Mangaluru AirPort: ಬಜಪೆ ವಿಮಾನ ನಿಲ್ದಾಣ ರನ್‌ವೇಗಿಲ್ಲ ರೇಸಾ ಸುರಕ್ಷೆ
ಭೂ ಸ್ವಾಧೀನದಿಂದ ಹಿಂದಕ್ಕೆ ಸರಿದ ರಾಜ್ಯ ಸರಕಾರ, ಯೋಜನೆ ನನೆಗುದಿಗೆ
Team Udayavani, Dec 19, 2024, 7:50 AM IST
ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ತುರ್ತಾಗಿ ಹೆಚ್ಚುವರಿ ಸುರಕ್ಷೆಗಾಗಿ ಸೇಫ್ಟಿ ಬೇಸಿಕ್ ಸ್ಟ್ರಿಪ್ ಮತ್ತು ರನ್‌ವೇ ಎಂಡ್ ಸೇಫ್ಟಿ ಏರಿಯಾ (ರೇಸಾ) ನಿರ್ಮಿಸಲು ಉಚಿತವಾಗಿ ಭೂ ಸ್ವಾಧೀನ ಮಾಡಿಕೊಡುವ ಹೊಣೆಯಿಂದ ರಾಜ್ಯ ಸರಕಾರ ದೂರ ಸರಿದಿದೆ.
ನಾಗರಿಕ ವಿಮಾನ ಯಾನ ಸಚಿವಾಲಯದ ಅಧೀನ ಕಾರ್ಯದರ್ಶಿ ಕಳೆದ ನವೆಂಬರ್ 6ರಂದು ರಾಜ್ಯ ಸರಕಾರದ ಮುಖ್ಯ ಕಾರ್ಯದರ್ಶಿಗೆ ಬರೆದು ಕೂಡಲೇ ಯೋಜನೆಗೆ ಅಗತ್ಯವಿರುವ 32. 97 ಎಕ್ರೆ ಪ್ರದೇಶವನ್ನು ಉಚಿತವಾಗಿ ಒದಗಿಸು ವಂತೆ ಕೋರಿದ್ದರು.
ಇದಕ್ಕೆ ಪ್ರತಿಕ್ರಿಯಿಸಿರುವ ರಾಜ್ಯ ಮುಖ್ಯ ಕಾರ್ಯದರ್ಶಿ, ಎಎಐ ಮತ್ತು ಮಂಗಳೂರು ಇಂಟರ್‌ನ್ಯಾಶನಲ್ ಏರ್‌ಪೋರ್ಟ್ ಲಿ. (ಎಂಜಿಐಎಎಲ್) ಮಧ್ಯೆ ಗುತ್ತಿಗೆ ಒಪ್ಪಂದ ನಡೆದಿರುವುದರಿಂದ ರಾಜ್ಯ ಸರಕಾರವು ಭೂಸ್ವಾಧೀನ ವೆಚ್ಚ ಭರಿಸದು. ಅದನ್ನು ಎಎಐ ನವರು ಎಂಜಿಐಎಎಲ್ ಮೂಲಕ ಭರಿಸಿಕೊಳ್ಳುವುದು ಸೂಕ್ತ. ಭೂಸ್ವಾಧೀನಕ್ಕೆ ಎಲ್ಲ ಸಹಕಾರವನ್ನೂ ರಾಜ್ಯ ಸರಕಾರ ನೀಡಲಿದೆ ಎಂದು ತಿಳಿಸಿದ್ದಾರೆ. ಇದರಿಂದ ಒಂಬತ್ತು ವರ್ಷದ ಹಿಂದೆ ಶಿಫಾರಸು ಮಾಡಲದ ರೇಸಾ ನಿರ್ಮಾಣ ಸಂಗತಿ ಮತ್ತೆ ನನೆಗುದಿಗೆ ಬಿದ್ದಂತಾಗಿದೆ.
