ಮಹಾ ನಗರ ಪಾಲಿಕೆಯಲ್ಲಿ ಕಾಂಗ್ರೆಸ್‌ ಆಡಳಿತಾವಧಿ ಪೂರ್ಣ


Team Udayavani, Mar 7, 2019, 4:46 AM IST

7-mach-1.jpg

ಮಹಾನಗರ : ಲೋಕ ಸಭಾ ಚುನಾವಣೆಗೆ ದಿನಗಣನೆ ಆರಂಭ ವಾಗುತ್ತಿದ್ದಂತೆ, ಮಂಗಳೂರು ಮಹಾನಗರ ಪಾಲಿಕೆಯಲ್ಲಿ ಐದು ವರ್ಷಗಳ ಕಾಂಗ್ರೆಸ್‌ನ ಆಡಳಿತ ಕೊನೆಯ ಅವಧಿಯ ಮೇಯರ್‌ನ ಅಧಿಕಾರ ಗುರುವಾರಕ್ಕೆ ಮುಕ್ತಾಯಗೊಳ್ಳಲಿದೆ. ಮುಂದೆ ಚುನಾವಣೆ ನಡೆದು ಹೊಸ ಸದಸ್ಯರು ಚುನಾಯಿತರಾಗುವವರೆಗೆ ಜಿಲ್ಲಾಧಿಕಾರಿಗಳು ಪಾಲಿಕೆಯ ಕಾರ್ಯ ಚಟುವಟಿಕೆಗಳನ್ನು ನೋಡಿಕೊಳ್ಳುವುದಕ್ಕೆ ಆಡಳಿತಾಧಿಕಾರಿಯಾಗಿ ನೇಮಕಗೊಳ್ಳುವ ನಿರೀಕ್ಷೆಯಿದೆ.

ಸಾಮಾನ್ಯವಾಗಿ ಸ್ಥಳೀಯ ಸಂಸ್ಥೆಗಳಲ್ಲಿ ಯಾವುದೇ ಪಕ್ಷದ ಅಧಿಕಾರಾವಧಿ ಕೊನೆಯ ಹಂತಕ್ಕೆ ಬರುತ್ತಿದ್ದಂತೆ ಚುನಾವಣೆ ಘೋಷಣೆಯಾಗುವುದು ಸಹಜ ಪ್ರಕ್ರಿಯೆ. ಆದರೆ, ಸರಕಾರದ ಕಡೆಯಿಂದ ವಾರ್ಡ್‌ ವಾರು ಮೀಸಲಾತಿ ಪಟ್ಟಿ ಇನ್ನೂ ಕೂಡ ಅಂತಿಮಗೊಳ್ಳದ ಕಾರಣ, ಪಾಲಿಕೆ ಚುನಾವಣೆಗೆ ದಿನಾಂಕ ಘೋಷಿಸಲು ರಾಜ್ಯ ಚುನಾವಣೆ ಆಯೋಗಕ್ಕೆ ಸಾಧ್ಯವಾಗಿಲ್ಲ. ಇನ್ನು, ರಾಜ್ಯದಲ್ಲಿ ಸ್ಥಳೀಯ ಸಂಸ್ಥೆಗಳ ಚುನಾವಣೆ ಮುಂದಕ್ಕೆ ಹೋಗುವುದಕ್ಕೆ ಲೋಕಸಭೆ ಚುನಾವಣೆಯೂ ಅದೇ ಅವಧಿಗೆ ಎದುರಾಗಿರುವುದು ಮುಖ್ಯ ಕಾರಣ ಎನ್ನಲಾಗಿದೆ. ಹಾಲಿ ಮೇಯರ್‌ ಭಾಸ್ಕರ್‌ ಕೆ. ಅವರ ಅಧಿಕಾರವಧಿ ಮಾ. 7ರಂದು ಪೂರ್ಣಗೊಳ್ಳುತ್ತಿಲಿದ್ದು ಮನಪಾಗೆ ಎರಡು ದಶಕಗಳ ಬಳಿಕ ಪೂರ್ಣಾವಧಿ ಆಡಳಿತಾಧಿಕಾರಿ ನೇಮಕವಾಗಲಿದ್ದಾರೆ.

