Mangaluru: ಪ್ಲಾಸ್ಟಿಕ್ ಮಿತ ಬಳಕೆ, ಬಯೋ ಎಂಜೈಮ್ ಬಗ್ಗೆ ಪ್ರಾತ್ಯಕ್ಷಿಕೆ
Team Udayavani, Apr 22, 2024, 6:26 PM IST
ಮಂಗಳೂರು: ವಿಶ್ವ ಭೂದಿನದ (ಏಪ್ರಿಲ್ 22) ಪ್ರಯುಕ್ತ ‘ಪರಿಸರಕ್ಕಾಗಿ ನಾವು’ ಗುಂಪಿನ ದಕ್ಷಿಣ ಕನ್ನಡ ಉಡುಪಿ ಘಟಕದ ಸರೋಜಾ ಪ್ರಕಾಶ್- ಪ್ರಕಾಶ್ ದಂಪತಿ, ಅಶ್ವಿನಿ ಕೆ. ಭಟ್ ಅವರು ಮಂಗಳೂರಿನ ಕದ್ರಿ ಪಾರ್ಕ್ ನಲ್ಲಿ ಏ 21, ಭಾನುವಾರ ಸಂಜೆ ಎರಡು ಗಂಟೆಗಳ ಕಾಲ ಸಾರ್ವಜನಿಕರಿಗೆ ಪ್ಲಾಸ್ಟಿಕ್ ಮಿತ ಬಳಕೆ, ಹಸಿ ಕಸದಿಂದ ಗೊಬ್ಬರ ತಯಾರಿ, ಬಯೋ ಎಂಜೈಮ್ ಬಗ್ಗೆ ಪ್ರಾತ್ಯಕ್ಷಿಕೆ ನಡೆಸಿದರು.
ಘೋಷಣಾ ವಾಕ್ಯಗಳನ್ನು ಮನೆಯಲ್ಲೇ ಲಭ್ಯವಿದ್ದ ಹಳೆ ರಟ್ಟು, ಕಾಗದಗಳನ್ನುಪಯೋಗಿಸಿ, ಹಳೆ ಪಿವಿಸಿ ಪೈಪ್ಗಳಿಗೆ ಅಂಟಿಸಿ ಫಲಕಗಳನ್ನು ಮಾಡಿ ಪ್ರದರ್ಶನಕ್ಕೆ ಇಟ್ಟಿದ್ದು ಗಮನ ಸೆಳೆಯಿತು.
.ಸದಸ್ಯೆಯರಾದ ದೇವಕಿ ಜಿ ಕೆ, ಅಂಜನಿ ವಸಂತ್ ಹಾಗೂ ಸಮಾನಮನಸ್ಕರು ಅವರಿಗೆ ಸಹಕರಿಸಿದರು. ಈ ವರ್ಷದ ಭೂದಿನದ ಘೋಷಣೆಯು ‘ ಭೂಗ್ರಹ vs ಪ್ಲಾಸ್ಟಿಕ್’. ಪ್ಲಾಸ್ಟಿಕ್ ನ ದುಷ್ಪರಿಣಾಮಗಳು, ಅದಕ್ಕೆ ಪರ್ಯಾಯ, ಗೊಬ್ಬರ ತಯಾರಿಕೆ ಬಗ್ಗೆ ಜನರಿಂದ ಉತ್ತಮ ಪ್ರತಿಕ್ರಿಯೆ ದೊರಕಿತು.
ಸಾಧಾರಣ 60 ಜನರನ್ನು ತಲಪಲು ಸಾಧ್ಯವಾಯಿತು. ಮುಂಗಡವಾಗಿ ಈ ಮೇಲ್ ಮೂಲಕ ಪಾರ್ಕಿನ ಆಡಳಿತದವರಿಂದ ಅನುಮತಿಯನ್ನು ಪಡೆದು ಈ ಕಾರ್ಯಕ್ರಮವನ್ನು ಮಾಡಲಾಯಿತು. ಮುಂದೆಯೂ ಈ ರೀತಿಯ ಸರಳ ವಿಧಾನಗಳಿಂದ ಹೆಚ್ಚಿನ ಜನರಲ್ಲಿ ಅರಿವನ್ನು ಮೂಡಿಸುವ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಯೋಜನೆಯಿದೆ. ಹೆಚ್ಚಿನ ಸಂಖ್ಯೆಯಲ್ಲಿ ಕಾರ್ಯಕರ್ತರು ಒಗ್ಗೂಡಿದರೆ ಯಶಸ್ವಿಯಾಗುವುದರಲ್ಲಿ ಸಂಶಯವಿಲ್ಲ ಎಂದು ಸಂಚಾಲಕರು ಅಭಿಪ್ರಾಯ ವ್ಯಕ್ತ ಪಡಿಸಿದ್ದಾರೆ.
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ದೈವ ನರ್ತಕರಂತೆ ಗುಳಿಗ ದೈವದ ವೇಷ ಭೂಷಣ ಧರಿಸಿ ಕೋಲ ಕಟ್ಟಿದ್ದ ಅನ್ಯ ಸಮಾಜದ ಯುವಕ
ಹಕ್ಕಿಗಳಿಗಾಗಿ ಕಲಾತ್ಮಕ ವಸ್ತುಗಳನ್ನು ತಯಾರಿಸುತ್ತಿರುವ ಪಕ್ಷಿ ಪ್ರೇಮಿ
ಮಂಗಳೂರಿನ ನಿಟ್ಟೆ ವಿಶ್ವವಿದ್ಯಾನಿಲಯದ ತಜ್ಞರ ಅಧ್ಯಯನದಿಂದ ಬಹಿರಂಗ
ಈ ಹೋಟೆಲ್ ಗೆ ಪೂರಿ, ಬನ್ಸ್, ಕಡುಬು ತಿನ್ನಲು ದೂರದೂರುಗಳಿಂದಲೂ ಜನ ಬರುತ್ತಾರೆ
ಹರೀಶ್ ಪೂಂಜ ಪ್ರಚೋದನಾಕಾರಿ ಹೇಳಿಕೆ ವಿರುದ್ಧ ಪ್ರಾಣಿ ಪ್ರಿಯರ ಆಕ್ರೋಶ
ಹೊಸ ಸೇರ್ಪಡೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.