

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.