Mangaluru: ಪಿಎಂ ಮೋದಿ ಭೇಟಿ ವೇಳೆ ದೈವಾರಾಧನೆ, ಕಂಬಳ ಝಲಕ್
ಎಪ್ರಿಲ್ 14ರಂದು ಸಂಜೆ ಮಂಗಳೂರಿನಲ್ಲಿ ಮೆಗಾ ಶೋ
Team Udayavani, Apr 12, 2024, 6:55 AM IST
ಮಂಗಳೂರು: ಮೊದಲ ಬಾರಿಗೆ ಮಂಗಳೂರಿನಲ್ಲಿ ಅಧಿಕೃತ ರೋಡ್ ಶೋ ನಡೆಸಲಿರುವ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಕರಾವಳಿಯ ವೈಶಿಷ್ಟ್ಯಗಳನ್ನು ಪರಿಚಯಿಸುವ ಬಗ್ಗೆ ತಯಾರಿ ನಡೆಸಲಾಗುತ್ತಿದೆ.
ಪೂರ್ಣ ಭದ್ರತೆಯೊಂದಿಗೆ ತೆರೆದ ವಾಹನದಲ್ಲಿ ರಸ್ತೆಯಲ್ಲಿ ಹಾದು ಹೋಗುತ್ತಿರುವಾಗಲೇ ಮೋದಿ ಅವರಿಗೆ ಕರಾವಳಿ ವೈಶಿಷ್ಟéಗಳಾದ ದೈವಾರಾಧನೆಯ ತುಣುಕು, ಕಂಬಳದ ಚಿತ್ರಣ, ಹುಲಿ ವೇಷದ ಅಬ್ಬರ, ಭರತನಾಟ್ಯದ ಝಲಕ್ ಇತ್ಯಾದಿಗಳನ್ನು ಕೂಡ ನೋಡಿ ಆನಂದಿಸ ಬಹುದು.
ಇದೆಲ್ಲವೂ ಪಕ್ಷದಿಂದ ಕೈಗೊಳ್ಳುವ ಕಾರ್ಯಕ್ರಮಗಳಲ್ಲ, ಬದಲಿಗೆ ಮೋದಿ ಅಭಿಮಾನಿಗಳು ಅವರಾಗಿಯೇ ಕೇಳಿಕೊಂಡಿರುವಂಥದ್ದು. ಇವು ಗಳಿಗೆ ಅಂತಿಮವಾಗಿ ಪ್ರಧಾನಿ ಯವರ ಭದ್ರತೆ ನೋಡಿಕೊಳ್ಳುವ ವಿಶೇಷ ಭದ್ರತಾ ತಂಡ (ಎಸ್‌ಪಿಜಿ) ಅನುಮತಿ ನೀಡಿದರೆ ಇದೊಂದು ವಿಶಿಷ್ಟ ರೋಡ್ ಶೋ ಎನ್ನಿಸಿಕೊಳ್ಳಲಿದೆ. ಈ ಎಲ್ಲ ವೈಶಿಷ್ಟéಗಳನ್ನೂ ರಸ್ತೆ ಬದಿಯಲ್ಲಿ ಚಿಕ್ಕ ಚಿಕ್ಕ ವೇದಿಕೆಗಳ ಮೂಲಕ ಪ್ರದರ್ಶಿಸಲಾಗುವುದು.
ಕಂಬಳದ ಕೋಣಗಳನ್ನೇ ಹೋಲುವ ಪ್ರತಿಕೃತಿ ಪ್ರದರ್ಶನ, ಹುಲಿವೇಷ ಕುಣಿತ ಪ್ರದರ್ಶನ, ಭರತ ನಾಟ್ಯ ಪ್ರದರ್ಶನ ನಡೆಯಲಿದ್ದು, ದೈವಾರಾಧನೆಯನ್ನು ಎಲ್‌ಇಡಿ ಮೂಲಕ ತೋರ್ಪಡಿಸಲಾಗುವುದು ಎಂದು ತಿಳಿದುಬಂದಿದೆ.
