Ullal ಟಾರ್ಗೆಟ್‌ ಇಲ್ಯಾಸ್‌ ಕೊಲೆಗೆ ಪ್ರತೀಕಾರವಾಗಿ ಸಮೀರ್‌ ಹತ್ಯೆ

Team Udayavani, Aug 13, 2024, 6:35 AM IST

Ullal ಟಾರ್ಗೆಟ್‌ ಇಲ್ಯಾಸ್‌ ಕೊಲೆಗೆ ಪ್ರತೀಕಾರವಾಗಿ ಸಮೀರ್‌ ಹತ್ಯೆ

ಉಳ್ಳಾಲ: ತೊಕ್ಕೊಟ್ಟು ಕಲ್ಲಾಪು ಬಳಿ ರವಿವಾರ ರಾತ್ರಿ ಕೊಲೆಯಾದ ರೌಡಿಶೀಟರ್‌ ಸಮೀರ್‌ ಆಲಿಯಾಸ್‌ ಕಡಪ್ಪರ ಸಮೀರ್‌ (33) ಹತ್ಯೆಯು 2018ರ ಉಳ್ಳಾಲ ನಿವಾಸಿ ಟಾರ್ಗೆಟ್‌ ಇಲ್ಯಾಸ್‌ ಕೊಲೆ ಪ್ರಕರಣಕ್ಕೆ ಪ್ರತಿಕಾರವಾಗಿದೆ ಎಂಬುದು ಪೊಲೀಸ್‌ ತನಿಖೆಯಲ್ಲಿ ಖಚಿತವಾಗಿದ್ದು, ಇಲ್ಯಾಸ್‌ನ ಹತ್ತಿರದ ಸಂಬಂಧಿ ಸಹಿತ ಐವರ ತಂಡ ಈ ಕೃತ್ಯವನ್ನು ಎಸಗಿದೆ ಎನ್ನಲಾಗಿದೆ.

ಘಟನೆಗೆ ಸಂಬಂಧಿಸಿ ಕೆಲವರನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದೆ.ದರೋಡೆ ಪ್ರಕರಣವೊಂದಕ್ಕೆ ಜೈಲು ಸೇರಿದ್ದ ಸಮೀರ್‌ ನಾಲ್ಕು ದಿನಗಳ ಹಿಂದೆ ಜಾಮೀನಿನಲ್ಲಿ ಹೊರಬಂದಿದ್ದ. ರವಿವಾರ ಮುಕ್ಕಚ್ಚೇರಿಯಲ್ಲಿರುವ ತನ್ನ ತಾಯಿ ಮತ್ತು ಕುಟುಂಬದ ಸದಸ್ಯರೊಂದಿಗೆ ಪಂಪ್‌ವೆಲ್‌ನಲ್ಲಿರುವ ತನ್ನ ಫ್ಲ್ಯಾಟ್ ಗೆ ತೆರಳುತ್ತಿದ್ದ. ಈ ಸಂದರ್ಭ ಕಲ್ಲಾಪು ಬಳಿಯಿರುವ ವಾಣಿಜ್ಯ ಸಂಕೀರ್ಣದ ಎದುರು ಕಾರು ನಿಲ್ಲಿಸಿ ಬಾಗಿಲು ತೆರೆಯುತ್ತಿದ್ದಂತೆ, ಹಿಂದಿನಿಂದ ಕಾರಿನಲ್ಲಿ ಬಂದ ಐವರ ತಂಡವೊಂದು ಅಟ್ಟಾಡಿಸಿ ತಲವಾರಿನಿಂದ ಕೊಂದು ಹಾಕಿದೆ.

