Mangaluru: 8 ವರ್ಷದ ಬಾಲಕಿಯ ಅತ್ಯಾಚಾರ ಕೊ*ಲೆ ಪ್ರಕರಣ: ಆರೋಪಿಗಳಿಗೆ ಗಲ್ಲು ಶಿಕ್ಷೆ


Team Udayavani, Nov 8, 2024, 9:44 AM IST

Mangaluru: 8 ವರ್ಷದ ಬಾಲಕಿಯ ಅತ್ಯಾಚಾರ ಕೊ*ಲೆ ಪ್ರಕರಣ: ಆರೋಪಿಗಳಿಗೆ ಜೀವಾವಧಿ ಶಿಕ್ಷೆ

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯನ್ನು ಬೆಚ್ಚಿ ಬೀಳಿಸಿದ್ದ, ಮಂಗಳೂರಿನ ಹೆಂಚಿನ ಕಾರ್ಖಾನೆಯಲ್ಲಿ 8 ವರ್ಷದ ಬಾಲಕಿಯ ಮೇಲೆ ಸಾಮೂಹಿಕ ಅತ್ಯಾಚಾರ-ಕೊಲೆ ಪ್ರಕರಣದಲ್ಲಿ ಮೂವರಿಗೆ ಮಂಗಳೂರಿನ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್‌. ಟಿ.ಎಸ್‌.ಸಿ-2 ಪೋಕ್ಸೋ ವಿಶೇಷ ನ್ಯಾಯಾಲಯ ಮರಣದಂಡನೆ ಮತ್ತು 1.20 ಲಕ್ಷ ರೂ. ದಂಡ ವಿಧಿಸಿ ಮಹತ್ವದ ತೀರ್ಪು ನೀಡಿದೆ.

ಮಧ್ಯಪ್ರದೇಶದ ಪನ್ನ ಜಿಲ್ಲೆಯ ಸಾಲಿಹಾ ಗ್ರಾಮದ ಜುಡಮಾಡಯ್ಯರ್‌ ನಿವಾಸಿ ಜಯ್‌ಬನ್‌ ಆದಿವಾಸಿ ಅಲಿಯಾಸ್‌ ಜಯಸಿಂಗ್‌ (21), ಪನ್ನ ಜಿಲ್ಲೆ ಕಾಲ್ಡಾ ಬಚ್ಚೌನ್‌ ನಿವಾಸಿ ಮುಖೇಶ್‌ ಸಿಂಗ್‌ (20) ಮತ್ತು ಝಾರ್ಖಂಡ್‌ ರಾಂಚಿ ಖಲಾರಿ ನಿವಾಸಿ ಮನೀಷ್‌ ತಿರ್ಕಿ (33) ಮರಣದಂಡನೆಗೆ ಒಳಗಾಗಿರುವ ಅಪರಾಧಿಗಳು. ಪ್ರಕರಣದಲ್ಲಿ ನಾಲ್ಕನೇ ಆರೋಪಿಯಾಗಿದ್ದ ಪನ್ನಾ ಜಿಲ್ಲೆಯ ಮುನೀಮ್‌ ಸಿಂಗ್‌ಗೆ ಜಾಮೀನು ಲಭಿಸಿದ್ದು, ಬಳಿಕ ಈತ ವಿಚಾರಣೆಗೆ ಹಾಜರಾಗದೆ ತಲೆಮರೆಸಿಕೊಂಡಿದ್ದಾನೆ.

