![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
![DKSHi (3)](https://www.udayavani.com/wp-content/uploads/2025/02/DKSHi-3-2-415x276.jpg)
Team Udayavani, Dec 8, 2023, 11:13 PM IST
ಮಂಗಳೂರು: ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವು ನವೆಂಬರ್‌ನಲ್ಲಿ ದಾಖಲೆಯ 1,78,314 ಪ್ರಯಾಣಿಕರನ್ನು ನಿರ್ವಹಿಸಿದೆ. ಇದರಲ್ಲಿ 1,32,762 ದೇಶೀಯ ಮತ್ತು 45,552 ಅಂತಾರಾಷ್ಟ್ರೀಯ ಪ್ರಯಾಣಿಕರು ಸೇರಿದ್ದಾರೆ. ಇದು ಅಕ್ಟೋಬರ್‌ಗಿಂತ ಶೇ. 10.3 ಅಧಿಕ.
ಪ್ರಸಕ್ತ ಹಣಕಾಸು ವರ್ಷದ ಮೊದಲ ಎಂಟು ತಿಂಗಳಲ್ಲಿ ವಿಮಾನ ನಿಲ್ದಾಣವು 12,86,207 ಪ್ರಯಾಣಿಕರನ್ನು ನಿರ್ವಹಿಸಿದೆ. ಕಳೆದ ವರ್ಷ ಇದೇ ಅವಧಿಯಲ್ಲಿ 11,95,499 ಪ್ರಯಾಣಿಕರು ಇದ್ದರು.
ಈ ಮಧ್ಯೆ, ನವೆಂಬರ್ ತಿಂಗಳಲ್ಲಿ ಮಂಗಳೂರಿನಿಂದ 1298 ವಿಮಾನ ಸಂಚಾರ ನಡೆಸಿರುವುದು ಪ್ರಸಕ್ತ ಹಣಕಾಸು ವರ್ಷದಲ್ಲಿ ಅತಿ ಹೆಚ್ಚು. ಅಕ್ಟೋಬರ್‌ನಲ್ಲಿ 1222 ವಿಮಾನ ಸಂಚಾರವಾಗಿತ್ತು.
ಮಂಗಳೂರು – ಬೆಂಗಳೂರು, ಮಂಗಳೂರು – ಚೆನ್ನೈ ಮತ್ತು ಮಂಗಳೂರು – ಮುಂಬಯಿ ವಲಯ ಗಳಲ್ಲಿ ಹೆಚ್ಚುವರಿ ವಿಮಾನಗಳು ಪ್ರಯಾಣಿಕರ ಸಂಖ್ಯೆ ಏರಿಕೆಗೆ ಸಹಾಯ ಮಾಡಿದೆ.
You seem to have an Ad Blocker on.
To continue reading, please turn it off or whitelist Udayavani.