ಟಾರ್ಗೆಟ್‌ ಇಲ್ಯಾಸ್‌ ಹತ್ಯೆಗೆ ಪ್ರತಿಕಾರ
ಉಳ್ಳಾಲದಲ್ಲಿ “ಟಾರ್ಗೆಟ್‌ ಹೆಸರಿನ ಮೂಲಕ ಹನಿಟ್ರ್ಯಾಪ್ ಸಹಿತ ಉದ್ಯಮಿಗಳನ್ನು ಬೆದರಿಸಿ ಹಣ ವಸೂಲಿಯಂತಹ ಹಲವು ಪ್ರಕರಣಗಳಲ್ಲಿ ತೊಡಗಿಸಿಕೊಂಡಿದ್ದ ಇಲ್ಯಾಸ್‌ನನ್ನು ಆತನದೇ ತಂಡದ ಸದಸ್ಯರಾಗಿ ಬಳಿಕ ಆತನಿಂದ ಬೇರ್ಪಟ್ಟಿದ್ದ ದಾವೂದ್‌ ಸಮೀರ್‌ ಕಡಪ್ಪರ ಸಹಿತ ಎಂಟು ಜನರ ತಂಡವೊಂದು 2018ರ ಜ. 13ರಂದು ಬೆಳ್ಳಂಬೆಳಗ್ಗೆ ಮಂಗಳೂರಿನ ಕುಡಾ³ಡಿ ಬದ್ರಿಯಾ ಜುಮ್ಮಾ ಮಸೀದಿ ಎದುರಿನ ಮಿಸ್ತಾಹ್‌ ಗ್ಯಾಲೋರ್‌ ಅಪಾರ್ಟ್‌ಮೆಂಟ್‌ನ ಫ್ಲ್ಯಾಟ್‌ನಲ್ಲಿ ಮಲಗಿದ್ದ ವೇಳೆಯೇ ಕೊಲೆ ಮಾಡಿ ಪರಾರಿಯಾಗಿತ್ತು. ಈ ಪ್ರಕರಣದ ಪ್ರಮುಖ ಅರೋಪಿಯಾಗಿ ಸಮೀರ್‌ ಹಾಗೂ ದಾವೂದ್‌ ಗುರುತಿಸಿಕೊಂಡಿದ್ದರು.

ಖುಲಾಸೆ ಬಳಿಕ ಹೆಚ್ಚಾದ ಪ್ರತೀಕಾರದ ಕಿಚ್ಚು
ಇಲ್ಯಾಸ್‌ ಕೊಲೆ ನಡೆದ ಸಂದರ್ಭದಲ್ಲೇ ಇಲ್ಯಾಸ್‌ನ ಸಂಬಂಧಿ ಫಾರೂಕ್‌ ನೇತೃತ್ವದಲ್ಲಿ ಸಮೀರ್‌ ಹತ್ಯೆಗೆ ಯತ್ನ ನಡೆದಿತ್ತು. ಈ ಸಂದರ್ಭದಲ್ಲಿ ಉಳ್ಳಾಲ ಪೊಲೀಸರು ಫಾರೂಕ್‌ನ ಕಾಲಿಗೆ ಗುಂಡು ಹೊಡೆದು ರೌಡಿ ತಂಡವನ್ನು ಹಿಮ್ಮೆಟ್ಟಿಸಿದ್ದು, ಬಳಿಕ ಯಾವುದೇ ಘಟನೆಗಳು ನಡೆದಿರಲಿಲ್ಲ. ಸಮೀರ್‌ ವಿರುದ್ಧ ಉಳ್ಳಾಲ, ಕೊಣಾಜೆ, ಬಂಟ್ವಾಳ, ಪಾಂಡೇಶ್ವರ ಸಹಿತ ವಿವಿಧ ಠಾಣೆಗಳಲ್ಲಿ ಸುಮಾರು 9 ಪ್ರಕರಣಗಳು ದಾಖಲಾಗಿದ್ದವು. ಸಮೀರ್‌ ಪಾಂಡೇಶ್ವರದ ಶೂಟೌಟ್‌ ಪ್ರಕರಣದಲ್ಲೂ ಆರೋಪಿಯಾಗಿದ್ದ. ಟಾರ್ಗೆಟ್‌ ಇಲ್ಯಾಸ್‌ ಕೊಲೆ ಪ್ರಕರಣದ ವಿಚಾರಣೆ ನಡೆಸಿದ ಮಂಗಳೂರು ಕೋರ್ಟ್‌ 2023ರ ಡಿ. 11ರಂದು ಆರೋಪಿಗಳನ್ನು ಖುಲಾಸೆಗೊಳಿಸಿತ್ತು. ಖುಲಾಸೆ ಬಳಿಕ ಇಲ್ಯಾಸ್‌ ತಂಡದ ಸದಸ್ಯರು ಸಮೀರ್‌ ಕೊಲೆಗೆ ಯೋಜನೆ ರೂಪಿಸಿದ್ದರು.