ರಾಷ್ಟ್ರೀಯ ನಾಗರಿಕ ವಿಮಾನ ಯಾನ ನೀತಿ-2016 ರಂತೆ ರಾಜ್ಯ ಸರಕಾರವೇ ಉಚಿತವಾಗಿ ಭೂಮಿ ಒದಗಿಸಬೇಕಿದೆ. ವಿಮಾನ ನಿಲ್ದಾಣ ಮೂಲಸೌಕರ್ಯ ಅಭಿವೃದ್ಧಿಯಿಂದ ರಾಜ್ಯದ ಆರ್ಥಿಕ ಅಭಿವೃದ್ಧಿಗೆ ಅನುಕೂಲ ಹಾಗೂ ಉದ್ಯೋಗಾವಕಾಶ ಹೆಚ್ಚುತ್ತದೆ. ಹಾಗಾಗಿ ರಾಜ್ಯ ಸರಕಾರ ಭೂಹಸ್ತಾಂತರ ಪ್ರಕ್ರಿಯೆಯನ್ನು ತ್ವರಿತಗೊಳಿಸಬೇಕು. ಜತೆಗೆ ಇಂಟರ್‌ನ್ಯಾಷನಲ್ ಸಿವಿಲ್ ಏವಿಯೇಶನ್ ಆರ್ಗನೈಸೇಶನ್ ಹಾಗೂ ಡಿಜಿಸಿಎ ನಿಯಮಾವಳಿಯಂತೆ ರೇಸಾ ನಿರ್ಮಾಣ ಅತ್ಯಗತ್ಯ ಎಂದು ವಿಮಾನ ಯಾನ ಸಚಿವಾಲಯ ಪತ್ರದಲ್ಲಿ ತಿಳಿಸಿತ್ತು.
9 ವರ್ಷಗಳ ಹಿಂದೆ ಶಿಫಾರಸು
ಈ ನಿಲ್ದಾಣದಲ್ಲಿ 2010ರ ಮೇ 22ರಂದು ಏರ್‌ಇಂಡಿಯಾ ಎಕ್ಸ್‌ಪ್ರೆಸ್ ವಿಮಾನ ಅಪಘಾತಕ್ಕೀಡಾಗಿ 158 ಮಂದಿ ಸಾವಿಗೀಡಾಗಿದ್ದರು. ಈ ಹಿನ್ನೆಲೆಯಲ್ಲಿ 9 ವರ್ಷಗಳ ಹಿಂದೆ ನಾಗರಿಕ ವಿಮಾನ ಯಾನ ಮಹಾನಿರ್ದೇಶಕರು ರೇಸಾ ನಿರ್ಮಾಣಕ್ಕೆ ಸೂಚಿಸಿದ್ದರು. ವಾಸ್ತವವಾಗಿ ಪ್ರಯಾಣಿಕರಿಗೆ ಸುರಕ್ಷತೆಯನ್ನು ಹೆಚ್ಚಿಸುವ ರೇಸಾವನ್ನುಕೇಂದ್ರ ಮತ್ತು ರಾಜ್ಯ ಸರಕಾರಗಳು ಇಷ್ಟರೊಳಗೇ ಮಾಡಿ ಮುಗಿಸಬೇಕಿತ್ತು.
ರೇಸಾ ನಿರ್ಮಾಣಕ್ಕೆ ಸಂಬಂಧಿಸಿ 32.97 ಎಕ್ರೆ ಜಮೀನು ಕೋರಿ 2015-16ರಲ್ಲಿ ಭಾರತೀಯ ವಿಮಾನ ನಿಲ್ದಾಣಗಳ ಪ್ರಾಧಿಕಾರವು ದಕ್ಷಿಣ ಕನ್ನಡ ಜಿಲ್ಲಾಧಿಕಾರಿಗೆ ಪತ್ರ ಬರೆದಿತ್ತು. ಕಳೆದ ವರ್ಷ ಕೇಂದ್ರ ನಾಗರಿಕ ವಿಮಾನ ಯಾನ ಸಚಿವಾಲಯವು ರಾಜ್ಯ ಸರಕಾರದ ಮೂಲಸೌಕರ್ಯ ಇಲಾಖೆಗೆ ನಿರ್ದೇಶನ ನೀಡಿದ್ದು, ಮಂಗಳೂರು ವಿಮಾನ ನಿಲ್ದಾಣಕ್ಕೆ ಭೂಮಿಯನ್ನು ಕೂಡಲೇ ಭೂ ಸ್ವಾಧೀನ ಮಾಡಿ ಪ್ರಾಧಿಕಾರಕ್ಕೆ ಹಸ್ತಾಂತರಿಸುವಂತೆ ಸೂಚಿಸಿತ್ತು.