ಎ. 14ರಂದು 6ಕ್ಕೆ ಲೇಡಿಹಿಲ್‌ನ ಶ್ರೀ ನಾರಾಯಣಗುರು ವೃತ್ತದಲ್ಲಿ ಮೊದಲು ನಾರಾಯಣಗುರುಗಳ ಪ್ರತಿಮೆಗೆ ಪ್ರಧಾನಿ ಮೋದಿ ಮಾಲಾರ್ಪಣೆ ಮಾಡುವುದರೊಂದಿಗೆ ರೋಡ್‌ಶೋ ಆರಂಭಗೊಳ್ಳಲಿದೆ. ಬಳಿಕ ಲಾಲ್‌ಬಾಗ್ ಜಂಕ್ಷನ್, ಬಲ್ಲಾಳ್‌ಬಾಗ್, ಪಿವಿಎಸ್ ಜಂಕ್ಷನ್ ಮೂಲಕ ನವಭಾರತ ವೃತ್ತ ತಲುಪಲಿದೆ. ಸದ್ಯ ನವಭಾರತ ವೃತ್ತದ ವರೆಗೆ ರೋಡ್ ಶೋ ಎಂದಿದ್ದರೂ ಹಂಪನಕಟ್ಟೆ ಜಂಕ್ಷನ್ ವರೆಗೂ ರೋಡ್ ಶೋ ನಡೆಸುವ ಬಗ್ಗೆ ಯೋಚನೆ ಇದೆ, ಇಲ್ಲೂ ಅಂತಿಮ ನಿರ್ಧಾರವನ್ನು ಎಸ್‌ಪಿಜಿ ತೆಗೆದುಕೊಳ್ಳಲಿದೆ.
ಭರ್ಜರಿ ಭದ್ರತೆ: ಸಮಾವೇಶಕ್ಕಿಂ ತಲೂ ಹೆಚ್ಚಿನ ಮುನ್ನೆಚ್ಚರಿಕೆ ರೋಡ್ ಶೋದಲ್ಲಿ ಬೇಕಾಗುತ್ತದೆ. ಈಗಾಗಲೇ ಎಸ್‌ಪಿಜಿ ನೇತೃತ್ವದಲ್ಲಿ ಭದ್ರತಾ ಕಾರ್ಯ ಆರಂಭವಾಗಿದೆ.
ಜಿಲ್ಲಾಡಳಿತ, ಪೊಲೀಸ್ ಕಮಿಷನರ್ ಸಹಿತ ಹಿರಿಯ ಅಧಿ ಕಾರಿಗಳ ಸಭೆ ನಡೆದಿದ್ದು ಪ್ರಧಾನಿ ಆಗಮನ, ಭದ್ರತೆ ಇತ್ಯಾದಿ ಅಂಶಗಳನ್ನು ಚರ್ಚಿಸಲಾಗಿದೆ. ಲೇಡಿಹಿಲ್‌ನಿಂದ ರೋಡ್ ಶೋ ಮುಗಿಯುವಲ್ಲಿ ವರೆಗೂ ರಸ್ತೆ ಇಕ್ಕೆಲಗಳಲ್ಲೂ ಕಬ್ಬಿಣದ ತಾತ್ಕಾಲಿಕ ತಡೆಬೇಲಿ ನಿರ್ಮಿಸಲಾಗುತ್ತದೆ. ರಸ್ತೆಗೆ ಇಳಿಯಲು ಯಾರಿಗೂ ಅವಕಾಶ ಇರುವುದಿಲ್ಲ. ಬ್ಯಾರಿಕೇಡ್‌ನ ಹಿಂದೆ ನಿಂತು ವೀಕ್ಷಿಸಬಹುದು.
ಜೇನುಗೂಡು ತೆರವು!
ರೋಡ್ ಶೋ ಸಾಗುವ ಕಟ್ಟಡ, ಮರಗಳಲ್ಲಿರುವ ಜೇನುಗೂಡು ಗಳನ್ನು ತೆರವುಗೊಳಿಸುವಂತೆ ಪೊಲೀಸ್ ಆಯುಕ್ತರ ಕಚೇರಿಯಿಂದ ಅರಣ್ಯಾಧಿಕಾರಿಗೆ ಸೂಚನೆ ಬಂದಿದೆ.