ಜೈಲಿನಲ್ಲೂ ನಡೆದಿತ್ತು ಹತ್ಯೆಗೆ ಪ್ಲ್ಯಾನ್
ಸಮೀರ್‌ 2024ರ ಜೂನ್‌ನಲ್ಲಿ ವಿದೇಶದಿಂದ ಬಂದ ಉದ್ಯಮಿಯೊಬ್ಬರ ದರೋಡೆಗೆ ಯತ್ನಿಸಿ ಜೈಲು ಸೇರಿದ್ದ. ಜೈಲು ಸೇರಿದ್ದ ಸಮೀರ್‌ ಹತ್ಯೆಗೆ ಮುಹೂರ್ತ ಇಟ್ಟಿದ್ದ ತಂಡ ಜು. 11ರಂದು ಮಂಗಳೂರು ಜೈಲಿನಲ್ಲೇ ಸಮೀರ್‌ ಹಾಗೂ ಆತನ ಸಹಚರ ಬೋಳಿಯಾರ್‌ ನಿವಾಸಿ ಮುಹಮ್ಮದ್‌ ಮನ್ಸೂರ್‌ಗೆ ಕೈದಿಗಳ ಗುಂಪೊಂದು ಜೈಲಿನ ಒಳಗೆ ಮಾರಕಾಯುಧಗಳಿಂದ ದಾಳಿ ನಡೆಸಿತ್ತು. ಇಲ್ಯಾಸ್‌ ಅಪ್ತ ವಲಯದ ಟೋಪಿ ನೌಫಲ್‌ ಮತ್ತು ಗ್ಯಾಂಗ್‌ನಿಂದ ಈ ದಾಳಿ ನಡೆದಿತ್ತು.

ಇಲ್ಯಾಸ್‌ ಮಾದರಿಯಲ್ಲೇ ಕೊಲೆ ಇಲ್ಯಾಸ್‌ನನ್ನು ಆತನ ಅತ್ತೆ ಆಸ್ಮತ್‌, ಬಾವ ಮೊಹಮ್ಮದ್‌ ನೌಷಾದ್‌ ಎದುರೇ ಕೊಲೆ ಮಾಡಲಾಗಿತ್ತು. ಅದೇ ರೀತಿ ಸಮೀರ್‌ನನ್ನು ಆತನ ತಾಯಿ ಮತ್ತು ಕುಟುಂಬದ ಸದಸ್ಯರ ಎದುರೇ ಕೊಲೆ ಮಾಡಿದೆ.

ರೀಲ್ಸ್‌ ಮಾಡಿ ಸಿಲುಕಿದನೇ?
ವಿದೇಶದಿಂದ ಪ್ರಯಾಣಿಕರ ಸೋಗಿನಲ್ಲಿ ಚಿನ್ನ ಕಳ್ಳ ದಾರಿಯಲ್ಲಿ ತಂದು ಕೇರಳಕ್ಕೆ ಸಾಗಿಸುತ್ತಿದ್ದವರನ್ನು ಟಾರ್ಗೆಟ್‌ ಮಾಡಿ ಚಿನ್ನ ಸುಲಿಗೆ ಮಾಡಿರುವ ಆರೋಪ ಸಮೀರ್‌ ಮೇಲಿದ್ದು, ಇಂತಹ ಪ್ರಕರಣದ ಮೂಲಕ ಅಪರಾಧ ಜಗತ್ತಿನಲ್ಲಿ ಹಣ ಮಾಡಿ ಸ್ಥಿತಿವಂತನಾಗಿದ್ದ. ಹೊಸ ಕಾರು ಖರೀದಿಸಿ ಜಾಮೀನು ಸಿಕ್ಕಿದ ಬಳಿಕ ರೀಲ್ಸ್‌ ಮಾಡಿ ಸಾಮಾಜಿಕ ಜಾಲತಾಣದಲ್ಲಿ ಅಪ್‌ಲೋಡ್‌ ಮಾಡಿದ್ದ. ಸಮೀರ್‌ ದರೋಡೆ ಪ್ರಕರಣದಲ್ಲಿ ಜಾಮೀನಿನ ಮೇಲೆ ಹೊರ ಬಂದಿರುವುದು ಮತ್ತು ಆತನ ಕಾರ್‌ನ ಸಂಪೂರ್ಣ ವಿವರ ಎದುರಾಳಿಗಳಿಗೆ ಸಾಮಾಜಿಕ ಜಾಲತಾಣದಿಂದ ಸಿಕ್ಕಿತ್ತು. ನಾಲ್ಕು ದಿನಗಳಿಂದ ಆತನ ಚಲನವಲನ ಮತ್ತು ಕಾರನ್ನು ಹಿಂಬಾಲಿಸಿ ಕೊಲೆಗೆ ಸ್ಕೆಚ್‌ ರೂಪಿಸಿ ಯಶಸ್ವಿಯಾಗಿದ್ದಾರೆ ಎನ್ನಲಾಗಿದೆ.

