ಶ್ವಾನಗಳ ಪ್ರದರ್ಶನ: ಸಾರ್ವಜನಿಕರು ಫಿದಾ !
Team Udayavani, Jan 28, 2019, 6:29 AM IST
ಮಹಾನಗರ: ಮಾಲಕರೊಂದಿಗೆ ಸಾಕು ನಾಯಿಗಳು ವೇದಿಕೆ ಯಲ್ಲಿ ರ್‍ಯಾಂಪ್ ವಾಕ್ ಮಾಡಿದರೆ, ಕೆಲ ವೊಂದು ದೈತ್ಯ ದೇಹದ ನಾಯಿಗಳು ತುಂಟತನದೊಂದಿಗೆ ನೋಡುಗರನ್ನು ಸೆಳೆಯಿತು. ಮನುಷ್ಯರಿಗಿಂತ ನಾವೇನೂ ಕಮ್ಮಿ ಇಲ್ಲ ಎಂಬಂತೆ ನಾಯಿಗಳು ಸ್ಮಿಮ್ಮಿಂಗ್ ಫೂಲ್‌ನಲ್ಲಿ ಈಜಿ ಸೈ ಎನಿಸಿಕೊಂಡವು. ಇದಕ್ಕೆಲ್ಲಾ ವೇದಿಕೆಯಾಗಿದ್ದು ನಗರದ ಬಂಟ್ಸ್ ಹಾಸ್ಟೆಲ್ ಮೈದಾನ.
ನಗರದಲ್ಲಿ ರವಿವಾರ ಫರ್‌ಪೇಸ್ಟ್ ಎಂಬ ಶ್ವಾನ ಪ್ರದರ್ಶನವನ್ನು ಆಯೋಜಿಸ ಲಾಗಿತ್ತು. ಪ್ರದರ್ಶನದಲ್ಲಿ ದ. ಕ., ಉಡುಪಿ ಜಿಲ್ಲೆಗಳ ನಾನಾ ಭಾಗಗಳಿಂದ ವಿವಿಧ ತಳಿಯ ಶ್ವಾನಗಳು ಪ್ರದರ್ಶನದ ಮೆರುಗು ಹೆಚ್ಚಿಸಿದವು. ನೆರೆದಿದ್ದ ವೀಕ್ಷಕರು ಶ್ವಾನದ ತುಂಟಾಟಗಳನ್ನು ಕಂಡು ಖುಷಿಪಟ್ಟರು.
ನಾಯಿಗಳಿಗೆಂದೇ ವಿಶೇಷ ಸ್ಪರ್ಧೆ ಗಳನ್ನು ಆಯೋಜಿಸಲಾಗಿತ್ತು. ಶ್ವಾನಗಳಿಗೆ ಮಾಲಕರು ವಿವಿಧ ರೀತಿ ಉಡುಪು ತೊಡಿ ಸಿ, ಶೃಂಗರಿಸಿದ್ದು ಗಮನ ಸೆಳೆಯಿತು. ಅಲ್ಲದೆ, ಸ್ಮಾರ್ಟ್ ಪೆಟ್ ಸ್ಪರ್ಧೆ, ಪ್ಲೇ ಏರಿಯಾ, ಫೂಲ್ ಪಾರ್ಟಿ, ಫ್ಯಾನ್ಸಿ ಡ್ರೆಸ್ ಸ್ಪರ್ಧೆಗಳನ್ನು ಆಯೋಜಿಸಲಾಗಿತ್ತು. ನಾಯಿಗಳಿಗೆ ವೈದ್ಯಕೀಯ ತಪಾಸಣಾ ಶಿಬಿರವೂ ಸ್ಥಳದಲ್ಲಿತ್ತು.ಆಯೋಜಕರಾದ ಸಂದೀಪ್ ಶೆಟ್ಟಿ, ಕಾರ್ತಿಕ್ ಶೆಟ್ಟಿ, ಕಾರ್ತಿಕ್ ಕುಮಾರ್, ಪಶುವೈದ್ಯೆ ಡಾ| ಶಿಲ್ಪಾ ಪೊನ್ನಪ್ಪ ಮತ್ತಿತರರು ಇದ್ದರು.