ಮಾಹಿತಿ ಸಂಗ್ರಹ: ಎಂ.ಜಿ. ರಸ್ತೆಯ ಇಕ್ಕೆಲದ ಕಟ್ಟಡಗಳ ತಪಾಸಣೆ, ಅಲ್ಲಿರುವವರೆಲ್ಲರ ಗುರುತುಪತ್ರ, ಆಧಾರ್ ಸಹಿತ ಮಾಹಿತಿ ಸಂಗ್ರಹ ಇತ್ಯಾದಿ ಕೆಲಸಗಳನ್ನು ಪೊಲೀಸರು ನಡೆಸಿದ್ದಾರೆ. ಅಲ್ಲದೆ ಕಟ್ಟಡ, ಮನೆ, ಅಪಾರ್ಟ್‌ಮೆಂಟ್, ಶೈಕ್ಷಣಿಕ ಸಂಸ್ಥೆ, ಹೊಟೇಲ್, ವಸತಿಗೃಹ ಮುಂತಾದೆಡೆ ಕಾರ್ಯ ನಿರ್ವಹಿಸುತ್ತಿರುವ/ಕಾರ್ಯ ನಿರ್ವಹಿಸದ ಸಿಸಿ ಕೆಮರಾ ಮಾಹಿತಿ ಯನ್ನೂ ಪಡೆದುಕೊಳ್ಳಲಾಗಿದೆ. ರೋಡ್ ಶೋ ವೇಳೆ ಕಟ್ಟಡಗಳ ಮೇಲೆ ಕೂಡ ಯಾರೂ ನಿಲ್ಲುವಂತಿಲ್ಲ.
ಸಂಜೆ 5ರ ಅನಂತರ ನಗರದೊಳಕ್ಕೆ ಪ್ರವೇಶ ಬಂದ್!
ಅಂದಾಜು ಸಂಜೆ 5ರ ಬಳಿಕ ಬಲ್ಮಠ ಕಡೆಯಿಂದ ಹಾಗೂ ಕೊಟ್ಟಾರ ಕಡೆಯಿಂದ ನಗರದೊಳಕ್ಕೆ ವಾಹನ ಸಂಚಾರ ಪೂರ್ಣ ಬಂದ್‌ಗೊಳಿಸಲು ಪೊಲೀಸರು ನಿರ್ಧರಿಸಿದ್ದಾರೆ. ಕೊಟ್ಟಾರ ಕಡೆಯಿಂದ ಮೋದಿ ಅವರು ನಾರಾಯಣಗುರು ವೃತ್ತಕ್ಕೆ ಆಗಮಿಸಿದರೆ ಬಲ್ಮಠ, ತೋಟಗಾರಿಕೆ ಇಲಾಖೆ ರಸ್ತೆ ಮೂಲಕ ತೆರಳುವ ನಿರೀಕ್ಷೆ ಇದೆ. ಹಾಗಾಗಿ ಹಂಪನಕಟ್ಟೆ, ಬಂಟ್ಸ್‌ಹಾಸ್ಟೆಲ್ ಕಡೆಗೆ ಬರುವಂತಹವರು ಅದಕ್ಕಿಂತ ಮೊದಲೇ ಸೇರಿಕೊಳ್ಳಬೇಕು.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Laddu Mutya: ಬದುಕು ಅರಳಿಸಿದ ಬಾಗಲಕೋಟೆಯ ಭಗವಂತ: ತಮಾಷೆಯ ವಸ್ತುವಲ್ಲ ಲಡ್ಡು ಮುತ್ಯಾ
KL Rahul; ಗಾಯದ ಚಿಂತೆ ನಿವಾರಿಸಲು ನೆಟ್‌ನಲ್ಲಿ ಬ್ಯಾಟಿಂಗ್: ಬ್ಯಾಕ್-ಅಪ್ ಆಗಿ ಪಡಿಕ್ಕಲ್
Maharastra: ಚುನಾವಣಾ ರ್‍ಯಾಲಿ ರದ್ದುಗೊಳಿಸಿ ದಿಢೀರ್ ದೆಹಲಿಗೆ ವಾಪಸ್ಸಾದ ಸಚಿವ ಅಮಿತ್ ಶಾ
Kantara Chapter 1: ರಿಷಬ್ ಶೆಟ್ಟಿ ʼಕಾಂತಾರ ಚಾಪ್ಟರ್ -1ʼ ರಿಲೀಸ್ ಗೆ ಡೇಟ್ ಫಿಕ್ಸ್
The Sabarmati Report ;ಸಿನಿಮಾವಾಗಿ ಗೋಧ್ರಾ ದುರಂತ: ಸತ್ಯ ಹೊರಬರುತ್ತಿದೆ ಎಂದ ಪ್ರಧಾನಿ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.