Mangaluru”ಬೊಳ್ಳಿಮಲೆತ ಶಿವಶಕ್ತಿಲು’ ಪ್ರದರ್ಶನಕ್ಕೆ ಚಾಲನೆ
Team Udayavani, Aug 27, 2023, 11:36 PM IST
ಮಂಗಳೂರು: ಉರ್ವ ಚಿಲಿಂಬಿಯ ಶ್ರೀ ಶಿರಡಿ ಸಾಯಿಬಾಬ ಮಂದಿರದ ಮುಖ್ಯಸ್ಥೆ ಲಾವಣ್ಯಾ ವಿಶ್ವಾಸ್‌ಕುಮಾರ್‌ದಾಸ್ ನಿರ್ದೇಶನದ, ಸಾಯಿಶಕ್ತಿ ಕಲಾ ಬಳಗದ ಶ್ರೀ ದೇವಿ ಭಗವತಿ ಪರಿವಾರದ ಪುರಾಣ ಪುಣ್ಯ ಕಥೆ ಹೊಂದಿರುವ “ಬೊಳ್ಳಿಮಲೆತ ಶಿವಶಕ್ತಿಲು’ ತುಳು ಪೌರಾಣಿಕ ನಾಟಕದ ಪ್ರಾಯೋಗಿಕ ಪ್ರದರ್ಶನ ಕುದ್ಮುಲ್ ರಂಗರಾವ್ ಪುರಭವನದಲ್ಲಿ ರವಿವಾರ ನಡೆಯಿತು.
ಅವಧೂತ ಶ್ರೀ ವಿನಯ ಗುರೂಜಿ ಆಶೀರ್ವಚನ ನೀಡಿ, ಯಾವುದೇ ಕಲೆ ಬೆಳೆಯಲು ಪ್ರೋತ್ಸಾಹ ಅಗತ್ಯ. ಅಧ್ಯಾತ್ಮಕ್ಕೆ ಹೊರಗಿನ ವೇಷಭೂಷಣದ ಬದಲಾಗಿ ಮನೋಖುಷಿ ಅಗತ್ಯ. ದಕ್ಷಿಣ ಕನ್ನಡ ಜಿಲ್ಲೆಯ ಮಂದಿ ಕಲಾವಿದರನ್ನು ಕೈಬಿಟ್ಟಿಲ್ಲ. ಪೌರಾಣಿಕ ನಾಟಕಗಳನ್ನು ಪ್ರೋತ್ಸಾಹಿಸಿ ಬೆಳೆಸಿದ್ದಾರೆ ಎಂದರು.
ಮಾಜಿ ಸಚಿವ ಬಿ. ರಮಾನಾಥ ರೈ ಮಾತನಾಡಿ, “ಬೊಳ್ಳಿಮಲೆತ ಶಿವಶಕ್ತಿಲು’ ಪೌರಾಣಿಕ ನಾಟಕ ದೇಶ-ವಿದೇಶಗಳಲ್ಲಿ ಪ್ರದರ್ಶನ ಕಾಣಲಿ ಎಂದು ಹಾರೈಸಿದರು.
