Mangaluru ಏರ್‌ಪೋರ್ಟ್: ರನ್‌ವೇ ತಪಾಸಣೆಗೆ ಕಾರ್ಯಪಡೆ
Team Udayavani, Sep 6, 2024, 12:28 AM IST
ಮಂಗಳೂರು: ಮಂಗಳೂರು ಅಂತಾ ರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್‌ವೇ ಪರೀಕ್ಷಾ ಕಾರ್ಯ ಪಡೆಯನ್ನು ರಚಿಸಲಾಗಿದ್ದು, ಏರ್ ಪೋರ್ಟ್ ಸರ್ಫೇಸ್ ಫ್ರಿಕ್ಷನ್ ಟೆಸ್ಟರ್(ಎಎಸ್‌ಎಫ್‌ಟಿ)ಯಂತ್ರಗಳ ಮೂಲಕ ಈ ತಪಾಸಣೆ ನಡೆಯಲಿದೆ.
ಪ್ರಭಾಕರನ್ ಸುಂದರಂ, ಶೆಫಾಲಿ ಮಲ್ದಾರ್ ಮತ್ತು ಪ್ರಸನ್ನ ರಾಜೇಂದ್ರನ್ ಅವರನ್ನೊಳಗೊಂಡ ಎಲೆಕ್ಟ್ರಿಕಲ್, ಸಿವಿಲ್ ಮತ್ತು ಮೆಕ್ಯಾ ನಿಕಲ್ ಎಂಜಿನಿಯರ್‌ಗಳು ತಂಡದಲ್ಲಿದ್ದಾರೆ. ಫಿನ್‌ಲ್ಯಾಂಡ್ ನಿಂದ ಆಮದು ಮಾಡಲಾದ ಎಎಸ್‌ಎಫ್‌ಟಿ ಉಪಕರಣ ಗಳೊಂದಿಗೆ ರನ್‌ವೇಯಲ್ಲಿ ತಪಾಸಣೆ ನಡೆಸಲು ಮತ್ತು ಮಾಪನಾಂಕ ನೀಡಲು ಪ್ರಮಾಣೀಕರಿಸಲಾಗಿದೆ.
ರನ್‌ವೇನಲ್ಲಿ ವಿಮಾನಗಳು ಸಾಗುವಾಗ ಚಕ್ರಗಳಲ್ಲಿ ರುವ ರಬ್ಬರ್‌ನ ಅವಶೇಷವನ್ನು ಉಳಿಸುವುದುರಿಂದ ರನ್‌ವೇ ಜಾರಲು ಕಾರಣವಾಗುತ್ತದೆ. ಇದು ಪ್ರಯಾ ಣಿಕರ ಸುರಕ್ಷೆಗೆ ಸವಾಲಾಗಲಿದೆ. ಆದ್ದರಿಂದ ರನ್‌ವೇ ಮೇಲ್ಮೈಯಲ್ಲಿ ಜಾರುವಿಕೆ ಮತ್ತು ಘರ್ಷಣೆಯ ಪ್ರಮಾಣವನ್ನು ಅಳೆಯಲು ಎಎಸ್‌ಎಫ್‌ಟಿ ವಾಹನ ಬಳಸಲಾಗುತ್ತದೆ.
ಯುವ ಮತ್ತು ಉತ್ಸಾಹಿ ಸಿವಿಲ್ ಎಂಜಿನಿಯರ ಶೆಫಾಲಿ ಅವರು ವಾಯುಯಾನ ಕ್ಷೇತ್ರ ಪ್ರಸ್ತುತ ಪಡಿಸುವ ಸವಾಲುಗಳನ್ನು ಎದುರಿಸಲಿದ್ದಾರೆ. ಅನುಭವಿ ಮೆಕಾನಿಕಲ್ ಎಂಜಿನಿಯರ್ ಪ್ರಸನ್ನ ಮತ್ತು ಇನ್ನೋರ್ವ ಅನುಭವಿ ಪ್ರಭಾಕರನ್ ಅವರು ಎಲೆಕ್ಟ್ರಿಕಲ್ ಎಂಜಿನಿಯರಿಂಗ್ ಕೌಶಲದಿಂದ ಎಎಸ್‌ಎಫ್‌ಟಿಯನ್ನು ನಿರ್ವಹಿಸಲಿದ್ದಾರೆ. ಈ ಅನುಭವಿ ಮತ್ತು ಯುವ ತಂಡವು ಫಿನ್‌ಲ್ಯಾಂಡ್ ನ ಒಇಎಂ ಮೊವೆಂಟರ್ ಎಎಸ್‌ಎಫ್‌ಟಿ ಮೂಲಕ ರನ್‌ವೇ ನಿರ್ವಹಣೆ ಮತ್ತು ಮಾಪನಾಂಕ ಮಾಡಲಿದ್ದಾರೆ. ವಿಮಾನ ನಿಲ್ದಾಣವು ಪ್ರತಿ 45 ದಿನಗಳಿಗೊಮ್ಮೆ ಈ ಪರೀಕ್ಷೆ ನಡೆಸುತ್ತದೆ ಎಂದು ಮುಖ್ಯ ವಿಮಾನ ನಿಲ್ದಾಣ ಅಧಿಕಾರಿ ತಿಳಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.