ಆಗಿದ್ದೇನು?
ಆರೋಪಿಗಳು ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣಾ ಸರಹದ್ದಿನ ತಿರುವೈಲು ಗ್ರಾಮದ ಪರಾರಿ ಎನ್ನುವಲ್ಲಿರುವ ಟೈಲ್ಸ್‌ ಫ್ಯಾಕ್ಟರಿಯಲ್ಲಿ ಕಾರ್ಮಿಕರಾಗಿದ್ದರು. 2021ರ ನ. 20ರಂದು ಟೈಲ್ಸ್‌ ಫ್ಯಾಕ್ಟರಿಯೊಳಗಡೆ ಇರುವ 3ನೇ ಆರೋಪಿ ಮನೀಷ್‌ ತಿರ್ಕಿಯ ಕೊಠಡಿಯಲ್ಲಿ ಕುಳಿತುಕೊಂಡು ಮದ್ಯ ಸೇವನೆ ಮಾಡುತ್ತಾ, ಆದೇ ಫ್ಯಾಕ್ಟರಿಯಲ್ಲಿ ಕಾರ್ಮಿಕರಾಗಿ ಕೆಲಸ ಮಾಡುತ್ತಿದ್ದ ಝಾರ್ಖಂಡ್‌ ಮೂಲದ ದಂಪತಿಯ ಸುಮಾರು 8 ವರ್ಷ ಪ್ರಾಯದ ಬಾಲಕಿಯನ್ನು ಅತ್ಯಾಚಾರ ಮಾಡುವ ಬಗ್ಗೆ ಸಂಚು ರೂಪಿಸಿದ್ದ.

ನ. 21ರಂದು ರವಿವಾರ ಫ್ಯಾಕ್ಟರಿಗೆ ವಾರದ ರಜೆ ಇರುವುದನ್ನು ನೋಡಿಕೊಂಡು ಇತರ ಕೆಲಸಗಾರರನ್ನು ಇಲ್ಲದಿರುವುದನ್ನು ಖಚಿತಪಡಿಸಿಕೊಂಡಿದ್ದ. ಮಧ್ಯಾಹ್ನ 1ರಿಂದ 1.30ರ ಅವಧಿಯಲ್ಲಿ ಯಾರೂ ಇಲ್ಲದ ಸಮಯ ನೋಡಿ, ಫ್ಯಾಕ್ಟರಿಯ ಒಳಗಡೆ ಆಟವಾಡಿಕೊಂಡಿದ್ದ ಬಾಲಕಿಗೆ ತಿನ್ನಲು “ಚಿಕ್ಕಿ’ ಹಾಗೂ ತಿಂಡಿ ಕೊಂಡುಕೊಳ್ಳಲೆಂದು ಚಿಲ್ಲರೆ ಹಣವನ್ನು ಕೊಟ್ಟು, ಆಕೆಯನ್ನು ಪುಸಲಾಯಿಸಿ ಸಿಸಿ ಕೆಮರಾ ಇಲ್ಲದ ಸ್ಥಳವಾದ ಹಸಿ ಇಟ್ಟಿಗೆಯನ್ನು ಕಾಯಿಸುವ ಹಾಗೂ ಕೆಲವು ವರ್ಷಗಳಿಂದ ಉಪಯೋಗಿಸದೇ ಇರುವ ಫ್ಯಾಕ್ಟರಿಯಲ್ಲಿರುವ 1ನೇ ಕೊಠಡಿಯೊಳಗಡೆ ಬಾಲಕಿಯನ್ನು ಕರೆದುಕೊಂಡು ಹೋಗಿದ್ದ.

