Mangaluru: ಒಂದೇ ಹೆರಿಗೆಯಲ್ಲಿ ನಾಲ್ಕು ಮಕ್ಕಳಿಗೆ ಜನ್ಮನೀಡಿದ ತಾಯಿ
ಎರಡು ಗಂಡು, ಎರಡು ಹೆಣ್ಣು ಶಿಶುವಿಗೆ ಜನ್ಮ, ಎಲ್ಲರೂ ಆರೋಗ್ಯ
Team Udayavani, Jan 6, 2025, 8:09 PM IST
ಮಂಗಳೂರು: ಸಹಜ ಗರ್ಭಧಾರಣೆಯಲ್ಲೇ ತಾಯಿ ನಾಲ್ಕು ಮಕ್ಕಳಿಗೆ ಜನ್ಮನೀಡಿದ ಅಪರೂಪದ ಪ್ರಕರಣವಿದು.
ನವೆಂಬರ್ 9ರಂದು ಮಂಗಳೂರಿನ ಫಾ|ಮುಲ್ಲರ್ ಆಸ್ಪತ್ರೆಯಲ್ಲಿ ಸೆಸೇರಿಯನ್ ಮೂಲಕ ಹೆರಿಗೆಯಾಗಿದೆ. ಹುಟ್ಟಿದ ನಾಲ್ಕೂ ಶಿಶುಗಳಿಗೆ ನವಜಾತ ಶಿಶುಗಳ ತೀವ್ರ ನಿಗಾ ಘಟಕದಲ್ಲಿ ಆರೈಕೆ ನೀಡಲಾಗಿದ್ದು ಕೆಲ ದಿನಗಳ ಹಿಂದೆಯಷ್ಟೇ ತಾಯಿ ತಂದೆ ತಮ್ಮ ಮಕ್ಕಳೊಂದಿಗೆ ಮನೆಗೆ ತೆರಳಿದ್ದಾಗಿದೆ.
ಹುಟ್ಟಿರುವ ಮಕ್ಕಳಲ್ಲಿ ಎರಡು ಗಂಡಾದರೆ ಎರಡು ಹೆಣ್ಣು, ಈ ಅಪರೂಪದ ವಿದ್ಯಮಾನದ ಕುರಿತು ಆಸ್ಪತ್ರೆಯವರು ವಿವರ ನೀಡಿದ್ದಾರೆ. ಹುಟ್ಟುವಾಗ ಮಕ್ಕಳ ತೂಕ 1.1 ಕೆಜಿ, 1.2 ಕೆಜಿ, 800 ಗ್ರಾಮ್ ಹಾಗೂ 900 ಗ್ರಾಂ ಇದ್ದು ಕಳೆದೆರಡು ತಿಂಗಳಿನಿಂದ ನವಜಾತ ಶಿಶುಗಳ ವಾರ್ಡ್‌ನಲ್ಲಿ ಆರೈಕೆ ನೀಡಲಾಗಿತ್ತು.
ತೆಲಂಗಾಣ ಮೂಲದ ದಂಪತಿಗಳಾದ ತೇಜ ಹಾಗೂ ಬಾನೊತ್ ದುರ್ಗಾ ಈ ನಾಲ್ಕು ಮಕ್ಕಳನ್ನು ಪಡೆದ ಖುಷಿಯಲ್ಲಿದ್ದಾರೆ. ತೇಜ ಅವರು ಮಂಗಳೂರಿನಲ್ಲಿ ರೈಲ್ವೇ ಇಲಾಖೆಯಲ್ಲಿ ಅಧಿಕಾರಿಯಾಗಿದ್ದಾರೆ.ದುರ್ಗಾ ಅವರು ಗರ್ಭಧರಿಸಿದ ಬಳಿಕ ಸ್ಕ್ಯಾನಿಂಗ್ ಗೆಂದು ಫಾ.ಮುಲ್ಲರ್ ಆಸ್ಪತ್ರೆಗೆ ಬಂದಾಗ ನಾಲ್ಕು ಶಿಶುಗಳಿರುವುದು ಗೊತ್ತಾಗಿದೆ.