ಮನಪಾ ಚುನಾವಣೆಗೆ ಸಂಬಂಧಿಸಿದಂತೆ ಸರಕಾರ 2018 ಜೂ. 26ರಂದು ಕರಡು ಮೀಸಲು ಪ್ರಕಟಮಾಡಿತ್ತು. ಆಕ್ಷೇಪ ಅರ್ಜಿ ಸಲ್ಲಿಸಲು ಒಂದು ವಾರದ ಕಾಲಾವಕಾಶ ನೀಡಲಾಗಿತ್ತು. ನಿಗದಿತ ಅವಧಿಯಲ್ಲಿ 70ಕ್ಕೂ ಅಧಿಕ ಅರ್ಜಿ ಸಲ್ಲಿಕೆಯಾಗಿದ್ದವು. ಬಳಿಕ 30 ವಾರ್ಡ್‌ಗಳ ಮೀಸಲು ಬದಲಾವಣೆ ಮಾಡಲಾಗಿತ್ತು. ಈ ಸಂದರ್ಭ ಕರಡು ಮೀಸಲು ಪಟ್ಟಿಯಲ್ಲಿ ಅವಕಾಶ ವಂಚಿತರಾಗಿದ್ದ ಕಾಂಗ್ರೆಸ್‌ನ ಎಲ್ಲ ಕಾರ್ಪೊರೇಟರ್‌ಗಳು ತಮ್ಮ ವಾರ್ಡ್‌ಗಳಲ್ಲೇ ಸ್ಪರ್ಧೆಗೆ ಅವಕಾಶ ಪಡೆದಿದ್ದರು. ಬಿಜೆಪಿಯ ಒಂದಿಬ್ಬರು ಹಾಲಿ ಕಾರ್ಪೊರೇಟರ್‌ಗಳನ್ನು ಹೊರತುಪಡಿಸಿ ಉಳಿದವರು ಮತ್ತೆ ತಮ್ಮ ವಾರ್ಡ್‌ನಿಂದ ಸ್ಪರ್ಧಿಸುವ ಅವಕಾಶದಿಂದ ವಂಚಿತರಾಗಿದ್ದರು.

ಕೆಲವು ವಾರ್ಡ್‌ಗಳಲ್ಲಿ ನಿಯಮಾವಳಿ ಪ್ರಕಾರ ಮೀಸಲು ನಿಗದಿಯಾಗಿಲ್ಲ. ಸತತ ಮೂರನೇ ಸಲ ಒಂದೇ ಮೀಸಲು ಬಂದ ವಾರ್ಡ್‌ ಕೂಡ ಇದೆ ಎಂದು ಆರೋಪಿಸಿ ಕೆಲವರು ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದರು. ಇದನ್ನು ಪುರಸ್ಕರಿಸಿದ ನ್ಯಾಯಾಲಯ ಪಾಲಿಕೆ ಚುನಾವಣೆ ಸಂಬಂಧಿಸಿ ಸರಕಾರ ಪ್ರಕಟಿಸಿದ ಮೀಸಲು ಪಟ್ಟಿಯನ್ನು ರದ್ದುಗೊಳಿಸಿ ತೀರ್ಪು ನೀಡಿತ್ತು. ಸರಕಾರ ರಚಿಸಿದ ಮೀಸಲು ಪಟ್ಟಿ ರದ್ದು ಮಾಡಿ ಜ. 28ರೊಳಗೆ ಹೊಸ ಮೀಸಲು ಪಟ್ಟಿ ಪ್ರಕಟಿಸುವಂತೆ ಆದೇಶಿಸಿತ್ತು. ಆದರೆ ಸರಕಾರ ಹೊಸ ಮೀಸಲು ಪ್ರಕಟಿಸುವ ಬದಲು ಮೇಲ್ಮನವಿ ಸಲ್ಲಿಸಿದೆ. ಇದರಿಂದ ಚುನಾವಣೆಯ ಮೀಸಲು ಅಧಿಕೃತಗೊಂಡಿಲ್ಲ. ಇನ್ನೊಂದೆಡೆ ಲೋಕಸಭೆ ಚುನಾವಣೆ ಘೋಷಣೆಯಾಗುವ ಸಾಧ್ಯತೆ ಇದ್ದು, ಈ ಅವಧಿಯಲ್ಲಿ ಮನಪಾ ಮೀಸಲು ಪಟ್ಟಿ ಪ್ರಕಟಿಸಿದರೂ ಚುನಾವಣೆ ನಡೆಸುವುದು ಕಷ್ಟ . ಹಾಗಾಗಿ ಸದ್ಯಕ್ಕೆ ಪಾಲಿಕೆ ಚುನಾವಣೆ ಮುಂದಕ್ಕೆ ಹೋಗಿದ್ದು, ಎಲ್ಲವೂ ನಿರೀಕ್ಷೆಯಂತೆ ಆದರೆ, ಆಗಸ್ಟ್‌ ಅಥವಾ ಸೆಪ್ಟಂಬರ್‌ನಲ್ಲಿ ಚುನಾವಣೆ ನಡೆಸುವ ಸಾಧ್ಯತೆ ಇದೆ.

