ಮಂಗಳೂರು: ಮೆದುಳು ನಿಷ್ಕ್ರಿಯಗೊಂಡಿದ್ದ ವ್ಯಕ್ತಿಯಿಂದ ಪಡೆದ ಕಿಡ್ನಿ ಕಸಿ ಯಶಸ್ವಿ
Team Udayavani, Jan 5, 2023, 7:45 AM IST
ಮಂಗಳೂರು: ಮೆದುಳು ನಿಷ್ಕ್ರಿಯಗೊಂಡಿದ್ದ ವ್ಯಕ್ತಿಯಿಂದ ದಾನ ಪಡೆಯಲಾದ ಕಿಡ್ನಿಗಳನ್ನು ಇಬ್ಬರು ರೋಗಿಗಳಿಗೆ ಕಸಿ ಮಾಡುವ ಯಶಸ್ವಿ ಕಾರ್ಯ ಇತ್ತೀಚೆಗೆ ನಗರದ ಎ.ಜೆ. ಆಸ್ಪತ್ರೆಯಲ್ಲಿ ನೆರವೇರಿದೆ.
ಆಸ್ಪತ್ರೆಯ ವೈದ್ಯಕೀಯ ನಿರ್ದೇಶಕ ಡಾ| ಪ್ರಶಾಂತ್ ಮಾರ್ಲ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು. ಮೆದುಳು ನಿಷ್ಕ್ರಿಯಗೊಂಡಿದ್ದ ವ್ಯಕ್ತಿಯ ಅಂಗಾಂಗಗಳನ್ನು ರಾಜ್ಯ ಸರಕಾರದ ಅಂಗ ಸಂಸ್ಥೆಯಾದ “ಜೀವಸಾರ್ಥಕತೆ’ ಮೂಲಕ ಅಗತ್ಯ ವಿರುವ ರೋಗಿಗಳಿಗೆ ಒದಗಿಸಲು ಕುಟುಂಬ ತೀರ್ಮಾನಿಸಿತ್ತು. ನಗರದ ಫಾದರ್ ಮುಲ್ಲರ್ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆ ನಡೆಸಿ ತೆಗೆದ ಅಂಗಾಂಗಗಳನ್ನು ಬೆಂಗಳೂರು, ಚೆನ್ನೈ, ಮಣಿಪಾಲ ಹಾಗೂ ಮೂತ್ರ ಪಿಂಡ (ಕಿಡ್ನಿ)ಗಳನ್ನು ಎ.ಜೆ. ಆಸ್ಪತ್ರೆಗೆ ವರ್ಗಾಯಿಸಲಾಗಿತ್ತು. ಎರಡೂ ಕಿಡ್ನಿಗಳನ್ನು ಎ.ಜೆ. ಆಸ್ಪತ್ರೆಯ ಇಬ್ಬರು ರೋಗಿಗಳಿಗೆ ಮೀಸಲಿಟ್ಟು, ರೋಗಿಗಳ ಶಸ್ತ್ರಕ್ರಿಯೆಯ ಪ್ರಕ್ರಿಯೆ 6-7 ಗಂಟೆಗಳ ಕಾಲಾವಧಿಯಲ್ಲಿ ಮುಗಿಸ ಬೇಕಾಗಿತ್ತು. ಇದನ್ನು ಆಸ್ಪತ್ರೆಯ ತಂಡ ಸವಾಲಾಗಿ ಸ್ವೀಕರಿಸಿ,ಯಶಸ್ವಿಯಾಗಿ ಪೂರೈಸಿದೆ. ಮೂತ್ರ ಪಿಂಡ ಕಸಿ ಮಾಡಿಸಿಕೊಂಡ ರೋಗಿಗಳು 12 ದಿನಗಳೊಳಗೆ ಗುಣಮುಖರಾಗಿ ಮನೆಗೆ ತೆರಳಿದ್ದಾರೆ ಎಂದರು.