ಸಾಮಾನ್ಯವಾಗಿ ಐವಿಎಫ್ ಕೃತಕ ಗರ್ಭಧಾರಣೆಯಲ್ಲಿ ಈ ರೀತಿ ಒಂದಕ್ಕಿಂತ ಹೆಚ್ಚು ಮಕ್ಕಳ ಜನನವಾಗುವುದು ಹೆಚ್ಚು, ಆದರೆ ಈ ಪ್ರಕರಣ ಸಹಜ ಗರ್ಭಧಾರಣೆಯದ್ದಾಗಿದ್ದರಿಂದ ಇದು ವಿರಳ ಎನ್ನುತ್ತಾರೆ, ಈ ಹೆರಿಗೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದ ಗೈನೆಕಾಲಜಿಸ್ಟ್ ಡಾ|ಜೋಯ್ಲಿನ್ ಅಲ್ಮೇಡ.
ತಮ್ಮ ಹೊಟ್ಟೆಯಲ್ಲಿ ನಾಲ್ಕು ಮಕ್ಕಳಿರುವುದು ಗೊತ್ತಾದಾಗ ದಂಪತಿ ಸಹಜವಾಗಿ ಖುಷಿಯಾದರು. ಆದರೆ ಈ ಗರ್ಭಧಾರಣೆ ಹಾಗೂ ಹೆರಿಗೆ ವೇಳೆಯ ಗಂಭೀರತೆ ಬಗ್ಗೆ ವಿವರಿಸಿದೆವು, ಅಗತ್ಯವಿದ್ದರೆ ಶಿಶುಗಳ ಸಂಖ್ಯೆಯನ್ನು ಇಳಿಸುವ(ಫೀಟಲ್ ರಿಡಕ್ಷನ್) ಆಯ್ಕೆ ಇದೆಯೆಂದೂ ತಿಳಿಸಿದೆವು, ಆದರೆ ದಂಪತಿಗಳು ನಾಲ್ಕೂ ಮಕ್ಕಳನ್ನೂ ಉಳಿಸಿಕೊಳ್ಳುವುದಕ್ಕೆ ಮುಂದಾದರು ಎನ್ನುತ್ತಾರೆ ಡಾ|ಅಲ್ಮೇಡ.
31 ವಾರಗಳ ಕಾಲ ದುರ್ಗಾ ಅವರನ್ನು ನಿರಂತರ ಪರಿಶೀಲನೆ ಮಾಡುತ್ತಿರಲಾಗಿದೆ. ಹಿಂದೆ ಆಕೆಗೆ ಒಮ್ಮೆ ಸೆಸೇರಿಯನ್ ಆಗಿದ್ದು, ಒಂದು ಮಗುವಿದೆ, ಹಾಗಾಗಿ ಗರ್ಭಕೋಶದಲ್ಲಿ ಅದರ ಹೊಲಿಗೆ ಇರುವುದರಿಂದ ಮತ್ತೆ ಸೆಸೇರಿಯನ್ ಮಾಡುವಾಗ ಹೆಚ್ಚಿನ ನಿಗಾ ಅಗತ್ಯವಿತ್ತು.
ಟೀಂ ವರ್ಕ್‌ನಿಂದ ಯಶಸ್ಸು
32ನೇ ವಾರದಲ್ಲಿ ನ.9ರಂದು ಹೆರಿಗೆ ಮಾಡಿಸಲಾಯಿತು. ನಾಲ್ಕು ಶಿಶುಗಳಿದ್ದುದರಿಂದ ಎಲ್ಲಾ ವೈದ್ಯರ ಟೀಂ ವರ್ಕ್ ಅಗತ್ಯವಿದ್ದು, ಈ ಇಡೀ ಪ್ರಕ್ರಿಯೆಯಲ್ಲಿ ರೇಡಿಯೇಶನ್ ವಿಭಾಗದ ಡಾ|ಮುರಳೀಧರ್, ಡಾ.ರಾಮ್ ಭಾಸ್ತಿ ಮತ್ತು ಡಾ|ಮಹೇಶ್, ಪ್ರಸೂತಿ ವಿಭಾಗದ ಡಾ|ವಿಸ್ಮಯ, ಡಾ|ಏಕ್ತ, ಡಾ|ದಿಯಾ, ಡಾ|ನಯನ, ಮಕ್ಕಳ ತಜ್ಞೆ ಡಾ.ಚಂದನಾ ಪೈ ಮತ್ತಿತರರು ನೆರವು ನೀಡಿದರು. ಶಸ್ತ್ರಕ್ರಿಯಾ ಕೊಠಡಿ ಸಿಬಂದಿಗಳೂ ಸೂಕ್ತ ಸಹಕಾರವಿತ್ತರು. ಹೆರಿಗೆ ಬಳಿಕ ಮಕ್ಕಳ ತೂಕ ಕಡಿಮೆ ಇದ್ದ ಕಾರಣ ಡಾ|ಪ್ರವೀಣ್ ಬಿ.ಕೆ ಅವರ ತಂಡ ಗರಿಷ್ಠ ಆರೈಕೆ ನೀಡಿತು. ಇದರಿಂದ ಶಿಶುಗಳು ಪ್ರತಿದಿನವೂ ಉತ್ತಮ ಆರೋಗ್ಯ ಪ್ರಗತಿ ದಾಖಲಿಸಿವೆ.