ಐದು ವರ್ಷಗಳ ಮೇಯರ್‌
ಮಹಾನಗರ ಪಾಲಿಕೆಯ ಕಾಂಗ್ರೆಸ್‌ ಆಡಳಿತಾವಧಿಯಲ್ಲಿ ಐದು ಮೇಯರ್‌ ಗಳು ಅಧಿಕಾರ ನಡೆಸಿದ್ದು, ವಿವಿಧ ಅಭಿವೃದ್ಧಿ ಕಾರ್ಯಗಳನ್ನು ನಡೆಸಿ ನಗರದ ಅಭಿವೃದ್ಧಿಯಲ್ಲಿ ಸಕ್ರಿಯ ಪಾತ್ರ ವಹಿಸಿದ್ದರು. 2014-15ರಲ್ಲಿ ಮೇಯರ್‌ ಆಗಿ ಮಹಾಬಲ ಮಾರ್ಲ 2015-16ರಲ್ಲಿ ಮೇಯರ್‌ ಜೆಸಿಂತಾ ಆಲ್ಫ್ರೆಡ್ , 2016-17ರಲ್ಲಿ ಮೇಯರ್‌ ಆಗಿ ಹರಿನಾಥ್‌, 2017-18ರಲ್ಲಿ ಕವಿತಾ ಸನಿಲ್‌, 2018-19ನೇ ಸಾಲಿನಲ್ಲಿ ಮೇಯರ್‌ ಆಗಿ ಭಾಸ್ಕರ್‌ ಕೆ. ಅಧಿಕಾರ ಸ್ವೀಕರಿಸಿದ್ದರು.

ಚುನಾವಣೆ ನಡೆದು 6 ವರ್ಷ
ಮಹಾನಗರ ಪಾಲಿಕೆಗೆ 2013ರ ಮಾ. 11ರಂದು ಚುನಾವಣೆ ನಡೆದಿತ್ತು. ಆದರೆ, ಆಗ ಪಾಲಿಕೆ ಮೀಸಲು ಪಟ್ಟಿ ಪ್ರಕಟಿಸಲು ವಿಳಂಬ ಮತ್ತು ಅದೇ ಸಮಯದಲ್ಲಿ ಲೋಕಸಭೆ ಚುನಾವಣೆ ಕೂಡ ಬಂದಿತ್ತು. ಹೀಗಾಗಿ ಸುಮಾರು ಒಂದು ವರ್ಷಕ್ಕೆ ಆಡಳಿತಾಧಿಕಾರಿಯನ್ನು ನೇಮಿಸಲಾಗಿತ್ತು. 2014ರ ಮಾ. 12ರಂದು ಕಾಂಗ್ರೆಸ್‌ ಆಡಳಿತಾವಧಿ ಪ್ರಾರಂಭಗೊಳ್ಳುವ ಮೂಲಕ ಮೇಯರ್‌ ಆಯ್ಕೆ ನಡೆದಿತ್ತು. ಪಾಲಿಕೆ ಚುನಾವಣೆ 2013ರಲ್ಲೇ ನಡೆದಿದ್ದರೂ 2014ರಿಂದ ಆಡಳಿತಾವಧಿ ಪ್ರಾರಂಭವಾಗಿದ್ದ ಕಾರಣ ಈಗ ಐದು ವರ್ಷಗಳ ಅವಧಿಯ ಲೆಕ್ಕಾಚಾರದಲ್ಲಿ ಮೇಯರ್‌ಗಾದಿ ಮುಕ್ತಾಯಗೊಂಡಿದೆ. 