ವಿಸ್ತರಣೆಯೂ ವಿಳಂಬ
ರನ್‌ವೇ ವಿಸ್ತರಣೆಗೆ ಕೊಳಂಬೆ, ಅದ್ಯಪಾಡಿ ಪ್ರದೇಶದಲ್ಲಿ ಜಮೀನು ಗುರುತಿಸಿ ಜಿಲ್ಲಾಡಳಿತ ರಾಜ್ಯ ಮೂಲಸೌಕರ್ಯ ಇಲಾಖೆಗೆ ಪ್ರಸ್ತಾವನೆ ಸಲ್ಲಿಸಿ ಹಲವು ಸಮಯ ಕಳೆದಿದೆ. ಆದರೆ ಈ ವಿಷಯದಲ್ಲೂ ಯಾವುದೇ ಪ್ರಗತಿ ಆಗಿಲ್ಲ.
ಪಾಯಿಂಟ್ ಆಫ್ ಕಾಲ್
ಟೇಬಲ್‌ಟಾಪ್ ರನ್‌ವೇ ಆಗಿರುವುದರಿಂದ ಸಹಜವಾಗಿಯೇ ಬೃಹತ್ ವಿಮಾನಗಳೊಂದಿಗೆ ಕಾರ್ಯಾಚರಿಸುವ ಎತಿಹಾಡ್, ಎಮಿರೇಟ್ಸ್‌ನಂತಹ ಕಂಪೆನಿಗಳು ಇತ್ತ ಕಣ್ಣುಹಾಯಿಸುತ್ತಿಲ್ಲ. ಕಾರಣ ಅಷ್ಟು ವಿಶಾಲವಾದ ರನ್‌ವೇ ಕೊರತೆಯೂ ಇದೆ. ಹಾಗಾಗಿ ವಿದೇಶದ ಹಲವು ಭಾಗಗಳಿಗೆ ಸಂಪರ್ಕ ಇಲ್ಲಿಂದ ಸಾಧ್ಯವಾಗುತ್ತಿಲ್ಲ. ಪಾಯಿಂಟ್ ಆಫ್ ಕಾಲ್ ಸ್ಥಾನಮಾನವನ್ನು ಡಿಜಿಸಿಎ ಒದಗಿಸಿದರೆ ವಿದೇಶಿ ಕಂಪೆನಿಗಳು ಬರಬಹುದು.ಆದರೆ ಅದಕ್ಕೆ ಈ ರೇಸಾ ನಿರ್ಮಾಣ ಕೂಡ ಅಗತ್ಯ ಎನ್ನುತ್ತಾರೆ ಕ್ಷೇತ್ರ ಪರಿಣಿತರು.
ರೇಸಾ ಎಂದರೆ..
ರನ್‌ವೇಯ ಎರಡೂ ತುದಿಗಳಲ್ಲೂ ಸುರಕ್ಷೆ ಉದ್ದೇಶದಲ್ಲಿ ತಲಾ 140 ಮೀಟರ್ ಉದ್ದದಲ್ಲಿ ರನ್‌ವೇ ಎಂಡ್ ಸೇಫ್ಟಿ ಏರಿಯಾ(ರೇಸಾ) ನಿರ್ಮಿಸಬೇಕು. ಇದರಿಂದ ಆಕಸ್ಮಿಕವಾಗಿ ಓವರ್‌ಶೂಟ್ ಆಗುವ ವಿಮಾನ ಹೆಚ್ಚು ಸುರಕ್ಷಿತವಾಗಿರುತ್ತದೆ.
ರನ್ ವೇ ವಿಸ್ತರಣೆ ಆಗಿಲ್ಲ
ಮಂಗಳೂರು ವಿಮಾನ ನಿಲ್ದಾಣದ ರನ್‌ವೇ ಪ್ರಸ್ತುತ 8,038 ಅಡಿ ಉದ್ದವಿದೆ. 2013 ರಲ್ಲಿ ಇದನ್ನು 11,600 ಅಡಿಗೆ ವಿಸ್ತರಿಸುವ ಯೋಜನೆ ರೂಪಿಸಲಾಗಿತ್ತು. ಇದಕ್ಕೆ 280 ಎಕ್ರೆ ಜಾಗ ಹಾಗೂ 1,120 ಕೋಟಿ ರೂ. ವೆಚ್ಚ ಅಂದಾಜಿಸಲಾಗಿತ್ತು. ಭೂ ಸ್ವಾಧೀನಕ್ಕೆ ವಿಮಾನ ನಿಲ್ದಾಣ ಪ್ರಾಧಿಕಾರದಿಂದ ರಾಜ್ಯ ಸರಕಾರಕ್ಕೆ ಪ್ರಸ್ತಾವನೆ ಸಲ್ಲಿಕೆಯಾಗಿತ್ತು. ಆದರೆ ಅಧಿಕ ಮೊತ್ತ ಅಗತ್ಯವಿದ್ದ ಕಾರಣ ವಿಸ್ತರಣೆಯನ್ನು 10,500 ಅಡಿಗೆ ಇಳಿಸಲು ತೀರ್ಮಾನಿಸಲಾಯಿತು. ಅದೂ ಹೊರೆಯಾದದ್ದಕ್ಕೆ ಸದ್ಯ 32.97 ಎಕ್ರೆ ಭೂಸ್ವಾಧೀನಕ್ಕೆ ಇಳಿಸಲು ನಿರ್ಧರಿಸಲಾಗಿದೆ.
