Meralda Jewels ಉದ್ಘಾಟನೆಗೆ ಸಾಕ್ಷಿಯಾಗಲಿದೆ ಮಂಗಳೂರು
Team Udayavani, Oct 29, 2023, 8:44 AM IST
ಮಂಗಳೂರು: ಕೊಚ್ಚಿ, ಕ್ಯಾಲಿಕಟ್ ಮತ್ತು ಕಣ್ಣೂರಿನಲ್ಲಿ ಚಿನ್ನ, ವಜ್ರ, ರತ್ನ ಮತ್ತು ಪೋಲ್ಕಿ ಆಭರಣ ಮಳಿಗೆಗಳನ್ನು ಹೊಂದಿರುವ ಸುಪ್ರಸಿದ್ಧ ಮೆರಾಲ್ಡಾ ಜ್ಯುವೆಲ್ಸ್ ಇದೀಗ ಕರ್ನಾಟಕದ ಕರಾವಳಿ ನಗರ ಮಂಗಳೂರಿಗೆ ಕಾಲಿಟ್ಟಿದೆ. ತನ್ನ ನಾಲ್ಕನೇ ಮಳಿಗೆಯನ್ನು ಮಂಗಳೂರಿನ ಬಲ್ಮಠ ರಸ್ತೆಯಲ್ಲಿ ತೆರೆಯಲು ಸಿದ್ಧವಾಗಿದೆ.
ಅಕ್ಟೋಬರ್ 29 ಭಾನುವಾರ ಬೆಳಿಗ್ಗೆ 11:30 ಕ್ಕೆ ನಗರದಲ್ಲಿ ಹೊಸ ಆಭರಣ ಮಳಿಗೆಯ ಉದ್ಘಾಟನೆ ನಡೆಯಲಿದೆ. ಬಾಳಿವುಡ್ ನಟಿ ಅಥಿಯಾ ಶೆಟ್ಟಿ ಅವರು ಮೆಗಾ ಈವೆಂಟ್ ನಲ್ಲಿ ಭಾಗವಹಿಸಲಿದ್ದಾರೆ. ಅಥಿಯಾ ಶೆಟ್ಟಿ ಅವರೊಂದಿಗೆ ಹಲವು ಪ್ರಮುಖ ಗಣ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಲಿದ್ದು, ಉದ್ಘಾಟನಾ ಕಾರ್ಯಕ್ರಮದ ವೈಭವವನ್ನು ಹೆಚ್ಚಿಸಲಿದ್ದಾರೆ.
ಅಂದವಾದ ಸಾಂಪ್ರದಾಯಿಕ, ಆಧುನಿಕ ಮತ್ತು ಟ್ರೆಂಡಿ ಆಭರಣಗಳ ವ್ಯಾಪಕ ಸಂಗ್ರಹಕ್ಕೆ ಹೆಸರುವಾಸಿಯಾಗಿರುವ ಮೆರಾಲ್ಡಾ ಜ್ಯುವೆಲ್ಸ್ ಮಂಗಳೂರು ಕರಾವಳಿ ಕರ್ನಾಟಕದ ಜನರ ಹೃದಯ ಸೂರೆಗೊಳ್ಳಲು ಸಿದ್ಧವಾಗಿದೆ. ಈಗಾಗಲೇ ಇರುವ ಖ್ಯಾತಿಯೊಂದಿಗೆ ಶ್ರೀಮಂತಿಕೆ ಮತ್ತು ಕಲಾತ್ಮಕತೆಗೆ ಸಮಾನಾಗಿದೆ ಈ ಮೆರಾಲ್ಡಾ ಬ್ರ್ಯಾಂಡ್. ಉದ್ಘಾಟನೆ ಕಾರ್ಯಕ್ರಮದ ಸಲುವಾಗಿ ನಗರದೆಲ್ಲೆಡೆಯಿಂದ ಬರುವ ಅಭಿಮಾನಿಗಳನ್ನು ಸೆಳೆಯುವ ಆಭರಣಗಳನ್ನು ಪ್ರದರ್ಶಿಸಲಾಗುತ್ತದೆ.
ಟಾಪ್ ನ್ಯೂಸ್
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.