ಐದು ವರ್ಷ ಓರ್ವ ಮುಖ್ಯ ಸಚೇತಕ
2014ರಿಂದ 2019ರವರೆಗಿನ ಕಾಂಗ್ರೆಸ್‌ನ ಅಧಿಕಾರಾವಧಿಯಲ್ಲಿ ಮನಪಾದ ಮುಖ್ಯ ಸಚೇತಕರಾಗಿ ಓರ್ವ ಕಾರ್ಯ ನಿರ್ವಹಿಸಿರುವುದು ವಿಶೇಷ. ಮನಪಾ ಸದಸ್ಯ ಶಶಿಧರ್‌ ಹೆಗ್ಡೆ ಅವರು ಪಕ್ಷ, ವಿಪಕ್ಷದ ಎಲ್ಲ ಸದಸ್ಯರ ವಿಶ್ವಾಸ ಗಳಿಸಿ ಮನಪಾ ಅಭಿವೃದ್ಧಿ ಕಾರ್ಯದಲ್ಲಿ ಭಾಗಿಯಾಗಿದ್ದರು.

ಒಮ್ಮೆ ಬಿಜೆಪಿ ಉಪ ಮೇಯರ್‌
2016-17ರ ಮೇಯರ್‌ ಹರಿನಾಥ್‌ ಅವರ ಆಡಳಿತಾವಧಿಯಲ್ಲಿ ಕಾಂಗ್ರೆಸ್‌ಗೆ ಬಹುಮತವಿದ್ದರೂ ಅದರಲ್ಲಿ ಅರ್ಹ ಮೀಸಲು ಸದಸ್ಯರಿಲ್ಲದ ಕಾರಣ ಬಿಜೆಪಿಯ ಸುಮಿತ್ರಾ ಕರಿಯ ಅವರಿಗೆ ಉಪಮೇಯರ್‌ ಸ್ಥಾನ ಒಲಿದಿತ್ತು.

