ಮಂಗಳೂರು ವಿ.ವಿ. ಪದವಿ ಪರೀಕ್ಷೆ ದಿನಾಂಕ ಮರು ನಿಗದಿ
Team Udayavani, Oct 30, 2019, 4:27 AM IST
ಮಂಗಳೂರು: ಭಾರೀ ಮಳೆಯ ಹಿನ್ನೆಲೆಯಲ್ಲಿ ಅ. 26ರಂದು ಉಡುಪಿ ಜಿಲ್ಲೆಯ ಪದವಿ
ಕಾಲೇಜುಗಳಿಗೆ ರಜೆ ನೀಡಿದ್ದು, ಅಂದು ನಡೆಯ ಬೇಕಿದ್ದ ಮಂಗಳೂರು ವಿ.ವಿ. ವ್ಯಾಪ್ತಿಯ ಎಲ್ಲ ಪದವಿ ಪರೀಕ್ಷೆಗಳನ್ನು ಮುಂದೂಡಲಾಗಿತ್ತು. ನ. 12ರಂದು ಮಂಗಳೂರು ಮನಪಾ ಚುನಾವಣೆ ನಡೆಯಲಿರುವುದರಿಂದ ನ. 11ರಿಂದ 13ರ ವರೆಗಿನ ಪರೀಕ್ಷೆ ಗಳನ್ನೂ ಮುಂದೂಡಲಾಗಿದ್ದು ಪರಿಷ್ಕೃತ ದಿನಾಂಕಗಳನ್ನು ಮಂಗಳೂರು ವಿ.ವಿ. ಮರು ನಿಗದಿಪಡಿಸಿದೆ
ನ. 26ರಂದು ನಡೆಯಬೇಕಾಗಿದ್ದ ಬಿಎ, ಬಿಎಸ್‌ಡಬ್ಲ್ಯು, ಬಿಎಸ್ಸಿ, ಬಿಕಾಂ, ಬಿಬಿಎ, ಬಿಬಿಎಂ, ಬಿಎಸ್ಸಿ-ಆ್ಯನಿಮೇ ಶನ್, ಬಿಎಎಸ್‌ಎಲ್‌ಪಿ, ಬಿಎ-ಎಚ್‌ಆರ್‌ಡಿ, ಬಿಎಚ್‌ಎಂ, ಬಿಎಸ್ಸಿ-ಎಫ್ಎನ್‌ಡಿ, ಬಿಎಸ್ಸಿ-ಫುಡ್ ಟೆಕ್ನಾಲಜಿ ಪರೀಕ್ಷೆಗಳು ನ. 8, 9, 13, 18 ಮತ್ತು 22ರಂದು ನಡೆಯಲಿವೆ.
ನ. 11 ಮತ್ತು 13ರಂದು ನಿಗದಿಯಾಗಿದ್ದ 1, 3, 5ನೇ ಸೆಮಿಸ್ಟರ್ ಬಿಎ, ಬಿಎಸ್‌ಡಬ್ಲ್ಯು, ಬಿಎಸ್ಸಿ, ಬಿಕಾಂ, ಬಿಎಸ್ಸಿ-ಫುಡ್ ಟೆಕ್ನಾಲಜಿ, ಬಿಎಸ್ಸಿ-ಎಫ್ಎನ್‌ಡಿ ಬಿಎ-ಎಚ್‌ಆರ್‌ಡಿ, ಬಿಎಎಸ್‌ಎಲ್‌ಪಿ, ಬಿಬಿಎ, ಬಿಸಿಎ, ಬಿಬಿಎಂ ವಿಭಾಗದ ಪರೀಕ್ಷೆಗಳು ನ. 13, 14, 18, 19, 20, 21, 27ಕ್ಕೆ ನಡೆಯಲಿವೆ.
