Mangaluru: ಮತ್ತೆ ನಗರಕ್ಕೆ ಕೊಳೆತ ಮೀನಿನ ದುರ್ವಾಸನೆ ಶಿಕ್ಷೆ
Team Udayavani, Sep 24, 2024, 5:15 PM IST
ಸಾಂದರ್ಭಿಕ ಚಿತ್ರ
ಮಹಾನಗರ: ಮತ್ತೆ ನಗರದ ದಕ್ಷಿಣ ಭಾಗದ ನಿವಾಸಿಗಳಿಗೆ ಮೀನಿನ ತೈಲ ಸಂಸ್ಕರಣ ಘಟಕಗಳಿಂದ ದುರ್ವಾಸನೆಯ ಕಾಟ ಶುರುವಾಗಿದೆ.
ಬೋಳಾರ, ಮುಳಿಹಿತ್ಲು, ಲೀವೆಲ್ ರೋಡ್, ಜೆಪ್ಪು ಸುತ್ತಮುತ್ತಲಿನ ಪ್ರದೇಶಗಳಲ್ಲಿ ಈ ದುರ್ವಾಸನೆ ಹಬ್ಬಿದ್ದು ಜನ ಕಿರಿಕಿರಿ ಅನುಭವಿಸುತ್ತಿದ್ದಾರೆ.
ಮುಖ್ಯವಾಗಿ ಮಕ್ಕಳು, ಅಸ್ತಮಾದಂತಹ ಕಾಯಿಲೆ ಹೊಂದಿರುವವರು, ವೃದ್ಧರಿಗಂತೂ ಇದು ಅಸಹನೀಯವಾಗಿ ಪರಿಣಮಿಸಿದೆ.
ಪ್ರತಿವರ್ಷವೂ ಮೀನುಗಾರಿಕೆ ಸೀಸನ್‌ನಲ್ಲಿ ಈ ಸಮಸ್ಯೆ ಮರುಕಳಿಸುತ್ತದೆ. ಉಳ್ಳಾಲ ಕೋಟೆಪುರ ಭಾಗದಲ್ಲಿ ಮೀನು ಸಂಸ್ಕರಣೆ ಘಟಕಗಳಿದ್ದು, ಅಲ್ಲಿ ಕೊಳೆತ ಮೀನನ್ನು ಬೃಹತ್ ಪ್ರಮಾಣದಲ್ಲಿ ತಂದು ಫಿಶ್ ಮೀಲ್ ಉತ್ಪಾದಿಸಲಾಗುತ್ತದೆ. ಈ ವೇಳೆ ಇಡೀ ಪರಿಸರದಲ್ಲಿ ಅದು ಬೃಹತ್ ಪ್ರಮಾಣದಲ್ಲಿ ದುರ್ವಾಸನೆ ಹರಡುತ್ತದೆ.
ಇದು ಸ್ಥಳೀಯವಾಗಿ ಅನಾರೋಗ್ಯಕರ ಪರಿಸರ ಸೃಷ್ಟಿಸುತ್ತದೆ. ನಾವು ಅಂಬಾಮಹೇಶ್ವರಿ ಸೇವಾ ಟ್ರಸ್ಟ್‌ನಿಂದ ಮಾದರಿ ವಾರ್ಡ್ ನಿರ್ಮಾಣದ ಯತ್ನ ಮಾಡಲಾಗುತ್ತಿದೆ. ಸ್ಥಳೀಯವಾಗಿ ಮಹಾನಗರ ಪಾಲಿಕೆಯ ಯತ್ನಗಳಿಗೆ ಕೈ ಜೋಡಿಸುತ್ತಿದ್ದೇವೆ. ಆದರೆ ಈ ಮೀನು ಸಂಸ್ಕರಣೆಯ ಸಮಸ್ಯೆ ನಮ್ಮೆಲ್ಲ ಯತ್ನಕ್ಕೆ ತಡೆಯೊಡ್ಡಿದೆ ಎಂದು ಟ್ರಸ್ಟ್ ಅಧ್ಯಕ್ಷ ಸೀತಾರಾಮ ಅವರು ಈ ಕುರಿತು ಜಿಲ್ಲಾಧಿಕಾರಿಯವರಿಗೆ ಬರೆದ ಪತ್ರದಲ್ಲಿ ಅಳಲು ತೋಡಿಕೊಂಡಿದ್ದಾರೆ.
ಈ ಸಮಸ್ಯೆಯನ್ನು ಆದ್ಯತೆ ಮೇರೆಗೆ ಕೈಗೆತ್ತಿಕೊಂಡು, ಮೀನು ಸಂಸ್ಕರಣ ಕಾರ್ಖಾನೆ ಗಳಿಂದ ಆಗುವ ಸಮಸ್ಯೆ ನಿಯಂತ್ರಿಸಬೇಕು ಎಂದು ಆಗ್ರಹಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಆಟೋ ವರ್ಕಶಾಪ್‌ನಿಂದ 93,540 ರೂ. ಕಳವು
Mangaluru: ಗಣಿ ಮತ್ತು ಭೂವಿಜ್ಞಾನ ಇಲಾಖೆಯ ಅಧಿಕಾರಿ ಕೃಷ್ಣವೇಣಿ ಮನೆ ಮೇಲೆ ಲೋಕಾ ದಾಳಿ
Mangaluru: ವಕ್ಫ್ ಭೂಮಿ ಅತಿಕ್ರಮಣ: ಸಲ್ಲಿಕೆಯಾದ ವರದಿ ಬಗ್ಗೆ ತನಿಖೆಯಾಗಲಿ: ಮಾಣಿಪ್ಪಾಡಿ
Ullala: ಯುವತಿಯ ಮಾನಭಂಗಕ್ಕೆ ಯತ್ನ: ಬಾಲಕ ವಶಕ್ಕೆ
Doctor; ಖ್ಯಾತ ಹೃದ್ರೋಗ ತಜ್ಞ ಡಾ.ಎಸ್.ಜಿ.ಸರ್ವೋತ್ತಮ ಪ್ರಭು ವಿಧಿವಶ
MUST WATCH
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.