ತಲವಾರು ವಶಕ್ಕೆ
ಸಮೀರ್‌ನನ್ನು ವಾಣಿಜ್ಯ ಸಂಕೀರ್ಣದ ಹಿಂಬದಿಯ ನಿರ್ಜನ ಪ್ರದೇಶದಲ್ಲಿ ಕೊಲೆ ಮಾಡಿ ತಲವಾರನ್ನು ಬಿಸಾಡಿ ಹೋಗಿದ್ದರು. ಕೊಲೆ ನಡೆದ ಗಂಟೆಯ ಬಳಿಕ ಸಮೀರ್‌ನ ಮೃತದೆಹ ಪತ್ತೆಯಾಗಿದ್ದು, ಸೋಮವಾರ ಬೆಳಗ್ಗೆ ಎರಡು ತಲವಾರುಗಳನ್ನು ಪೊದೆಗಳೆಡೆಯಿಂದ ವಶಕ್ಕೆ ಪಡೆಯಲಾಗಿದೆ.

ಕಮಿಷನರ್‌ ಅನುಪಮ್‌ ಅಗರವಾಲ್‌ ಅವರ ಮಾರ್ಗದರ್ಶನದಲ್ಲಿ ಎಸಿಪಿ ಧನ್ಯಾ ನಾಯಕ್‌ ಅವರ ನೆತೃತ್ವದಲ್ಲಿ ಉಳ್ಳಾಲ ಇನ್‌ಸ್ಪೆಕ್ಟರ್‌ ಬಾಲಕೃಷ್ಣ ಎಚ್‌.ಎನ್‌. ಮತ್ತು ತಂಡ ತನಿಖೆ ನಡೆಸುತ್ತಿದ್ದು, ಆರೋಪಿಗಳ ಮಹತ್ವದ ಸುಳಿವು ಲಭ್ಯವಾಗಿದೆ ಎಂದು ಹೇಳಲಾಗಿದೆ.

ಇಬ್ಬರೂ ಜಾಮೀನಿನಲ್ಲಿದ್ದಾಗಲೇ ಕೊಲೆ
ಉಳ್ಳಾಲದ ಮಾಸ್ತಿಕಟ್ಟೆಯಲ್ಲಿ “ಟಾರ್ಗೆಟ್‌’ ಎಂಬ ಹೆಸರಿನಲ್ಲಿ ಕಾರುಗಳನ್ನು ಬಾಡಿಗೆಗೆ ನೀಡುವ ವ್ಯವಹಾರ ಆರಂಭಿಸಿದ್ದ. ಇಲ್ಯಾಸ್‌ ತನ್ನದೇ ಆದ ಯುವಕರ ತಂಡ ಕಟ್ಟಿಕೊಂಡು ಹಣ ಸುಲಿಗೆ ಸಹಿತ ದರೋಡೆ, ಕೊಲೆಯತ್ನದಂತಹ ಅನೇಕ ಪ್ರಕರಣಗಳಲ್ಲಿ ಆರೋಪಿಯಾಗಿದ್ದ. ಹಣದ ವಿಚಾರದಲ್ಲಿ ಈತನ ತಂಡದಲ್ಲಿದ್ದ ದಾವೂದ್‌, ಸಮೀರ್‌ ಒಂದು ತಂಡವನ್ನು ಕಟ್ಟಿಕೊಂಡರೆ, ಸರ್ಫಾನ್‌ ಇನ್ನೊಂದು ತಂಡವನ್ನು ಕಟ್ಟಿಕೊಂಡು ಇಲ್ಯಾಸ್‌ನಿಂದ ಬೇರ್ಪಡುತ್ತಾರೆ. ಇದೇ ವಿಚಾರದಲ್ಲಿ ದಾವೂದ್‌ ಮೇಲೆ ಮಾರಣಾಂತಿಕ ಹಲ್ಲೆ ನಡೆಸಿದ್ದ ಇಲ್ಯಾಸ್‌ ಜೈಲು ಪಾಲಾಗಿ ಜಾಮೀನಿನಲ್ಲಿ ಹೊರಗೆ ಬಂದು ಐದೇ ದಿನದಲ್ಲಿ ಕೊಲೆಯಾಗಿದ್ದ. ಈಗ ಸಮೀರ್‌ ಜಾಮೀನಿನಲ್ಲಿ ಹೊರಂಬದ ನಾಲ್ಕೇ ದಿನಗಳಲ್ಲಿ ಕೊಲೆಯಾಗಿದ್ದಾನೆ.

