ಮಂಗಳೂರು: ಅಪಾರ್ಟ್‌ಮೆಂಟ್‌ನಲ್ಲಿ ಬೆಂಕಿ ಅವಘಡ… ತಪ್ಪಿದ ಅನಾಹುತ
Team Udayavani, Jan 10, 2023, 11:44 PM IST
ಸಾಂದರ್ಭಿಕ ಚಿತ್ರ
ಮಂಗಳೂರು: ನಗರದ ಬಹುಮಹಡಿ ಕಟ್ಟಡದವೊಂದರ ಫ್ಲ್ಯಾಟ್‌ನಲ್ಲಿ ಮಂಗಳವಾರ ಬೆಂಕಿ ಅವಘಡ ಉಂಟಾಗಿದೆ. ಆದರೆ ಅದೃಷ್ಟವಶಾತ್ ಅನಾಹುತ ಸಂಭವಿಸಿಲ್ಲ.
ಜೈಲ್‌ರೋಡ್-ಕದ್ರಿ ಕಂಬಳ ರಸ್ತೆಯ 5 ಮಹಡಿಯ ಕಟ್ಟಡವೊಂದರ 2ನೇ ಮಹ ಡಿಯ ಫ್ಲ್ಯಾಟ್‌ನ ಬೆಡ್‌ರೂಮ್‌ನಲ್ಲಿ ಬೆಳಗ್ಗೆ 11.30ರ ಸುಮಾರಿಗೆ ಹೊಗೆ ಕಾಣಿಸಿಕೊಂಡಿತ್ತು. ಸ್ಥಳಕ್ಕೆ ಕದ್ರಿ ಮತ್ತು ಪಾಂಡೇಶ್ವರ ಅಗ್ನಿಶಾಮಕ ದಳದವರು ಆಗಮಿಸಿ ಕಾರ್ಯಾಚರಣೆ ನಡೆಸಿದರು. ಹಾಸಿಗೆ ಮತ್ತಿತರ ಪರಿಕರಗಳು ಬೆಂಕಿಗಾಹುತಿಯಾಗಿವೆ.
ನಿವಾಸಿಗಳು ಸುರಕ್ಷಿತ
ಘಟನೆ ಸಂಭವಿಸಿದ ಫ್ಲ್ಯಾಟ್‌ನಲ್ಲಿ ಯಾರೂ ಇರಲಿಲ್ಲ. ಪಕ್ಕದ ಫ್ಲ್ಯಾಟ್‌ಗಳ ನಿವಾಸಿಗಳು ಹೊರಗೆ ಬಂದಿದ್ದರು. ಬೆಂಕಿ ಬೆಡ್‌ರೂಮ್‌ನಿಂದ ಬೇರೆ ಕಡೆಗೆ ಹಬ್ಬಿಲ್ಲ. ಇಸ್ತ್ರಿ ಪೆಟ್ಟಿಗೆಯಲ್ಲಿ ಬೆಂಕಿಯುಂಟಾಗಿರುವ ಸಾಧ್ಯತೆ ಇದೆ ಎಂದು ಅಗ್ನಿಶಾಮಕ ದಳದ ಅಧಿಕಾರಿಗಳು ತಿಳಿಸಿದ್ದಾರೆ.
ಮಂಗಳೂರು: ಮನೆಯಲ್ಲಿ ನಿಲ್ಲಿಸಿದ್ದ ಕಾರು ಕಳವು
ಮಂಗಳೂರು: ಮನೆಯಲ್ಲಿ ಯಾರೂ ಇಲ್ಲದ ವೇಳೆ ಕಾರು ಕಳವು ಮಾಡಿರುವ ಘಟನೆ ನೀರುಮಾರ್ಗ ಕೆಲರೈಯಲ್ಲಿ ವಿಜಯ ಕುಮಾರ್ ಅವರ ಮನೆಯಲ್ಲಿ ನಡೆದಿದೆ.
ವಿಜಯ ಕುಮಾರ್ ಅವರು ವಿದೇಶಕ್ಕೆ ತೆರಳಿದ್ದರು. ಮಿತ್ರರಾದ ಕಿರಣ್ ಕುಮಾರ್ ಅವರಲ್ಲಿ ಮನೆಯನ್ನು ನೋಡಿಕೊಳ್ಳಲು ತಿಳಿಸಿದ್ದರು. ಡಿ.31ರಂದು ಕಿರಣ್ ಕುಮಾರ್ ಅವರು ಸಂಜೆ 6 ಗಂಟೆಗೆ ವಿಜಯ ಕುಮಾರ್ ಅವರ ಮನೆಗೆ ಹೋಗಿ ಕಾರು ಸ್ಟಾರ್ಟ್ ಮಾಡಿ ಹೋಗಿದ್ದರು.
ಜ. 9ರಂದು ಸಂಜೆ 4 ಗಂಟೆಗೆ ಬಂದು ನೋಡಿದಾಗ ಕಳ್ಳರು ಮನೆಯ ಮುಖ್ಯ ಬಾಗಿಲನ್ನು ಒಡೆದು ಒಳಪ್ರವೇಶಿಸಿ ಮನೆಯಲ್ಲಿ ಜಾಲಾಡಿರುವುದು ಗೊತ್ತಾಗಿದೆ. ಅಲ್ಲದೆ ಕಾರು ಪಾರ್ಕಿಂಗ್ ಸ್ಥಳದಲ್ಲಿದ್ದ 8 ಲ.ರೂ. ಮೌಲ್ಯದ ಕಾರನ್ನು ಕಳವು ಮಾಡಿರುವುದು ಗಮನಕ್ಕೆ ಬಂದಿದೆ ಎಂದು ಮಂಗಳೂರು ಗ್ರಾಮಾಂತರ ಠಾಣಾ ಪೊಲೀಸರಿಗೆ ದೂರು ನೀಡಲಾಗಿದೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Intervention: ಗೃಹ ಇಲಾಖೆಯಲ್ಲಿ ಯಾರ ಹಸ್ತಕ್ಷೇಪವೂ ಇಲ್ಲ: ಸಚಿವ ಪರಮೇಶ್ವರ್
Encounter: ಉತ್ತರಪ್ರದೇಶದಲ್ಲಿ ಎನ್‌ಕೌಂಟರ್: 3 ಶಂಕಿತ ಖಲಿಸ್ಥಾನಿ ಉಗ್ರರ ಹತ್ಯೆ
Investment: 9.8 ಸಾವಿರ ಕೋಟಿ ರೂ. 9 ಯೋಜನೆಗೆ ಒಪ್ಪಿಗೆ: ಸಿಎಂ ಸಿದ್ದರಾಮಯ್ಯ
Growers Meet: ಕಾಫಿಗೆ ಜಗತ್ತಿನೆಲ್ಲೆಡೆ ಮಾರುಕಟ್ಟೆ ಸೃಷ್ಟಿ ಅಗತ್ಯ: ಪಿಯೂಷ್ ಗೋಯಲ್
Congress Government: ಸಿದ್ದರಾಮಯ್ಯ ಅವಧಿಯಲ್ಲೇ ದ್ವೇಷದ ರಾಜಕಾರಣ ಬೇಸರ ತಂದಿದೆ: ಸೋಮಣ್ಣ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.