ಮೊದಲಿಗೆ ಮುಖೇಶ್‌ ಸಿಂಗ್‌ ಅತ್ಯಾಚಾರ ನಡೆಸಿದ್ದ. ಬಳಿಕ ಮನೀಷ್‌ ತಿರ್ಕಿ ಬಾಲಕಿಯ ಮೇಲೆ ಅತ್ಯಾಚಾರ ನಡೆಸಿದ್ದ. ಇದರಿಂದಾಗಿ ಆಕೆಯ ಗುಪ್ತಾಂಗದಿಂದ ರಕ್ತಸ್ರಾವವಾಗಿ, ಆಕೆ ಅಳತೊಡಗಿದ್ದಳು. ಬಳಿಕ ಆರೋಪಿ ಜಯ್‌ ಬನ್‌ ಆದಿವಾಸಿಯೂ ಅತ್ಯಾಚಾರವೆಸಗಿದ್ದ. ಈ ವೇಳೆ ಬಾಲಕಿ ನೋವಿನಿಂದ ಬೊಬ್ಬೆ ಹಾಕಿದ್ದು, ಬೊಬ್ಬೆ ಕೇಳಿ ಯಾರಾದರೂ ಬರಬಹುದೆಂದುಕೊಂಡು ಆತ ಬಾಲಕಿಯ ಬಾಯಿಯನ್ನು ಒಂದು ಕೈಯಿಂದ ಒತ್ತಿ ಹಿಡಿದು ಆಕೆ ಬೊಬ್ಬೆ ಹಾಕದಂತೆ ತಡೆದಿದ್ದಲ್ಲದೆ, ಜೀವಂತವಾಗಿ ಬಿಟ್ಟರೆ ಕೃತ್ಯದ ಬಗ್ಗೆ ಇತರರಿಗೆ ಹೇಳಿದರೆ ತೊಂದರೆಯಾಗಬಹುದು ಎಂದು ಆಕೆಯ ಕುತ್ತಿಗೆಯನ್ನು ಒತ್ತಿ ಹಿಡಿದ ಪರಿಣಾಮ ಆಕೆ ಸ್ಥಳದಲ್ಲಿಯೇ ಮೃತಪಟ್ಟಿದ್ದಳು.

ಅನಂತರ ಅವರು ತಾವು ನಡೆಸಿದ ಕೃತ್ಯವನ್ನು ಮರೆಮಾಚುವ ಸಲುವಾಗಿ ಬಾಲಕಿಯ ಮೃತದೇಹವನ್ನು ಅಲ್ಲಿಯೇ ಸಮೀಪದಲ್ಲಿರುವ ಚಪ್ಪಡಿ ಕಲ್ಲಿನ ಮುಚ್ಚಿಗೆ ಹಾಸಿರುವ ತೋಡಿನಲ್ಲಿ ಮಲಗಿಸಿದ್ದರು.

ಮೂವರು ಆರೋಪಿಗಳು ಬಾಲಕಿಯ ಮೇಲೆ ಅತ್ಯಾಚಾರ ನಡೆಸುತ್ತಿದ್ದ ನಡೆಸಿದ ವೇಳೆ, ಬೇರೆ ಯಾರಾದರೂ ಬಂದಲ್ಲಿ ಸೂಚನೆ ನೀಡುವ ಸಲುವಾಗಿ ರೂಮಿನ ಹೊರಗಡೆಯಲ್ಲಿ ಕಾಯುತ್ತಿದ್ದ 4ನೇ ಆರೋಪಿ ಮುನೀಮ್‌ ಸಿಂಗ್‌ ಕೃತ್ಯಕ್ಕೆ ಸಹಕರಿಸಿದ್ದಲ್ಲದೆ, ಘಟನೆಯ ಬಗ್ಗೆ ಪೊಲೀಸರಿಗೆ ಯಾವುದೇ ಮಾಹಿತಿಯನ್ನೂ ನೀಡಿರಲಿಲ್ಲ.

ತಾಯಿಯಿಂದ ದೂರು
ಮೃತ ಬಾಲಕಿಯ ತಾಯಿ ಮಂಗಳೂರು ಗ್ರಾಮಾಂತರ ಪೊಲೀಸ್‌ ಠಾಣೆಗೆ ನೀಡಿದ ದೂರಿನನ್ವಯ ಠಾಣೆಯ ಪೊಲೀಸ್‌ ನಿರೀಕ್ಷಕ ಜಾನ್ಸನ್‌ ಡಿ’ಸೋಜಾ ಅವರು ತನಿಖೆ ಪೂರ್ಣಗೊಳಿಸಿ ಆರೋಪಿತರ ವಿರುದ್ಧ ದೋಷಾರೋಪಣೆ ಪಟ್ಟಿಯನ್ನು ನ್ಯಾಯಾಲಯಕ್ಕೆ ಸಲ್ಲಿಸಿದ್ದರು.