ಟಾಪ್ ನ್ಯೂಸ್

MM-Singh

Mourning: ಮನಮೋಹನ್‌ ಸಿಂಗ್‌ ನಿಧನ; ದೇಶಾದ್ಯಂತ 7 ದಿನ ಶೋಕಾಚರಣೆ ಘೋಷಿಸಿದ ಕೇಂದ್ರ ಸರಕಾರ

Mangaluru: ಶಾರ್ಜಾದಲ್ಲಿ ತುಂಬೆ ಸೈಕಿಯಾಟ್ರಿಕ್‌ ಆಸ್ಪತ್ರೆ

Mangaluru: ಶಾರ್ಜಾದಲ್ಲಿ ತುಂಬೆ ಸೈಕಿಯಾಟ್ರಿಕ್‌ ಆಸ್ಪತ್ರೆ

Sabarimala: ಸಾವಿರಾರು ಭಕ್ತರಿಂದ ಮಂಡಲ ಪೂಜೆ ವೀಕ್ಷಣೆSabarimala: ಸಾವಿರಾರು ಭಕ್ತರಿಂದ ಮಂಡಲ ಪೂಜೆ ವೀಕ್ಷಣೆ

Sabarimala: ಸಾವಿರಾರು ಭಕ್ತರಿಂದ ಮಂಡಲ ಪೂಜೆ ವೀಕ್ಷಣೆ

Mangaluru ಡಿ. 28, 29: ತಣ್ಣೀರುಬಾವಿಯಲ್ಲಿ ಬೀಚ್‌ ಉತ್ಸವ

Mangaluru ಡಿ. 28, 29: ತಣ್ಣೀರುಬಾವಿಯಲ್ಲಿ ಬೀಚ್‌ ಉತ್ಸವ

Udupi: ಶ್ರೀ ಕೃಷ್ಣಮಠಕ್ಕೆ ಮಾಜಿ ಕ್ರಿಕೆಟಿಗ ವಿ.ವಿ.ಎಸ್‌. ಲಕ್ಷ್ಮಣ್‌ ಭೇಟಿ

Udupi: ಶ್ರೀ ಕೃಷ್ಣಮಠಕ್ಕೆ ಮಾಜಿ ಕ್ರಿಕೆಟಿಗ ವಿ.ವಿ.ಎಸ್‌. ಲಕ್ಷ್ಮಣ್‌ ಭೇಟಿ

Kundapura: ಬಾವಿಗೆ ಬಿದ್ದು ಯುವತಿ ಸಾವುKundapura: ಬಾವಿಗೆ ಬಿದ್ದು ಯುವತಿ ಸಾವು

Kundapura: ಬಾವಿಗೆ ಬಿದ್ದು ಯುವತಿ ಸಾವು

ಸಿಲಿಂಡರ್‌ ಸ್ಫೋ*ಟ ಪ್ರಕರಣ: ಗಾಯಾಳು ಮಹಿಳೆ ಸಾವು; ಮತ್ತೋರ್ವರ ಸ್ಥಿತಿ ಗಂಭೀರ

Surathkal: ಸಿಲಿಂಡರ್‌ ಸ್ಫೋ*ಟ ಪ್ರಕರಣ: ಗಾಯಾಳು ಮಹಿಳೆ ಸಾವು; ಮತ್ತೋರ್ವರ ಸ್ಥಿತಿ ಗಂಭೀರ

ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

Mangaluru: ಶಾರ್ಜಾದಲ್ಲಿ ತುಂಬೆ ಸೈಕಿಯಾಟ್ರಿಕ್‌ ಆಸ್ಪತ್ರೆ

Mangaluru: ಶಾರ್ಜಾದಲ್ಲಿ ತುಂಬೆ ಸೈಕಿಯಾಟ್ರಿಕ್‌ ಆಸ್ಪತ್ರೆ

Mangaluru ಡಿ. 28, 29: ತಣ್ಣೀರುಬಾವಿಯಲ್ಲಿ ಬೀಚ್‌ ಉತ್ಸವ