ಮಾಜಿ ಶಾಸಕ ಜೆ.ಆರ್. ಲೋಬೊ ಮಾತನಾಡಿ, ಶಿರಡಿ ಸಾಯಿಬಾಬಾ ಅಂದು ಇಡೀ ಸಮಾಜಕ್ಕೆ ದಾರಿ ದೀಪವಾಗಿದ್ದವರು. ಭಗವಂತನ ಶಕ್ತಿ ಏನೆಂದು ಅರ್ಥ ಮಾಡಿಕೊಳ್ಳಲು ಈ ರೀತಿಯ ಪೌರಾಣಿಕ ನಾಟಕ ನೋಡಬೇಕು. ಅದರಲ್ಲಿ ಒಳಗೊಂಡಿರುವ ಶಿಕ್ಷಣವನ್ನು ಆತ್ಮದಲ್ಲಿ ಮೈಗೂಡಿಸಿಕೊಳ್ಳಬೇಕು ಎಂದರು. ನಾಟಕ ರಚನೆಕಾರ ಕದ್ರಿ ನವನೀತ ಶೆಟ್ಟಿ ಪ್ರಸ್ತಾವನೆಗೈದು, ಕೇರಳದ ತೃಶ್ಶೂರ್‌ನ ಕಲಾವಿದರು ನಾಟಕದ ರಂಗವೇದಿಕೆ ಸಿದ್ಧಗೊಳಿಸಿದ್ದಾರೆ. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ವಿಭಿನ್ನ ರೀತಿಯಲ್ಲಿ ಈ ಪೌರಾಣಿಕ ನಾಟಕ ನಿರ್ಮಾಣ ಮಾಡಲಾಗಿದೆ ಎಂದು ತಿಳಿಸಿದರು.
ಸಮ್ಮಾನ
ಕಲಾ ಕ್ಷೇತ್ರದ ಸಾಧಕರಾದ ಪಟ್ಲ ಸತೀಶ್ ಶೆಟ್ಟಿ, ಭೋಜರಾಜ್ ವಾಮಂಜೂರು, ಬಿ.ಎಸ್. ಕಾರಂತ್ ಇಂಚರ, ಡಾ| ಪ್ರಿಯಾ ಹರೀಶ್, ಅಶೋಕ್ ಕ್ರಾಸ್ತಾ ಅವರನ್ನು ಸಮ್ಮಾನಿಸಲಾಯಿತು. ಶಿಕ್ಷಕಿ ಅಹಲ್ಯಾ ಅವರಿಗೆ ಗುರುವಂದನೆ ನೀಡಲಾಯಿತು.
ರಂಗನಿರ್ದೇಶಕ ವಿಜಯ ಕುಮಾರ್ ಕೊಡಿಯಾಲ್‌ಬೈಲ್, ಮುಂಬಯಿ ಸಂಚಾಲಕ ಅಜೆಕಾರು ಬಾಲಕೃಷ್ಣ ಶೆಟ್ಟಿ, ಮಾಜಿ ಮೇಯರ್ ಶಶಿಧರ ಹೆಗ್ಡೆ, ನಮ್ಮ ಕುಡ್ಲದ ಲೀಲಾಕ್ಷ ಕರ್ಕೇರ, ಶಿರಡಿ ಶ್ರೀ ಸಾಯಿ ಮಂದಿರದ ಮುಖ್ಯಸ್ಥ ವಿಶ್ವಾಸ್‌ಕುಮಾರ್‌ದಾಸ್, ಲಾವಣ್ಯ ವಿಶ್ವಾಸ್ ದಾಸ್ ಮುಖ್ಯ ಅತಿಥಿಗಳಾಗಿದ್ದರು.
“ಬೊಳ್ಳಿಮಲೆತ ಶಿವಶಕ್ತಿಲು’ ನಾಟಕವನ್ನು ನವನೀತ ಶೆಟ್ಟಿ ಕದ್ರಿ ರಚಿಸಿದ್ದು ಶಿರಿಡಿ ಸಾಯಿ ಮಂದಿರದ ಮುಖ್ಯಸ್ಥ ವಿಶ್ವಾಸ್‌ದಾಸ್ ನಿರ್ಮಾಣ, ಲಾವಣ್ಯ ವಿಶ್ವಾಸ್ ದಾಸ್ ನಿರ್ದೇಶನ, ಬಿ.ಎಸ್. ಕಾರಂತ ಸಂಗೀತ, ಲಲಿತ ಕಲಾ ಆರ್ಟ್ಸ್ ವೇಷಭೂಷಣ, ಪಟ್ಲ ಸತೀಶ್ ಶೆಟ್ಟಿ, ಲಾವಣ್ಯ ಸುಧಾಕರ್ ಹಿನ್ನೆಲೆ ಗಾಯನ, ದಿವ್ಯಜ್ಯೋತಿ ಸೌಂಡ್ಸ್ ಧ್ವನಿ, ತಸ್ಮಯ್ ಕೊಡಿಯಾಲ್‌ಬೈಲ್ ಬೆಳಕು ನಿರ್ವಹಣೆ, ದನಿಶ್ ಕುಮಾರ್‌ದಾಸ್ ತಾಂತ್ರಿಕ ನಿರ್ವಹಣೆ ನೀಡಿದ್ದಾರೆ.