ಪಾಲಿಕೆಗೆ ಆಡಳಿತಾಧಿಕಾರಿಗಳು
1988ರಿಂದ 2014ರ ವರೆಗೆ 13 ಮಂದಿ ಆಡಳಿತಾಧಿಕಾರಿಗಳು ಮನಪಾಗೆ ನೇಮಕಗೊಂಡಿದ್ದಾರೆ. ಮೇಯರ್‌ ಆಯ್ಕೆ ಗೊಂದಲ ಸೇರಿದಂತೆ ಇನ್ನಿತರ ಸಮಸ್ಯೆಗಳು ಸೃಷ್ಟಿಯಾದ ಸಂದರ್ಭಗಳಲ್ಲಿ ಆಡಳಿತಾಧಿಕಾರಿಗಳ ನೇಮಕ ಮಾಡಲಾಗುತ್ತದೆ. ಈ ವರೆಗಿನ ಪಾಲಿಕೆಗೆ ಆಡಳಿತಾಧಿಕಾರಿಗಳಾಗಿ ನೇಮಕಗೊಂಡವರ ವಿವರ ಹೀಗಿದೆ- 1988-1989ರ ವರೆಗೆ ಸುಭಾಶ್‌ ಚಂದ್ರ ಕುಂಟಿಯಾ, 1989-1990ರ ವರೆಗೆ ರಂಜಿನಿ ಶ್ರೀಕುಮಾರ್‌, 1990 ಎಪ್ರಿಲ್‌ 2ರಿಂದ 1990ರ ಮೇ 30ರ ವರೆಗೆ ಕೆ.ಪಿ. ಕೃಷ್ಣನ್‌, 1995ರ ಮೇ 3ರಿಂದ 1995 ಮೇ 20ರ ವರೆಗೆ ಶಾಲಿನಿ ರಜನೀಶ್‌ ಗೋಯಲ್‌, 1995ರಿಂದ 1996ರ ವರೆಗೆ ಭರತ್‌ಲಾಲ್‌ ಮೀನ, 1996ರಿಂದ 1997ರ ವರೆಗೆ ಬಿ.ಎಚ್‌. ಅನಿಲ್‌ ಕುಮಾರ್‌, 2002 ಮೇ 23ರಿಂದ 2002 ಜೂನ್‌ 17ರವರೆಗೆ ಎ.ಕೆ. ಮೊನ್ನಪ್ಪ, 2007ರಿಂದ 2008ರ ವರೆಗೆ ಮಹೇಶ್ವರ್‌ ರಾವ್‌, 2013 ಫೆ. 20ರಿಂದ ಮಾ. 28 2013ರ ವರೆಗೆ ಎಸ್‌. ಪ್ರಕಾಶ್‌, 2013 ಮಾ.28ರಿಂದ ಮೇ 14 2013ರ ವರೆಗೆ ಹರ್ಷಗುಪ್ತ, 2013 ಮೇ 14ರಿಂದ 2013 ಡಿಸೆಂಬರ್‌ 16ರ ವರೆಗೆ ಎಸ್‌ ಪ್ರಕಾಶ್‌, 2013 ಡಿಸೆಂಬರ್‌ 16ರಿಂದ 2013 ಡಿಸೆಂಬರ್‌ 26ರ ವರೆಗೆ ತುಳಸಿ ಮದ್ದಿನೇನಿ, 2013 ಡಿಸೆಂಬರ್‌ 26ರಿಂದ 2014 ಮಾ.13ರ ವರೆಗೆ ಎ.ಬಿ. ಇಬ್ರಾಹಿಂ ಅವರು ಮನಪಾ ಆಡಳಿತಾಧಿಕಾರಿಯಾಗಿ ಕಾರ್ಯ ನಿರ್ವಹಿಸಿದ್ದರು.

ಸಲಹಾ ಸಮಿತಿ ರಚನೆ ?
ಪಾಲಿಕೆಯಲ್ಲಿ ಜನಪ್ರತಿನಿಧಿಗಳ ಅಧಿಕಾರವಧಿ ಮುಕ್ತಾಯಗೊಳ್ಳುತ್ತಿರುವ ಹಿನ್ನೆಲೆಯಲ್ಲಿ ಇನ್ನೂ ಮುಂದೆ ಮನಪಾ ವ್ಯಾಪ್ತಿಯಲ್ಲಿ ನಡೆಯುವ ಎಲ್ಲ ಅಭಿವೃದ್ಧಿ ಕಾರ್ಯಗಳನ್ನು ಆಡಳಿತಾಧಿಕಾರಿಯವರೇ ನಡೆಸಲಿದ್ದು, ಅವರಿಗೆ ಸಲಹೆ ಸೂಚನೆಗಳನ್ನು ನೀಡುವ ಸಲುವಾಗಿ ಪ್ರತ್ಯೇಕ ಸಲಹಾ ಸಮಿತಿ ರಚಿಸುವ ಸಾಧ್ಯತೆ ಇದೆ. ಈ ಸಮಿತಿಗೆ ಸ್ವಯಂ ಸೇವಾ ಸಂಸ್ಥೆಗಳು, ಸಮಾಜ ಸೇವಕರು ಸೇರಿದಂತೆ ವಿವಿಧ ಕ್ಷೇತ್ರಗಳ ಮಂದಿಯನ್ನು ಸದಸ್ಯರನ್ನಾಗಿ ಆಯ್ಕೆ ಮಾಡಲಾಗುತ್ತದೆ. ಈ ಸಮಿತಿಯಲ್ಲಿ ಕನಿಷ್ಠ 15 ಸದಸ್ಯರು ಇರಬೇಕಾಗಿದ್ದು, ಗರಿಷ್ಠ 25 ಸದಸ್ಯರು ಕೂಡ ಇರಬಹುದು. 