ಚೌಚೌ, ಪೊಮೇರಿಯನ್, ಗೋಲ್ಡನ್ ಡಾಗ್, ಪಿಟ್ ಬುಲ್, ರಾಟ್ವೈಲರ್, ಕಾಕರ್, ಡೋಬರ್‌ಮನ್, ಬೀಗಲ್ ಡಾಗ್, ಲ್ಯಾಬ್ರಡಾರ್, ಗ್ರೇಟ್ಡೇನ್, ಬರ್ನಾಲ್ಡ್ ಡಾಗ್, ಮಾಲ್ಟೀಸ್ ಸಹಿತ ವಿವಿಧ ತಳಿಯ ಶ್ವಾನಗಳು ಪ್ರದರ್ಶನಕ್ಕಿತ್ತು.
ಶ್ವಾನಗಳ ಜತೆ ಸೆಲ್ಫೀ ಕ್ಲಿಕ್
ಶ್ವಾನ ಪ್ರದರ್ಶನಕ್ಕೆ ಜಿಲ್ಲೆಯ ವಿವಿದಡೆಯಿಂದ ನೂರಾರು ಮಂದಿ ಆಗಮಿಸಿದ್ದರು. ಹೆಚ್ಚಿನ ಮಂದಿ ನಾಯಿಗಳ ಜತೆ ಸೆಲ್ಫೀ ಕ್ಲಿಕ್ಕಿಸುವ ದೃಶ್ಯ ಸಾಮಾನ್ಯವಾಗಿತ್ತು. ಕೆಲವರು ನಾಯಿಗಳ ಜತೆ ಆಟವಾಡುತ್ತಾ ಕಾಲ ಕಳೆದರು.
ನಾಯಿಯನ್ನು ಪ್ರೀತಿಸಿ
ನಿಯತ್ತಿಗೆ ಮತ್ತೂಂದು ಹೆಸರಾದ ನಾಯಿಗಳನ್ನು ಖರೀದಿಸುವ ಮೊದಲು ಅದರ ಬಗ್ಗೆ ತಿಳಿದುಕೊಳ್ಳಬೇಕು. ನಾಯಿಗಳನ್ನು ಪ್ರೀತಿಯಿಂದ ಕಾಣಬೇಕು.
ರವಿರಾಜ್
ಪೊಲೀಸ್ ಶ್ವಾನದಳದ ತರಬೇತುದಾರ
ಟಾಪ್ ನ್ಯೂಸ್
ಈ ವಿಭಾಗದಿಂದ ಇನ್ನಷ್ಟು ಇನ್ನಷ್ಟು ಸುದ್ದಿಗಳು
MUST WATCH
ಹೊಸ ಸೇರ್ಪಡೆ
Kollegala: ಎತ್ತಿನಗಾಡಿಗೆ ಸಾಮ್ರಾಟ್ ಟರ್ಬೇ ವಾಹನ ಡಿಕ್ಕಿ; ಎತ್ತು ಸಾವು
Udupi: ಯಕ್ಷಧ್ರುವ ಪಟ್ಲ ಫೌಂಡೇಶನ್ ಟ್ರಸ್ಟ್; ಉಡುಪಿ ಮಹಿಳಾ ವಿಭಾಗ ಆರಂಭ
ಕನಕಗಿರಿ:ಮಂಗಳೂರು ಮೂಲದ ಕುಟುಂಬ-ಸೌಹಾರ್ದತೆಗೆ ಸಾಕ್ಷಿ 4 ದಶಕದ ಸಕ್ಕರೆ ಗೊಂಬೆ ತಯಾರಿಕೆ!
Davanagere: ಕಾಂತರಾಜ್ ವರದಿ ಸ್ವೀಕರಿಸಿ ಬಹಿರಂಗಪಡಿಸಿ: ಸಿಎಂಗೆ ಆಂಜನೇಯ ಮನವಿ
ಬೆಳಗಾವಿ: ಮಾನವ ಕಳ್ಳ ಸಾಗಾಣಿಕೆ-ಜೀತ ಪದ್ಧತಿ ದೊಡ್ಡ ಸಮಸ್ಯೆ
Thanks for visiting Udayavani
You seem to have an Ad Blocker on.
To continue reading, please turn it off or whitelist Udayavani.