ಹುಡುಕಾಡುವ ನಾಟಕ
ಬಾಲಕಿ ನಾಪತ್ತೆಯಾಗಿರುವ ವಿಚಾರ ಎಲ್ಲೆಡೆ ಹರಡಿದಾಗ ಇತರರ ಜತೆ ಸೇರಿ ಹುಡುಕುವ ನಾಟಕವನ್ನೂ ಈ ನಾಲ್ವರು ಮಾಡಿದ್ದರು. ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ ಪೊಲೀಸರು ಘಟನೆ ನಡೆದ ದಿನ ಫ್ಯಾಕ್ಟರಿಯಲ್ಲಿದ್ದ 20 ಮಂದಿಯನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಈ ಸಂದರ್ಭದಲ್ಲಿ ಆರೋಪಿಗಳ ಕೃತ್ಯ ಬೆಳಕಿಗೆ ಬಂದಿತ್ತು.ಈ ಪ್ರಕರಣವು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್‌.ಟಿ.ಎಸ್‌.ಸಿ-2 ಪೋಕ್ಸೋ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆದಿದ್ದು, ಈ ಪ್ರಕರಣದಲ್ಲಿ ಅಭಿಯೋಜನೆ ಪರ ಒಟ್ಟು 30 ಸಾಕ್ಷಿದಾರರನ್ನು, 74 ದಾಖಲೆಗಳನ್ನು ಗುರುತಿಸಿಕೊಳ್ಳಲಾಗಿದೆ. ಪ್ರಕರಣದ ಸಾಕ್ಷ್ಯ, ದಾಖಲೆಗಳು ಹಾಗೂ ಪೂರಕ ಸಾಕ್ಷ್ಯವನ್ನು, ವೈಜ್ಞಾನಿಕ ವರದಿಗಳು ಹಾಗೂ ವಾದ ಪ್ರತಿವಾದವನ್ನು ಆಲಿಸಿ ಆರೋಪಿತರ ವಿರುದ್ಧ ಅಪರಾಧವು ಸಾಬೀತಾಗಿದೆ ಎಂದು ತೀರ್ಮಾನಿಸಿ ನ. 7ರಂದು ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ, ಎಫ್‌.ಟಿ.ಎಸ್‌.ಸಿ-2 ಪೋಕೊÕ ವಿಶೇಷ ನ್ಯಾಯಾಲಯದ ಜಿಲ್ಲಾ ನ್ಯಾಯಾ ಧೀಶ ಮಾನು ಕೆ.ಎಸ್‌. ಅವರು ತೀರ್ಪು ನೀಡಿದ್ದಾರೆ.

ಜಯ್‌ಬನ್‌ ಆದಿವಾಸಿ, ಮುಖೇಶ್‌ ಸಿಂಗ್‌ ಮತ್ತು ಮನೀಷ್‌ ತಿರ್ಕಿಗೆ ಅತ್ಯಾಚಾರ ಮಾಡಿ ಕೊಲೆ ಮಾಡಿದ ಅಪರಾಧಕ್ಕೆ ಭಾರತೀಯ ದಂಡ ಸಂಹಿತೆ ಕಲಂ 302, 376-ಡಿಬಿ, 120 (ಬಿ) ಮತ್ತು ಕಲಂ 6 ಪೋಕ್ಸೋ ಕಾಯ್ದೆಯಂತೆ ಮರಣ ದಂಡನೆ ವಿಧಿಸಿದ್ದಾರೆ. ಮಾತ್ರವಲ್ಲದೆ ಐಪಿಸಿ ಕಲಂ 366(ಎ) ಮತ್ತು 34 ಪ್ರಕಾರ 5 ವರ್ಷಗಳ ಕಾಲ ಜೈಲು ಮತ್ತು ತಲಾ 10,000 ರೂ. ದಂಡ, ಕಲಂ 377 ಮತ್ತು 34 ಪ್ರಕಾರ 10 ವರ್ಷಗಳ ಕಾಲ ಜೈಲು ಮತ್ತು ತಲಾ 20,000 ರೂ. ದಂಡ, ಕಲಂ 201 ಮತ್ತು 34 ಪ್ರಕಾರ 5 ವರ್ಷಗಳ ಕಾಲ ಜೈಲು ಮತ್ತು ತಲಾ 10,000 ರೂ. ದಂಡವನ್ನು ವಿ ಧಿಸಿದ್ದಾರೆ. ಪ್ರಕರಣದಲ್ಲಿ ಆರಂಭಿಕವಾಗಿ ಕೆಲವು ಸಾಕ್ಷಿದಾರರನ್ನು ಹಿಂದಿನ ನಿವೃತ್ತ ಅಭಿಯೋಜಕ ವೆಂಕಟರಮಣ ಸ್ವಾಮಿ ಅವರು ನಡೆಸಿದ್ದು, ಅನಂತರ ಸರಕಾರದ ಮತ್ತು ಸಂತ್ರಸ್ತರ ಪರ ಸ್ಪೆಷಲ್‌ ಪಬ್ಲಿಕ್‌ ಪ್ರಾಸಿಕ್ಯೂಟರ್‌ ಕೆ. ಬದರಿನಾಥ ನಾಯರಿ ಅವರು ಇತರ ಸಾಕ್ಷಿದಾರರನ್ನು ವಿಚಾರಿಸಿ ವಾದ ಮಂಡಿಸಿದ್ದರು.

