Mangaluru; ರಾಜ್ಯ ಸರ್ಕಾರದ ವಿರುದ್ದ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ಪ್ರತಿಭಟನೆ
Team Udayavani, Dec 14, 2024, 12:31 PM IST
ಮಂಗಳೂರು: ರಾಜ್ಯ ಸರಕಾರ ಹಿಂದುಳಿದ ವರ್ಗಗಳ ನಿಗಮಗಳಿಗೆ ಅನುದಾನ ಬಿಡುಗಡೆ ಮಾಡದಿರುವುದನ್ನು ಖಂಡಿಸಿ, ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ ಹಿಂದುಳಿದ ವರ್ಗಗಳ ಮೋರ್ಚಾ ವತಿಯಿಂದ ಶನಿವಾರ (ಡಿ.14) ನಗರದ ಪಿವಿಎಸ್ ವೃತ್ತದ ಬಳಿ ಪ್ರತಿಭಟನೆ ನಡೆಯಿತು.
ಶಾಸಕ ವೇದವ್ಯಾಸ ಕಾಮತ್ ಅವರು ಮಾತನಾಡಿ, ಹಿಂದಿನ ಬಿಜೆಪಿ ಸರಕಾರದ ಅವಧಿಯಲ್ಲಿ ಮುಖ್ಯಮಂತ್ರಿಯಾಗಿದ್ದ ಬಸವರಾಜ ಬೊಮ್ಮಾಯಿ ಸರಕಾರ ದ.ಕ ಜಿಲ್ಲೆ ಹಿಂದುಳಿದ ವರ್ಗಗಳ ಅಭಿವೃದ್ಧಿ ಗೆ ಬಿಡುಗಡೆ ಮಾಡಿದ್ದ 31.23 ಕೋ.ರೂ. ಅನುದಾನ ಸಹಿತ ರಾಜ್ಯದಲ್ಲಿ ಒಂದು ಸಾವಿರ ಕೋ.ರೂ.ಗೂ ಅಧಿಕ ಮೊತ್ತದ ಅನುದಾನವನ್ನು ಸಿದ್ದರಾಮಯ್ಯ ಅವರ ನೇತೃತ್ವದ ಸರಕಾರ ಹಿಂಪಡೆದಿದೆ. ಬಿಜೆಪಿ ಸರಕಾರವಿದ್ದಾಗ ನಾರಾಯಣಗುರು ನಿಗಮ ರಚಿಸುವಂತೆ ಆಗಹಿಸಿ ಪಾದಯಾತ್ರೆ ಮಾಡಿದವರು. ಈಗ ನಿಗಮಕ್ಕೆ ಒಂದು ರೂ. ಅನುದಾನ ನೀಡದಿರುವಾಗ ಎಲ್ಲಿ ಹೋಗಿದ್ದಾರೆ ಎಂದು ಪ್ರಶ್ನಿಸಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸತೀಶ್ ಕುಂಪಲ, ಹಿಂದುಳಿದ ವರ್ಗಗಳ ಮೋರ್ಚಾದ ರಾಜ್ಯ ಕಾರ್ಯದರ್ಶಿ ಆರ್.ಸಿ.ನಾರಾಯಣ್, ಜಿಲ್ಲಾ ಮೋರ್ಚಾದ ಒಬಿಸಿ ಮೋರ್ಚಾ ಅಧ್ಯಕ್ಷ ಮಹೇಶ್ ಜೋಗಿ, ಮಹಿಳಾ ಮೋರ್ಚಾ ಅಧ್ಯಕ್ಷೆ ಮಂಜುಳಾ ರಾವ್, ಯುವ ಮೋರ್ಚಾ ಅಧ್ಯಕ್ಷ ನಂದನ್ ಮಲ್ಯ ಸೇರಿದಂತೆ ಹಲವು ಮಂದಿ ಪ್ರತಿಭಟನೆಯಲ್ಲಿ ಭಾಗವಹಿಸಿದ್ದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Belagavi: ಹೋರಾಟ ಅಸಂವಿಧಾನಿಕ ಎಂದು ಸಮಾಜಕ್ಕೆ ಅವಮಾನ ಮಾಡಿದ ಸಿಎಂ: ಕೂಡಲಸಂಗಮ ಶ್ರೀ
Bengaluru: ವಿಶ್ವ ಒಕ್ಕಲಿಗರ ಮಠಕ್ಕೆ ಡಾ.ಎಚ್.ಎಲ್.ನಾಗರಾಜ್ ಉತ್ತರಾಧಿಕಾರಿ
Tharun Sudhir: ಎದೆ ನಡುಗಿಸಿದ ಪ್ರೇಮಕಥೆಯೊಂದಿಗೆ ಬಂದ ತರುಣ್ ಸುಧೀರ್
Kalaburagi: ಶಾರ್ಟ್ ಸರ್ಕ್ಯೂಟ್ ನಿಂದಾಗಿ ಹೊತ್ತಿ ಉರಿದ ಕಾಫಿಜಾ ಕೆಫೆ
Tulu Movie Review; ಹೇಗಿದೆ ಈ ವಾರ ತೆರೆಗೆ ಬಂದ ತುಳು ಸಿನಿಮಾ ʼದಸ್ಕತ್ʼ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.