ವಿಶ್ವಾಸ್ ಕುಮಾರ್‌ದಾಸ್, ಸ್ವಾಗತಿಸಿ, ಲಾವಣ್ಯಾ ವಿಶ್ವಾಸ್‌ದಾಸ್ ವಂದಿಸಿದರು. ಪ್ರಿಯಾ ಹರೀಶ್ ಮತ್ತು ರೋಹಿತ್ ಉಳ್ಳಾಲ ನಿರೂಪಿಸಿದರು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
Ranga Chavadi: ಕಿಶೋರ್ ಡಿ ಶೆಟ್ಟಿ ಅವರಿಗೆ ರಂಗಚಾವಡಿ 2024 ಪ್ರಶಸ್ತಿ
Kateel: ತಾರಾನಾಥ ಹತ್ಯೆ ಪ್ರಕರಣ ಭೇದಿಸಿದ ಪೊಲೀಸರು… ಅಕ್ಕನಿಂದಲೇ ಕೊಲೆಯಾದ ತಮ್ಮ
ಮಮ್ತಾಜ್ ಅಲಿ ಆತ್ಮಹತ್ಯೆ ಪ್ರಕರಣ: ದಂಪತಿ ಸಹಿತ ಆರೋಪಿಗಳಿಗೆ ಮುಂದುವರಿದ ನ್ಯಾಯಾಂಗ ಬಂಧನ
Mangaluru: ಸಿಸಿಬಿ ಪೊಲೀಸರ ಕಾರ್ಯಾಚರಣೆ… ಅಪಾರ ಪ್ರಮಾಣದ ಮಾದಕ ವಸ್ತು ಸಹಿತ ಓರ್ವನ ಸೆರೆ
Mangaluru: ನೇತ್ರಾವತಿ ಸೇತುವೆ ಬಳಿ ಬೈಕ್ ಅಪಘಾತ… ಓರ್ವ ಮೃತ್ಯು, ಮತ್ತೋರ್ವ ಗಂಭೀರ
MUST WATCH
ಹೊಸ ಸೇರ್ಪಡೆ
Canada: ಅಮಿತ್ ಶಾ ವಿರುದ್ಧ ಆರೋಪ: ಕೆನಡಾದ ರಾಜತಾಂತ್ರಿಕರಿಗೆ ಸಮನ್ಸ್
INDvsNZ; ಬಿಗಿ ದಾಳಿ ನಡೆಸಿ ಪಂದ್ಯ ಹಿಡಿತಕ್ಕೆ ಪಡೆದುಕೊಂಡ ಟೀಮ್ ಇಂಡಿಯಾ
Parkala; ಅಂಗಡಿಯಲ್ಲಿ ಅಕ್ರಮವಾಗಿ ಪಟಾಕಿ ಮಾರುತ್ತಿದ್ದ ಮಾಲಕ ಅರೆಸ್ಟ್
Shiv Sena ; ಭಾರೀ ವಿವಾದದ ಬಳಿಕ ಶೈನಾ ಕ್ಷಮೆ ಯಾಚಿಸಿದ ಅರವಿಂದ್ ಸಾವಂತ್
Digil Movie: ದೈವ ಮತ್ತು ಮಂಗಳಮುಖಿಯ ಕಥೆ ಹೇಳಲು ಹೊರಟ ಚೇತನ್ ಮುಂಡಾಡಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.