ವಿಸಿ ಮೂಲಕ ಶಿಕ್ಷೆ ಪ್ರಕಟ
ಶಿಕ್ಷೆ ಪ್ರಕಟಿಸುವ ವೇಳೆ ಆರೋಪಿಗಳನ್ನು ಮಂಗಳೂರಿನ ಕೇಂದ್ರ ಕಾರಾಗೃಹದಿಂದ ವೀಡಿಯೋ ಕಾನ್ಫರೆನ್ಸ್‌ ಮೂಲಕ ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗಿತ್ತು. ಆರೋಪಿಗಳು ಶಿಕ್ಷೆ ಪ್ರಕಟಿಸುವ ವೇಳೆ ಸಮಾಧಾನ ಚಿತ್ತದಿಂದಲೇ ಇದ್ದರು. “ನಾವು ತಪ್ಪು ಮಾಡಿಲ್ಲ’ ಎಂದಷ್ಟೇ ನ್ಯಾಯಾಧೀಶರ ಮುಂದೆ ಅಲವತ್ತುಕೊಂಡಿದ್ದಾರೆ. ಬಂಧನವಾದ ದಿನದಿಂದಲೇ ಮೂವರೂ ಕಾರಾಗೃಹದಲ್ಲೇ ಇದ್ದರು.

“ವಿರಳಾತಿವಿರಳ’ ಪ್ರಕರಣವೆಂದು ಪರಿಗಣನೆ
ಪೋಕ್ಸೋ ಕಾಯ್ದೆ ಬಂದ ಮೇಲೆ ವಿಶೇಷ ಕೋರ್ಟ್‌ರಚನೆ ಮಾಡಲಾಗಿದೆ. ಇಂತಹ ಪ್ರಕರಣಗಳನ್ನು ಒಂದು ವರ್ಷದೊಳಗೆ ಇತ್ಯರ್ಥಗೊಳಿಸಬೇಕು ಎನ್ನುವ ಸೂಚನೆಯಿದ್ದು, ಅದರಂತೆ ಪ್ರಕರಣಗಳನ್ನು ಬೇಗನೆ ಮುಗಿಸಲಾಗುತ್ತಿದೆ. ಈ ಪ್ರಕರಣದ ವಿಚಾರಣೆಯನ್ನು ಶೀಘ್ರದಲ್ಲೇ ಪೂರ್ಣಗೊಳಿಸಿ ಅಪರಾಧಿಗಳಿಗೆ ಶಿಕ್ಷೆ ವಿಧಿಸಲಾಗಿದೆ. ಪುಟ್ಟ ಬಾಲಕಿಯನ್ನು ಅಮಾನುಷವಾಗಿ ಅತ್ಯಾಚಾರ ನಡೆಸಿ ಕೊಲೆ ನಡೆಸಿರುವುದರಿಂದ ಕೃತ್ಯದಲ್ಲಿ ಭಾಗಿಯಾಗಿರುವವರಿಗೆ ಮರಣ ದಂಡನೆ ಆಗಲೇಬೇಕು ಎನ್ನುವ ಉದ್ದೇಶದಿಂದಲೇ ಪ್ರಕರಣದಲ್ಲಿ ಆರಂಭದಿಂದಲೂ ವಾದವನ್ನು ಮಂಡನೆ ಮಾಡಲಾಗಿದೆ. “ವಿರಳಾತಿವಿರಳ’ ಪ್ರಕರಣವೆಂದು ಪರಿಗಣಿಸುವಂತೆ ನ್ಯಾಯಾಧೀಶರಿಗೆ ಮನವರಿಕೆ ಮಾಡಿಕೊಡಲಾಗಿತ್ತು. ಹಾಗಾಗಿ ಮರಣ ದಂಡನೆಯನ್ನೇ ನ್ಯಾಯಾಧೀಶರು ವಿಧಿಸಿದ್ದಾರೆ ಎಂದು ಸರಕಾರಿ ಅಭಿಯೋಜಕ ಬದರಿನಾಥ ನಾಯರಿ ತಿಳಿಸಿದ್ದಾರೆ.