ಡಾ| ಪ್ರಶಾಂತ್ ಮಾರ್ಲ, ಡಾ| ಪ್ರೀತಮ್ ಶರ್ಮಾ, ಡಾ| ರೋಶನ್ ಶೆಟ್ಟಿ (ಕಸಿ ಶಸ್ತ್ರಚಿಕಿತ್ಸಕರು), ಡಾ| ರಾಘವೇಂದ್ರ ನಾಯಕ್ (ನೆಫ್ರಾಲಜಿಸ್ಟ್), ಡಾ| ಹರೀಶ್ ಕಾರಂತ್ (ಅರಿವಳಿಕೆ ತಜ್ಞ), ಸೌಮ್ಯಾ (ಕಸಿ ಸಂಯೋಜಕಿ), ಲೀಲಾವತಿ ಹೆಗ್ಡೆ (ಡಯಾಲಿಸಿಸ್), ಸವಿನಾ ರೋಶ್ನಿ, ಮಹಾಬಲ (ಓಟಿ ಸಿಬಂದಿ) ಈ ಸವಾಲನ್ನು ಸ್ವೀಕರಿಸಿ ಶಸ್ತ್ರಕ್ರಿಯೆಯನ್ನು ಸಂಪೂರ್ಣಗೊಳಿಸಿದ್ದಾರೆ ಎಂದರು.
“ಜೀವನ್ ವಿಲೀನ’
ಅಂಗಾಂಗ ದಾನದ ಪ್ರಕ್ರಿಯೆಯನ್ನು 2015ರಲ್ಲಿ ಎ.ಜೆ. ಆಸ್ಪತ್ರೆ ಆರಂಭಿ ಸಿತ್ತು. ಈ ಪ್ರಕ್ರಿಯೆಯು ಅವಿಭಜಿತ ದಕ್ಷಿಣ ಕನ್ನಡದ ಪ್ರಥಮ ಅಂಗಾಂಗ ದಾನಿಗಳಾದ ಜೀವನ್ ಮತ್ತು ಲೀನಾ
ಅವರ ಹೆಸರನ್ನು ಅಜರಾಮರಗೊಳಿ ಸಲು “ಜೀವನ್ ವಿಲೀನ’ ಎಂಬ ಹೆಸರಲ್ಲಿ ಪ್ರಖ್ಯಾತ ವಾಗಿದೆ. ಅಂದಿನಿಂದ ಇಂದಿನ ವರೆಗೂ 41 ದಾನಿಗಳಿಂದ ಪಡೆದ ಅಂಗಾಂಗಗಳಿಂದ ಸುಮಾರು 150 ರೋಗಿಗಳು ಗುಣಮುಖ ರಾಗಿರುತ್ತಾರೆ ಎಂದರು.
ಡಾ| ಪ್ರೀತಮ್ ಶರ್ಮಾ, ಡಾ| ರಾಘವೇಂದ್ರ ನಾಯಕ್ ಪತ್ರಿಕಾಗೋಷ್ಠಿಯಲ್ಲಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಎಸ್‌ಟಿಪಿಗಳಲ್ಲಿ ಸಂಸ್ಕರಣೆ ಆಗದೆ ಕೊಳಚೆ ನೀರು ನೇರ ನದಿ, ಕೆರೆಗೆ!
Bajpe ಪ.ಪಂ.ನಿಂದ ಕುಡಿಯುವ ನೀರು ಪೂರೈಕೆಗೆ ಹೊಸ ಚಿಂತನೆ; ಹೊಸ ಬೋರ್‌ವೆಲ್‌ಗೆ ಸೌರ ಪಂಪ್
Mannagudda: ಗಡ್ಡೆ ಗೆಣಸು ಸೊಪ್ಪುಗಳಿಗೆ ರಾಜ ಮರ್ಯಾದೆ!
ಉಮ್ರಾ ಯಾತ್ರೆಗೆ ತೆರಳಿ ವಂಚನೆ : ಸಂತ್ರಸ್ತರನ್ನು ಊರಿಗೆ ಕರೆಸಿಕೊಂಡ ಮೊಯ್ದಿನ್ ಬಾವ
ಜ.6- 9: ಜೋಕಟ್ಟೆ ಲೆವೆಲ್‌ಕ್ರಾಸ್ ಬಂದ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.