“ವಿಮಾನ ನಿಲ್ದಾಣಕ್ಕಾಗಿ ಅಂದಾಜು ಖರೀದಿ ವೆಚ್ಚ ಸಹಿತ ಪ್ರಸ್ತಾವನೆಯನ್ನು ಸರಕಾರಕ್ಕೆ ಕಳಿಸಲಾಗಿದೆ. ಇದುವರೆಗೆ ಭೂಸ್ವಾಧೀನ ಅಧಿಸೂಚನೆ ಆಗಿಲ್ಲ. ಸರಕಾರದ ಸೂಚನೆಯನ್ವಯ ಮುಂದಿನ ಕ್ರಮ ಕೈಗೊಳ್ಳಲಾಗುವುದು.” -ಮುಲ್ಲೈ ಮುಗಿಲನ್, ಜಿಲ್ಲಾಧಿಕಾರಿ, ದಕ್ಷಿಣ ಕನ್ನಡ
– ವೇಣುವಿನೋದ್ ಕೆ.ಎಸ್.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Mangaluru: ಆನ್‌ಲೈನ್ ಗೇಮ್‌ನಲ್ಲಿ ವಂಚಕರ ಪರಿಚಯ; ಜಾಲ ಸೇರಿದ್ದ ಯುವಕ
Mangaluru: ಸಾಲಗಾರನ ಆತ್ಮಹ*ತ್ಯೆಗೆ ಪ್ರಚೋದನೆ ಆರೋಪ: ಎಂಸಿಸಿ ಬ್ಯಾಂಕ್ ಅಧ್ಯಕ್ಷನ ಬಂಧನ
Surathkal: ತಡಂಬೈಲ್‌ನಲ್ಲಿ ಅಡುಗೆ ಅನಿಲ ದುರಂತ; ಇಬ್ಬರು ಮಹಿಳೆಯರಿಗೆ ಗಂಭೀರ ಗಾಯ
Mangaluru: ಇನ್ನು ಯುಪಿಐ ಮೂಲಕವೂ ಟ್ರಾಫಿಕ್ ದಂಡ ಪಾವತಿ
Mangaluru: ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ: 1.15 ಕೋ.ರೂ. ಚಿನ್ನ, ಕೇಸರಿ ಪತ್ತೆ
MUST WATCH
ಹೊಸ ಸೇರ್ಪಡೆ
INDvAUS: ಶಮಿ ವಿರುದ್ದ ನಿಂತರೇ ನಾಯಕ ರೋಹಿತ್?; ವೇಗಿಗೆ ಆಸೀಸ್ ಪ್ರವಾಸ ಕಷ್ಟ!
Mogilaiah: ಪದ್ಮಶ್ರೀ ಪುರಸ್ಕೃತ, ಜಾನಪದ ಕಲಾವಿದ ಬಳಗಂ ಚಿತ್ರ ಖ್ಯಾತಿಯ ಮೊಗಿಲಯ್ಯ ನಿಧನ
Bantwala: ಚಾಲಕನ ನಿಯಂತ್ರಣ ತಪ್ಪಿ ಪಲ್ಟಿಯಾದ ಟೆಂಪೋ ಟ್ರಾವೆಲ್
Betting App; ಬಾಲಿವುಡ್ ನಟಿಯರು ಪ್ರಚಾರ ಮಾಡಿದ್ದ ಬೆಟ್ಟಿಂಗ್ ಆ್ಯಪ್ ಮಾಲಕ ಪಾಕಿಸ್ತಾನಿ!
Dharwad: ಜಿಲ್ಲಾಧಿಕಾರಿ ಕಚೇರಿಯಲ್ಲಿ ಬ್ಯಾಟರಿ ಕಳ್ಳತನ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.