ಒಟ್ಟು 5 ಲಕ್ಷ ರೂ. ಪರಿಹಾರ
ದಂಡದ ಹಣವಾದ ಒಟ್ಟು 1.20 ಲಕ್ಷ ರೂಪಾಯಿ ಹಣವನ್ನು ಮೃತ ಬಾಲಕಿಯ ಹೆತ್ತವರಿಗೆ ಪಾವತಿಸುವಂತೆ ನ್ಯಾಯಾಲಯ ಆದೇಶಿಸಿದೆ. ದಂಡ ಪ್ರಕ್ರಿಯೆ ಸಂಹಿತೆಯ ಕಲಂ 357 (ಎ) ಪ್ರಕಾರ ಮತ್ತು ಸಂತ್ರಸ್ತರ ಪರಿಹಾರ ಯೋಜನೆಯಡಿಯಲ್ಲಿ ಬಾಲಕಿಯ ಹೆತ್ತವರಿಗೆ ಹೆಚ್ಚುವರಿಯಾಗಿ 3.80 ಲಕ್ಷ ರೂ. ಪರಿಹಾರವನ್ನು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ ನೀಡುವಂತೆ ತೀರ್ಪಿನಲ್ಲಿ ನಿರ್ದೇಶನ ನೀಡಿದೆ.

ಪೋಕ್ಸೋ ನ್ಯಾಯಾಲಯದಲ್ಲಿ ಪ್ರಕಟವಾದ ಪ್ರಥಮ ಮರಣ ದಂಡನೆ
ಮಂಗಳೂರಿನ ಪೋಕ್ಸೋ ನ್ಯಾಯಾಲಯದ ಇತಿಹಾಸದಲ್ಲೇ ಮರಣ ದಂಡನೆ ಶಿಕ್ಷೆ ವಿಧಿ ಸಿರುವಂತಹ ಪ್ರಥಮ ಪ್ರಕರಣ ಇದಾಗಿದೆ. ಕರಾವಳಿಯ ಉಡುಪಿ, ಉತ್ತರ ಕನ್ನಡ ಜಿಲ್ಲೆಗಳಲ್ಲೂ ಪೋಕ್ಸೋ ನ್ಯಾಯಾಲಯದಲ್ಲಿ ಮರಣ ದಂಡನೆ ವಿಧಿಸಿರುವ ಉದಾಹರಣೆ ಇಲ್ಲ ಎಂದು ಕೆ. ಬದರಿನಾಥ ನಾಯರಿ ಅವರು ತಿಳಿಸಿದ್ದಾರೆ.