ಅಭಿವೃದ್ಧಿ ಕೆಲಸಕ್ಕೆ ಹಿನ್ನಡೆ
ರಾಜ್ಯ ಸರಕಾರ ಸಕಾಲದಲ್ಲಿ ಪಾಲಿಕೆ ಮೀಸಲಾತಿ ಪ್ರಕಟಿಸದ ಪರಿಣಾಮ ಮನಪಾಗೆ ಆಡಳಿತಾಧಿಕಾರಿ ನೇಮಕ ಅನಿವಾರ್ಯವಾಗಲಿದೆ. ಇದರಿಂದ ಮನಪಾ ವ್ಯಾಪ್ತಿಯ ಎಲ್ಲ ವಾರ್ಡ್‌ಗಳ ಅಭಿವೃದ್ಧಿ ಕೆಲಸಗಳಿಗೆ ಹಿನ್ನಡೆಯಾಗುವ ಸಾಧ್ಯತೆ ಇದೆ. ಎಪ್ರಿಲ್‌-ಮೇ ಬೇಸಗೆ ಕಾಲವಾದ್ದರಿಂದ ನೀರಿನ ಸಮಸ್ಯೆ, ಮಳೆಗಾಲದ ಪೂರ್ವ ತಯಾರಿ ಎಲ್ಲವೂ ಮಂದಗತಿಯಲ್ಲಿ ಸಾಗಿದರೆ ಜನಸಾಮಾನ್ಯರಿಗೆ ತೊಂದರೆಯಾಗಲಿದೆ. 

ಆಡಳಿತಾಧಿಕಾರಿ ನೇಮಕ
ಮೀಸಲು ಪಟ್ಟಿ ಪ್ರಕಟವಾಗದ ಹಿನ್ನೆಲೆಯಲ್ಲಿ ಸದ್ಯ ಚುನಾವಣೆ ಘೋಷಣೆಯಾಗುವುದಿಲ್ಲ. ಮೇಯರ್‌, ಹಾಲಿ ಸದಸ್ಯರ ಅವಧಿ ಅಂತ್ಯಗೊಂಡ ಹಿನ್ನೆಲೆಯಲ್ಲಿ ಮಾ.8ರಿಂದ ಜಿಲ್ಲಾಧಿಕಾರಿ ಅವರು ಆಡಳಿತಾಧಿಕಾರಿಯಾಗಿ ನೇಮಕಗೊಳ್ಳುವ ಸಾಧ್ಯತೆಯಿದೆ. 
– ಮಹಮ್ಮದ್‌
ನಝೀರ್‌,ಆಯುಕ್ತರು, ಮನಪಾ

ಪ್ರಜ್ಞಾ ಶೆಟ್ಟಿ

ಟಾಪ್ ನ್ಯೂಸ್

Launch of Bharat Brand-2: Wheat flour at 30, kg. 34 for rice

Bharat Brand: ಭಾರತ್‌ ಬ್ರ್ಯಾಂಡ್‌-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34

Famous Moo deng predicted Victory for Trump

US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್‌

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Edaneer-swmij

Attack On Car: ಎಡನೀರು ಸ್ವಾಮೀಜಿ ಕಾರಿನ ಮೇಲೆ ದಾಳಿ: ಕಸಾಪ, ಬ್ರಾಹ್ಮಣ ಮಹಾಸಭಾ ಖಂಡನೆ

vidhana-Soudha

Covid Scam: ತನಿಖೆಗೆ ಎಸ್‌ಐಟಿ?: ಬಿಜೆಪಿಯ ಇಕ್ಕಟ್ಟಿಗೆ ಸಿಲುಕಿಸಲು ಸಿದ್ಧತೆ

Constable-Hsn

Hassan: ವಿವಾಹ ಆಮಂತ್ರಣ ಪತ್ರಿಕೆ ಹಂಚಿ ಮನೆಗೆ ಮರಳುತ್ತಿದ್ದ ಪೊಲೀಸ್‌ ಬರ್ಬರ ಹ*ತ್ಯೆ!