11 ಮತ್ತು 12ರಂದು ನಿಗದಿಯಾಗಿದ್ದ ಕ್ರೆಡಿಟ್ ಬೇಸ್‌ಡ್ 3ನೇ ಸೆಮಿಸ್ಟರ್ ಪರೀಕ್ಷೆಗಳು ನ. 13, 20 ಮತ್ತು 25ರಂದು ನಡೆಯಲಿದೆ. ನ. 11, 12 ಮತ್ತು 13ರಂದು ನಿಗದಿಯಾಗಿದ್ದ ಕ್ರೆಡಿಟ್ ಬೇಸ್‌ಡ್ 5ನೇ ಸೆಮಿಸ್ಟರ್ ಪರೀಕ್ಷೆಗಳು ನ. 13, 14, 20, 22 ಮತ್ತು 29ರಂದು ನಡೆಯಲಿವೆ. 11 ಮತ್ತು 12ರ ನಾನ್ ಕ್ರೆಡಿಟ್ ಬೇಸ್‌ಡ್ 1ಮತ್ತು 2ನೇ ಬಿಎ -ಎಸ್‌ಎಲ್‌ಪಿ ಪರೀಕ್ಷೆಗಳು ನ. 18ರಂದು, 2 ಮತ್ತು 4ನೇ ಸೆಮಿಸ್ಟರ್ ನಾನ್ ಕ್ರಡಿಟ್ ಬೇಸ್‌ಡ್ ಬಿಎ ಎಚ್‌ಆರ್‌ಡಿ ಪರೀಕ್ಷೆಗಳು ನ. 11ರ ಬದಲು ನ. 13ರಂದು, 11 ಮತ್ತು 12ರಂದು ನಿಗದಿಯಾಗಿದ್ದ ಎಲ್‌ಎಲ್‌ಬಿ ಪರೀಕ್ಷೆಗಳು ನ. 13, 14ರಂದು ನಡೆಯಲಿವೆ.
ಹೆಚ್ಚಿನ ಮಾಹಿತಿಗೆ ವಿ.ವಿ. ವೆಬ್‌ಸೈಟ್ www.mangaloreuniveristy.ac.inಗೆ ಭೇಟಿ ನೀಡಬಹುದು ಎಂದು ಪ್ರಕಟನೆ ತಿಳಿಸಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Dharmasthala: ನ.26-30: ಶ್ರೀ ಕ್ಷೇತ್ರ ಧರ್ಮಸ್ಥಳದ ಲಕ್ಷದೀಪೋತ್ಸವ
ಹೊಸ ಟ್ರೆಂಡ್ ನ ಪ್ಯಾಂಟ್ ಧರಿಸಿದ ಯುವಕ;ಸ್ನೇಹಿತರಿಂದ ಅವಮಾನ, ನೊಂದ ಯುವಕ ಆತ್ಮಹತ್ಯೆಗೆ ಯತ್ನ
Mangaluru: ಟ್ರಾಯ್‌ನಿಂದ ಕರೆ ಮಾಡುವುದಾಗಿ ತಿಳಿಸಿ; 1.71 ಕೋ.ರೂ. ವಂಚನೆ
MUST WATCH
ಹೊಸ ಸೇರ್ಪಡೆ
Mangaluru: ಜೀವನ ಶೈಲಿ ಸಂಬಂಧಿ ಕಾಯಿಲೆಗೆ ಪರಿಹಾರ ಅಗತ್ಯ
Chhattisgarh: ಭದ್ರತಾ ಪಡೆ ದಾಳಿಗೆ 10 ನಕ್ಸಲರು ಹತ… ಅಪಾರ ಪ್ರಮಾಣದ ಶಸ್ತ್ರಾಸ್ತ್ರ ವಶ
Someshwara ದೇಗುಲ: ಶಿವಪಂಚಾಕ್ಷರಿ ಕೋಟಿ ನಾಮಜಪ ಯಜ್ಞ ಸಂಪನ್ನ
Maryade Prashne: ಮಧ್ಯಮ ವರ್ಗದ ಸುತ್ತ ಹೀಗೊಂದು ಚಿತ್ರ
Crocodile: ನಿಟ್ಟೂರಲ್ಲಿ ಕಾಣಿಸಿಕೊಂಡ ಮೊಸಳೆ ಸೆರೆ… ನಿಟ್ಟುಸಿರು ಬಿಟ್ಟ ಗ್ರಾಮಸ್ಥರು
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.