ಸೈನೈಡ್‌ ಮೋಹನ್‌ನಿಗೂ ಮರಣ ದಂಡನೆಯಾಗಿತ್ತು
ಮಂಗಳೂರಿನಲ್ಲಿರುವ 6ನೇ ಹೆಚ್ಚುವರಿ ಜಿಲ್ಲಾ ಮತ್ತು ಸತ್ರ ನ್ಯಾಯಾಲಯ 2013 ಮತ್ತು 2019ರಲ್ಲಿ ಅತ್ಯಾಚಾರ, ಕೊಲೆ ಪ್ರಕರಣದ ಆರೋಪಿ, ಶಿಕ್ಷಕ ಸೈನೈಡ್‌ ಮೋಹನ್‌ನಿಗೂ ಮರಣ ದಂಡನೆ ಶಿಕ್ಷೆ ವಿಧಿಸಿ ತೀರ್ಪು ನೀಡಿತ್ತು. ಈತ 20 ಮಹಿಳೆಯರ ಮೇಲೆ ಅತ್ಯಾಚಾರವೆಸಗಿ ಬಳಿಕ ಅವರಿಗೆ ಸೈನೈಡ್‌ ನೀಡಿ ಹತ್ಯೆ ಮಾಡಿದ್ದ. ಈತನ ಮೇಲಿನ ಆರೋಪ ಸಾಬೀತಾಗಿತ್ತು. ಈತ ಈಗ ಜೈಲಿನಲ್ಲಿದ್ದಾನೆ. ಈ ಪ್ರಕರಣದಲ್ಲಿ ಪ್ರಾಸಿಕ್ಯೂಷನ್‌ ಪರ ಸರಕಾರಿ ಅಭಿಯೋಜಕಿ ಜುಡಿತ್‌ ಓಲ್ಗಾ ಮಾರ್ಗರೇಟ್‌ ಕ್ರಾಸ್ತಾ ಅವರು ವಾದಿಸಿದ್ದರು.