7ಲಕ್ಷಕ್ಕೊಂದು ಪ್ರಕರಣ
ಅಪರೂಪದ ಪ್ರಕರಣ ಇದಾಗಿದೆ, ಈ 7 ಲಕ್ಷದಲ್ಲಿ ಒಂದು ಪ್ರಕರಣ ಇಂಥದ್ದು ಬರುತ್ತದೆ, ಇಂತಹ ಕೇಸ್ ನಿಭಾಯಿಸುವುದು ಬಹಳ ಕ್ಲಿಷ್ಟಕರ ಎಂದು ಡಾ|ಅಲ್ಮೇಡಾ ತಿಳಿಸುತ್ತಾರೆ.
14 ವರ್ಷಗಳ ಹಿಂದೆ ಕೆಎಂಸಿಯಲ್ಲಿ ಇಂತಹದೇ ನಾಲ್ಕು ಮಕ್ಕಳ ಜನನವಾಗಿತ್ತು, ಅದರಲ್ಲಿ ನಾಲ್ಕೂ ಮಕ್ಕಳು ಗಂಡು ಎನ್ನುವುದು ಗಮನಾರ್ಹ.
ಡ/ಪ
0601ಞlr31/32
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
ಮಮ್ತಾಜ್ ಅಲಿ ಆತ್ಮಹ*ತ್ಯೆ ಪ್ರಚೋದನೆ ಆರೋಪ: ಆರೋಪಿಗಳ ವಿರುದ್ದ ಆರೋಪ ಪಟ್ಟಿ ಸಲ್ಲಿಕೆ
Train; ಗೋಮಟೇಶ್ವರ ಎಕ್ಸ್‌ಪ್ರೆಸ್ ಮಂಗಳೂರು ಸೆಂಟ್ರಲ್‌ಗೆ ವಿಸ್ತರಿಸಲು ಕ್ಯಾ| ಚೌಟ ಪತ್ರ
Dakshina Kannada ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಐವರ ಹೆಸರು
Mangaluru: ಒನ್ ನೇಶನ್-ಒನ್ ಡೆಸ್ಟಿನೇಶನ್‌ಗೆ ಮಂಗಳೂರಿನ ತಣ್ಣೀರುಬಾವಿ ಬೀಚ್
Mangaluru: ಲಕ್ಷಾಂತರ ವಿದ್ಯಾರ್ಥಿಗಳಿಗೆ ಕೆಪಿಟಿ ದಾರಿದೀಪ: ಸಚಿವ ಡಾ| ಎಂ.ಸಿ. ಸುಧಾಕರ್
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Forest Department: ಇದ್ದಲ್ಲಿಯೇ ಅರಣ್ಯ ಅಪರಾಧಗಳ ದಾಖಲು: “ಗರುಡಾಕ್ಷಿ’ಗೆ ಚಾಲನೆ
Commission: 60 ಪರ್ಸೆಂಟ್ ಕಮಿಷನ್: ಎಚ್‌ಡಿಕೆ ವಿರುದ್ಧ ಮುಗಿಬಿದ್ದ ಆಡಳಿತ ಪಕ್ಷ
illegal Investigation: ಬಿಬಿಎಂಪಿ ಮುಖ್ಯ ಎಂಜಿನಿಯರ್ ಕಚೇರಿ ಮೇಲೆ ಇ.ಡಿ. ದಾಳಿ
Waqf Report: ಅಮಿತ್ ಶಾ ಅಂಗಳಕ್ಕೆ ಭಿನ್ನರ ವಕ್ಫ್ ವರದಿ: ಕಿರಣ್ ರಿಜಿಜು ಮೂಲಕ ಸಲ್ಲಿಕೆ
Udupi:ಗೀತಾರ್ಥ ಚಿಂತನೆ 149: ಜಗತ್ತಿನಲ್ಲಿ ಇಷ್ಟೊಂದು ವ್ಯತ್ಯಾಸವೇಕೆ? ಪ್ರಶ್ನೆಗುತ್ತರವಿಲ್ಲ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.