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿUS Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ

US Election 2024: ಟ್ರಂಪ್‌,ಕಮಲಾ ಮಧ್ಯೆ ತೀವ್ರ ಪೈಪೋಟಿ


ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು

ಬೋಂಡಾ, ಬನ್ಸ್ ಮತ್ತು ಕೇಕ್‌

ಬೋಂಡಾ, ಬನ್ಸ್ ಮತ್ತು ಕೇಕ್‌

promegrnate

ಉಪಬೆಳೆಯಾಗಿ ದಾಳಿಂಬೆ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

ಕೂಲ್‌ ಕೂಲ್‌ ಬೇಸಗೆಯಲ್ಲಿ ಜಾನುವಾರುಗಳ ಆರೈಕೆ ಹೀಗಿರಲಿ

go-green

ಮನೆಯಲ್ಲೇ ಹಸಿರು ಕ್ರಾಂತಿಯಾಗಲಿ…

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

ಮನೆಯ ಒಳಾಂಗಣದ ಅಂದ ಹೆಚ್ಚಿಸುವ ಗಾರ್ಡನ್‌

MUST WATCH

udayavani youtube

ಗೋವಿನ ಪೂಜೆ ಯಾಕಾಗಿ ಮಾಡಬೇಕು?

udayavani youtube

ಮೇಲುಕೋಟೆಯಲ್ಲಿ ದೀಪಾವಳಿ ಆಚರಿಸುವುದಿಲ್ಲ ಎಂಬ ಮಾತು ನಿಜವೋ ಸುಳ್ಳೋ

udayavani youtube

ಗಣಪತಿ ಸಹಕಾರಿ ವ್ಯವಸಾಯಕ ಸಂಘ ‘ನಿ.’ ಕೆಮ್ಮಣ್ಣು ಶತಾಭಿವಂದನಂ ಸಮಾರೋಪ ಸಂಭ್ರಮ ಸಂಪನ್ನ

udayavani youtube

ಉದಯವಾಣಿ’ಚಿಣ್ಣರ ಬಣ್ಣ -2024

udayavani youtube

ಹಬ್ಬದ ಊಟವೇ ಈ ಹೋಟೆಲ್ ನ ಸ್ಪೆಷಾಲಿಟಿ

ಹೊಸ ಸೇರ್ಪಡೆ

Archana, abhishekam in ancestral village for Kamala’s victory!

US Polls: ಕಮಲಾ ಗೆಲುವಿಗಾಗಿ ಪೂರ್ವಿಕರ ಗ್ರಾಮದಲ್ಲಿ ಅರ್ಚನೆ, ಅಭಿಷೇಕ!

Launch of Bharat Brand-2: Wheat flour at 30, kg. 34 for rice

Bharat Brand: ಭಾರತ್‌ ಬ್ರ್ಯಾಂಡ್‌-2ಗೆ ಚಾಲನೆ: 30ಕ್ಕೆ ಗೋಧಿ ಹಿಟ್ಟು, ಕೆ.ಜಿ.ಅಕ್ಕಿಗೆ 34

Famous Moo deng predicted Victory for Trump

US Polls; ಟ್ರಂಪ್‌ಗೆ ಗೆಲುವು: ಭವಿಷ್ಯ ನುಡಿದ ಪ್ರಸಿದ್ಧ ನೀರಾನೆ ಮೂಡೆಂಗ್‌

Kanaka-Award

Award: ಪ್ರೊ.ತಾಳ್ತಜೆ ವಸಂತ ಕುಮಾರ್‌ಗೆ ಕನಕ ಗೌರವ ಪ್ರಶಸ್ತಿ

Dattapeeta

Chikkamagaluru: ನ.9ರಿಂದ 11ರ ತನಕ ದತ್ತಪೀಠಕ್ಕೆ ಪ್ರವಾಸಿಗರಿಗೆ ನಿರ್ಬಂಧ

Thanks for visiting Udayavani

You seem to have an Ad Blocker on.
To continue reading, please turn it off or whitelist Udayavani.