Mangaluru ಡಿ. 28, 29: ತಣ್ಣೀರುಬಾವಿಯಲ್ಲಿ ಬೀಚ್‌ ಉತ್ಸವ

Mangaluru: ಕಾಂಗ್ರೆಸ್‌ನ‌ ಅಧಿವೇಶನವಲ್ಲ: ಬಿಜೆಪಿ

Mangaluru: ಕಾಂಗ್ರೆಸ್‌ನ‌ ಅಧಿವೇಶನವಲ್ಲ: ಬಿಜೆಪಿ

ಸಿಲಿಂಡರ್‌ ಸ್ಫೋ*ಟ ಪ್ರಕರಣ: ಗಾಯಾಳು ಮಹಿಳೆ ಸಾವು; ಮತ್ತೋರ್ವರ ಸ್ಥಿತಿ ಗಂಭೀರ

Surathkal: ಸಿಲಿಂಡರ್‌ ಸ್ಫೋ*ಟ ಪ್ರಕರಣ: ಗಾಯಾಳು ಮಹಿಳೆ ಸಾವು; ಮತ್ತೋರ್ವರ ಸ್ಥಿತಿ ಗಂಭೀರ

Thokottu: ಸ್ಕೂಟರ್‌ ಪಲ್ಟಿಯಾಗಿ ಸವಾರ ಸಾವು

Thokottu: ಸ್ಕೂಟರ್‌ ಪಲ್ಟಿಯಾಗಿ ಸವಾರ ಸಾವು

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

MM-Singh

Mourning: ಮನಮೋಹನ್‌ ಸಿಂಗ್‌ ನಿಧನ; ದೇಶಾದ್ಯಂತ 7 ದಿನ ಶೋಕಾಚರಣೆ ಘೋಷಿಸಿದ ಕೇಂದ್ರ ಸರಕಾರ

Mangaluru: ಶಾರ್ಜಾದಲ್ಲಿ ತುಂಬೆ ಸೈಕಿಯಾಟ್ರಿಕ್‌ ಆಸ್ಪತ್ರೆ

Mangaluru: ಶಾರ್ಜಾದಲ್ಲಿ ತುಂಬೆ ಸೈಕಿಯಾಟ್ರಿಕ್‌ ಆಸ್ಪತ್ರೆ

Sabarimala: ಸಾವಿರಾರು ಭಕ್ತರಿಂದ ಮಂಡಲ ಪೂಜೆ ವೀಕ್ಷಣೆSabarimala: ಸಾವಿರಾರು ಭಕ್ತರಿಂದ ಮಂಡಲ ಪೂಜೆ ವೀಕ್ಷಣೆ

Sabarimala: ಸಾವಿರಾರು ಭಕ್ತರಿಂದ ಮಂಡಲ ಪೂಜೆ ವೀಕ್ಷಣೆ

Mangaluru ಡಿ. 28, 29: ತಣ್ಣೀರುಬಾವಿಯಲ್ಲಿ ಬೀಚ್‌ ಉತ್ಸವ

Mangaluru ಡಿ. 28, 29: ತಣ್ಣೀರುಬಾವಿಯಲ್ಲಿ ಬೀಚ್‌ ಉತ್ಸವ

Mangaluru: ಕಾಂಗ್ರೆಸ್‌ನ‌ ಅಧಿವೇಶನವಲ್ಲ: ಬಿಜೆಪಿ

Mangaluru: ಕಾಂಗ್ರೆಸ್‌ನ‌ ಅಧಿವೇಶನವಲ್ಲ: ಬಿಜೆಪಿ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.