ಟಾಪ್ ನ್ಯೂಸ್

train-track

Maha Kumbh Mela 2025;ಮಂಗಳೂರು-ವಾರಾಣಸಿ ವಿಶೇಷ ರೈಲು ಸೇವೆ

ICC ವರ್ಷದ ಟೆಸ್ಟ್‌ ಕ್ರಿಕೆಟಿಗ ಪ್ರಶಸ್ತಿಗೆ ಜಸ್‌ಪ್ರೀತ್‌ ಬುಮ್ರಾ ಹೆಸರು

ICC ವರ್ಷದ ಟೆಸ್ಟ್‌ ಕ್ರಿಕೆಟಿಗ ಪ್ರಶಸ್ತಿಗೆ ಜಸ್‌ಪ್ರೀತ್‌ ಬುಮ್ರಾ ಹೆಸರು

Bidar-Contracter-Sis

Contracter Case: ಸಿಐಡಿ ಮೇಲೆ ವಿಶ್ವಾಸವಿಲ್ಲ, ಸಿಬಿಐಗೆ ಕೊಡಿ: ಸಚಿನ್‌ ಸಹೋದರಿ ಸುರೇಖಾ

First Test Match: ಜಿಂಬಾಬ್ವೆ-ಅಫ್ಘಾನಿಸ್ಥಾನ ಟೆಸ್ಟ್‌ ಡ್ರಾ

First Test Match: ಜಿಂಬಾಬ್ವೆ-ಅಫ್ಘಾನಿಸ್ಥಾನ ಟೆಸ್ಟ್‌ ಡ್ರಾ

1-deee

Misuse; ಐಶ್ವರ್ಯ ಗೌಡ ವಿರುದ್ಧ ಪೊಲೀಸ್ ದೂರು ದಾಖಲಿಸಿದ ಡಿ.ಕೆ.ಸುರೇಶ್

BY-Vijayendra

Contracter Case: ಸಚಿನ್‌ ಪಾಂಚಾಳ್‌ ಪ್ರಕರಣ ಜ.3ರೊಳಗೆ ಸಿಬಿಐಗೆ ಕೊಡಿ: ವಿಜಯೇಂದ್ರ ಆಗ್ರಹ

Malpe: ಎಳ್ಳಮಾವಾಸ್ಯೆ… ವಡಭಾಂಡೇಶ್ವರದಲ್ಲಿ ಸಾವಿರಾರು ಭಕ್ತಾದಿಗಳಿಂದ ಸಮುದ್ರಸ್ನಾನ

Malpe: ಎಳ್ಳಮಾವಾಸ್ಯೆ… ವಡಭಾಂಡೇಶ್ವರದಲ್ಲಿ ಸಾವಿರಾರು ಭಕ್ತಾದಿಗಳಿಂದ ಸಮುದ್ರಸ್ನಾನ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಮಂಗಳೂರು: ಹಳೆ ಬಂದರಿನ ಹಡಗು ಟರ್ಮಿನಲ್‌ಗೆ ತ್ರಿಶಂಕು ಸ್ಥಿತಿ!

ಮಂಗಳೂರು: ಹಳೆ ಬಂದರಿನ ಹಡಗು ಟರ್ಮಿನಲ್‌ಗೆ ತ್ರಿಶಂಕು ಸ್ಥಿತಿ!

Vitla: ನೇಣು ಬಿಗಿದು ಆತ್ಮಹತ್ಯೆ

Vitla: ನಾಟಕ ಕಲಾವಿದ ನೇಣು ಬಿಗಿದು ಆತ್ಮಹತ್ಯೆ

Cyber crime arrest

Mangaluru; 134 ಸೈಬರ್‌ ಪ್ರಕರಣ; 40.46 ಕೋ.ರೂ. ವಂಚನೆ

1-kambala

ಮಂಗಳೂರು ಕಂಬಳ: 171 ಜತೆ ಕೋಣಗಳು ಭಾಗಿ

1-klr

New Year; ಕರಾವಳಿಯಲ್ಲಿ ಪ್ರವಾಸಿಗರ ದಟ್ಟಣೆ : ಕೊಲ್ಲೂರಿನಲ್ಲಿ ಅಪಾರ ಭಕ್ತಸಂದಣಿ

MUST WATCH

udayavani youtube

ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ

udayavani youtube

ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ

udayavani youtube

ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ

udayavani youtube

ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ

udayavani youtube

ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ

ಹೊಸ ಸೇರ್ಪಡೆ

train-track

Maha Kumbh Mela 2025;ಮಂಗಳೂರು-ವಾರಾಣಸಿ ವಿಶೇಷ ರೈಲು ಸೇವೆ

1-kalla

Karkala: ಚಿನ್ನದಂಗಡಿ ಕಳ್ಳತನ: ಕುಖ್ಯಾತ ಸರಗಳ್ಳ ಅರೆಸ್ಟ್

ICC ವರ್ಷದ ಟೆಸ್ಟ್‌ ಕ್ರಿಕೆಟಿಗ ಪ್ರಶಸ್ತಿಗೆ ಜಸ್‌ಪ್ರೀತ್‌ ಬುಮ್ರಾ ಹೆಸರು

ICC ವರ್ಷದ ಟೆಸ್ಟ್‌ ಕ್ರಿಕೆಟಿಗ ಪ್ರಶಸ್ತಿಗೆ ಜಸ್‌ಪ್ರೀತ್‌ ಬುಮ್ರಾ ಹೆಸರು

Bidar-Contracter-Sis

Contracter Case: ಸಿಐಡಿ ಮೇಲೆ ವಿಶ್ವಾಸವಿಲ್ಲ, ಸಿಬಿಐಗೆ ಕೊಡಿ: ಸಚಿನ್‌ ಸಹೋದರಿ ಸುರೇಖಾ

First Test Match: ಜಿಂಬಾಬ್ವೆ-ಅಫ್ಘಾನಿಸ್ಥಾನ ಟೆಸ್ಟ್‌ ಡ್ರಾ

First Test Match: ಜಿಂಬಾಬ್ವೆ-ಅಫ್ಘಾನಿಸ್ಥಾನ ಟೆಸ್ಟ್‌ ಡ್ರಾ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.